ತುಮಕೂರು
ತುಮಕೂರು - ದಕ್ಷಿಣ ಕರ್ನಾಟಕದಲ್ಲಿ ಪ್ರಮುಖ ಜಿಲ್ಲಾಕೇಂದ್ರವಾಗಿದೆ. ತುಮಕೂರಿನ ಮೂಲ ಹೆಸರು ತುಮ್ಮೆಗೂರು. ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಬೆಂಗಳೂರಿನಿಂದ ೭೦ ಕಿ.ಮಿ. ದೂರದಲ್ಲಿದೆ.
ತುಮಕೂರು | |
![]() ![]() ತುಮಕೂರು
| |
ರಾಜ್ಯ | ಕರ್ನಾಟಕ |
ಜಿಲ್ಲೆ | ತುಮಕೂರು |
ನಿರ್ದೇಶಾಂಕಗಳು | |
ವಿಸ್ತಾರ | ೧೦,೫೯೭ km² |
ಸಮಯ ವಲಯ | IST (UTC+5:30) |
ಜನಸಂಖ್ಯೆ (೨೦೧೧) - ಸಾಂದ್ರತೆ |
೨೬,೭೮,೯೮೦ - {{{population_density}}}/ಚದರ ಕಿ.ಮಿ. |
ಜಿಲ್ಲಾಧಿಕಾರಿ | ಡಾ. ರಾಕೇಶ್ ಕುಮಾರ್ |
ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- ೫೭೨೧೦೧ - +೯೧ (೦)೮೧೬ - ಕೆಎ-೦೬ (ತುಮಕೂರು), ಕೆಎ-೪೪ (ತಿಪಟೂರು), ಕೆಎ-೬೪ (ಮಧುಗಿರಿ) |
ಅಂತರ್ಜಾಲ ತಾಣ: http://www.tumkurcity.mrc.gov.in/ |
.jpg)
ತುಮಕೂರು-ಬೆಂಗಳೂರಿನ ಹೆದ್ದಾರಿಯಲ್ಲಿರುವ ಕ್ಯಾತಸಂದ್ರದ ಬಳಿ ಇರುವ ಪುಣ್ಯಕ್ಷೇತ್ರವಾದ ಶ್ರೀ ಸಿದ್ದಗಂಗಾ ಮಠ ವಿಶ್ವವಿಖ್ಯಾತವಾಗಿದೆ. ಇಲ್ಲಿ ಜಾತಿ, ಮತ, ಲಿಂಗ ತಾರತಮ್ಯವಿಲ್ಲದೆ ನಿರಂತರವಾಗಿ ನೆಡೆಯುತ್ತಿರುವ ಜ್ಞಾನ ದಾಸೋಹ ಮತ್ತು ಅನ್ನ ದಾಸೋಹ ವಿಶ್ವಕ್ಕೆ ಮಾದರಿಯಾಗಿದೆ. ಮಠದ ವತಿಯಿಂದ ಪ್ರತಿ ದಿನ ಸಾವಿರಾರು ಜನ ಬಡ ವಿದ್ಯಾರ್ಥಿಗಳಿಗೆ ವಸತಿ, ಊಟ ಮತ್ತು ವಿದ್ಯಾದಾನ ನೆಡೆಯುತ್ತಿದೆ. ಅಧುನಿಕ ತುಮಕೂರನ್ನು ಪವಾಡದಂತೆ ಪ್ರಸಿದ್ಧಿಗೆ ತಂದ ಸಿದ್ಧಗಂಗಾ ಮಠಾಧೀಶರಾದ, ತ್ರಿವಿಧ ದಾಸೋಹಿ ೧೦೯ ವರ್ಷದ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು, ನೆಡೆದಾಡುವ ದೇವರೆಂದೇ ಪ್ರಖ್ಯಾತರಾಗಿದ್ದಾರೆ.
ಸಿದ್ಧಗಂಗಾ ಮಠದ ಸಮೀಪ ಇರುವ ಕ್ಯಾತ್ಸಂದ್ರ, ತಟ್ಟೆಇಡ್ಲಿ ತಿನಿಸಿಗೆ ಖ್ಯಾತಿ ಪಡೆದಿದೆ. ಬೆಂಗಳೂರು - ಮಧುಗಿರಿ ಹೆದ್ದಾರಿಯಲ್ಲಿರುವ ಸಿದ್ದರ ಬೆಟ್ಟವು ಗಿಡಮೂಲಿಕೆಗಳಿಗೆ ಮತ್ತು ಅಲ್ಲಿ ಸಾಧನೆ ಮಾಡುತ್ತಿರುವ ಸಿದ್ಧರು ಮತ್ತು ಸಂತರಿಗಾಗಿ ಪ್ರಸಿದ್ಧವಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನಲ್ಲಿರುವ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಕ್ಷೇತ್ರ ಮತ್ತು ಕಗ್ಗೆರೆ ನಾಡಿನ ಪ್ರಮುಖ ವೀರಶೈವ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿವೆ. ತುಮಕೂರು ಜಿಲ್ಲೆಯಲ್ಲಿರುವ ತಿಪಟೂರು ತೆಂಗಿನ ಕೃಷಿಗೆ ಹೆಸರಾಗಿದ್ದು ಕಲ್ಪತರು ನಾಡು ಎಂದು ಖ್ಯಾತಿ ಪಡೆದಿದೆ. ತುಮಕುರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿರುವ ಗೊರವನಹಳ್ಳಿ ಶ್ರೀ ಲಕ್ಷ್ಮಿ ದೇವಸ್ಥಾನವು ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿರುವ ಪುಣ್ಯಕ್ಷೇತ್ರ. ಮಧುಗಿರಿ ಬೆಟ್ಟ ಏಷಿಯಾ ಖಂಡದ ಎರಡನೇ ಅತೀ ದೊಡ್ಡ ಏಕಶಿಲಾ ಬೆಟ್ಟ ಮತ್ತು ಈ ಬೆಟ್ಟದ ಮೇಲೆ ಬಹಳ ದೊಡ್ಡದಾದ ಕೋಟೆ ಇದೆ. ಮಧುಗಿರಿಯ ದಂಡಿನ ಮಾರಮ್ಮದೇವಿ ದೇವಸ್ಥಾನ ಪ್ರಖ್ಯಾತಿ ಹೊಂದಿದೆ. ದೇವರಾಯನ ದುರ್ಗ ನರಸಿಂಹ ಸ್ವಾಮಿ ದೇವಸ್ಥಾನವಿರುವ ಪುಣ್ಯಕ್ಷೇತ್ರವಾಗಿದೆ.
ಶ್ರೀ ಕ್ಷೇತ್ರ ಕೋಡ್ಲಹಳ್ಳಿ ಜಗನ್ಮಾತೆ ಉದ್ಬವ ಮಾರಮ್ಮ ನವರೂ ಸಾಕ್ಷಾತ್ ಪಾರ್ವತಮ್ಮನವರ ಸ್ವರೂಪ, ಮಹಾಲಕ್ಷ್ಮಿ ಮಹಾಸರಸ್ವತಿ ಮಹಾಕಾಳಿ ಯಾಗಿ ನೆಲೆನಿಂತಿರುವ ಐತಿಹಾಸಿಕ ಪುರಾಣ ಪ್ರಸಿದ್ಧವಾದ ಪುಣ್ಯಕ್ಷೇತ್ರ ಸ್ಥಳ ಕೋಡ್ಲಹಳ್ಳಿ, ಕ್ಯಾಮೆನಹಳ್ಳಿ ಗ್ರಾಮ ಪಂಚಾಯತಿ, ಹೋಳವನಹಳ್ಳಿ ಹೋಬಳಿ, ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ , ಕರ್ನಾಟಕ
ತುಮಕೂರು ಹಲವು ಕೈಗಾರಿಕೆಗಳಿಗೆ ಮನೆಯಾಗಿದೆ. ತುಮಕೂರಿನ ಪ್ರಮುಖ ಕೈಗಾರೆಕೆಗಳು ಹೆಚ್.ಎಂ.ಟಿ, ಗ್ರಾನೈಟ್ ಪರಿಷ್ಕರಣೆ, ಟಿ.ವಿ.ಎಸ್.ಇ, ಅಕ್ಕಿ ಮಿಲ್, ಎಣ್ಣೆ ಮಿಲ್ ಇತ್ಯಾದಿ.
ಶಿಕ್ಷಣ ಕ್ಷೇತ್ರದಲ್ಲಿ ಕೂಡಾ ತುಮಕೂರು ಹೆಸರುವಾಸಿಯಾಗಿದೆ. ಸಿದ್ಧಗಂಗಾ ಮಠದ ಶಿಕ್ಷಣ ಸಂಸ್ಥೆಗಳು, ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳು ಪ್ರಮುಖವಾಗಿವೆ. ತುಮಕೂರು ವಿಶ್ವವಿದ್ಯಾಲಯ ಕಾರ್ಯಾರಂಭಿಸಿದೆ. ಪ್ರಖ್ಯಾತ ನಾಟಕ ಕಂಪನಿಯು, ಚಿತ್ರ ನಿರ್ಮಾಣ ಸಂಸ್ಥೆಯೂ ಆಗಿದ್ದ ಗುಬ್ಬಿ ನಾಟಕ ಕಂಪನಿಯ ಸಂಸ್ಥಾಪಕರಾದ ವೀರಣ್ಣನವರು ತುಮಕೂರು ಜಿಲ್ಲೆಯ ಗುಬ್ಬಿಯವರು.
ತುಮಕೂರು ಜಿಲ್ಲೆಯ ತಾಲ್ಲೂಕುಗಳು
ತುಮಕೂರು ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಗಳು
- ತುಮಕೂರು ವಿಶ್ವವಿದ್ಯಾಲಯ [1]
- ಶ್ರೀದೇವಿ ಶಿಕ್ಷಣ ಸಂಸ್ಠೆ
- ಸಿದ್ಧಗಂಗಾ ಶಿಕ್ಷಣ ಸಂಸ್ಠೆ
- ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಠೆ
- ಹೆಚ್.ಎಮ್.ಎಸ್ ಶಿಕ್ಷಣ ಸಂಸ್ಠೆ
- ಸಿ.ಐ.ಟಿ (ಚನ್ನಬಸವೇಶ್ವರ) ಶಿಕ್ಷಣ ಸಂಸ್ಠೆ
ತುಮಕೂರು ಜಿಲ್ಲೆಯ ಪ್ರಸಿದ್ಧ ಸ್ಥಳಗಳು
- ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ದೇವಾಲಯ
ಸಾಸಲು
- ಸಿದ್ದಗಂಗ ಮಠ
- ಬೆಟ್ಟಹಳ್ಳಿ ಮಠ: ಶ್ರೀ ಉರಿಗದ್ದೀಗೇಶ್ವರ ದೇವಾಲಯ, ಗಣಪತಿ ದೇವಾಲಯ, ವಿದ್ಯಾಸಂಸ್ಥೆಗಳು, ಉಚಿತ ವಸತಿ ನಿಲಯಗಳು
- ಶ್ರೀ ಕ್ಷೇತ್ರ ಕೋಡ್ಲಹಳ್ಳಿ ಜಗನ್ಮಾತೆ ಉದ್ಬವ ಮಾರಮ್ಮನವರೂ, ಸಾಕ್ಷಾತ್ ಪಾರ್ವತಮ್ಮ ನವರ ಸ್ವರೂಪ, ಮಹಾಲಕ್ಷ್ಮಿ ಮಹಾಸರಸ್ವತಿ ಮಹಾಕಾಳಿ ಯಾಗಿ ನೆಲೆನಿಂತಿರುವ ಐತಿಹಾಸಿಕ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ
- ಅಂಕನಹಳ್ಳಿ ಮಠ :ವಿದ್ಯಾಸಂಸ್ಥೆಗಳು ಮತ್ತು ಮೊರಾರ್ಜಿ ದೇಸಾಯಿ ವಿದ್ಯಾಸಂಸ್ಥೆ.
- ಹುತ್ರಿದುರ್ಗ ಬೆಟ್ಟ: ಶ್ರೀಕೇಂಪೇಗೌಡರು ಕಟ್ಟಿಸಿರುವ ಕೋಟೆ ಕೊತ್ತಲುಗಳು, ಗಂಗಾಧರೇಶ್ವರ ದೇವಸ್ಥಾನ, ಪಾತಾಳಗಂಗೆ,
- ದೇವರಾಯನದುರ್ಗ - ಯೋಗ ನರಸಿಂಹ ಮತ್ತು ಭೋಗ ನರಸಿಂಹ ದೇವಸ್ಥಾನ
- ನಾಮದ ಚಿಲುಮೆ
- ವಿದ್ಯಾ ಶಂಕರ ದೇವಸ್ಥಾನ
- ಗೂಳೂರು ಗಣಪತಿ ದೇವಸ್ಥಾನ
- ಕೈದಾಳ ಚನ್ನಕೇಶವ ದೇವಸ್ಥಾನ
- ಮಂದರ ಗಿರಿ ಜೈನ ದೇವಸ್ಥಾನ
- ನಿಜಗಲ್ಲು ಬೆಟ್ಟ ಮತ್ತು ಕೋಟೆ
- ಗೊರವನಹಳ್ಳಿ ಲಕ್ಷ್ಮಿದೇವಸ್ಥಾನ
- ಮಧುಗಿರಿ ಬೆಟ್ಟ ಮತ್ತು ಕೋಟೆ
- ಚನ್ನರಾಯನ ದುರ್ಗ
- ಸಿದ್ದರ ಬೆಟ್ಟ
- ಕ್ಯಾಮೇನಹಳ್ಳಿ ಜಾತ್ರೆ
- ಬೋರನ ಕಣಿವೆ
- ಮೈದಾಡಿ
- ಮಾರ್ಕೋನಹಳ್ಳಿ ಆಣೆಕಟ್ಟು
- ಕುಣಿಗಲ್ - ಸೋಮೇಶ್ವರ ದೇವಸ್ಥಾನ
- ಹೆಬ್ಬೂರು ಕಾಮಾಕ್ಷಿ ಮಠ, ಚಿಕ್ಕಣ್ಣ ಸ್ವಾಮಿ
- ಮಣಿಕುಪ್ಪೆ - ಶ್ರೀ ನಾರಸಿ೦ಹಾ೦ಜನೇಯ ಸ್ವಾಮಿ ದೇವಸ್ಥಾನ
- ಹ೦ದನಕೆರೆ:೧೨ಸೋಪಾನದ ಬಾವಿ,ರೇವಣ್ಣಸಿದ್ಡೇಶ್ವರ ಮಠ,ಶ್ರೀಗ೦ಗಾದರೇಶ್ವರ ದೇವಸ್ಥಾನ
- ಬೇವಿನಹಳ್ಳಿ ಪುರಾಣ ಪ್ರಸಿದ್ದ ಜುಂಜಪ್ಪ ದೇವರ ದೇವಸ್ಥಾನ ಹಾಗೂ ಶ್ರೀ ಕರಿಯಮ್ಮ ದೇವಿ ದೇವಸ್ಥಾನ ಇಲ್ಲಿ ದೀಪಾವಳಿಯ ನಂತರದ ಸೋಮವಾರ ಬ್ರುಹತ್ ಜಾತ್ರೆ ನಡೆಯುತ್ತದೆ.
- ರೈತರಪಾಳ್ಯ ವೆ೦ಬ ನೊಡ ಬೆಕಾದ ಒಂದು ಮನರ೦ಜನೆಯ ಪುಟ್ಟ ಸು೦ದರ ಕುಗ್ರಾಮ.
- ಬೆಳ್ಳಾವಿ ಸೊಮೆಶ್ವರ ದೇವಸ್ಥಾನ --ಬೆಳ್ಳಾವಿ
- ಅಂಕನಹಳ್ಳಿ ಮಠ
- ಹುತ್ರಿದುರ್ಗ ಬೆಟ್ಟ
- ಮಧುಗಿರಿಯ ತಾಲ್ಲೂಕಿನ ಕೋಟೆಕಲ್ಲಪ್ಪ(ಕೋಟೆಕಲ್ಲರಂಗನಾಥ ಸ್ವಾಮಿ). ಬೆಟ್ಪ
ಹುತ್ರಿದುರ್ಗ
ಇಲ್ಲಿ ನಾಡಪ್ರಭುಕೇಂಪೇಗೌಡರು ಕಟ್ಟಿಸಿರುವ ಬೃಹತ್ ಕೋಟೆ ಮತ್ತು ಶ್ರೀ ಗಂಗಾಧರೇಶ್ವರ ದೇವಸ್ಥಾನ. ಪಾತಾಳ ಗಂಗೆ, ಸಂಕೋಲೆ ಬಸವಣ್ಣನ ದೇವರು, ಪ್ರಸಿದ್ಧ ಕಾಡಪ್ಪನವರ ಮಠ ಮುಂತಾದ ಪ್ರಸಿದ್ಧ ಸ್ಥಳಗಳನ್ನು ಈ ಬೃಹತ್ ಬೆಟ್ಟದಲ್ಲಿ ಕಾಣಬಹುದು. ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದ್ದು, ಇದು ಬೆಂಗಳೂರಿನಿಂದ ಸುಮಾರು ೮೦ ಕಿ.ಮಿ. ದೂರವಿದ್ದು, ಈ ಬೆಟ್ಟಕ್ಕೆ ಬರಲು ಬೆಂಗಳೂರಿನಿಂದ ಹಲವು ಖಾಸಗಿ ಮತ್ತು ಸರ್ಕಾರಿ ಬಸ್ ಗಳಿವೆ.ಬೆಂಗಳೂರಿನಿಂದ ಮಾಗಡಿ ಮುಖಾಂತರ ಬಂದು ಕಲ್ಯ, ಹೊಸಪಾಳ್ಯ ಕ್ಕೆ ಸೇರುವ ಮುನ್ನ ಎಡಕ್ಕೆ ತಿರುವುಪಡೆದರೆ, ಕತ್ತರಿಘಟ್ಟ, ಹಾಲುವಾಗಿಲು ನಂತರ ಸಂತೇಪೇಟೆಯಲ್ಲಿ ಇಳಿದು ನಂತರ ಬೆಟ್ಟಕ್ಕೆ ಹೋಗಬಹುದು.ಮೇಲಿನಂತೆಯೆ ಮಾಗಡಿಯಿಂದ ಹುಲಿಯೂರುದುರ್ಗ ಮಾರ್ಗವಾಗಿ ಬಂದು ಅಗಲಕೋಟೆ ಹ್ಯಾಂಡ್ ಪೋಸ್ಟ್ ನಲ್ಲಿ ಬಲ್ಲಕ್ಕೆ ತಿರುವು ಪಡೆದು ಯಲಗಲವಾಡಿ ಸೇರುವ ಮುನ್ನ ಬಲ ತಿರುವು ಪಡೆದು ಹೊಢಾಘಟ್ಟ ಮಾರ್ಗವಾಗಿ ಬಂದು ನಂತರ ಚಿಕ್ಕ ಬೆಟ್ಟದರಸ್ತೆಯಲ್ಲಿ ಸಾಗಿದ ನಂತರ ಆದಿ ಹನುಮಂತರಾಯ ಸ್ವಾಮಿ ದೇವಸ್ಥಾನದ ನಂತರ ಬಲ ತಿರುವು ಪಡೆದರೆ ಹುತ್ರಿದುರ್ಗ ಬೆಟ್ಟಕ್ಕೆ ಹೋಗಬಹುದು.
ಮತ್ತೀಕೆರೆ
ಗುಬ್ಬಿ , ತುರುವೇಕೆರೆ ಮತ್ತು ಕುಣಿಗಲ್ ತಾಲ್ಲೂಕುಗಳ ಗಡಿ ಬಾಗದಲ್ಲಿರುವ ಒಂದು ಸುಂದರ ಗ್ರಾಮ
ಸಲ್ಲಾಪುರದಮ್ಮ ಮತ್ತು ಕೊಲ್ಲಾಪುರದಮ್ಮ ಎಂಬ ದೇವಸ್ಥಾನವು ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಗಿಡದ ಕೆಂಚನಹಳ್ಳಿಯಲ್ಲಿ ನೆಲೆಸಿದ್ದು ಪ್ರತಿ ವರ್ಷ ಜಾತ್ರೆಯು ನಡೆಯುತ್ತದೆ.ಅಲ್ಲದೇ ಹೆಸರಾಂತ ಅಂಜನೇಯ ಸ್ವಾಮಿಯು ಇದೇ ತಾಲ್ಲೂಕಿನ ಅಂದರೆ ಕುಣಿಗಲ್ ನ ಹುಲಿಯೂರುದುರ್ಗ ಹೋಬಳಿಯ ಕಲ್ಲುದೇವನಹಳ್ಳಿಯಲ್ಲಿ ನೆಲೆಸಿದ್ದು, ಇಲ್ಲಿಯೂ ಸಹ ಪ್ರತಿ ವರ್ಷ ಜಾತ್ರೆಯು ನಡೆಯುತ್ತದೆ.
ಬೆಟ್ಟಹಳ್ಳಿಮಠ
ಇದು ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಮಟ್ಟದಲ್ಲಿ ಬರುವ ಒಂದು ಪ್ರಮುಖ ವಿಧ್ಯಾಸಂಸ್ಥೆಯಾಗಿದ್ದು, ಇಲ್ಲಿ ಶ್ರೀ ಉರಿಗದ್ದಿಗೇಶ್ವರ ದೇವಸ್ಥಾನವಿದೆ. ರಾಮನಗರದಿಂದ - ಕುಣಿಗಲ್ ರಾಜ್ಯ ಹೆದ್ದಾರಿಯಲ್ಲಿರುವ ಬೆಟ್ಟಹಳ್ಳಿ ಬಳಿ ಇರುವ ವೀರಶೈವ ಪುಣ್ಯಕ್ಷೇತ್ರವಾದ ಶ್ರೀ ಬೆಟ್ಟಹಳ್ಳಿಮಠ ವಿಶ್ವವಿಖ್ಯಾತವಾಗಿದೆ. ಇಲ್ಲಿ ಜಾತಿ, ಮತ, ಲಿಂಗ ತಾರತಮ್ಯವಿಲ್ಲದೆ ನಿರಂತರವಾಗಿ ನೆಡೆಯುತ್ತಿರುವ ಜ್ಞಾನ ದಾಸೋಹ ಮತ್ತು ಅನ್ನ ದಾಸೋಹ ವಿಶ್ವಕ್ಕೆ ಮಾದರಿಯಾಗಿದೆ. ಮಠದ ವತಿಯಿಂದ ಪ್ರತಿ ದಿನ ಸಾವಿರಾರು ಜನ ಬಡ ವಿದ್ಯಾರ್ಥಿಗಳಿಗೆ ವಸತಿ, ಊಟ ಮತ್ತು ವಿದ್ಯಾದಾನ ನೆಡೆಯುತ್ತಿದೆ. ಅಧುನಿಕ ಬೆಟ್ಟಹಳ್ಳಿಮಠವನ್ನು ಪವಾಡದಂತೆ ಪ್ರಸಿದ್ಧಿಗೆ ತಂದ ಬೆಟ್ಟಹಳ್ಳಿಮಠ ಮಠಾಧೀಶರಾದ, ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀನೀಲಕಂಠಶಿವಾಚಾರ್ಯ ಮಹಾ ಸ್ವಾಮಿಗಳು, ನೆಡೆದಾಡುವ ಶಿವನೆಂದೇ ಪ್ರಖ್ಯಾತರಾಗಿದ್ದಾರೆ. ಅಲ್ಲದೇ ಮಠದ ವತಿಯಿಂದ ಇಲ್ಲಿ ನರ್ಸರಿ ಯಿಂದ ಪದವಿ ಪೂರ್ವ ಕಾಲೇಜು ಮತ್ತು ಸಂಸ್ಕ್ರುತ ಶಿಕ್ಷಣವನ್ನು ನೀಡಲಾಗುವುದು. ಮತ್ತು ಈ ಸಂಸ್ಥೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಇಲ್ಲಿ ಪ್ರತಿ ವರ್ಷ ಶಿವರಾತ್ರಿ ಹಬ್ಬದಂದು ಜಾತ್ರೆಯು ಬಹಳ ವಿಜೃಂಭಣೆಯಿಂದ ನಡೆಯುವುದರ ಜೊತೆಗೆ ಕಳೆದ ಐದಾರು ವರ್ಷಗಳಿಂದ ಬಾರಿ ದನಗಳ ಜಾತ್ರೆಯನ್ನು ಏರ್ಪಡಿಸುವುದರ ಜೊತೆಗೆ ಉತ್ತಮವಾದ ರಾಸುಗಳಿಗೆ ಬಹುಮಾನವನ್ನು ಸಹ ನೀಡುವ ವ್ಯ್ವವಸ್ಥೆಯನ್ನು ಮಾಡಲಾಗಿದೆ.