ವಿಜಯನಗರ (ಬೆಂಗಳೂರು)

ವಿಜಯನಗರ ಬೆಂಗಳೂರಿನ ಪಶ್ಚಿಮ ಭಾಗದಲ್ಲಿರುವ ಒಂದು ಬಡಾವಣೆ.ಮೊದಲು "ಹೊಸಹಳ್ಳಿ" ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈ ಬಡಾವಣೆ, ನಂತರದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ವಿಜಯನಗರ ಸಾಮ್ರಾಜ್ಯದಿಂದ ತನ್ನ ಹೆಸರನ್ನು ಪಡೆದುಕೊಂಡು "ವಿಜಯನಗರ"ವಾಗಿದೆ. ಈ ಪ್ರದೇಶವು ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆಗಳಿಂದ ಸುತ್ತುವರೆದಿದೆ. ಹೆಚ್ಚಾಗಿ ಮಧ್ಯಮ ವರ್ಗದ ಜನರಿರುವ ಈ ಪ್ರದೇಶದಲ್ಲಿ ೧೯೭೦ರ ದಶಕದಲ್ಲಿ ಮೊದಲು ಜನರು ವಾಸಿಸಲು ಪ್ರಾರಂಭಿಸಿದರು. ಮಾರುತಿ ಮಂದಿರ, ಶನಿ ಮಹಾತ್ಮ ದೇವಸ್ಥಾನ, ಕೋದಂಡರಾಮಸ್ವಾಮಿ ದೇವಸ್ಥಾನ, ಶಿವ ಗಣಪತಿ ದೇವಾಲಯ ಮತ್ತು ಆದಿಚುಂಚುನಗಿರಿ ದೇವಾಲಯ ಇಲ್ಲಿನ ಪ್ರಮುಖ ದೇವಾಲಯಗಳು.

Vijayanagar
neighbourhood
Countryಭಾರತ
Stateಕರ್ನಾಟಕ
Metroಬೆಂಗಳೂರು
Languages
  OfficialKannada
ಸಮಯ ವಲಯIST (ಯುಟಿಸಿ+5:30)
ವಾಹನ ನೊಂದಣಿKA-02

ಸ್ಥಳ

ಉಲ್ಲೇಖಗಳು

    This article is issued from Wikipedia. The text is licensed under Creative Commons - Attribution - Sharealike. Additional terms may apply for the media files.