ಬೆಂಗಳೂರು ಮಹಾನಗರ ಪಾಲಿಕೆ

ಬೆಂಗಳೂರು ಮಹಾನಗರ ಪಾಲಿಕೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ-2010 :

  • ಫಲಿತಾಂಶ :
  • ಮತದಾನದ ದಿನಾಂಕ  : ೨೮-೦೩ ೨೦೧೦
  • ಎಣಿಕೆ  : ೫-೦೪-೨೦೧೦ ಸೋಮವಾರ
  • ಬಿಬಿಎಮ್‌ಪಿ:ರಾಜಕೀಯ ಪಕ್ಷಗಳ ಬಲಾಬಲ :
  • ಆಧಾರ:ಚುನಾವಣಾಕಮಿಶನ್-ವರದಿ ಪ್ರಜಾವಾಣಿ; ೬-೦೪-೨೦೧೦/6-04-2010ಮಂಗಳವಾರ
ಸದಸ್ಯರುಒಟ್ಟುಬಿಜೆಪಿಕಾಂಗ್ರೆಸ್ಜೆಡಿಎಸ್ಇತರೆ
ಪಾಲಿಕೆ ಸದಸ್ಯರು19811264157
ಫಾಲಕೆಯೇತರ ಸದಸ್ಯರು ↓♥*****
ವಿಧಾನ ಸಭೆ ಸದಸ್ಯರು2817101
ವಿಧಾನ ಪರಿಷತ್ ಸದಸ್ಯರು1172*2
ರಾಜ್ಯ ಸಭಾ ಸದಸ್ಯರು82321
ಲೋಕ ಸಭಾ ಸದಸ್ಯರು5311*
ಒಟ್ಟು25014180218
ಪಾಲಿಕೆ ಸದಸ್ಯರು198****
ಪಾಲಿಕೆಯೇತರ ಸದಸ್ಯರು52***
ಒಟ್ಟು250****
ಬಹುಮತಕ್ಕೆ ಬೇಕಾದ ಸಂಖ್ಯೆ126***

