ಬೆಂಗಳೂರು ನಗರ ರೈಲ್ವೆ ನಿಲ್ದಾಣ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ[1] ರೈಲ್ವೆ ನಿಲ್ದಾಣ ಎಂದು ಅಧಿಕೃತವಾಗಿ ಹೆಸರಿಸಲಾಗಿರುವ ಬೆಂಗಳೂರು ನಗರ ರೈಲ್ವೆ ನಿಲ್ದಾಣವು ಬೆಂಗಳೂರು ನಗರದ ಮುಖ್ಯ ರೈಲ್ವೆ ನಿಲ್ದಾಣವಾಗಿ ಕಾರ್ಯನಿರ್ವಹಿಸುತ್ತಿದೆ. ಈ ನಿಲ್ದಾಣವನ್ನು ಕನ್ನಡನಾಡಿನ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಸ್ಮರಣಾರ್ಥ ಮೇ ೨೦೧೫ ರಲ್ಲಿ ಮರುನಾಮಕರಣ[2] ಮಾಡಲಾಗಿ, ೩ ಫೆಬ್ರವರಿ ೨೦೧೬ ರಿಂದ ಅಧಿಕೃತಗೊಳಿಸಲಾಗಿದೆ.[3] ಈ ನಿಲ್ದಾಣವು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತಾಗಿಕೊಂಡಿದೆ. ಈ ನಿಲ್ದಾಣವು ನೈಋತ್ಯ ರೈಲ್ವೆ ಹಾಗು ಭಾರತೀಯ ರೈಲ್ವೆಯ ಬಹುಮುಖ್ಯ ಕೇಂದ್ರವಾಗಿದೆ. ಈ ನಿಲ್ದಾಣವು ೧೦ ಅಂಕಣಗಳು ಹಾಗು ೨ ಪ್ರವೇಶ ದ್ವಾರಗಳನ್ನು ಹೊಂದಿದೆ. ಇದು ಭಾರತದ ಅತ್ಯಂತ ಜನನಿಬಿಡ ರೈಲ್ವೆ ನಿಲ್ದಾಣಗಳಲ್ಲೊಂದಾಗಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಬೆಂಗಳೂರು ನಗರ) ರೈಲ್ವೆ ನಿಲ್ದಾಣ | |
---|---|
ಭಾರತೀಯ ರೈಲ್ವೆ ನಿಲ್ದಾಣ | |
![]() | |
ಸ್ಥಳ | ರೈಲ್ವೆ ನಿಲ್ದಾಣ ರಸ್ತೆ, ಗುಬ್ಬಿ ತಿರುವು, ಬೆಂಗಳೂರು, ಕರ್ನಾಟಕ,![]() |
ನಿರ್ದೇಶಾಂಕ | 12°58′42″N 77°34′10″E |
ಎತ್ತರ | 896.920 metres (2,942.65 ft) |
ಒಡೆತನದ | ಭಾರತೀಯ ರೈಲ್ವೆ |
ನಿರ್ವಹಿಸುತ್ತದು | ನೈಋತ್ಯ ರೈಲ್ವೆ |
ಗೆರೆ(ಗಳು) | ಚೆನ್ನೈ ಕೇಂದ್ರ-ಬೆಂಗಳೂರು ನಗರ ಮಾರ್ಗ |
ವೇದಿಕೆ | ೧೦ |
ಸಂಪರ್ಕಗಳು | ಕೆಂಪೇಗೌಡ ಬಸ್ ನಿಲ್ದಾಣ, ನಮ್ಮ ಮೆಟ್ರೋ |
Construction | |
ಪಾರ್ಕಿಂಗ್ | ಇದೆ |
Other information | |
ಸ್ಥಿತಿ | ಚಾಲ್ತಿಯಲ್ಲಿದೆ |
ನಿಲ್ದಾಣದ ಸಂಕೇತ | SBC |
ವಿದ್ಯುನ್ಮಾನ | ಹೌದು |

ಕೂಡು ನಿಲ್ದಾಣ(ಜಂಕ್ಷನ್)
ಬೆಂಗಳೂರು ಭಾರತದ ಬಹುಮುಖ್ಯ ಕೂಡು ನಿಲ್ದಾಣಗಳಲ್ಲೊಂದಾಗಿದೆ. ಮೊದಲ ೭ ಅಂಕಣಗಳು ಚೆನ್ನೈ ಮತ್ತು ಸೇಲಂ ರೈಲ್ವೆ ಮಾರ್ಗಗಳನ್ನು ಸಂಪರ್ಕಿಸುತ್ತವೆ. ಹುಬ್ಬಳ್ಳಿಯಿಂದ ಯಶವಂತಪುರ ಮಾರ್ಗದಲ್ಲಿ ಬರುವ ರೈಲುಗಳು ೮ ರಿಂದ ೧೦ನೆ ಅಂಕಣಗಳನ್ನು ಸೇರುತ್ತವೆ . ಅಂಕಣ ೫ ರಿಂದ ೧೦ರಲ್ಲಿ, ಮೈಸೂರುಕಡೆಗೆ ಪ್ರಯಾಣಿಕ ಗಾಡಿಗಳು ಹೊರಡುತ್ತವೆ. ಅಂಕಣ ೪ ಮತ್ತು ೫ರ ಮಧ್ಯ ಇರುವ ಹಳಿಗಳನ್ನು ರೈಲುಗಳನ್ನು ನಿಲ್ಲಿಸಲು ಬಳಸಲಾಗುತ್ತದೆ. ಬೆಂಗಳೂರು ನಗರ ರೈಲ್ವೆ ನಿಲ್ದಾಣದಿಂದ ೫ ರೈಲ್ವೆ ಮಾರ್ಗಗಳು ಹಾದು ಹೋಗುತ್ತವೆ. ಗುಂತಕಲ್ ಮಾರ್ಗವಾಗಿ ಹೈದರಾಬಾದ್, ಕೃಷ್ಣರಾಜಪುರ ಮಾರ್ಗವಾಗಿ ಚೆನ್ನೈ, ಹೊಸೂರು ಮಾರ್ಗವಾಗಿ ಸೇಲಂ, ಮೈಸೂರು, ತುಮಕೂರು ಮಾರ್ಗವಾಗಿ ಹುಬ್ಬಳ್ಳಿ, ಬೀರೂರು. ಬೆಂಗಳೂರು ದಂಡು, ಬಂಗಾರಪೇಟೆ ಮೂಲಕ ಹಾದುಹೋಗುವ ಬೆಂಗಳೂರು-ಚೆನ್ನೈ ರೈಲ್ವೆ ಮಾರ್ಗವನ್ನು ಸಂಪೂರ್ಣ ವಿದ್ಯುದೀಕರಿಸಲಾಗಿದ್ದು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಈ ನಿಲ್ದಾಣದಿಂದ ದಿನಂಪ್ರತಿ ೬೩ ವೇಗದೂತ ರೈಲುಗಳನ್ನೊಳಗೊಂಡು ಒಟ್ಟು ೮೮ ರೈಲುಗಳು ಕಾರ್ಯಾಚರಿಸುತ್ತವೆ ಮತ್ತು ಅಂದಾಜು ೨,೨೦,೦೦೦ ಪ್ರಯಾಣಿಕರು ಈ ನಿಲ್ದಾಣವನ್ನು ಬಳಸುತ್ತಾರೆ.[4]
ರೈಲ್ವೆ ಬಡಾವಣೆ
ನಿಲ್ದಾಣದ ಹಿಂಭಾಗದಲ್ಲಿ ರೈಲ್ವೆ ಸಿಬ್ಬಂದಿಗಳಿಗಾಗಿಯೆ ಬಡಾವಣೆಯೊಂದನ್ನು ಸ್ಥಾಪಿಸಲಾಗಿದ್ದು. ಈ ಕಾಲೋನಿಯು ಶಾಲೆ, ಆಸ್ಪತ್ರೆ, ಆಟದ ಮೈದಾನ ಮುಂತಾದ ಮೂಲಸೌಕರ್ಯಗಳನ್ನೊಳಗೊಂಡಿದೆ.
ವಿಸ್ತರಣೆ
ಟಿಕೇಟ್ ಮುಂಗಟ್ಟೆ, ಕೆಳಮಹಡಿಯ ವಾಹನ ನಿಲ್ದಾಣ ಹಾಗು ಪ್ರಯಾಣಿಕರ ಚಾವಡಿಗಳನ್ನೊಳಗೊಂಡ ಸುಸಜ್ಜಿತ ಕಟ್ಟಡವು ಓಕಳೀಪುರ ಪ್ರವೇಶ ದ್ವಾರದಲ್ಲಿ ಸೇವೆಗೆ ಮುಕ್ತಗೊಳಿಸಲಾಗಿದೆ.[5]
ಉಲ್ಲೇಖಗಳು
- "South Central Railway Press Release".
- "Bengaluru railway station to be named after Sangolli Rayanna". Deccan Harald, Newspaper. 1 May 2015. Retrieved 17 September 2015.
- "South Central Railway Press Release".
- "Bengaluru still on waitlist for better rail facilities". The Hindu. Chennai, India. 5 March 2013. Retrieved 5 March 2013.
- "Ministers Bat For Suburban Rail Services". New Indian Express. 21 June 2015.
ಬಾಹ್ಯ ಕೊಂಡಿಗಳು
![]() |
ವಿಕಿಮೀಡಿಯ ಕಣಜದಲ್ಲಿ Bangalore_City_railway_station ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |