ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ಮಹಾನಗರದ ಕ್ಷೇತ್ರದ ನಾಗರಿಕ ಮತ್ತು ಮೂಲಭೂತ ವ್ಯವಸ್ಥೆಗಳ ಆಸ್ತಿಯ ಜವಾಬ್ದಾರಿಯನ್ನು ಹೊಂದಿರುವ ಸರ್ಕಾರದ ಆಡಳಿತಾತ್ಮಕ ಅಂಗವಾಗಿದೆ.

Bruhat Bengaluru Mahanagara Palike

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
Type
Type
Leadership
Mayor
ಉಪ ಮೇಯರ್
ಆನಂದ್ ಎಂ, ಜನತಾದಳ(Secular)
ಕಾರ್ಪೊರೇಷನ್ ಆಯುಕ್ತರು
ಎನ್. ಮಂಜುನಾಥ್ ಪ್ರಸಾದ್ ಐಎಎಸ್
ವಿರೋಧ ಪಕ್ಷದ ನಾಯಕ
ಪದ್ಮನಾಭ ರೆಡ್ಡಿ, ಭಾರತೀಯ ಜನತಾ ಪಕ್ಷ
Structure
Seats198
Political groups
INC - 76
Political groups
BJP -101
Elections
Last election
2015
Meeting place
ಕಾರ್ಪೊರೇಷನ್ ಸರ್ಕಲ್, ಹಡ್ಸನ್ ಸರ್ಕಲ್, ಬೆಂಗಳೂರು
Website
bbmp.gov.in

ಬಿಬಿಎಂಪಿ ಸರ್ಕಾರದ ಮೂರನೇ ಹಂತವನ್ನು ಪ್ರತಿನಿಧಿಸುತ್ತದೆ, (ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮೊದಲಿನ ಎರಡು ಹಂತಗಳು). ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ನಗರ ಸಮಿತಿ ಮುನ್ನೆಡೆಸುತ್ತದೆ. ನಗರ ಸಮಿತಿ "ಕಾರ್ಪೋರೇಟರ್ಗಳು" ಎಂದು ಕರೆಸಿಕೊಳ್ಳುವ, ನಗರದ ಪ್ರತಿಯೊಂದು ಪ್ರದೇಶದಿಂದ (ವಾರ್ಡ್) ಒಬ್ಬರಂತೆ ಚುನಾಯಿತರಾದ ಸದಸ್ಯರನ್ನು ಹೊಂದಿರುತ್ತದೆ. ನಗರ ಸಮಿತಿಗೆ ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆಗಳನ್ನು ನೆಡೆಸಲಾಗುತ್ತದೆ, ಮತ್ತು ಫಲಿತಾಂಶಗಳು ಅತಿಹೆಚ್ಚು ಮತಗಳಿಕೆ ಮೇಲೆ ಆಧಾರಿತವಾಗಿರುತ್ತವೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ರಾಜ್ಯದ ಒಂದಕ್ಕಿಂತ ಹೆಚ್ಚು ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುತ್ತಾರೆ. ಮೊದಲ ಆಡಳಿತಾತ್ಮಕ ಅಂಗದ ಚುನಾವಣೆಯನ್ನು ವಾರ್ಡ್‌ಗಳ ಪರಿಧಿ ಹಾಗೂ ಮತದಾರರ ಪಟ್ಟಿ ತಯಾರಿಕೆಯಲ್ಲಿ ಆದ ವಿಳಂಬದಿಂದಾಗಿ,  ೩೮ ಮಾರ್ಚ್ ೨೦೧೦ರಂದು ನೆಡೆಸಲಾಯ್ತು. ಚುನಾವಣೆ ವಿವರಕ್ಕೆ ನೋಡಿ :ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ೨೦೧೦

ಸ್ವರೂಪ

ಒಬ್ಬ ಮೇಯರ್ ಮತ್ತು ಉಪ ಮೇಯರ್ ಅವರನ್ನು ಸಮಿತಿಗೆ ಒಂದು ವರ್ಷದ ಅವಧಿಗೆ ಆರಿಸಲಾಗುತ್ತದೆ, ಆದರೆ ಜನಪ್ರಿಯ ಮತಗಳಿಂದಲ್ಲ. ಮೇಯರ್ ಮತ್ತು ಉಪ ಮೇಯರ್ ಸ್ಥಾನಗಳನ್ನು ಹಿಂದುಳಿದ ಜಾತಿ ಮತ್ತು ವರ್ಗಗಳ ಅಥವಾ ಇತರೆ ಹಿಂದುಳಿದ ವರ್ಗಗಳ ಮಹಿಳಾ ಅಭ್ಯರ್ಥಿಯ ಮೀಸಲಾತಿ ಇಂದ ಚುನಾಯಿತ ಪ್ರತಿನಿಧಿಗಳಲ್ಲಿ ಆಯ್ಕೆ ಮಾಡಲಾಗುತ್ತದೆ. ಆದ್ಯಾಗ್ಯೂ, ಚುನಾಯಿತ ಸಮಿತಿ ಇಲ್ಲದ ಪಕ್ಷದಲ್ಲಿ, ಬಿಬಿಎಂಪಿಯನ್ನು ರಾಜ್ಯ ಸರ್ಕಾರ ನೇಮಿಸಿದ ಒಬ್ಬ ಆಡಳಿತಾಧಿಕಾರಿ ಮತ್ತು ಒಬ್ಬ ಮುಖ್ಯ ಆಯುಕ್ತರ ಮೂಲಕ ನೆಡೆಸಲಾಗುತ್ತದೆ. ಮೇಯರ್ ಶ್ರೀಮತಿ ಗಂಗಾಂಬಿಕಾ ಮಲ್ಲಿಕಾರ್ಜುನ, ಆಯುಕ್ತ ಮಂಜುನಾಥ ಪ್ರಸಾದ್. ಹೆಚ್ಚುವರಿ ಆಯುಕ್ತರು ವಿಶೇಷವಾಗಿ ನೇಮಿಸಲಾದ ಐಆರ್‌ಎಸ್ ಅಧಿಕಾರಿಯಾಗಿರುತ್ತಾರೆ.  ಬೃಹರ್ ಬೆಂಗಳೂರು ಮಹಾನಗರ ಪಾಲಿಕೆ ನಾಗರಿಕ ಮತ್ತು ಮೂಲಸೌಕರ್ಯ ವ್ಯವಸ್ಥೆಗಳ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುತ್ತದೆ. ಇದು ಸಾಮಾನ್ಯವಾಗಿ ಇತರೆ ನಾಗರೀಕ ಸಮಿತಿಗಳು, ಅಂದರೆ ಅಜೆಂಡಾ ಫಾರ್ ಬೆಂಗಳೂರು ಇನ್‌ಪ್ರಾಸ್ಟ್ರಕ್ಚರ್ ಡೆವೆಲಪ್‌ಮೆಂಟ್ ಫೋರ್ಸ್ (ABIDe) ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಗಳೊಂದಿಗೆ ನಾಗರೀಕ ಮತ್ತು ಮೂಲಸೌಕರ್ಯ ಯೋಜನೆಗಳ ರಚನೆ ಮತ್ತು ಅನುಷ್ಠಾನಗಳಲ್ಲಿ ಪಾಲ್ಗೊಳ್ಳುತ್ತದೆ. 