ಪಾಲಿಕೆಯ ಸಮಸ್ಯೆಗಳು

  • ಬೆಂಗಳೂರು ಅಗಾಧ ವೇಗದಿಂದ ಬೆಳೆಯುತ್ತಿರವ ನಗರ.¨ಅದು ಬೆಳೆದಂತೆಲ್ಲಾ ಅದರ ಸಮಸ್ಯಗಳೂ ಬೆಳೆಯುತ್ತಿವೆ.ವಾಹನ ದಟ್ಟಣೆಯ ಸಮಸ್ಯೆ, ವಾಯುಮಾಲಿನ್ಯ, ರಸ್ತೆ ನಿರ್ವಹಣೆ ಮತ್ತು ನಿರ್ಮಾಣ,ಕಸ ವಿಲೇವಾರಿ, ಕುಡಿಯುವ ನೀರನ್ನು ಒದಗಿಸುವುದು ಇತ್ಯಾದಿ. ಇತ್ತೀಚೆಗೆ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ. ಹತ್ತಿರದ ಮಂಡೂರು, ಮಾವಳ್ಳಿ ಪುರ,ಎಸ್ಬಿಂಗಿಪ್ರದ ಹತ್ತಿರ ಸ್ಥಳದಲ್ಲ ಕಸ ವಿಲೇವಾರಿ ಮಾಡುತ್ತಿದ್ದು ಈಗ ಅವರು ಅದರ ಕೆಟ್ಟ ವಾಸನೆ ತಡೆಯಲಾರದೆ ತಕರಾರು -ವಿರೋಧ- ಪ್ರತಿಭಟನೆ ಮಾಡಲು ಆರಂಭಿಸಿದ್ದಾರೆ.
  • ಬೆಂಗಳೂರಿನ ಕಸ ನಿರ್ವಹಣೆ ದೊಡ್ಡ ಸಮಸ್ಯಯಾಗಿ ಅನೇಕ ಕಡೆ ವಾರ್ಡಡುಗಳಲ್ಲಿ ಕಸ ವಿಲೇವಾರಿ ಆಗದೆ ಅನೇಕ ವಾರ್ಡುಗಳು ಕೆಟ್ಟವಾಸನೆಯ ಕಷ್ಟ ಅನುಭವಿಸುತ್ತಿದೆ. ಹತ್ತಿರದ ಮಂಡೂರು, ಮಾವಳ್ಕಿ ಪುರ, ಎಸ್.ಬಿಂಗಿಪುರ ಈ ಗ್ರಾ ಮಗಳಹತ್ತಿರ ಕಸ ವಿಲೇವಾರಿಮಾಡಲು ಹಳ್ಳಿಗರು ತಕರಾರುತೆಗೆದಿದ್ದಾರೆ. ಆದುನಿಕ ತಂತ್ರಜ್ಞಾನ ಅಳವಡಿಸಿಕಸವಲೇವಾರಿಮಾಡುವ ವಿಚಾರ ಚರ್ಚೆಯಲ್ಲಿದೆ.
ಕಸದ ಸಮಸ್ಯೆ ಈ ಕೆಳಗೆ ಕೊಟ್ಟಿದೆ .
    • ಕಸದ ಮೂಲ -ಯಾವ ಮೂಲದಿಂದ -ಎಷ್ಟು ಶೇಕಡಾವಾರು
ಮೂಲಶೇಕಡಾ ವಾರು
ಮನೆ೫೪%/\54%
ಮಾರುಕಟ್ಟೆ&ಕಲ್ಯಾಣ ಮಂಟಪ೨೦%/\20%
ವಾಣಿಜ್ಯ ವಿಭಾಗ೧೭%/\17%
ಇತರೆ ಸಂಸ್ಥೆಗಳು೯%/\09%
  • ಬೆಂಗಳೂರು-ವಿವರ:-
ವಿಷಯವಿವರ ಸಂಖ್ಯೆ
ವಿಸ್ತೀರ್ಣ೮೦೦ ಚದರ ಕಿ.ಮೀಟರ್
ಜನಸಂಖ್ಯೆ೯೪ ಲಕ್ಷ
ವಲಯ೦೮
ವಾರ್ಡುಗಳು೧೯೮.
ಮನೆಗಳು೨೫ ಲಕ್ಷ.
ವಾಣಿಜ್ಯ ಕಟ್ಟಡಗಳು೩.೫ ಲಕ್ಷ
ರಸ್ತೆ ಉದ್ದ೧೪,೦೦೦ ಕಿ.ಮೀ.
ಬಿಬಿಎಂಪಿ ಪೌರ ಕಾರ್ಮಿಕರು೪೦೭೩
ಗುತ್ತಿಗೆ ಪೌರ ಕಾರ್ಮಿಕರು೧೮೫೦೦.
ತಳ್ಳುವ ಗಾಡಿಗಳು೧೧,೦೦೦
(ಸಭೆಯ)ಆಟೋ ಟಿಪ್ಪರುಗಳು೬೫೦.
ಕಸ ಸಾಗಾಟ ವಾಹನಗಳು೬೦೦.
ಪ್ರತಿದಿನದ ಕಸ ಉತ್ಪಾದನೆಸುಮಾರು ೪,೦೦೦ ಟನ್
ಕಸ ನಿರ್ವಹಣೆಗೆ ವಾರ್ಷಿಕ ಖರ್ಚು೩೫೦ ಕೋಟಿ
  • ಭಾರತದಕೆಲವು ದೊಡ್ಡ ನಗರಗಳ ಕಸ ನಿರ್ವಹಣೆ ಖರ್ಚು.
ನಗರಟನ್ಗಳಲ್ಲಿ ಪ್ರಮಾಣ/ನಿತ್ಯವೆಚ್ಚ-ಕೋಟಿಗಳಲ್ಲಿ
ದೆಹಲಿ೯೦೦೦ಟನ್೨೦೦
ಮುಂಬಯಿ.೭೫೦೦೧೯೭
ಹ್ಶೆದರಾಬಾದು.೪೦೦೦೧೫೦
ಚನ್ನೈ .೫೦೦೦೧೧೯
ಕೊಲ್ಕತ್ತಾ೪೦೦೦೧೦೦
ಬೆಂಗಳೂರು,೪,೦೦೦೩೫೦
  • ಮೇಲಿನ ವಿವರ ನೋಡಿದಾಗ ಬೆಂಗಳೂರಿನ ಕಸ ವಿಲೇವಾರಿ ವೆಚ್ಚ ಉಳಿದ ನಗರಗಳಿಗಿಂತ ಅಧಿಕವಾಗಿರುವುದು ಕಾಣುವುದು.
ತ್ಯಾಜ್ಯ/ಕಸ ವಿಲೇವಾರಿ -ಗ್ರಾಮಗಳು
ಸ್ಥಳವಿಸ್ತೀರ್ಣ-ಎಕರೆಪ್ರಮಾಣ ಲಕ್ಷ ಟನ್
ಮಂಡೂರು--13518.5
ಮಾವಳ್ಳಿಪುರ--467
ಅಂಜನಾಪುರ--055
ಕನ್ನಹಳ್ಳಿ---252
ಎಸ್.ಬಿಂಗಿಪುರ--20

ಮುಂದಿನ ವರ್ಷಗಳಲ್ಲಿ ಕಸದ ಸಮಸ್ಯೆ

  • ಮುಂದಿನ ವರ್ಷಗಳಲ್ಲಿ ಕಸದ ಸಮಸ್ಯೆ-ಅಂದಾಜು
ವರ್ಷದಿನದ ಕಸದ ಪ್ರಮಾಣ;ಟನ್`ಗಳಲ್ಲಿ -ತಲಾ ಉತ್ಪತ್ತಿ \ಕೆಜಿ
201440000.50
201756000.53
202271000.57
2032116000.65
  • ಕಸದ ಮೂಲ -ಯಾವ ಮೂಲದಿಂದ -ಎಷ್ಟು ಶೇಕಡಾವಾರು
ಮೂಲಶೇಕಡಾ ವಾರು
ಮನೆ೫೪%/54%
ಮಾರುಕಟ್ಟೆ&ಕಲ್ಯಾಣ ಮಂಟಪ೨೦%\20%
ವಾಣಿಜ್ಯ ವಿಭಾಗ೧೭%\17%
ಇತರೆ ಸಂಸ್ಥೆಗಳು೯%\09%

ಸಂಚಾರ ದಟ್ಟಣೆ ಕಾರಣ ನಷ್ಟ

  • ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆಯಿಂದಾಗಿ ವರ್ಷಕ್ಕೆ ರೂ.3,700 ಕೋಟಿಯಷ್ಟು ನಷ್ಟ ಉಂಟಾಗುತ್ತಿದೆ. ಸಂಚಾರ ದಟ್ಟಣೆ ಅವಧಿಯಲ್ಲಿ 2.8 ಲಕ್ಷ ಲೀಟರ್‌ನಷ್ಟು ಇಂಧನ ವ್ಯರ್ಥವಾಗುತ್ತಿದ್ದು, ವರ್ಷಕ್ಕೆ 50 ಕೋಟಿ ಲೀಟರ್‌ಗಳಷ್ಟು ಇಂಧನವನ್ನು ಕಳೆದುಕೊಳ್ಳಬೇಕಾಗಿದೆ!
  • ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಪರಿಷ್ಕೃತ ನಗರ ಮಹಾಯೋಜನೆ 2031 ನ್ನು ಸಿದ್ಧಪಡಿಸಲು ನಡೆಸಿರುವ ಅಧ್ಯಯನದ ವರದಿಯಲ್ಲಿ ಈ ಅಂಶಗಳಿವೆ. ಸಂಚಾರ ದಟ್ಟಣೆ ಅವಧಿಯಲ್ಲಿ ವ್ಯರ್ಥವಾಗುವ ಇಂಧನದಿಂದ ವರ್ಷಕ್ಕೆ ರೂ. 1,350 ಕೋಟಿಗಳಷ್ಟು ನಷ್ಟ ಉಂಟಾಗುತ್ತಿದೆ. ಈ ಸಮಸ್ಯೆಯಿಂದ ಜನರ ಮೇಲಾಗುತ್ತಿರುವ ದುಷ್ಪರಿಣಾಮ ಖಾಸಗಿ ವಾಹನಗಳ ಬಳಕೆ ಮತ್ತಷ್ಟು ಹೆಚ್ಚಲು ಕಾರಣವಾಗುತ್ತಿದೆ. ಇದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತಿದೆ ಎಂದು ವಿಶ್ಲೇಷಿಸಿದೆ.
  • ಸಂಚಾರ ಸಮಸ್ಯೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಸಲುವಾಗಿ ಹಾಗೂ ಭವಿಷ್ಯದಲ್ಲಿ ಸೂಕ್ತ ಸಂಚಾರ ಮಾದರಿಯನ್ನು ಅಳವಡಿಸಿಕೊಳ್ಳುವ ಸಲುವಾಗಿ ಮೊದಲ ಬಾರಿಗೆ 500 ವಲಯಗಳನ್ನು ಒಳಗೊಂಡ ಸಂಚಾರ ಮಾದರಿಯನ್ನು ಅಭಿವೃದ್ಧಿಪಡಿಸಿದೆ.ಪರಿಷ್ಕೃತ ಮಹಾಯೋಜನೆ ರೂಪಿಸುವ ಸಲುವಾಗಿ ವಿವಿಧ ಮೂಲಗಳಿಂದ ದತ್ತಾಂಶವನ್ನು ಕಲೆಹಾಕಿ, ಸಂಚಾರ ಮಾದರಿಗಳನ್ನು ರೂಪಿಸಲಾಗಿದೆ. ವಿವಿಧ ಸಮೀಕ್ಷೆಗಳ ದತ್ತಾಂಶಗಳನ್ನಲ್ಲದೇ ಬಿ–ಟ್ರ್ಯಾಕ್‌ ಯೋಜನೆ ಅಡಿ 50 ಕಡೆ ಸ್ಥಾಪಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾಗಳ ಮೂಲಕವೂ ಮಾಹಿತಿಯನ್ನೂ ಅಧ್ಯಯನಕ್ಕೆ ಬಳಸಲಾಗಿದೆ. ಇತರ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಗಳನ್ನೂ ವಿಸ್ತೃತ ವಿಶ್ಲೇಷಣೆ ನಡೆಸಲಾಗಿದೆ ಎಂದು ಬಿಡಿಎ ಹೇಳಿಕೊಂಡಿದೆ.
  • ಅತ್ಯಾಧುನಿಕ ಸಂಚಾರ ಮಾದರಿ ವಿಶ್ಲೇಷಣೆ ತಂತ್ರಜ್ಞಾನ (ಕ್ಯೂಬ್‌ ವೋಯೆಜರ್‌) ಬಳಸಿ ಭವಿಷ್ಯದ ಸಂಚಾರ ಮಾದರಿಯನ್ನು ರೂಪಿಸಲಾಗಿದೆ. 15 ಸಾವಿರ ಕಿ.ಮೀ.ಗೂ ರಸ್ತೆ ಸಂಪರ್ಕ ಜಾಲದ ವಿಸ್ತೃತ ವಿವರಗಳನ್ನು ಕಲೆಹಾಕುವ ಮೂಲಕ ಪರಿಷ್ಕೃತ ಮಹಾ ಯೊಜನೆಯ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ತಂಡ ಸಂಚಾರ ಮಾದರಿಗಳನ್ನು ಸಿದ್ಧಪಡಿಸಿದೆ. ಬಸ್‌ಗಳು ಸಂಚರಿಸುವ 2,300 ಮಾರ್ಗಗಳಿಗೆ ಸಂಕೇತಗಳನ್ನು ಅಳವಡಿಸಿ ಮಾಹಿತಿ ಕಲೆಹಾಕಲಾಗಿದೆ. ಬಿಬಿಎಂಪಿಯ ಎಲ್ಲಾ ವಾರ್ಡ್‌ಗಳು ಹಾಗೂ ಬಿಡಿಎ ವ್ಯಾಪ್ತಿಯ ಎಲ್ಲಾ ಗ್ರಾಮಗಳನ್ನು ಈ ಅಧ್ಯಯನಕ್ಕೆ ಪರಿಗಣಿಸಲಾಗಿದೆ. ಬೆಂಗಳೂರು ಮಹಾನಗರದ ವ್ಯಾಪ್ತಿಯನ್ನೂ ಪರಿಗಣಿಸುವ ಮೂಲಕ ಭವಿಷ್ಯದ ಸಂಚಾರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ ಎಂದು ಬಿಡಿಎ ಹೇಳಿಕೊಂಡಿದೆ.

60 ಕೋಟಿ ತಾಸು ಕಾಲಹರಣ

  • ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುವ ಅಷ್ಟೂ ಜನರು ಒಂದು ವರ್ಷದಲ್ಲಿ ಎಷ್ಟು ಕಾಲಹರಣ ಮಾಡುತ್ತಾರೆ ಎಂಬುದನ್ನೂ ಬಿಡಿಎ ಲೆಕ್ಕ ಹಾಕಿದೆ. ಒಂದು ವರ್ಷದಲ್ಲಿ ನಗರದ ಜನರು ಒಟ್ಟು 60 ಕೋಟಿ ತಾಸುಗಳನ್ನು ರಸ್ತೆಯಲ್ಲೇ ಕಳೆಯುತ್ತಾರೆ. ಈ ರೀತಿ ಮಾನವ ಶ್ರಮ ವ್ಯರ್ಥವಾಗುವುದರಿಂದ ವರ್ಷಕ್ಕೆ ಸುಮಾರು ರೂ. 2,350 ಕೋಟಿ ನಷ್ಟ ಉಂಟಾಗುತ್ತಿದೆ ಎಂಬುದು ಬಿಡಿಎ ಲೆಕ್ಕಾಚಾರ.

ಅಧ್ಯಯನಕ್ಕೆ ಬಳಸಿರುವ ಅಂಶಗಳು

  • ಸಾಮಾಜಿಕ, ಆರ್ಥಿಕ ಸಮೀಕ್ಷೆಯ (10,130 ನಮೂನೆ ಬಳಕೆ) ವಿವರಗಳು
  • 45 ಕಡೆಗಳಲ್ಲಿ ದಿನದಲ್ಲಿ ಯಾವ ಬಗೆಯ ವಾಹನಗಳು ಎಷ್ಟು ಸಂಖ್ಯೆಯಲ್ಲಿ ಸಂಚರಿಸುತ್ತವೆ ಎಂಬ ಕುರಿತು ನಡೆಸಿದ ಸಮೀಕ್ಷೆಯ ದತ್ತಾಂಶ
  • 13 ಕಡೆಗಳಲ್ಲಿ ನಡೆಸಿರುವ ವಾಹನ ಸಂಚಾರ ಆರಂಭ ಹಾಗೂ ಗುರಿ ತಲುಪುವ ಅವಧಿಯ ಕುರಿತ ಸಮೀಕ್ಷೆ (ಒ.ಡಿ ಸರ್ವೇ)
  • 375 ಕಿ.ಮೀ ಉದ್ದವನ್ನು ಪರಿಗಣಿಸಿ ವೇಗ ಹಾಗೂ ವಿಳಂಬ ಕುರಿತ ಸಮೀಕ್ಷೆ ನಡೆಸಲಾಗಿದೆ.
  • 375 ಕಿ.ಮೀ ಉದ್ದದ ರಸ್ತೆ ಜಾಲವನ್ನು ಪರಿಗಣಿಸಲಾಗಿದೆ
  • 14 ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆ ಪರಿಸ್ಥಿತಿಯಲ್ಲಿ ಅಧ್ಯಯನ ನಡೆಸಲಾಗಿದೆ
  • ಸರಕು ಸಾಗಣೆ, ನಗರ ಸಂಚಾರಕ್ಕೆ ಸಂಬಂಧಿಸಿದ ಸಮೀಕ್ಷೆಗಳನ್ನು 8 ಕಡೆ ನಡೆಸಲಾಗಿದೆ [1]

ನೋಡಿ

ಆಧಾರ

ಕರ್ನಾಟಕ ಚುನಾವಣೆ ಆಯೋಗವರದಿ ಪ್ರಜಾವಾಣಿ ೬-೪-೨೦೧೦

  • ೧.( ಬಿ.ಬಿ.ಎಂ.ಪಿ. ವಿವರ ಫಲಕ-ಪ್ರ.ವರದಿ);ಪ್ರಜಾವಾಣಿ ವರದಿ ೨೧-೬-೨೦೧೪
  1. ವರ್ಷಕ್ಕೆ ರೂ.3,700 ಕೋಟಿಯಷ್ಟು ನಷ್ಟ !;ಪ್ರವೀಣ್‌ ಕುಮಾರ್‌ ಪಿ.ವಿ.;23 Jan, 2017
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.