ಬೆಂಗಳೂರು

ಬೆಂಗಳೂರು ಕರ್ನಾಟಕ ರಾಜ್ಯದ ದೊಡ್ಡ ನಗರ ಮತ್ತು ರಾಜಧಾನಿ ಕೇಂದ್ರ, ಜಿಲ್ಲಾಕೇಂದ್ರ ಮತ್ತು ತಾಲ್ಲೂಕು ಕೇಂದ್ರ ಹಾಗೂ ಕಸಬಾ ಹೋಬಳಿಯ ಕೇಂದ್ರ ಬೆಂಗಳೂರು ನಗರ.

ಬೆಂಗಳೂರು
ಬೆಂಗಳೂರು ನಗರದ ಪಕ್ಷಿನೋಟ
ಮೇಲಿನಿಂದ ಕೆಳಕ್ಕೆ ಯುಬಿ ನಗರ, ಬಾಗ್ಮನೆ ಟೆಕ್ ಪಾರ್ಕ್, ಇನ್ಫೋಸಿಸ್, ಕೆಂಪ್‌ಫೋರ್ಟ್‌ನ ಶಿವನ ವಿಗ್ರಹ, ಲಾಲ್‌ ಬಾಗ್‍ನ ಗಾಜಿನ ಮನೆ, ವಿಧಾನ ಸೌಧ

ಬೆಂಗಳೂರು
ನಿರ್ದೇಶಾಂಕಗಳು 12° N 77° E
ವಿಸ್ತಾರ
 - ಎತ್ತರ
೭೪೧ km²
 - ೯೨೦ ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೧೧)
 - ಸಾಂದ್ರತೆ
೯೫,೫೮,೯೧೦ (೩ನೇ)
 - /ಚದರ ಕಿ.ಮಿ.
Mayor ಸಂಪತ್ ರಾಜ್
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 560 xxx
 - +91-(0)80
 - KA 01, KA 02, KA 03, KA 04, KA 05, KA 41, KA 50, KA 51, KA 53

ಬೆಂಗಳೂರು ನಗರವು ಕ್ರಿ.ಶ.1537ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಾಣವಾಯಿತು. ಇದು ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, ಕರ್ನಾಟಕದ ಆಗ್ನೇಯ ದಿಕ್ಕಿನಲ್ಲಿದೆ. ಭಾರತದ ೫ನೇ ದೊಡ್ಡ ಮಹಾನಗರವಾಗಿರುವ ಬೆಂಗಳೂರು ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ೩ನೇ ಸ್ಥಾನದಲ್ಲಿದೆ. ಜಗತ್ತಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಮಹತ್ತರವಾದ ಕಾಣಿಕೆ ನೀಡುತ್ತಾ ಬಂದಿರುವ ಕಾರಣ ಬೆಂಗಳೂರು ವಿಶ್ವಾದ್ಯಂತ ಭಾರತದ 'ಸಿಲಿಕಾನ್ ವ್ಯಾಲಿ' ಎಂದೇ ಪ್ರಸಿದ್ಧ. ಸಮುದ್ರ ಮಟ್ಟದಿಂದ ಸುಮಾರು ೩೦೦೦ ಅಡಿ (೯೧೪.೪ ಮೀ)ಗಳಿಗಿಂತ ಎತ್ತರದಲ್ಲಿರುವ ಬೆಂಗಳೂರು ನಗರವು ವರ್ಷವಿಡೀ ಆಹ್ಲಾದಕರ ವಾತಾವರಣ ಹೊಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗಳನ್ನು ಹೊಂದಿದೆ. 'ಕಬ್ಬನ್ ಪಾರ್ಕ್', 'ಲಾಲ್ ಬಾಗ್'ಗಳಂತಹ ದೊಡ್ಡ ಉದ್ಯಾನವನಗಳನ್ನು ಹೊಂದಿರುವ ಈ ನಗರವು 'ಉದ್ಯಾನ ನಗರಿ' ಎಂದೂ ಪ್ರಸಿದ್ಧ. ವಿಶ್ವದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳ ಅಚ್ಚುಮೆಚ್ಚಿನ ೧೦ ನಗರಗಳಲ್ಲಿ ಬೆಂಗಳೂರು ಕೂಡ ಒಂದು.

ಬೆಂಗಳೂರು ಜಿಲ್ಲೆಯ ತಾಲ್ಲೂಕುಗಳು

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯು ವಿಸ್ತೀರ್ಣದಲ್ಲಿ ಚಿಕ್ಕದಾಗಿರುವ ಕಾರಣ ಒಂದು ಜಿಲ್ಲೆಯಾಗಿ ಮಾಡಲಾಗಿದೆ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ಕಾರಣ ಏರಡು ಜಿಲ್ಲಾ ಕೇಂದ್ರಗಳನ್ನೂ ಒಳಗೊಂಡಿದೆ.

ಜಿಲ್ಲೆ ತಾಲೂಕು ಹೋಬಳಿ ನಗರ ಸ್ಥಿತಿ
ಬೆಂಗಳೂರು
1.ಬೆಂಗಳೂರು
01.ಬೆಂಗಳೂರು ಕಸಬಾಮಹಾನಗರ ಪಾಲಿಕೆ
02.ಯಶವಂತಪುರಮಹಾನಗರ ಪಾಲಿಕೆ
03.ದಾಸನಪುರನಗರ ಸಭೆ
2.ಯಲಹಂಕ
01.ಯಲಹಂಕ ಕಸಬಾಮಹಾನಗರ ಪಾಲಿಕೆ
02.ಹೆಸರುಘಟ್ಟಪಟ್ಟಣ ಪಂಚಾಯತಿ
03.ಚಿಕ್ಕಜಾಲಗ್ರಾಮ ಪಂಚಾಯತಿ
3.ಕೆಂಗೇರಿ
01.ಕೆಂಗೇರಿ ಕಸಬಾಮಹಾನಗರ ಪಾಲಿಕೆ
02.ಉತ್ತರಹಳ್ಳಿಮಹಾನಗರ ಪಾಲಿಕೆ
03.ಬೇಗೂರುಮಹಾನಗರ ಪಾಲಿಕೆ
04.ತಾವರೆಕೆರೆಪಟ್ಟಣ ಪಂಚಾಯತಿ
4. ಕೃಷ್ಣರಾಜ ಪುರ
01.ಕೃಷ್ಣರಾಜ ಪುರ ಕಸಬಾಮಹಾನಗರ ಪಾಲಿಕೆ
02.ವರ್ತೂರುಮಹಾನಗರ ಪಾಲಿಕೆ
03.ಬಿದರಹಳ್ಳಿಪಟ್ಟಣ ಪಂಚಾಯತಿ
5.ಆನೇಕಲ್
01.ಆನೇಕಲ್ ಕಸಬಾನಗರ ಸಭೆ
02.ಅತ್ತಿಬೆಲೆನಗರ ಸಭೆ
03.ಸರ್ಜಾಪುರನಗರ ಸಭೆ
04.ಜಿಗಣಿನಗರ ಸಭೆ
6.ದೊಡ್ಡಬಳ್ಳಾಪುರ
01.ದೊಡ್ಡಬಳ್ಳಾಪುರ ಕಸಬಾನಗರ ಸಭೆ
02.ಮಧುರೆಗ್ರಾಮ ಪಂಚಾಯತಿ
03.ದೊಡ್ಡ ಬೆಳವಂಗಲಗ್ರಾಮ ಪಂಚಾಯತಿ
04.ಸಾಸಲುಗ್ರಾಮ ಪಂಚಾಯತಿ
05.ತುಬಗೆರೆಗ್ರಾಮ ಪಂಚಾಯತಿ
7.ದೇವನಹಳ್ಳಿ
01.ದೇವನಹಳ್ಳಿ ಕಸಬಾಪುರ ಸಭೆ
02.ಕುಂದಾಣಗ್ರಾಮ ಪಂಚಾಯತಿ
03.ವಿಜಯಪುರಪುರ ಸಭೆ
04.ಚನ್ನರಾಯ ಪಟ್ಟಣಗ್ರಾಮ ಪಂಚಾಯತಿ
8.ಹೊಸಕೋಟೆ
01.ಹೊಸಕೋಟೆ ಕಸಬಾನಗರ ಸಭೆ
02.ನಂದಗುಡಿಗ್ರಾಮ ಪಂಚಾಯತಿ
03.ಸೂಲಿಬೆಲೆಗ್ರಾಮ ಪಂಚಾಯತಿ
04.ಅನುಗೊಂಡನಹಳ್ಳಿಗ್ರಾಮ ಪಂಚಾಯತಿ
05.ಜಡಿಗೆನಹಳ್ಳಿ ಗ್ರಾಮ ಪಂಚಾಯತಿ
9.ನೆಲಮಂಗಲ
01.ನೆಲಮಂಗಲ ಕಸಬಾಪುರ ಸಭೆ
02.ತ್ಯಮಗೊಂಡ್ಲುಗ್ರಾಮ ಪಂಚಾಯತಿ
03.ಸೋಂಪುರನಗರ ಸಭೆ
ಒಟ್ಟು09 - ತಾಲ್ಲೂಕು34 - ಹೋಬಳಿ

01.ಬೆಂಗಳೂರು

02.ಆನೇಕಲ್

ಜಿಲ್ಲೆ ತಾಲೂಕು ಹೋಬಳಿ ನಗರ ಸ್ಥಿತಿ
ಬೆಂಗಳೂರು
1.ಬೆಂಗಳೂರು
01.ಬೆಂಗಳೂರು ಕಸಬಾಮಹಾನಗರ ಪಾಲಿಕೆ
02.ಯಶವಂತಪುರಮಹಾನಗರ ಪಾಲಿಕೆ
03.ದಾಸನಪುರನಗರ ಸಭೆ
2.ಯಲಹಂಕ
01.ಯಲಹಂಕ ಕಸಬಾಮಹಾನಗರ ಪಾಲಿಕೆ
02.ಹೆಸರುಘಟ್ಟಪಟ್ಟಣ ಪಂಚಾಯತಿ
03.ಚಿಕ್ಕಜಾಲಗ್ರಾಮ ಪಂಚಾಯತಿ
3.ಕೆಂಗೇರಿ
01.ಕೆಂಗೇರಿ ಕಸಬಾಮಹಾನಗರ ಪಾಲಿಕೆ
02.ಉತ್ತರಹಳ್ಳಿಮಹಾನಗರ ಪಾಲಿಕೆ
03.ಬೇಗೂರುಮಹಾನಗರ ಪಾಲಿಕೆ
04.ತಾವರೆಕೆರೆಪಟ್ಟಣ ಪಂಚಾಯತಿ
4. ಕೃಷ್ಣರಾಜ ಪುರ
01.ಕೃಷ್ಣರಾಜ ಪುರ ಕಸಬಾಮಹಾನಗರ ಪಾಲಿಕೆ
02.ವರ್ತೂರುಮಹಾನಗರ ಪಾಲಿಕೆ
03.ಬಿದರಹಳ್ಳಿಪಟ್ಟಣ ಪಂಚಾಯತಿ
5.ಆನೇಕಲ್
01.ಆನೇಕಲ್ ಕಸಬಾನಗರ ಸಭೆ
02.ಅತ್ತಿಬೆಲೆನಗರ ಸಭೆ
03.ಸರ್ಜಾಪುರನಗರ ಸಭೆ
04.ಜಿಗಣಿನಗರ ಸಭೆ
6.ದೊಡ್ಡಬಳ್ಳಾಪುರ
01.ದೊಡ್ಡಬಳ್ಳಾಪುರ ಕಸಬಾನಗರ ಸಭೆ
02.ಮಧುರೆಗ್ರಾಮ ಪಂಚಾಯತಿ
03.ದೊಡ್ಡ ಬೆಳವಂಗಲಗ್ರಾಮ ಪಂಚಾಯತಿ
04.ಸಾಸಲುಗ್ರಾಮ ಪಂಚಾಯತಿ
05.ತುಬಗೆರೆಗ್ರಾಮ ಪಂಚಾಯತಿ
7.ದೇವನಹಳ್ಳಿ
01.ದೇವನಹಳ್ಳಿ ಕಸಬಾಪುರ ಸಭೆ
02.ಕುಂದಾಣಗ್ರಾಮ ಪಂಚಾಯತಿ
03.ವಿಜಯಪುರಪುರ ಸಭೆ
04.ಚನ್ನರಾಯ ಪಟ್ಟಣಗ್ರಾಮ ಪಂಚಾಯತಿ
8.ಹೊಸಕೋಟೆ
01.ಹೊಸಕೋಟೆ ಕಸಬಾನಗರ ಸಭೆ
02.ನಂದಗುಡಿಗ್ರಾಮ ಪಂಚಾಯತಿ
03.ಸೂಲಿಬೆಲೆಗ್ರಾಮ ಪಂಚಾಯತಿ
04.ಅನುಗೊಂಡನಹಳ್ಳಿಗ್ರಾಮ ಪಂಚಾಯತಿ
05.ಜಡಿಗೆನಹಳ್ಳಿ ಗ್ರಾಮ ಪಂಚಾಯತಿ
9.ನೆಲಮಂಗಲ
01.ನೆಲಮಂಗಲ ಕಸಬಾಪುರ ಸಭೆ
02.ತ್ಯಮಗೊಂಡ್ಲುಗ್ರಾಮ ಪಂಚಾಯತಿ
03.ಸೋಂಪುರನಗರ ಸಭೆ
ಒಟ್ಟು09 - ತಾಲ್ಲೂಕು34 - ಹೋಬಳಿ

ಭೂಗೋಳ

ಬೆಂಗಳೂರು ಸಮುದ್ರ ಮಟ್ಟ ದಿಂದ ೯೦೦ ಮೀ ಎತ್ತರದಲ್ಲಿದೆ[1]. ಭೌಗೋಳಿಕವಾಗಿ ೧೨° ೩೯' ಉ ಹಾಗೂ ೧೩° ಉ ಅಕ್ಷಾಂಶದಲ್ಲಿದ್ದರೂ ಕೂಡ ಬೆಂಗಳೂರಿನಲ್ಲಿ ಸದಾಕಾಲ ತಂಪು ವಾತಾವರಣವಿರುವುದು, ಸುಮಾರು ೨೪°C ರಿಂದ ೩೫°C ರವರೆಗೆ ಉಷ್ಣಾಂಶವಿರುವುದು. ಸದಾಶಿವನಗರದ ರಮಣಶ್ರೀ ಪಾರ್ಕ್ ಬೆಂಗಳೂರಿನ ಅತೀ ಎತ್ತರದ ಪ್ರದೇಶವಾಗಿದೆ. ಈ ಮೊದಲು ಮಲ್ಲೇಶ್ವರದ ವಯ್ಯಾಲಿ ಕಾವಲ್ ಎತ್ತರದ ಪ್ರದೇಶವಾಗಿತ್ತು. ಬೆಂಗಳೂರಿನ ಹೊಸಕೆರೆಹಳ್ಳಿ ಅತಿ ತಗ್ಗಿನ ಪ್ರದೇಶವಾಗಿದೆ.

ಡೆಕ್ಕನ್ ಪ್ರಸ್ತಭೂಮಿಯ ಒಂದು ಭಾಗವಾದ ಮೈಸೂರು ಪ್ರಸ್ತಭೂಮಿಯ ಹೃದಯ ಭಾಗದಲ್ಲಿ ನೆಲೆಸಿರುವ ಈ ನಗರವು, ಕರ್ನಾಟಕಆಗ್ನೇಯ ಭಾಗದಲ್ಲಿದೆ. 741 ಚ.ಕಿ.ಮೀ. ವಿಸ್ತೀರ್ಣವುಳ್ಳ ಈ ಪ್ರದೇಶವು 5.8 ಮಿಲಿಯನ್ (ಅತಿ ಹೆಚ್ಚು ಜನಸಂಖ್ಯೆಯುಳ್ಳ ಮೂರನೆ ನಗರ) ಜನಸಂಖ್ಯೆಯನ್ನು ಹೊಂದಿದೆ. ಮುಖ್ಯವಾಗಿ ಇದು ಸಮುದ್ರ ಮಟ್ಟದಿಂದ 3113 ಅಡಿ(949 ಮಿ.) ಎತ್ತರದಲ್ಲಿ ಸ್ಥಿತವಾಗಿರುವುದರಿಂದ, ಸುಂದರವಾದ ವಾತಾವರಣವನ್ನು ಹೊಂದಿದೆ.

ಉಷ್ಣವಲಯದ ವಾತಾವರಣವಿರುವುದರಿಂದ, ಈ ಪಟ್ಟಣವು ಪದೇ ಪದೇ ಮಳೆಯನ್ನು ಅನುಭವಿಸುತ್ತ ಬೇಸಿಗೆಗಾಲದಲ್ಲಿ ಬೆಚ್ಚಗಿದ್ದು ಚಳಿಗಾಲದಲ್ಲಿ ತಂಪಾಗಿರುತ್ತದೆ. ಇಂತಹ ಸುಂದರ ವಾತಾವರಣವು ಒಂದೊಮ್ಮೆ ನಿವೃತ್ತಿ ಹೊಂದಿದವರನ್ನು ಆಕರ್ಷಿಸಿದ್ದು, ನಿವೃತ್ತಿ ಹೊಂದಿದವರ ಸ್ವರ್ಗ ಎಂದೂ ಕೂಡ ಇದಕ್ಕೆ ಕರೆಯಲಾಗುತ್ತಿತ್ತು. ಬೇಸಿಗೆಯಲ್ಲಿ ತಾಪಮಾನವು 20 ರಿಂದ 36 ಡಿಗ್ರಿಯಿದ್ದು, ಚಳಿಗಾಲದಲ್ಲಿ 17 ರಿಂದ 27 ಡಿಗ್ರಿಯಾಗಿರುತ್ತದೆ.

ಇತಿಹಾಸ

ಕ್ರಿಸ್ತ ಶಕ ೧೫೩೭ರ ತನಕ ಬೆಂಗಳೂರು ದಕ್ಷಿಣ ಭಾರತದ ಸಂಸ್ಥಾನಗಳಾದ ಗಂಗ, ಚೋಳ ಮತ್ತು ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿದೆ. ನಂತರ ವಿಜಯನಗರ ಸಾಮ್ರಾಜ್ಯದ ನಾಡ ಪ್ರಭು ಕೆಂಪೇಗೌಡರು ಬೆಂಗಳೂರಿನಲ್ಲಿ ಮಣ್ಣಿನ ಕೋಟೆ ಕಟ್ಟಿ ಆಧುನಿಕ ಬೆಂಗಳೂರಿನ ಉದಯಕ್ಕೆ ಕಾರಣಕರ್ತರಾದರು. ಮರಾಠರು ಮತ್ತು ಮುಘಲರ ಅಲ್ಪಾವಧಿ ಆಡಳಿತಕ್ಕೆ ಒಳಪಟ್ಟಿದ್ದ ಬೆಂಗಳೂರು, ಮೈಸೂರು ರಾಜರ ಆಧಿಪತ್ಯದಲ್ಲೇ ಉಳಿದಿತ್ತು. ನಂತರ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಆಡಳಿತಕ್ಕೆ ಒಳಪಟ್ಟ ಬೆಂಗಳೂರು, ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ(೧೭೯೯)ದಲ್ಲಿ ಬ್ರಿಟೀಷರ ಪಾಲಾಯಿತು. ತದನಂತರ ಬ್ರಿಟೀಷರು ಮೈಸೂರು ಸಂಸ್ಥಾನವನ್ನು ತಮ್ಮ ಆಡಳಿತದ ಒಂದು ರಾಜ್ಯವನ್ನಾಗಿಸಿ, ಬೆಂಗಳೂರನ್ನು ಅದರ ರಾಜಧಾನಿಯಾಗಿ ಘೋಷಿಸಿ, ಮೈಸೂರು ಒಡೆಯರ ಆಡಳಿತಕ್ಕೊಪ್ಪಿಸಿದರು.

ಬೆಂಗಳೂರು ೧೫೩೭|೧೫೩೭ರಲ್ಲಿ ಕೆಂಪೇಗೌಡರ (೧೫೧೦ - ೧೫೭೦) ರಾಜಧಾನಿಯಾಗಿತ್ತು[2].ಈ ನಗರವನ್ನು ಕೆಂಪೇಗೌಡರು ನಿರ್ಮಿಸಿದರು. ಕೆಂಪೇಗೌಡ (೧೫೧೦-೧೫೭೦) ಈ ನಗರವನ್ನು "ಗಂಡು ಭೂಮಿ" ಮತ್ತು "ನಾಯಕರ ರಾಜ್ಯ" ಎಂದು ಹೇಳುತಿದ್ದರು.

ಹದಿನೆಂಟನೇ/ಹತ್ತೊಂಬತ್ತನೇ ಶತಮಾನದಲ್ಲಿ ಬೆಂಗಳೂರು ಒಂದು ನಗರವಾಗಿ ಬೆಳೆಯಿತು. ಆಗ ಪ್ರಮುಖವಾಗಿ ನಗರದಲ್ಲಿ ಎರಡು ಮುಖ್ಯ ರಸ್ತೆಗಳಿದ್ದವು. ಅವು "ಚಿಕ್ಕಪೇಟೆ" ಮತ್ತು "ದೊಡ್ಡಪೇಟೆ" ರಸ್ತೆಗಳು. ಸ್ವಾತಂತ್ರ್ಯಾನಂತರ ಬೆಂಗಳೂರು ಬಹು ದೊಡ್ಡ ಕೈಗಾರಿಕಾ ಉತ್ಪಾದನಾ ಕ್ಷೇತ್ರಗಳಿಗೆ ಮನೆಯಾಯಿತು. ಶಾಂತಿ ಸಮೃದ್ಧಿಯೂ, ಪರಿಸರ ಸಮೃದ್ಧಿಯೂ ಜನರನ್ನು ಈ ಊರಿನೆಡೆಗೆ ಆಕರ್ಷಿಸಿತು. ಹೆಚ್ ಎ ಎಲ್, ಬಿ ಇ ಎಲ್, ಐ ಟಿ ಐ, ಇಸ್ರೋ ನಂತಹ ಬಹು ದೊಡ್ಡ ಉತ್ಪಾದನಾ ಘಟಕಗಳಿಗೆ ಮನೆಯಾಯಿತು.

ಕೆಂಪೇಗೌಡರ ಮಗನಾದ ಕೆಂಪೇಗೌಡ-೨ ಅನೇಕ ದೇವಸ್ಥಾನ ಮತ್ತು ಗೋಪುರಗಳನ್ನು ನಿರ್ಮಿಸಿದನು. ಅವುಗಳಲ್ಲಿ ಪ್ರಮುಖವಾದ ನಾಲ್ಕು ಗೋಪುರಗಳನ್ನು ಈಗಿನ ಈ ಸ್ಥಳಗಳಲ್ಲಿ ಕಾಣಬಹುದಾಗಿದೆ.

  • ಲಾಲಭಾಗ್
  • ಕೆಂಪಾಂಬುಧಿ ಕೆರೆ
  • ಹಲಸೂರು ಕೆರೆ
  • ಮೇಖ್ರಿ ವೃತ್ತ
ಕೃಷ್ಣರಾಜೇಂದ್ರ ಮಾರುಕಟ್ಟೆ

ಸಂಸ್ಕೃತಿ ಮತ್ತು ವಿದ್ಯಾಭ್ಯಾಸ

ವಿಶ್ವವಿಖ್ಯಾತ ಗಾಜಿನ ಮನೆ, ಲಾಲ್‌ಬಾಗ್
ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕೇಂದ್ರ (ITPL)
ಮಹಾತ್ಮಾ ಗಾಂಧಿ ರಸ್ತೆ, ಬೆಂಗಳೂರಿನ ಜನನಿಬಿಡ ರಸ್ತೆ

ಕಲೆ ಮತ್ತು ಸಂಸ್ಕೃತಿಯ ಬೀಡಾಗಿರುವ ಬೆಂಗಳೂರು ವಿದ್ಯಾಭ್ಯಾಸಕ್ಕೆ ಬಹಳ ಹೆಸರುವಾಸಿ. ಇಲ್ಲಿಯ ಸಂಸ್ಕೃತಿಯೂ ಹಲವು ಪರದೇಶೀಯರನ್ನು ಶತಮಾನಗಳಿಂದ ಆಕರ್ಷಿಸಿದೆ. ಬೆಂಗಳೂರು ನಗರವು ಬಹುಮುಖ ಸಂಸ್ಕೃತಿಯನ್ನು ಹೊಂದಿದ್ದರೂ ಕೂಡ, ಬಹುಪಾಲು ಜನರು ಹಿಂದುಗಳಾಗಿದ್ದಾರೆ. ಇಲ್ಲಿ ವೈವಿಧ್ಯಮಯ ಸಂಸ್ಕೃತಿ ಇದೆ . ಕನ್ನಡವು ಇಲ್ಲಿಯ ಅಧಿಕೃತ ಭಾಷೆ‌.

ಇಲ್ಲಿ ಬಳಕೆಯಲ್ಲಿರುವ ಇತರ ಭಾಷೆಗಳೆಂದರೆ ತಮಿಳು, ತೆಲುಗು ಮತ್ತು ಮಲಯಾಳಮ್. ಮುಂಬಯಿ ನಂತರ ಹಚ್ಚಿನ ಸಾಕ್ಷರತಾ ಪ್ರಮಾಣ(83%) ಹೊಂದಿದ ಪ್ರದೇಶ ಇದಾಗಿದೆ. ನಗರದ ಶ್ರೀಮಂತ ಸಂಸ್ಕೃತಿಯು, ರಂಗ ಶಂಕರ, ಚೌಡಯ್ಯ ಮೆಮೋರಿಯಲ್ ಹಾಲ್ ಮತ್ತು ರವೀಂದ್ರ ಕಲಾಕ್ಷೇತ್ರಗಳಂತಹ ಸಂಸ್ಥೆಗಳನ್ನು ಪ್ರೋತ್ಸಾಹಿಸುತ್ತ ಸಾಂಸ್ಕೃತಿಕ ಮತ್ತು ಆಧುನಿಕ ರಂಗಭೂಮಿಯಾಗಿ ಬೆಳೆಯಲು ಭದ್ರ ಬುನಾದಿಯಾಗಿದೆ. "ಬೆಂಗಳೂರು ಹಬ್ಬ"ವು ವರ್ಷಕ್ಕೊಮ್ಮೆ ನಡೆಯುವ ಉತ್ಸವವಾಗಿದ್ದು, ಜನರು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಇದೊಂದು ಉತ್ತಮವಾದ ಅವಕಾಶ ಒದಗಿಸುತ್ತದೆ. ದೀಪಾವಳಿ ಮತ್ತು ಗಣೇಶ ಚತುರ್ಥಿಯು ಇನ್ನೆರಡು ಪ್ರಮುಖ ಹಬ್ಬಗಳಾಗಿದ್ದು ಇಲ್ಲಿಯ ಶ್ರೀಮಂತ ಧಾರ್ಮಿಕ ಸಂಪ್ರದಾಯಕ್ಕೆ ಸಾಕ್ಷಿಯಾಗಿವೆ.