ಇತಿಹಾಸ

ಬೆಂಗಳೂರಿನ ಪೌರಸಂಸ್ಥೆ ಆಡಳಿತದ ಇತಿಹಾಸ ಮಾರ್ಚ್ ೨೭, ೧೮೬೨ ರ ಹಿಂದಿನ ದಿನಗಳಿಗೆ ಸರಿದು, ೧೮೫೦ ರ ನಗರಾಭಿವೃದ್ಧಿ ಕಾಯ್ದೆ ಅಡಿ ಆಗಿನ ಮುಂಚೂಣಿಯಲ್ಲಿದ ೯ ನಾಗರೀಕರಿಂದ ಪೌರಸಂಸ್ಥೆಯ ಸಮಿತಿ ಸ್ಥಾಪಿಸಲ್ಪಟ್ಟಿತು. ನಂತರ ಅಂತದ್ದೇ ಪೌರಸಂಸ್ಥೆಯ ಸಮಿತಿಯನ್ನು ನಗರದ ಕಂಟೋನ್ಮೆಂಟ್‌ ಪ್ರದೇಶದಲ್ಲಿ ಸ್ಥಾಪಿಸಲಾಯಿತು.ಈ ಎರಡೂ ಸಮಿತಿಗಳನ್ನು ೧೮೮೧ರಲ್ಲಿ ನ್ಯಾಯಾತ್ಮಕಗೊಳಿಸಲಾಯಿತು ಮತ್ತು ಎರಡು ಸ್ವಾಯತ್ತ ಅಂಗಸಂಸ್ಥೆಗಳಾದ ಬೆಂಗಳೂರು ಸಿಟಿ ಮುನಿಸಿಪಾಲಿಟ್ ಮತ್ತು ಮಿಲಿಟರಿ ಸ್ಟೇಷನ್ ಮುನಿಸಿಪಾಲಿಟಿ ಎಂದು ಕರೆಸಿಕೊಂಡವು. ಮುಂದಿನ ವರ್ಷ, ಚುನಾಯಿತ ಸದಸ್ಯ ಎಂಬ ಪರಿಕಲ್ಪನೆ ಅನುಷ್ಠಾನಕ್ಕೆ ಬಂದು ಮತ್ತು ಆಸ್ತಿ ತೆರಿಗೆ ಕೂಡ ಪರಿಚಯಿಸಲ್ಪಟ್ಟಿತು.

ವಲಯಗಳು

ಬಿಬಿಎಂಪಿಯನ್ನು ಆಡಳಿತ ವ್ಯವಸ್ಥೆ ಸುಲಭ ಮಾಡಲು, ಎಂಟು ವಲಯಗಳಾಗಿ ವಿಂಗಡಿಸಲಾಗಿದೆ:

  1. ಯಲಹಂಕ
  2. ದಾಸರಹಳ್ಳಿ
  3. ಬೊಮ್ಮನಳ್ಳಿ
  4. ದಕ್ಷಿಣ ವಲಯ
  5. ಮಹಾದೇವಪುರ
  6. ಪೂರ್ವ ವಲಯ
  7. ರಾಜರಾಜೇಶ್ವರಿ ನಗರ
  8. ಪಶ್ಚಿಮ ವಲಯ

ಪ್ರತಿ ವಲಯವು ಒಬ್ಬ ಜಂಟಿ ಆಯುಕ್ತರನ್ನು ಹೊಂದಿದ್ದು, ಅವರು ಬಿಬಿಎಂಪಿ ಆಯುಕ್ತರ ಅಧೀನದಲ್ಲಿರುತ್ತಾರೆ. ವಿಕೇಂದ್ರೀಕರಣ ಆಡಳಿತದ ತೊಂದರೆಗಳನ್ನು ನಿವಾರಿಸುವುದರಲ್ಲಿ ಅಷ್ಟೇನೂ ಗಮನಾರ್ಹ ಕೊಡುಗೆಯನ್ನೇನೂ ನೀಡಿಲ್ಲ. ೨೦೧೩ರ ಅಂತ್ಯದಲ್ಲಿ ಬಿಬಿಎಂಇಯನ್ನು ಮೂರು ಭಾಗಗಳಾಗಿ ವಿಭಜಿಸುವ ಚರ್ಚೆಗಳು ಅನೇಕ ಗುಂಪುಗಳಿಂದ ಕೇಳಿಬಂದವು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ-೨೦೧೫

ಅಭಿವೃದ್ಧಿಯ ಸಮಸ್ಯೆಗಳು

  • ‘ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ಮಸೂದೆ–2016’ಕ್ಕೆ ವಿಧಾನಮಂಡಲ ಅಧಿವೇಶನದಲ್ಲಿ ಇತ್ತೀಚೆಗೆ ಅನುಮೋದನೆ ಪಡೆಯಲಾಗಿದೆ. ನಗರದ ಒಟ್ಟು ಪ್ರದೇಶದಲ್ಲಿ ಶೇ 15ರಷ್ಟನ್ನು ಉದ್ಯಾನ, ಆಟದ ಮೈದಾನ ಇಂತಹ ಸಾರ್ವಜನಿಕ ಮುಕ್ತ ವಲಯಕ್ಕಾಗಿ (ಓಪನ್ ಸ್ಪೇಸ್) ಮೀಸಲಿಟ್ಟಿದ್ದನ್ನು ತಿದ್ದುಪಡಿಯ ಅನ್ವಯ ಶೇ 10ಕ್ಕೆ ಕಡಿತಗೊಳಿಸಲಾಗಿದೆ. ಹಾಗೆಯೇ ನಾಗರಿಕ ಸೌಲಭ್ಯಕ್ಕಾಗಿ ಶೇ 10ರಷ್ಟು ಮೀಸಲಿಟ್ಟಿದ್ದನ್ನು ಶೇ 5ಕ್ಕೆ ಇಳಿಸಲಾಗಿದೆ. ಈ ತಿದ್ದುಪಡಿ ಮಸೂದೆಯನ್ನು ರಾಜ್ಯಪಾಲರು ಅಂಗೀಕರಿಸಿದಲ್ಲಿ ಕರ್ನಾಟಕದ 250 ಪಟ್ಟಣ ಹಾಗೂ ನಗರಗಳ ಮೇಲೆ ಕರಿನೆರಳು ಬೀಳಲಿದೆ...ಓದಿ:[1]

ನೀರಿನ ಸಮಸ್ಯೆ

  • 12 Oct, 2016
  • ನಗರಕ್ಕೆ ಪ್ರತಿನಿತ್ಯ 135 ಕೋಟಿ ಲೀಟರ್‌ ಕಾವೇರಿ ನೀರು ಪೂರೈಕೆಯಾಗುತ್ತದೆ. ಕೊಳವೆ ಬಾವಿಗಳ ಮೂಲಕ ಅಂತರ್ಜಲದಿಂದ ದಿನಕ್ಕೆ 20 ಕೋಟಿ ಲೀಟರ್‌ ನೀರು ಎತ್ತಲಾಗುತ್ತದೆ. ಬೇಸಿಗೆಯಲ್ಲಿ ಇದರ ಪ್ರಮಾಣ ದುಪ್ಪಟ್ಟಾಗುತ್ತದೆ.
  • ನಗರದಲ್ಲಿ ಈಗ 59.57 ಲಕ್ಷ ವಾಹನಗಳಿವೆ. ಇದರಲ್ಲಿ ದ್ವಿಚಕ್ರ ವಾಹನ ಹಾಗೂ ಕಾರುಗಳ ಪಾಲು 53.66 ಲಕ್ಷ ಇದೆ.
  • ವಾಹನ ಮಾಲೀಕರು ಆಯುಧ ಪೂಜೆಯ ದಿನ ಸಾಮಾನ್ಯವಾಗಿ ವಾಹನಗಳಿಗೂ ಪೂಜೆ ಮಾಡುತ್ತಾರೆ. ಒಂದು ಅಂದಾಜಿನ ಪ್ರಕಾರ ನಗರದ 45 ಲಕ್ಷಕ್ಕೂ ಅಧಿಕ ವಾಹನ ಸವಾರರು ಈ ಕೆಲಸ ಮಾಡಿದ್ದಾರೆ. ಈ ಬಾರಿ ವಾಹನ ಪೂಜೆಯ ಸಂದರ್ಭದಲ್ಲಿ ವಾಹನಗಳನ್ನು ತೊಳೆಯಲು 10 ಕೋಟಿ ಲೀಟರ್‌ಗೂ ಅಧಿಕ ನೀರನ್ನು ಬಳಸಲಾಗಿದೆ. ಇದರಲ್ಲಿ ಕಾವೇರಿ ನೀರನ್ನು ಬಳಸಿದವರ ಸಂಖ್ಯೆಯೂ ದೊಡ್ಡದಿದೆ. ಉಳಿದವರು ಕೊಳವೆಬಾವಿಗಳ ನೀರಿನಿಂದ ವಾಹನಗಳನ್ನು ತೊಳೆದಿದ್ದಾರೆ.
  • ಭಾನುವಾರ ಹಾಗೂ ಸೋಮವಾರ ವಾಹನಗಳನ್ನು ತೊಳೆಯಲು ಯಥೇಚ್ಛ ಪ್ರಮಾಣದಲ್ಲಿ ನೀರು ಪೋಲು ಮಾಡಲಾಗಿದೆ. ದ್ವಿಚಕ್ರ ವಾಹನ ತೊಳೆಯಲು ಕನಿಷ್ಠ ಒಂದು ಬಕೆಟ್‌, ಕಾರುಗಳಿಗೆ ಕನಿಷ್ಠ 2–3 ಬಕೆಟ್‌ ನೀರು ಬಳಕೆ ಮಾಡಲಾಗಿದೆ.
  • ‘ಕಾವೇರಿ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಬೇಕು. ಈ ಬಗ್ಗೆ ಜಲಮಂಡಳಿ ನಿರಂತರ ಜಾಗೃತಿ ಮೂಡಿಸುತ್ತಿದೆ. ಆದರೂ, ಜನರು ವಾಹನ ತೊಳೆಯಲು, ಕೈತೋಟಕ್ಕೆ ಅದೇ ನೀರನ್ನು ಬಳಸುತ್ತಾರೆ. ಜನರು ನೀರಿನ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕು ’ ಎಂದು ಜಲಮಂಡಳಿ ಪ್ರಧಾನ ಮುಖ್ಯ ಎಂಜಿನಿಯರ್‌ ಕೆಂಪರಾಮಯ್ಯ ತಿಳಿಸಿದರು.

ತಿಳಿಸಿದರು.[2]

ಕೆರೆ ಒತ್ತುವರಿ ಮತ್ತು ಸರ್ಕಾರಿ ಜಾಗ ಒತ್ತುವರಿ ಸಮಸ್ಯೆ

  • ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿನ ಕೆರೆ ಒತ್ತುವರಿಗೆ ಸಂಬಂಧಿಸಿದ ವರದಿಯನ್ನು ಡಿಸೆಂಬರ್‌ ಅಂತ್ಯದ ಒಳಗಾಗಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕೆರೆ ಒತ್ತುವರಿ ತೆರವು ಸದನ ಸಮಿತಿ ಅಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿದರು. ‘ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಕೆರೆ, ಕಟ್ಟೆ, ಕುಂಟೆ ಒತ್ತುವರಿ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿಯ ಸಂಪೂರ್ಣ ಅಂಕಿಅಂಶ ಸಂಗ್ರಹಿಸಲಾಗಿದೆ. ಕರಡು ವರದಿ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಬುಧವಾರ ಹೇಳಿದರು. ‘ಮೊದಲು ಕೆರೆ ಒತ್ತುವರಿ ವರದಿ ಸಲ್ಲಿಸಲಾಗುವುದು. ಕಟ್ಟೆ, ಕುಂಟೆ ಮತ್ತು ರಾಜಕಾಲುವೆ ಒತ್ತುವರಿ ವರದಿಯನ್ನು 3–4 ತಿಂಗಳ ಬಳಿಕ ಸಲ್ಲಿಸಲಾಗುವುದು. ಸಮಗ್ರ ಸರ್ವೆಯ ಬಳಿಕವಷ್ಟೇ ಶೇ 100ರಷ್ಟು ನಿಖರ ಮಾಹಿತಿ ಪಡೆಯಲು ಸಾಧ್ಯ’ ಎಂದೂ ಅವರು ತಿಳಿಸಿದರು. ಸಮಿತಿ ರಚನೆಗೊಂಡು ಗುರುವಾರಕ್ಕೆ (ಅ. 27) ಎರಡು ವರ್ಷ ತುಂಬುತ್ತದೆ.
  • ಸಮಿತಿಯ ಎಲ್ಲ ಸದಸ್ಯರ ಸತತ ಪರಿಶ್ರಮದ ಫಲವಾಗಿ ಸಮಗ್ರ ಮಾಹಿತಿ ಕಲೆ ಹಾಕಲಾಗಿದೆ. ಸಮಿತಿ ಐತಿಹಾಸಿಕ ವರದಿ ನೀಡಲಿದೆ ಎಂದೂ ವಿವರಿಸಿದರು. ಕೆರೆ ಒತ್ತುವರಿ, ಕಟ್ಟೆ ಮತ್ತು ಕುಂಟೆ ಒತ್ತುವರಿ ಹಾಗೂ ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಪ್ರತ್ಯೇಕ ವರದಿ ಸಿದ್ಧಪಡಿಸಲಾಗುತ್ತಿದೆ. ಕಂದಾಯ ಇಲಾಖೆಯ ಇಬ್ಬರು ನೋಡಲ್‌ ಅಧಿಕಾರಿಗಳು ಈ ಕಾರ್ಯಕ್ಕೆ ಸಮಿತಿ ಜೊತೆ ಕೆಲಸ ಮಾಡಿದ್ದಾರೆ. ಪ್ರತಿಯೊಂದನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಲಾಗುವುದು ಎಂದರು. ಒತ್ತುವರಿ ಮಾಡಿಕೊಂಡವರ ಮಾಹಿತಿ ಜೊತೆಗೆ ಒತ್ತುವರಿಗೆ ನೆರವು ನೀಡಿದ ಅಧಿಕಾರಿಗಳ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗುವುದು. ಜೊತೆಗೆ ಒತ್ತುವರಿ ಮಾಡಿಕೊಂಡವರ ಮೇಲೆ ಏನು ಕ್ರಮ ತೆಗೆದುಕೊಳ್ಳಬೇಕು ಎಂದೂ ಶಿಫಾರಸು ಮಾಡಲಾಗುವುದು. ಸಮಿತಿಯ ಸದಸ್ಯರ ವೈಯಕ್ತಿಕ ಅಭಿಪ್ರಾಯದ ಜೊತೆಗೆ ಒಟ್ಟಾಭಿಪ್ರಾಯವನ್ನು ವರದಿಯಲ್ಲಿ ತಿಳಿಸಲಾಗುವುದು ಎಂದರು.

ರಾಜಕಾಲುವೆ ಒತ್ತುವರಿ ವಿವರ

ತಾಲ್ಲೂಕುಗ್ರಾಮಗಳುಒತ್ತುವರಿ ಪ್ರದೇಶಒತ್ತುವರಿದಾರರ ಸಂಖ್ಯೆಒಟ್ಟು ಉದ್ದ ಕಿಮೀ.ಗಳಲ್ಲಿ
ಬೆಂಗಳೂರು ಉತ್ತರ116190458153
ಬೆಂಗಳೂರು ಉತ್ತರ ಹೆಚ್ಚುವರಿ4668447204
ಬೆಂಗಳೂರು ದಕ್ಷಿಣ9777372314
ಬೆಂಗಳೂರು ಪೂರ್ವ88143788416
ಆನೇಕಲ್12183.6
ಒಟ್ಟು34850020831090.6

ಕಟ್ಟೆ ಕುಂಟೆಗಳ ಒತ್ತುವರಿ ವಿವರ

  • ವಿಸ್ತೀರ್ಣ ಎಕರೆಗಳಲ್ಲಿ:
ತಾಲ್ಲೂಕುಒಟ್ಟು ಕಟ್ಟೆ / ಕುಂಟೆಒಟ್ಟು ವಿಸ್ತೀರ್ಣಒತ್ತುವರಿ ವಿಸ್ತೀರ್ಣಒತ್ತುವರಿ ದಾರರ ಸಂಖ್ಯೆ (ಸರ್ಕಾರಿ)ಒತ್ತುವರಿ ವಿಸ್ತೀರ್ಣ (ಸರ್ಕಾರಿ)ಒತ್ತುವರಿ ದಾರರ ಸಂಖ್ಯೆ (ಖಾಸಗಿ)ಒತ್ತುವರಿ ವಿಸ್ತೀರ್ಣ (ಸರ್ಕಾರಿ)
ಬೆಂಗಳೂರು ನಗರ14606909823344183822442
ಬೆಂಗಳೂರು ಗ್ರಾಮಾಂತರ18111210433230931189340
ಒಟ್ಟು3271811912565742762011782

ಕೆರೆಗಳ ಒತ್ತುವರಿ ಮಾಹಿತಿ

  • ವಿಸ್ತೀರ್ಣ ಎಕರೆಗಳಲ್ಲಿ:
ಜಿಲ್ಲೆಒಟ್ಟು ಕೆರೆಗಳುಕೆರೆಗಳ ವಿಸ್ತೀರ್ಣಒತ್ತುವರಿ ವಿಸ್ತೀರ್ಣಸರ್ಕಾರಿ ಒತ್ತುವರಿ ಸ್ಥಳಗಳ ಸಂಖ್ಯೆಸರ್ಕಾರಿ ಒತ್ತುವರಿ ಸ್ಥಳಗಳ ವಿಸ್ತೀರ್ಣ
ಬೆಂಗಳೂರು ನಗರ83727,9004,5339752,194
ಬೆಂಗಳೂರು ಗ್ರಾಮಾಂತರ ಜಿಲ್ಲೆ77030,0326,2523351,063
ಒಟ್ಟು154757,93310,78613703,257

ಒತ್ತುವರಿ ವಿವರ

  • ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿ ಬಫರ್ ಜೋನ್ ಒತ್ತುವರಿ ವಿವರ:
ಪ್ರದೇಶಬಫರ್ ಜೋನ್ ನಲ್ಲಿರುವ ಕಟ್ಟಡಗಳ ಸಂಖ್ಯೆಅಂದಾಜು ಮೌಲ್ಯ
ಕೆರೆ1,14,98811,498 ಕೋಟಿ ರೂ.
ರಾಜ ಕಾಲುವೆ1,34,78613,479 ಕೋಟಿ ರೂ.
ಒಟ್ಟು2,49,77424,977 ಕೋಟಿ ರೂ.

ಕೆರೆ ಕಟ್ಟೆ ಕುಂಟೆ ಮತ್ತು ರಾಜಕಾಲುವೆ ಒತ್ತುವರಿ ವಿವರ (ಬಿಬಿಎಂಪಿ ವ್ಯಾಪ್ತಿ)

ಪ್ರದೇಶಒತ್ತುವರಿ (ಎಕರೆಗಳಲ್ಲಿ)ಅಂದಾಜು ಮೌಲ್ಯ
ಕೆರೆ10,7881,50 ಲಕ್ಷ ಕೋಟಿ ರೂ
ಕಟ್ಟೆ ಕುಂಟೆ1,25616,500 ಕೋಟಿ ರೂ.
ರಾಜ ಕಾಲುವೆ50111000 ಕೋಟಿ ರೂ.
ಒಟ್ಟು12,5451,50,27500 ಕೋಟಿ ರೂ
  • 27500 ಕೋಟಿ ರೂ.+1,50 ಲಕ್ಷ ಕೋಟಿ ರೂ

[3]

ಬೆಂಗಳೂರಿನ ಜನಸಂಖ್ಯೆ 2 ಕೋಟಿಗೆ

  • 8 Nov, 2016
  • 2031ರವರೆಗಿನ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗುತ್ತಿರುವ ನಗರ ಮಹಾ ಯೋಜನೆ (ಸಿಡಿಪಿ) ಬಗ್ಗೆ, ಬೆಂಗಳೂರು ನಗರದ ಜನಸಂಖ್ಯೆ ಪರಿಸ್ಥಿತಿ ಹಾಗೂ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಸಮಾಲೋಚನೆ ನಡೆದಿದೆ. 2031ರ ವೇಳೆಗೆ ನಗರದ ಜನಸಂಖ್ಯೆ 2 ಕೋಟಿಗೆ ತಲುಪುವ ನಿರೀಕ್ಷೆ ಇದೆ. ಇಷ್ಟೊಂದು ಜನಸಂಖ್ಯೆಗೆ ವಾರ್ಷಿಕ 50 ಟಿಎಂಸಿ ಅಡಿಗಳಷ್ಟು ನೀರಿನ ಅಗತ್ಯ ಬೀಳಬಹುದು. ಜನಸಂಖ್ಯೆಗೆ ಪೂರಕವಾಗಿ ರಸ್ತೆ, ಸಾರಿಗೆ ಸಂಪರ್ಕ ರೂಪಿಸಬೇಕಾದ ಅಗತ್ಯವಿದೆ ಎಂದು ಅಧಿಕಾರಿಗಳ ಹೇಳಿಕೆ.
  • ‘ಘನತ್ಯಾಜ್ಯ ಉತ್ಪಾದನೆಯೂ ಗಣನೀಯವಾಗಿ ಹೆಚ್ಚಲಿದೆ. ನಗರದಲ್ಲಿ ಪ್ರಸ್ತುತ ನಿತ್ಯ ಸರಾಸರಿ 4 ಸಾವಿರ ಟನ್‌ ಕಸ ಉತ್ಪಾದನೆ ಆಗುತ್ತಿದೆ. 2031ರ ವೇಳೆಗೆ ಈ ಪ್ರಮಾಣವು 18 ಸಾವಿರ ಟನ್‌ಗಳಿಗೆ ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ. ಇದರ ವಿಲೇವಾರಿಗೆ ಸೂಕ್ತ ಮೂಲಸೌಕರ್ಯ ಹೊಂದಬೇಕಾದ ಅಗತ್ಯವಿದೆ’ ಎಂದು ಅಧಿಕಾರಿಗಳು ಆಭಿಪ್ರಾಯ ಪಟ್ಟರು. ನಗರ ಮಹಾ ಯೋಜನೆಯ ಕರಡು ಸಿದ್ಧವಾಗಿದೆ. ಇದಕ್ಕೆ ಅಂತಿಮ ರೂಪ ನೀಡುವ ಮುನ್ನ ಹಂತ ಹಂತವಾಗಿ ಸಾರ್ವಜನಿಕರಿಂದ ಸಲಹೆ ಪಡೆಯುತ್ತೇವೆ. ಶೀಘ್ರದಲ್ಲೇ ಕರಡನ್ನು ಪ್ರಕಟಿಸುತ್ತೇವೆ' ಎಂದು -ರಾಜಕುಮಾರ್‌ ಖತ್ರಿ, ಬಿಡಿಎ ಆಯುಕ್ತ ಹೇಳಿದರು.[4]