ಬೆಂಗಳೂರಿನ ವೆಂಕಟ್ಟಪ್ಪ ಚಿತ್ರ ಕಲಾ ಪರಿಷತ್ತು, ಭಾರತೀಯ ವಿದ್ಯಾ ಭವನ , ಭಾರತೀಯ ವಿಜ್ಞಾನ ಮಂದಿರ, ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಮತ್ತಿತರ ವಿವಿಧ ರೀತಿಯ ಶಿಕ್ಷಣದಲ್ಲಿ ಮಂಚೂಣಿಯಲ್ಲಿವೆ. ಬೆಂಗಳೂರಿನಲ್ಲಿ ಹಲವು ದೇಶೀಯ ಮತ್ತು ಪಾಶ್ಚ್ಯಾತ್ಯ ಸಂಸ್ಕೃತಿಗಳು ಮಿಲನಗೊಂಡಿವೆ. ಆದುದರಿಂದ ಇದು ಈಗ ಕಾಸ್ಮೊಪಾಲಿಟನ್ ಸಿಟಿ ಎಂತಲೂ ಕರೆಯಲ್ಪಡುತ್ತಿದೆ. ಇಲ್ಲಿನ ದೂರದರ್ಶನ ಹಾಗೂ ಆಕಾಶವಾಣಿ ಕೇಂದ್ರಗಳು ಹೆಸರುವಾಸಿ. ದೇಶದ ಮೊದಲ ಖಾಸಗಿ ಎಫ್. ಎಮ್. ರೇಡಿಯೋ, ರೇಡಿಯೋ ಸಿಟಿ ಪ್ರಾರಂಭವಾಗಿದ್ದು ಇಲ್ಲೇ. ಹಾಗೂ ಕರ್ನಾಟಕದ ಮೊಟ್ಟಮೊದಲ ಸಮುದಾಯ ರೇಡಿಯೋಗೆ ಪರವಾನಗಿ ಸಿಕ್ಕಿ ತರಂಗಗಳಲ್ಲಿ ಪ್ರಸಾರವಾದದ್ದು ಇಲ್ಲಿಯೇ. ರೇಡಿಯೋ ಹೆಸರು ರೇಡಿಯೋ ಆಕ್ಟೀವ್ ತರಂಗಾಂತರ ೧೦೭.೮

ಪ್ರತಿಷ್ಠೆಯ ವಿದ್ಯಾ ಸಂಸ್ಥೆಗಳಾದ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ(ಐ.ಐ.ಎಮ್) ಗಳನ್ನು ಇಲ್ಲಿ ಕಾಣಬಹುದು. ಇಷ್ಟೇ ಅಲ್ಲದೆ, ಬಹು ಸಂಖ್ಯೆಯಲ್ಲಿ ಇಂಜಿನೀಯರಿಂಗ್, ಮೆಡಿಕಲ್ ಮತ್ತು ಮ್ಯಾನೇಜಮೆಂಟ್ ಕಾಲೇಜುಗಳು ಕೂಡ ಇಲ್ಲಿವೆ.

ಕೈಗಾರಿಕೆ

ಹಿಂದುಸ್ತಾನ ಏರೊನಾಟಿಕ್ಸ್ ಲಿಮಿಟೆಡ್ (ಎಚ್.ಎ.ಎಲ್), ಭಾರತ ಎಲೆಕ್ಟ್ರೊನಿಕ್ಸ್ ಲಿಮಿಟೆಡ್ (ಬಿ.ಇ.ಎಲ್), ಭಾರತ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿ.ಇ.ಎಮ್.ಎಲ್), ಹಿಂದುಸ್ತಾನ ಮಷೀನ್ ಟೂಲ್ಸ್ (ಎಚ್.ಎಮ್.ಟಿ) ಮತ್ತು ಇಂಡಿಯನ್ ಸ್ಪೆಸ್ ರಿಸರ್ಚ್ ಒರ್ಗನೈಸೆಷನ್ (ಇಸ್ರೊ) ಇವುಗಳು ತಮ್ಮ ಪ್ರಧಾನ ಕಛೇರಿಗಳನ್ನು ಇಲ್ಲಿ ತೆರೆದಿದುದರಿಂದ, ನಗರವು ಒಂದು ಉತ್ಪಾದನಾ ಕೇಂದ್ರವಾಗಿ ಬೆಳೆಯಿತು.

ಕಂಪನಿಗಳಾದ ಇನ್ಫೊಸಿಸ್, ವಿಪ್ರೊ ಮತ್ತು ಟಿಸಿಎಸ್ ಗಳು ಇಲ್ಲಿ ತಮ್ಮ ಪ್ರಧಾನ ಕಛೇರಿಗಳನ್ನು ತೆರೆದಿದುದರಿಂದ, ನಗರದ ಆರ್ಥಿಕ ಪ್ರಗತಿಯು ಮಹತ್ತರವಾಗಿ ಬೆಳೆಯಿತು. ಬೆಂಗಳೂರಿನಲ್ಲಿರುವ ಇತರ ಪ್ರಮುಖ ಕಂಪನಿಗಳೆಂದರೆ ಇಂಟೆಲ್, ಟೆಕ್ಸಸ್ ಇನ್ಸ್ತ್ರುಮೆನ್ತ್ಸ್, ಕ್ವಾಲ್ಕಾಮ್, ಆರ್ಮ್, ಬ್ರಾಡ್ಕಾಮ್, ಇ.ಎಮ್.ಸಿ. ಸ್ಕುವೆರ್, ನೆಟ್ ಆಪ್, ಸ್ಯಾನ್ ಡಿಸ್ಕ್, ಎಲ್.ಜಿ, ಸ್ಯಾಮ್ಸಂಗ್ ಮತ್ತು ಐ.ಬಿ.ಎಮ್. ಇಲ್ಲಿ ಸೃಷ್ಟಿಯಾದಂತಹ ಉದ್ಯೋಗ ಮಾರುಕಟ್ಟೆಯು ಜಗತ್ತಿನಾದ್ಯಂತ ಎಲ್ಲರನ್ನೂ ಆಕರ್ಷಿಸುತ್ತದೆ, ಇದೊಂದು ಬಹುಸಂಸ್ಕೃತಿ ಹಾಗೂ ಬಹುಜನಾಂಗೀಯ ಸಮಾಜವನ್ನಾಗಿ ಪರಿವರ್ತಿಸಲು ಸಹಾಯವಾಯಿತು.

ಮಾಧ್ಯಮ

ಬೆಂಗಳೂರಿನಲ್ಲಿ ಮೊದಲ ಮುದ್ರಣಾಲಯವನ್ನು ೧೮೪೦ರಲ್ಲಿ ಸ್ಥಾಪಿಸಲಾಯಿತು.[3] ೧೮೫೯ ರಲ್ಲಿ "ಪಂಜಾಬ್ ಕೇಸರಿ" ಎಂಬ ಮೊದಲ ಇಂಗ್ಲಿಷ್ ವಾರ ಪತ್ರಿಕೆ ಪ್ರಕಟವಾಗಿತ್ತು ಮತ್ತು ೧೮೬೦ ರಲ್ಲಿ "ಮೈಸೂರು ವ್ರಿತ್ತಂತ ಬೋಧಿನಿ" ಎಂಬ ಕನ್ನಡ ಪತ್ರಿಕೆ ಪ್ರಕಟವಾಗಿತ್ತು. ಈಗ "ವಿಜಯ ಕರ್ನಾಟಕ" ಮತ್ತು "ದಿ ಟೈಂಸ್ ಆಫ್ ಇಂಡಿಯಾ" ತುಂಬಾ ಜನಪ್ರಿಯವಾಗಿದೆ ಹಾಗೂ "ಪ್ರಜಾವಾಣಿ" ಮತ್ತು "ಡೆಕ್ಕನ್ ಹೆರಾಲ್ಡ್" ಅತಿ ದೊಡ್ಡ ಮುದ್ರಣಾಲಯಗಳನ್ನು ಹೊಂದಿದೆ.

ಬೆಂಗಳೂರು ಟಿವಿ ಮಾಧ್ಯಮ ಮೊದಲ ಬಾರಿಗೆ ನವೆಂಬರ್ ೧ ೧೯೮೧ ರಂದು "ದೂರದರ್ಶನ" ಮುಖಾಂತರ ಪ್ರಾರಂಭವಾಯಿತು. ೧೯ ನವೆಂಬರ್ ೧೯೮೩ ರಂದು ದೂರದರ್ಶನ ನಿರ್ಮಾಣ ಕೇಂದ್ರವನ್ನು ಸ್ಥಾಪಿಸಿ ವಾರ್ತಾ ಪ್ರಸಾರವನ್ನು ಪ್ರಾರಂಭಿಸಿತು. ನಂತರ ೧೯೯೧ ರಂದು ಕನ್ನಡ ದೂರದರ್ಶನ "ಡಿಡಿ ಚಂದನ" ಪ್ರಾರಂಭವಾಯಿತು. ಈಗ ಅನೇಕ ಟಿವಿ ಮಾಧ್ಯಮಗಳು ಜನಪ್ರಿಯವಾಗಿದೆ. ಇದಕ್ಕೆ ಉದಾಹರಣೆ ಟಿವಿ ೯, ಉದಯ, ಈ ಟಿವಿ, ಸುವರ್ಣ, ಜನಶ್ರೀ, ಸಮಯ, ಮುಂತಾದವು.

ಸಂಪರ್ಕ

ನಗರದ ಒಳ ಹಾಗು ಹೊರಭಾಗಗಳು ಒಂದಕ್ಕೊಂದು ಒಳ್ಳೆಯ ಸಂಪರ್ಕ ಹೊಂದಿರುವ ಕಾರಣ ನಗರದ ಒಳಗೆ ಮತ್ತು ಹೊರಗೆ ಓಡಾಡುವುದು ತುಂಬಾ ಸರಳವಾಗಿದೆ. ನಗರದ ಒಳಗಡೆ ಸಂಚರಿಸಲು, ಜನರು ಆಟೊ ರಿಕ್ಷಾಗಳು, ಕ್ಯಾಬಗಳು, ಮೆಟ್ರೊ ಟ್ರೇನಗಳ ಸೌಲಭ್ಯವನ್ನು ಪಡೆಯಬಹುದು. ವಿಮಾನ ನಿಲ್ದಾಣಕ್ಕೆ ಹೋಗಲು ವಾಯು ವಜ್ರ ಬಸ್ಸುಗಳ ಸೌಲಭ್ಯವಿದೆ. ಬೆಂಗಳೂರು ಆಕಾಶ ಮಾರ್ಗ, ರಸ್ತೆ ಮತ್ತು ರೈಲು ಮಾರ್ಗಗಳ ಮೂಲಕ ಭಾರತದ ಇತರ ಭಾಗಗಳಿಗೂ ಸಂಪರ್ಕ ಹೊಂದಿದೆ.

'ನಮ್ಮ ಮೆಟ್ರೋ'ವಿನ ಮೊದಲನೆಯ ಹಂತ ಪೂರ್ಣವಾಗಿ ಚಾಲನೆಯಲ್ಲಿದೆ. ೪೨ ಕಿಲೋಮೀಟರ್ ಗಳ ಎರಡು ಮಾರ್ಗಗಳು (ಉತ್ತರ ದಕ್ಷಿಣ ದಿಕ್ಕಿನಲ್ಲಿ ಹಸಿರು ಮಾರ್ಗ - ನಾಗಸಂದ್ರದಿಂದ ಯೆಲಚೇನಹಳ್ಳಿವರೆಗೆ, ಪೂರ್ವ ಪಶ್ಚಿಮ ದಿಕ್ಕಿನಲ್ಲಿ ನೇರಳೆ ಮಾರ್ಗ - ಬೈಯ್ಯಪ್ಪನಹಳ್ಳಿಯಿಂದ ನಾಯಂಡಹಳ್ಳಿವರೆಗೆ) ಚಾಲನೆಯಲ್ಲಿದೆ. ಎರಡನೆ ಹಂತದ ಕಾಮಗಾರಿ ನಡೆಯುತ್ತಿದೆ

ಭಾರತದ ನೈಋತ್ಯ ರೇಲ್ವೆ ವಲಯಕ್ಕೆ ಇದು ಮುಖ್ಯ ಕೇಂದ್ರವಾಗಿದ್ದು, ಯಶವಂತಪುರ, ಕ್ಯಾಂಟೊನಮೆಂಟ್ ಮತ್ತು ಕೆ.ಆರ್.ಪುರಂ ನಂತಹ ಕೆಲವು ಇತರ ನಿಲ್ದಾಣಗಳನ್ನೂ ಹೊಂದಿದೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ, ದೇವನಹಳ್ಳಿ ಎಂಬಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ಇದು ನಗರದಿಂದ ೪೦ ಕಿ.ಮೀ. ದೂರದಲ್ಲಿದೆ.

ಪ್ರವಾಸಿ ಸ್ಥಳಗಳು

ಬೆಂಗಳೂರು ಇತರ ಸ್ಥಳಗಳಿಗೆ ಉತ್ತಮವಾದ ಸಂಪರ್ಕ ಹೊಂದಿರುವದರಿಂದ ಪ್ರವಾಸಿಗರಿಗೆ ಸ್ವರ್ಗವಾಗಿದ್ದು, ಅನೇಕ ಆಕರ್ಷಣೀಯ ಸ್ಥಳಗಳಾದ ಜವಾಹರಲಾಲ್ ನೆಹರು ಪ್ಲಾನೇಟೊರಿಯಮ್, ಲಾಲಬಾಗ್, ಕಬ್ಬನ್ ಪಾರ್ಕ್, ಅಕ್ವೇರಿಯಮ್, ವೆಂಕಟಪ್ಪಾ ಆರ್ಟ್ ಗ್ಯಾಲರಿ, ವಿಧಾನ ಸೌಧ ಮತ್ತು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಗಳನ್ನು ಇಲ್ಲಿ ಕಾಣಬಹುದು.

ಮುತ್ಯಾಲಮಡುವು(ಮುತ್ತಿನಕಣಿವೆ), ಮೈಸೂರು, ಶ್ರವಣಬೆಳಗೋಳ, ನಾಗರಹೊಳೆ, ಬಂಡಿಪುರ, ರಂಗನತಿಟ್ಟು, ಬೇಲೂರು, ಮಂಡ್ಯ, ಹಳೇಬೀಡು, ಚಿಕ್ಕಮಗಳೂರು, ಕೊಡಗು ಮುಂತಾದ ಸ್ಥಳಗಳಿಗೂ ಕೂಡ ಬೆಂಗಳೂರಿನಿಂದ ಆರಾಮವಾಗಿ ಪ್ರಯಾಣಿಸಬಹುದಾಗಿದೆ.

ನಗರದಲ್ಲಿ ಇಳಿದುಕೊಳ್ಳಲು ಅನೇಕ ಆಯ್ಕೆಗಳಿದ್ದು, ಅವುಗಳಲ್ಲಿ ಲೀಲಾ ಪ್ಯಾಲೇಸ್, ಗೊಲ್ಡನ್ ಲ್ಯಾಂಡಮಾರ್ಕ್, ವಿಂಡ್ಸರ್ ಮ್ಯಾನರ್, ಲಿ ಮೇರಿಡಿಯನ್, ತಾಜ್ ಮತ್ತು ಲಲಿತ್ ಅಶೋಕ ಮುಂತಾದ ಹಲವು ಹೋಟೆಲ್ ಗಳು ಸೂಕ್ತ ಹಾಗು ದುಬಾರಿ ಬೆಲೆಗಳಲ್ಲಿ ಪ್ರವಾಸಿಗರಿಗೆ ಲಭ್ಯವಿವೆ.

ಬಹುಮುಖಿಯ ಸಂಸ್ಕೃತಿಹೊಂದಿರುವ ಕಾರಣ, ವಿವಿಧ ಬಗೆಯ ಖಾದ್ಯಗಳನ್ನು ಕೂಡ ಇಲ್ಲಿ ಕಾಣಬಹುದು. ಬೀದಿ ತಿನಿಸುಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದವರೆಗಿನ ತಿನಿಸುಗಳು ಕೂಡ ಇಲ್ಲಿ ಲಭ್ಯ. ಬೆಂಗಳೂರಿನಾದ್ಯಂತ ಬಹುಸಂಖ್ಯೆಯಲ್ಲಿ ಮ್ಯಾಕ್ ಡೊನಾಲ್ಡ್, ಕೆ.ಎಫ್.ಸಿ ಮತ್ತು ಪೀಜ್ಜಾ ಹಟ್ ಗಳ ಔಟ್ ಲೆಟ್ ಗಳನ್ನು ಕಾಣಬಹುದಾಗಿದ್ದು, ಆಸಕ್ತಿಯುಳ್ಳ ಪ್ರವಾಸಿಗರು ಸ್ಥಳೀಯ ತಿಂಡಿತಿನಿಸುಗಳ ಕೇಂದ್ರವಾದ ಎಂ.ಟಿ.ಅರ್. ಗೂ ಕೂಡ ಭೇಟಿ ನೀಡಬಹುದು. ಇತರ ಅನೇಕ ಸ್ಥಳಗಳಲ್ಲಿ ಭಾರತದ ಬೇರೆ ಬೇರೆ ರಾಜ್ಯಗಳ ಖಾದ್ಯಗಳು ಲಭ್ಯವಿದ್ದು, ಉತ್ತರ ಅಥವಾ ಪೂರ್ವ ಭಾರತದ ಅಡುಗೆಗಳಿಗೆ ಯಾವುದೆ ಕೊರತೆಯಿಲ್ಲ.

Pheonix mall, ದಿ ಫೋರಮ್, ಗರುಡಾ ಮಾಲ್, ಸೆಂಟ್ರಲ್ ,ಒರಾಯನ್ ಮಾಲ್, ಮತ್ತು ಮಂತ್ರಿ ಮಾಲ್ ಗಳಲ್ಲಿ, ದೇಶಿಯ ಹಾಗು ವಿದೇಶಿಯ ಉತ್ಪನ್ನಗಳು ಲಭ್ಯವಿದ್ದು ಖರೀದಿಗೆ ಯೋಗ್ಯವಾದ ಸ್ಥಳಗಳಾಗಿವೆ. ಎಂ.ಜಿ. ರಸ್ತೆಯಲ್ಲಿರುವ ಕಾವೇರಿ ಎಂಪೋರಿಯಮ್ ದೇಶೀಯ ಉತ್ಪನ್ನಗಳಾದ ಚಂದನದ ಸಾಮಗ್ರಿಗಳು, ಜನಪ್ರಿಯವಾದ ಚೆನ್ನಪಟ್ಟಣದ ಕಟ್ಟಿಗೆಯ ಬೊಂಬೆಗಳನ್ನು ಖರೀದಿಸಲು ಉತ್ತಮ ಸ್ಥಳವಾಗಿದೆ. ತುಡಿಯುತ್ತಿರುವ ಯುವಜನಾಂಗದ ಪರಿಣಾಮವಾಗಿ, ಬೆಂಗಳೂರಿನ ರಾತ್ರಿ ಜೀವನವು ಬಲು ಸೊಗಸಾಗಿರುತ್ತದೆ.

ಜಗತ್ತಿನ ಕ್ರಿಯಾಶೀಲ ನಗರಗಳು

  • ವಿಶ್ವದ ಕ್ರಿಯಾಶೀಲ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನ ಪಡೆದಿದೆ. ಜಿಎಲ್‍ಎಲ್ ಗ್ಲೋಬಲ್ ರಿಸರ್ಚ್ ಕಂಪನಿ ನಡೆಸಿದ ಸಮೀಕ್ಷೆಯ ಆಧಾರದಲ್ಲಿ ಈ ಪಟ್ಟಿಯನ್ನು ತಯಾರಿಸಲಾಗಿದೆ. ಶಿಕ್ಷಣ, ಮೂಲಸೌಕರ್ಯ, ಅಗಾಧವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಹೊಂದಿಕೊಳ್ಳುವುದು ಸೇರಿದಂತೆ ದೇಶದ ಪ್ರಗತಿಗೆ ತಮ್ಮ ಕಾಣಿಕೆಯನ್ನೂ ನೀಡುತ್ತಿರುವ ವಿಚಾರಗಳನ್ನಾಧರಿಸಿ ಜಗತ್ತಿನ ಮೂವತ್ತು ನಗರಗಳನ್ನು ಗುರುತಿಸಲಾಗಿದೆ.
  • ಈ ಪಟ್ಟಿಯಲ್ಲಿ ಟಾಪ್ 10 ಸ್ಥಾನದಲ್ಲಿರುವ ನಗರಗಳು.
  1. ಬೆಂಗಳೂರು
  2. ಹೋ ಚಿ ಮಿನಾ ಸಿಟಿ
  3. ಸಿಲಿಕಾನ್ ವ್ಯಾಲಿ
  4. ಶಾಂಘೈ
  5. ಹೈದ್ರಾಬಾದ್
  6. ಲಂಡನ್
  7. ಆಸ್ಟಿನ್g
  8. ಹನೋಯಿ
  9. ಬೋಸ್ಟನ್
  10. ನೈರೋಬಿ [4]

ದೇಶದ ಮೂರನೇ ಸಿರಿವಂತ ನಗರ ಬೆಂಗಳೂರು

  • 27 Feb, 2017
  • ಭಾರತದ ಅತ್ಯಂತ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೂರನೇ ಸ್ಥಾನ ಪಡೆದಿದೆ. ದೇಶದ ಅತ್ಯಂತ ಶ್ರೀಮಂತ ನಗರ ಎಂಬ ಹೆಗ್ಗಳಿಕೆಗೆ ವಾಣಿಜ್ಯ ನಗರಿ ಮುಂಬೈ ಪಾತ್ರವಾಗಿದ್ದರೆ, ದೆಹಲಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
  • ಮುಂಬೈನ ಸಂಪತ್ತಿನ ಮೊತ್ತ ರೂ.54.6 ಲಕ್ಷ ಕೋಟಿ. ಇನ್ನು ದೆಹಲಿ ಮತ್ತು ಬೆಂಗಳೂರಿನ ಸಂಪತ್ತು ಕ್ರಮವಾಗಿ ರೂ.29.9 ಲಕ್ಷ ಕೋಟಿ ಮತ್ತು ರೂ.21.3 ಲಕ್ಷ ಕೋಟಿಯಷ್ಟಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ, ನ್ಯೂ ವರ್ಲ್ಡ್‌ ವೆಲ್ತ್‌ ಬಿಡುಗಡೆ ಮಾಡಿರುವ 2016ನೇ ಸಾಲಿನ ವರದಿಯಲ್ಲಿ ಈ ಮಾಹಿತಿ ಇದೆ.