ಬೆಂಗಳೂರಿನ ವೈಶಿಷ್ಟ್ಯ

  • ನಮ್ಮ ರಾಜ್ಯವು ಅಸ್ತಿತ್ವಕ್ಕೆ ಬಂದ 60 ವರ್ಷಗಳಲ್ಲಿ ಬೆಂಗಳೂರು, ಎಲ್ಲಾ ಅಡ್ಡಿ ಆತಂಕಗಳ ನಡುವೆಯೂ ಭಾರತದಲ್ಲಿ ಜನ ಅತಿ ಹೆಚ್ಚು ಇಷ್ಟಪಡುವ ನಗರವಾಗಿಯೇ ಮುಂದುವರೆದಿದೆ.ಕನಸಿನ ನಗರಿ, ಪಿಂಚಣಿದಾರರ ಸ್ವರ್ಗ, ವಿಶ್ವವಿದ್ಯಮಾನಕ್ಕೆ ಒಗ್ಗಿಕೊಂಡ ನಗರ, ಕಲೆ ಮತ್ತು ಸಂಸ್ಕೃತಿ ಅರಳುವ ತಾಣ, ಹೇರಳ ಮುಕ್ತ ಪ್ರದೇಶಗಳಿರುವ, ಆಹ್ಲಾದಕರ ಹವಾಮಾನವಿರುವ, ಸುಸಂಸ್ಕೃತ ಜನರಿಂದ ತುಂಬಿರುವ ನಗರ ಎಂಬೆಲ್ಲ ಹೆಗ್ಗಳಿಕೆಗೆ ಬಹಳ ಹಿಂದಿನಿಂದಲೂ ಈ ನಗರ ಪಾತ್ರವಾಗಿದೆ. ಆದರೆ, ಈಗ ಭಾರತದ ಇತರ ಮಹಾನಗರಗಳನ್ನು ಕಾಡುತ್ತಿರುವ ಸಮಸ್ಯೆಗಳಿಂದ ಬೆಂಗಳೂರು ಕೂಡಾ ಹೊರತಾಗಿಲ್ಲ.
  • ನಾಡಪ್ರಭು ಕೆಂಪೇಗೌಡ ಅವರಿಗೆ ಅವರ ತಾಯಿ ‘ಕೆರೆಗಳಂ ಕಟ್ಟು, ಮರಗಳಂ ನೆಡು’ ಎಂದು ಎರಡು ಮುಖ್ಯ ಸಲಹೆಗಳನ್ನು ನೀಡಿದ್ದರಂತೆ. ನಗರದ ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌ನಂತಹ ಉದ್ಯಾನಗಳು, ಜಯನಗರದಂತಹ ಯೋಜಿತ ಬಡಾವಣೆಗಳು, ಸಾರ್ವಜನಿಕ ವಲಯದ ಟೌನ್‌ಷಿಪ್‌ ಹಾಗೂ ಪರಸ್ಪರ ಸಹಬಾಳ್ವೆಯ ನೆರೆಹೊರೆಯನ್ನು ನೋಡಿದಾಗ ಇವುಗಳ ಹಿಂದೆ ನಾಯಕರು ಮುಂದಾಲೋಚನೆ ಹೊಂದಿದ್ದರೆಂದು ತಿಳಿಯುವುದು.

ಉತ್ತಮ ನಗರವಾಗಿಸಲು ದಾರಿ

  • ಬೆಂಗಳೂರನ್ನು ಬದುಕಲು ಯೋಗ್ಯವಾದ ನಗರವನ್ನಾಗಿ ರೂಪಿಸುವುದು ಹೇಗೆ? ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ, ನಿಜವಾಗಿ ಅಗತ್ಯವಾಗಿರುವುದು ಯಾವುದು ಹಾಗೂ ಏನೆಲ್ಲ ಸಂಭವಿಸಲಿದೆ ಎಂಬುದನ್ನು ನಾವು ಮೊದಲು ವಿಶ್ಲೇಷಣೆ ಮಾಡಬೇಕು. ಮೊದಲಾಗಿ ಭವಿಷ್ಯದ ಬಗ್ಗೆ ಸ್ಪಷ್ಟ ದೂರದೃಷ್ಟಿ ಹಾಗೂ ಅದರ ನಿರ್ವಹಣೆ ಹಾಗೂ ಆಡಳಿತಕ್ಕಾಗಿ ಖಚಿತ ಮಾರ್ಗಸೂಚಿ ಹೊಂದಬೇಕು.

ಹಾಲಿ ಬೆಂಗಳೂರು ಸ್ಥಿತಿ

  • ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಎಂಟು ಸಾವಿರ ಚದರ ಕಿಲೋಮೀಟರ್‌ ವ್ಯಾಪ್ತಿಯನ್ನು ಹೊಂದಿದೆ. ಇದು ಬೆಳೆಯುತ್ತಿರುವ ಈಗಿನ ಬೆಂಗಳೂರಿನ ಒಟ್ಟು ಪ್ರದೇಶ (ಪ್ರಸ್ತುತ 712 ಚದರ ಕಿ.ಮೀ ಇದ್ದು, ಇದು 1200ಚದರ ಕಿ.ಮೀವರೆಗೂ ವಿಸ್ತರಣೆ ಆಗಲಿದೆ), ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ ಅಭಿವೃದ್ಧಿ ಪ್ರಾಧಿಕಾರದ (ಬಿಐಎಎಪಿಎ) ವ್ಯಾಪ್ತಿಯ ಅಕ್ಕಪಕ್ಕದ ಪ್ರದೇಶ, ಉಪನಗರಗಳನ್ನು ಒಳಗೊಂಡ ಸಮಗ್ರ ಪ್ರದೇಶಗಳು ಸೇರಿದರೆ ಈಗಿನ ಬೆಂಗಳೂರಿನ ವ್ಯಾಪ್ತಿಗಿಂತ ಬಹಳಷ್ಟು ವಿಸ್ತಾರವಾಗಲಿದೆ.

ವ್ಯವಸ್ಥಿತ ಅಭಿವೃದ್ಧಿಗೆ ಯೋಜನೆ

  • ಈ ಸಮಗ್ರ ಭೂಭಾಗದ ವ್ಯವಸ್ಥಿತ ಅಭಿವೃದ್ಧಿಗೆ ಯೋಜನೆ ರೂಪಿಸಬೇಕಿದೆ. ಬೆಂಗಳೂರಿನ ಒಳಗೂ ಅನೇಕ ಪಾಲಿಕೆಗಳಿರುವ ವಿಕೇಂದ್ರೀಕೃತ ವ್ಯವಸ್ಥೆಯನ್ನು ಹೊಂದಬೇಕು. ನಗರದಾದ್ಯಂತ ಯೋಜನೆಗಳ ಸಮಗ್ರ ಅನುಷ್ಠಾನಕ್ಕೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರವನ್ನು ರಚಿಸಬೇಕು. ಬಿಬಿಎಂಪಿ ಪುನರ್‌ರಚನೆ ವರದಿ, ಈ ಕುರಿತ ಪರಿಹಾರೋಪಾಯಗಳನ್ನು ಸೂಚಿಸಿದೆ.ಅದನ್ನು ಅನುಷ್ಠಾನಗೋಲಿಸಬೇಕು.
  • ೧.ಫೆರಿಫೆರಲ್‌ ರಿಂಗ್‌ ರಸ್ತೆಯ ಇಕ್ಕೆಲಗಳಲ್ಲೂ ತಲಾ ಒಂದು ಕಿ.ಮೀಯಷ್ಟು ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ಈ ಯೋಜನೆಗೆ ಜಾಗ ನೀಡುವ ಭೂಮಾಲೀಕರಿಗೆ ಅಭಿವೃದ್ಧಿಪಡಿಸಿದ ಜಾಗವನ್ನು ಬಿಟ್ಟುಕೊಡುವುದು. ಇದರಿಂದ ಅವರಿಗೆ ಕೃಷಿಯಿಂದ ಬರುವ ಆದಾಯಕ್ಕಿಂತಲೂ ಹೆಚ್ಚು ಆದಾಯ ಸಿಗುವಂತೆ ಮಾಡುವುದು. (75 ಮೀಟರ್‌ ಅಗಲದ ಪೆರಿಫೆರಲ್‌ ರಿಂಗ್‌ ರಸ್ತೆಯನ್ನೇ ನಿರ್ಮಿಸಿದ್ದಾದರೆ, ಹೊರವರ್ತುಲ ರಸ್ತೆಯಲ್ಲಿ ಈಗ ಇರುವುದಕ್ಕಿಂತಲೂ ಹೆಚ್ಚು ವಾಹನ ದಟ್ಟಣೆ ಅದರಲ್ಲಿ ಉಂಟಾಗಲಿದೆ. ಅದರ ಆಸುಪಾಸಿನ ಪ್ರದೇಶ ಇನ್ನಷ್ಟು ಅವ್ಯವಸ್ಥೆಗಳಿಂದ ಕೂಡಿರಲಿದೆ. ಹೊರ ವರ್ತುಲ ರಸ್ತೆ ವಿಚಾರದಲ್ಲಿ ಏನಾಯಿತು ಎಂಬ ಅನುಭವದ ಆಧಾರದಲ್ಲಿ ಈ ಮಾತನ್ನು ಹೇಳುತ್ತಿದ್ದೇನೆ.ವಿ.ರವಿಚಂದರ್‌,ನಗರ ಯೋಜನಾ ತಜ್ಞ)
  • ೨.‘ಇನ್ನೊಂದು ಕಾವೇರಿ ಸೃಷ್ಟಿಸಬೇಕು’:ಪ್ರಪಂಚದ ಪ್ರಮುಖ ನಗರಗಳಂತೆ ಬೆಂಗಳೂರು ಯಾವುದೇ ನದಿಯ ದಂಡೆಯಲ್ಲಿಲ್ಲ. ಹಾಗಾಗಿ ಇಲ್ಲಿ ನೀರಿನ ಸುಸ್ಥಿರತೆ ಬಲು ಮುಖ್ಯವಾದುದು. ಗ್ರೇಟರ್‌ ಬಿಎಂಆರ್‌ಡಿಎ ಪ್ರದೇಶದಲ್ಲಿ ಮಳೆ ನೀರಿನ ಸಂಗ್ರಹ, ನೀರಿಗೆ ಸೂಕ್ತ ದರ ವಿಧಿಸುವುದು, ನೀರಿನ ಮೂಲಗಳ ಪೋಷಣೆ ಮೂಲಕ ಬೇಡಿಕೆ ಹಾಗೂ ಪೂರೈಕೆ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾದ ಅಗತ್ಯವಿದೆ. ಈ ವಿಸ್ತರಿತ ಪ್ರದೇಶದಲ್ಲಿ ಇನ್ನೊಂದು ಕಾವೇರಿಯನ್ನು ಸೃಷ್ಟಿಸಲು ಅವಕಾಶವಿದೆ. ಜಲಾನಯನ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ಮೂಲಕ ಸಮರೋಪಾದಿಯಲ್ಲಿ ಈ ಕಾರ್ಯ ನಡೆಯಬೇಕು. ನೀರಿನ ಪರಿಸರ ವ್ಯವಸ್ಥೆಯನ್ನು ಹದಗೆಡಿಸುವ, ಕೆರೆ ಒತ್ತುವರಿ ಮಾಡುವ ಯಾವುದೇ ಉಲ್ಲಂಘನೆಗಳ ಬಗ್ಗೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವ ನೀತಿಯನ್ನು ತುರ್ತಾಗಿ ರೂಪಿಸಬೇಕು.
  • ೩.ಜನ ನಡೆದಾಡಲು ಯೋಗ್ಯವಾದ ಪಾದಚಾರಿ ಮಾರ್ಗಗಳನ್ನು ನಿರ್ಮಿಸುವುದರಲ್ಲಿ (ಕನಿಷ್ಠ ಪಕ್ಷ 1,500 ಕಿ.ಮೀ ಉದ್ದದ ಪಾದಚಾರಿ ಮಾರ್ಗ ಬೇಕು) ಹಾಗೂ ಬಸ್‌, ಮೆಟ್ರೊ, ಪ್ರಯಾಣಿಕ ರೈಲು, ಟ್ಯಾಕ್ಸಿ ಕ್ಯಾಬ್ ಮತ್ತು ಮಿನಿಬಸ್‌ ಅಗ್ರಿಗೇಟರ್‌, ಕಾರು ಹಂಚಿಕೊಳ್ಳುವಿಕೆ (ಪೂಲಿಂಗ್‌) ಮುಂತಾದ ಅಂಶಗಳನ್ನೊಳಗೊಂಡ ಬಹುಸಾರಿಗೆ ವ್ಯವಸ್ಥೆಯ ಆಯ್ಕೆಗೆ ಉತ್ತೇಜನ ನೀಡುವುದರಲ್ಲಿ ನಗರದ ಭವಿಷ್ಯ ಅಡಗಿದೆ. ನಿರ್ದಿಷ್ಟ ಪಥ (ಲೇನ್‌), ಕೈಗೆಟಕುವಂತಹ ವಾಹನ ನಿಲುಗಡೆ ವ್ಯವಸ್ಥೆ ಖಾಸಗಿ ವಾಹನಗಳಿಗೂ ಬೇಕಾಗಿದೆ.