ವಲಸೆ

  • ಸ್ವದೇಶದಿಂದ ವಲಸೆ ಹೋಗುತ್ತಿರುವ ಸಿರಿವಂತರ ಸಂಖ್ಯೆಯಲ್ಲಿ ಭಾರಿ ಏರಿಕೆ ಆಗಿದೆ. 2016ರಲ್ಲಿ ವಿಶ್ವದಾದ್ಯಂತ 82 ಸಾವಿರ, ಅತಿ ಸಿರಿವಂತರು ವಲಸೆ ಹೋಗಿದ್ದಾರೆ. ಈ ರೀತಿ ಅತಿ ಹೆಚ್ಚು ವಲಸೆ ಹೋದ ಮೊದಲ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಇದೆ.
  • ಈ ಸಾಲಿನಲ್ಲಿ ಒಟ್ಟು 6 ಸಾವಿರ ಸಿರಿವಂತರು ತಮ್ಮ ವಾಸ್ತವ್ಯವನ್ನು ಭಾರತದಿಂದ ಬೇರೆ ದೇಶಗಳಿಗೆ ಬದಲಿಸಿದ್ದಾರೆ. 2015ನೇ ಸಾಲಿನಲ್ಲಿ ಹೀಗೆ ವಲಸೆ ಹೋದವರ ಸಂಖ್ಯೆ 4 ಸಾವಿರ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2016ರಲ್ಲಿ ವಲಸೆ ಹೋದ ಸಿರಿವಂತರ ಸಂಖ್ಯೆಯಲ್ಲಿ ಶೇ 50 ರಷ್ಟು ಹೆಚ್ಚಳವಾಗಿದೆ.

ಶತ ಕೋಟ್ಯಾಧಿಪತಿಗಳು

  • 10 ಲಕ್ಷ ಅಮೆರಿಕನ್ ಡಾಲರ್‌ನಿಂದ 100 ಕೋಟಿ ಅಮೆರಿಕನ್ ಡಾಲರ್‌ವರೆಗೆ (ಸುಮಾರು ₹ 6.6 ಕೋಟಿಯಿಂದ ₹ 6.6 ಸಾವಿರ ಕೋಟಿ) ಸಂಪತ್ತು ಹೊಂದಿರುವವರನ್ನು ಮಿಲಿಯನೇರ್ ಅಥವಾ ಶತ ಕೋಟ್ಯಾಧಿಪತಿಗಳು ಎಂದು ನ್ಯೂ ವರ್ಲ್ಡ್‌ ವೆಲ್ತ್‌ ವರದಿಯಲ್ಲಿ ಪರಿಗಣಿಸಲಾಗಿದೆ. 100 ಕೋಟಿ ಅಮರಿಕನ್‌ ಡಾಲರ್‌ಗಿಂತ (ಸು. ₹ 6.6 ಸಾವಿರ ಕೋಟಿ) ಹೆಚ್ಚು ಸಂಪತ್ತು ಇದ್ದವರನ್ನು ಬಿಲಿಯನೇರ್‌ ಅಥವಾ ಸಹಸ್ರ ಕೋಟ್ಯಾಧಿಪತಿಗಳು ಎಂದು ಕರೆಯಲಾಗಿದೆ.[5]

ಇದನ್ನೂ ನೋಡಿ

ಇತರೆ ಸಂಪರ್ಕ

ಉಲ್ಲೇಖಗಳು

  1. https://www.google.co.in/search?q=bangalore+distance+above+sea+level&oq=banglore+didtance+ab&aqs=chrome.1.69i57j0l3.12879j0j7&client=ms-android-lenovo&sourceid=chrome-mobile&ie=UTF-8
  2. https://www.google.co.in/search?client=ms-android-lenovo&ei=7fCDW93_IYv1vgS4052ACA&q=kempegowda+king+of+bangalore&oq=+kempegowda+king+of+bang&gs_l=mobile-gws-wiz-serp.1.0.33i22i29i30l2j33i160.14357.23006..23860...0.0..0.349.4433.0j6j11j2......0....1.........0i203j0i2i203j0i19j0i22i30i19j0i22i30j33i21.DnCZFc1tG7Q
  3. ವಿಜಯಾ ಬಿ. ಪುಣೆಕರ್ accessdate 2007-10-04. "Assimilation: A Study of North Indians in Bangalore".
  4. ಜಗತ್ತಿನ ಕ್ರಿಯಾಶೀಲ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಅಗ್ರ ಸ್ಥಾನ;ಪಿಟಿಐ;18 Jan, 2017
  5. ದೇಶದ ಮೂರನೇ ಸಿರಿವಂತ ನಗರ ಬೆಂಗಳೂರು;ಪ್ರಜಾವಾಣಿ ವಾರ್ತೆ;27 Feb, 2017

visit: www.bangaloreitbt.in


ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು

ಅಗರ್ತಲ | ಇಂಫಾಲ | ಇಟಾನಗರ | ಐಝ್ವಾಲ್ | ಕವರಟ್ಟಿ | ಕೋಹಿಮ | ಕೊಲ್ಕತ್ತ | ಗಾಂಧಿನಗರ | ಗ್ಯಾಂಗಟಕ್ | ಚೆನ್ನೈ | ಚಂಡೀಗಡ | ಜೈಪುರ | ತಿರುವನಂತಪುರಮ್ | ದಮನ್ | ದಿಸ್ಪುರ್ | ಡೆಹ್ರಾಡೂನ್ | ನವ ದೆಹಲಿ | ಪಟ್ನಾ | ಪಣಜಿ | ಪುದುಚೆರಿ | ಪೋರ್ಟ್ ಬ್ಲೇರ್ | ಬೆಂಗಳೂರು | ಭುವನೇಶ್ವರ | ಭೂಪಾಲ್ | ಮುಂಬೈ | ರಾಂಚಿ | ರಾಯ್ಪುರ್ | ಲಕ್ನೌ | ಶಿಮ್ಲಾ | ಶಿಲ್ಲಾಂಗ್ | ಶ್ರೀನಗರ | ಸಿಲ್ವಾಸ | ಹೈದರಾಬಾದ್

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.