ಆದ್ಯತೆ ಕಾರ್ಯಗಳು

    • ಬಿಎಂಆರ್‌ಡಿಎ ವ್ಯಾಪ್ತಿಯ ಸಮಗ್ರ ಭೂಭಾಗದ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಯೋಜನೆ ರೂಪಿಸಬೇಕು.
  • ಸಾರ್ವಜನಿಕ ಬಹುಸಾರಿಗೆ ವ್ಯವಸ್ಥೆ ಜಾರಿಯಾಗಬೇಕು.
  • ಯೋಜನೆಗಳ ಸಮಗ್ರ ಅನುಷ್ಠಾನಕ್ಕೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚಿಸಬೇಕು.
  • ನೀರಿನ ಪರಿಸರ ವ್ಯವಸ್ಥೆಯನ್ನು ಹದಗೆಡಿಸುವ, ಕೆರೆ ಒತ್ತುವರಿ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವ ನೀತಿ ರೂಪಿಸಬೇಕು.
  • ನಮ್ಮ ಕಾನೂನುಗಳು, ನೀತಿಗಳು ಜನರಿಗೆ ಸುಲಭದಲ್ಲಿ ಮನೆ ಸಿಗುವುದನ್ನು ಉತ್ತೇಜಿಸುವಂತಿರಬೇಕು.
  • ಹೆಚ್ಚು ಹೆಚ್ಚು ಸಾರ್ವಜನಿಕ ತಾಣಗಳನ್ನು, ಮುಕ್ತ ವಲಯಗಳನ್ನು ನಿರ್ಮಿಸಬೇಕು.(ಅಕ್ರಮ ಸಕ್ರಮ ಯೋಜನೆ ಒಂದು ಕೆಟ್ಟ ಯೋಚನೆ. ಇದು ನಿಯಮ ಉಲ್ಲಂಘನೆ ಮಾಡುವವರಿಗೆ ಉತ್ತೇಜನ ನೀಡುವಂತಿದೆ.)

ಮುಖ್ಯ ಮಾಹಿತಿಗಳು

  • ಬೆಂಗಳೂರು ಬೆಳೆದ ಬಗೆ:
ವರ್ಷವಿಸ್ತೀರ್ಣ(ಚ.ಕಿ.ಮೀ.ಜನಸಂಖ್ಯೆ(ಲಕ್ಷ)
190128.851.59
191160.351.89
162160.352.37
193167.343.06
194169.934.07
195169.937.78
1961103.9211.41
1971134.4215.40
1981151.1624.76
1991180.1241.30
2001226.0051.01
2011800.0084.25

ಬೇಂಗಳೂರು ನೀರು ಪೂರೈಕೆ ಮತ್ತು ಬೇಡಿಕೆ

  • ಕಾವೇರಿ ನೀರು ಪೂರೈಕೆ ಬೇಡಿಕೆ (ಕೋಟಿ ಲೀಟರುಗಳಲ್ಲಿ)
ವರ್ಷಜನಸಂಖ್ಯೆ(ಲಕ್ಷ)ನೀರಿನ ಬೇಡಿಕೆಪೂರೈಕೆ ಪ್ರಮಾಣಕೊರತೆ
201195.89 ಲಕ್ಷ190ಕೋ.ಲೀ.86ಕೋ.ಲೀ.104ಕೋ.ಲೀ.
2021121.84241136105
2031178.82354136218
2041241.75478136342
2051335.63668136528

ಬೆಂಗಳೂರು ಇತರೆ ಮುಖ್ಯ ಮಾಹಿತಿಗಳು

  • ಪರಿಸರಕ್ಕೆ ಸಂಬಂಧಿಸಿದ ಮಾಹಿತಿಗಳು:
ವಿಷಯವಿವರ
ಬೆಂಗಳೂರಿನಲ್ಲಿ ಸರಾಸರಿ ಉಷ್ನಾಂಶ 1800 ರಲ್ಲಿ14- 16 ಡಿ.ಸೆಲ್ಸಿಯಸ್
ಬೆಂಗಳೂರಿನಲ್ಲಿ ಸರಾಸರಿ ಉಷ್ನಾಂಶ 2016 ರಲ್ಲಿ38-40 ಡಿ.ಸೆಲ್ಸಿಯಸ್
ಕಾಂಕ್ರೀಟ್ ಕಟ್ಟಡ 1973 1 ಶೇಕಡಾ :2016 500 ಶೇಕಡಾ ಹೆಚ್ಚಳ
ಹಸಿರು ಕವಚ 1973 ರಲ್ಲಿ 100 ಶೇಕಡಾ ಇದ್ದರೆ ::2016 ; 12 ಶೇಕಡಾ /88 % ಕಡಿಮೆ
ಜಲಮೂಲ ನಾಶ :78%
ಹಾಲಿ ಮರಗಳ ಸಂಖ್ಯೆ14.78 ಲಕ್ಷ
(ಮಾಹಿತಿ: ಐಐಎಸ್.ಸಿ)

ಸೌಲಭ್ಯಗಳ ಕುರಿತ ಮಾಹಿತಿಗಳು

ವಿಷಯವಿವರ
ಕೊಳವೆ ಬಾವಿಗಳು :4 ಲಕ್ಷ
ವಾರ್ಷಿಕ ಮಳೆ ಪ್ರಮಾಣ :830 ಮಿ.ಮೀ.
ಜಿಲ್ಲೆಯಲ್ಲಿರುವ ಕೆರೆಗಳು 400ಕಾವೇರಿ ನೀರಿನ ಸೋರಿಕೆ ಪ್ರಮಾಣ :42 %
ವಾರ್ಷಿಕ ಪೂರೈಕೆಯಾಗುವ ಕಾವೇರಿ ನೀರು :19 ಟಿ.ಎಂ.ಸಿ. ಅಡಿ.
ನಗರದಲ್ಲಿರುವ ಮನೆಗಳ ಸಂಖ್ಯೆ :20 ಲಕ್ಷ
ಕಾವೇರಿ ನೀರಿನ ಸಂಪರ್ಕ ಹೊಂದಿರುವ ಮನೆಗಳು :7 ಲಕ್ಷ
(ಮಾಹಿತಿ ಮೂಲ ಜಲ ಮಂಡಳಿ)

[5]

ಬಿಬಿಎಂಪಿ ಆದಾಯ

  • 26 Mar, 2017;ಬಿಬಿಎಂಪಿ ಬಜೆಟ್‌;ಹೆಚ್ಚಾಗಬೇಕು ಆಸ್ತಿ ತೆರಿಗೆ ಸಂಗ್ರಹ;ಪ್ರಜಾವಾಣಿ;
  • ಬಿಬಿಎಂಪಿ 2016–17ನೇ ಸಾಲಿನಲ್ಲಿ ₹ 6,819 ಕೋಟಿ ವರಮಾನ ಸಂಗ್ರಹಿಸಿದೆ. 2017–18ನೇ ಸಾಲಿನಲ್ಲಿ ₹ 9,243 ಕೋಟಿ ವರಮಾನ ನಿರೀಕ್ಷಿಸಿದೆ. ಅಂದರೆ, ಸರ್ಕಾರದಿಂದ ಸಿಗುವ ₹ 1 ಸಾವಿರ ಕೋಟಿ ವಿಶೇಷ ಅನುದಾನವನ್ನು ಹೊರತಾಗಿ ₹ 1,424 ಕೋಟಿ ಹೆಚ್ಚು ವರಮಾನ ಸಂಗ್ರಹಿಸಬೇಕಿದೆ. ಈ ಬಾರಿ ವಿವಿಧ ಕಾರ್ಯಕ್ರಮಗಳಿಗೆ 1 ಸಾವಿರ ಕೋಟಿಯಷ್ಟು ಹೆಚ್ಚು ಅನುದಾನ ಖರ್ಚು ಮಾಡಬೇಕಿದೆ’ ಎನ್ನುತ್ತಾರೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಕಾಂತ್‌ ವಿಶ್ವನಾಥನ್. ‘ಮೂರು ವರ್ಷಗಳಲ್ಲಿ ಆದಾಯ ಹೆಚ್ಚಳ ಪ್ರಮಾಣ ಶೇಕಡಾ 30ರ ದರದಲ್ಲಿ ಏರಿಕೆ ಕಾಣುತ್ತಿದೆ.

ಬಜೆಟ್ ಮೊತ್ತ ೨೦೧೭-೧೮

  • ಬಜೆಟ್‍ನಲ್ಲಿ ಸರ್ಕಾರಿ ಅನುದಾನದ ಪಾಲು (ಕೋಟಿ ರೂಪಾಯಿಗಳಲ್ಲಿ):
ವರ್ಷಸಕಾರಿ ಅನುದಾನಬಜೆಟ್ ಗಾತ್ರಶೇ.ವಾರು
2013-149023,09329
2014-151,5214,20537
2015-162,2355,24643
2016-173,2276,81948
2017-184,2509,24346

ಮಹಾನಗರದಲ್ಲಿ ಪ್ರವಾಹ ಸಮಸ್ಯೆ

  • ಕೆರೆಗಳ ಬೀಡು ಎಂದೇ ಕರೆಸಿಕೊಂಡಿದ್ದ ಈ ಮಹಾನಗರದಲ್ಲಿ ಸಾಮಾನ್ಯ ಮಳೆಗೆ ಪದೇ ಪದೇ ಪ್ರವಾಹ ಕಾಣಿಸಿಕೊಳ್ಳುತ್ತದೆ.ದೂರಗಾಮಿ ಯೋಜನೆಗಳೇನು ಎಂಬ ಬಗ್ಗೆ ಪರಿಸರ ತಜ್ಞ ಮೋಹನ ರಾವ್‌ ಹಾಗೂ ನಗರ ಯೋಜನಾ ತಜ್ಞ ವಿ.ರವಿಚಂದರ್‌ ಅವರು ಇಲ್ಲಿ ಬೆಳಕು ಚೆಲ್ಲಿದ್ದಾರೆ. 2016ರಲ್ಲಿ ಮಡಿವಾಳ ಹಾಗೂ ಬೆಳ್ಳಂದೂರು ಕೆರೆಗಳ ಪ್ರದೇಶಗಳಲ್ಲಿ ಕಾಣಿಸಿಕೊಂಡ ಪ್ರವಾಹಕ್ಕೆ ಕಾರಣವಾದ ಅಂಶಗಳ ಸಮಗ್ರ ಅಧ್ಯಯನ ನಡೆಸಿ ಒಂದು ವಿಸ್ತೃತ ಯೋಜನೆಯನ್ನು ಸಿದ್ಧಪಡಿಸಿದ್ದಾರೆ. ಅದರ ಪ್ರಮುಖ ಅಂಶಗಳು ಇಲ್ಲಿವೆ.
  • ಕಳೆದ ಎರಡು ದಶಕಗಳಿಂದೀಚೆಗೆ ನಗರಗಳಲ್ಲಿ ಪ್ರವಾಹಗಳು ಕಾಣಿಸಿಕೊಳ್ಳುತ್ತಿವೆ.
  • ನಗರೀಕರಣ ಹೆಚ್ಚಳವಾದಂತೆ ಪ್ರವಾಹವೂ ಹೆಚ್ಚುತ್ತಿದೆ.
  • ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿ ಪ್ರವಾಹ ಕಾಣಿಸಿಕೊಳ್ಳುತ್ತಿದೆ.
  • ಪ್ರಾದೇಶಿಕ ಮಳೆ ಪ್ರಮಾಣದಲ್ಲಿ ವ್ಯತ್ಯಯವಾಗುತ್ತಿದೆ.
  • ಸಣ್ಣ ಹಾಗು ಕಡಿಮೆ ಅವಧಿಯ ಮಳೆಗೂ ಪ್ರವಾಹ ಕಾಣಿಸಿಕೊಳ್ಳುತ್ತಿದೆ.

2*000ದಲ್ಲಿ ಹೈದರಾಬಾದ್‌, 2005ರಲ್ಲಿ ಮುಂಬೈ, 2006ರಲ್ಲಿ ಸೂರತ್‌, 2010ರಲ್ಲಿ ಗುವಾಹಟಿ, 2013ರಲ್ಲಿ ದೆಹಲಿ, ಕೋಲ್ಕತ್ತ, 2014ರಲ್ಲಿ ಶ್ರೀನಗರ, 2015ರಲ್ಲಿ ಚೆನ್ನೈ, 2016ರಲ್ಲಿ ಹಾಗೂ 2017ರಲ್ಲಿ ಬೆಂಗಳೂರು ಮಹಾಪ್ರವಾಹಗಳಿಗೆ ಸಾಕ್ಷಿಯಾಗಬೇಕಾಯಿತು.

  • ಪ್ರವಾಹಕ್ಕೆ ಕಾರಣವಾಗುವ ಪ್ರಾದೇಶಿಕ ಅಂಶಗಳು
  • ನಿರ್ದಿಷ್ಟ ಅವಧಿಯಲ್ಲಿ ಬೀಳುವ ಮಳೆ ಪ್ರಮಾಣ ಹೆಚ್ಚಳವಾಗಿದೆ.
  • ದಿನದಲ್ಲಿ ಅಥವಾ ಒಂದು ಗಂಟೆಯಲ್ಲಿ ಸುರಿಯುವ ಮಳೆಯ ಪ್ರಮಾಣ ಹೆಚ್ಚುತ್ತಿದೆ.
  • ನೈಸರ್ಗಿಕ ಹಳ್ಳಗಳನ್ನು ಮುಚ್ಚಲಾಗಿದೆ.
  • ಕೆರೆ ಹಾಗೂ ಕಾಲುವೆಗಳಲ್ಲಿ ಹೂಳು ತುಂಬಿರುವುದರಿಂದ ಅವುಗಳ ಸಾಮರ್ಥ್ಯ ಕುಸಿದಿದೆ.
  • ಭೂಮಿಯೊಳಗೆ ನೀರು ಇಂಗುವ ಪ್ರಮಾಣ ಕುಸಿತವಾಗಿದೆ.

[6]

ಇವನ್ನೂ ನೋಡಿ

ಉಲ್ಲೇಖಗಳು

ಬಾಹ್ಯ ಕೊಂಡಿಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.