ಚಿತ್ರದುರ್ಗ ಜಿಲ್ಲೆ
ಚಿತ್ರದುರ್ಗ - ಕರ್ನಾಟಕದ ಒಂದು ಜಿಲ್ಲೆ. ಐತಿಹಾಸಿಕ ಸ್ಥಳವೂ ಹೌದು. ಹಿಂದೊಮ್ಮೆ ದಾವಣಗೆರೆ ಜಿಲ್ಲೆಯೂ ಈ ಜಿಲ್ಲೆಗೇ ಸೇರಿತ್ತು. ಚಿತ್ರದುರ್ಗದ ವೈವಿಧ್ಯಕ್ಕೆ ಮನಸೋತ ಜನರು ಇದನ್ನು 'ಚಿತ್ರ-ವಿಚಿತ್ರ ಚಿತ್ರದುರ್ಗ' ಎಂದು ಕರೆದದ್ದುಂಟು.ಚಿತ್ರದುರ್ಗ ಐತಿಹಾಸಿಕ ಏಳು ಸುತ್ತಿನ ಕೋಟೆಗೆ ಪ್ರಸಿದ್ಧಿ.

ಚಿತ್ರದುರ್ಗ | |
---|---|
ಜಿಲ್ಲೆ | |
![]() | |
ದೇಶ | ![]() |
ರಾಜ್ಯ | ಕರ್ನಾಟಕ |
ಸರ್ಕಾರ | |
• ಲೋಕಸಭಾ ಸದಸ್ಯ | ಬಿ ಎನ್ ಚಂದ್ರಪ್ಪ |
ವಿಸ್ತೀರ್ಣ | |
• ಒಟ್ಟು | ೨೧.೫೭ |
ಎತ್ತರ | ೭೩೨ |
ಜನ ಸಂಖ್ಯೆ (2001) | |
• ಒಟ್ಟು | ೧,೨೨,೫೯೪ |
• ಜನಸಾಂದ್ರತೆ | ೫,೬೮೩.೫೪ |
ಭಾಷೆಗಳು | |
• ಅಧಿಕೃತ | ಕನ್ನಡ |
ಸಮಯ ವಲಯ | IST (ಯುಟಿಸಿ+5:30) |
ಪಿನ್ ಕೋಡ್ | 577 50x |
ದೂರವಾಣಿ ಕೋಡ್ | 08194 |
ವಾಹನ ನೊಂದಣಿ | KA-16 |
ಇತಿಹಾಸ
ಇತಿಹಾಸದಲ್ಲಿ ಮಹತ್ತರ ಮೌಲ್ಯವಿರುವ ಈ ಜಿಲ್ಲೆ, ಶೌರ್ಯ, ತ್ಯಾಗ, ಹಾಗೂ ಸಂಪ್ರದಾಯವನ್ನು ಮೆರೆದಿದೆ. ಇಲ್ಲಿನ ಕಲ್ಲಿನ ಕೋಟೆ ಅಥವಾ ಏಳು ಸುತ್ತಿನ ಕೋಟೆ ಇತಿಹಾಸದ ಪುಟಗಳನ್ನು ಪ್ರವಾಸಿಗರ ಮನದಲ್ಲಿ ಮರುಕಳಿಸುತ್ತದೆ.
ವಿಜಯನಗರದ ಕಾಲದಲ್ಲಿ ತಿಮ್ಮಣ್ಣ ನಾಯಕನೆಂಬ ಸೇನಾಪತಿಗೆ ತನ್ನ ಪರಾಕ್ರಮಕ್ಕೆ ಮೆಚ್ಚಿದ ವಿಜಯನಗರದ ಚಕ್ರಾಧಿಪತ್ಯದಿಂದ ಚಿತ್ರದುರ್ಗಕ್ಕೆ ರಾಜ್ಯಪಾಲನಾಗಿ ಬಳುವಳಿ ದೊರೆಯಿತಂತೆ. ಇವನ ಮಗ ಓಬಣ್ಣ ಅಥವಾ ಮದಕರಿ ನಾಯಕ. ಮದಕರಿ ನಾಯಕನ ಮಗ ಕಸ್ತೂರಿ ರಂಗಪ್ಪ ಇವನ ಆಳ್ವಿಕೆಯನ್ನು ಶಾಂತಿಯಿಂದ ಮುಂದುವರೆಸಿದನು. ಇವನಿಗೆ ಮಕ್ಕಳಿರಲಿಲ್ಲವಾದ್ದರಿಂದ ದತ್ತು ತೆಗೆದುಕೊಂಡನಂತೆ. ಆದರೆ ದಳವಾಯಿಗಳು ಮಗುವನ್ನು ಕೊಲ್ಲಿಸಿದರಂತೆ. ಚಿಕ್ಕಣ್ಣ ನಾಯಕ - ಮದಕರಿ ನಾಯಕನ ತಮ್ಮ ೧೬೭೬ರಲ್ಲಿ ಗದ್ದುಗೆ ಏರಿದನಂತೆ. ಇದರ ಬಳಿಕ ಬಹಳಷ್ಟು ಮಂದಿ ಗದ್ದುಗೆ ಏರಿ ಇಳಿದರಾದರೂ ಹೇಳಿಕೊಳ್ಳುವಂತಹ ರಾಜ್ಯಭಾರ ಯಾವುದೂ ಇರಲಿಲ್ಲವೆಂದು ಸಾಧಾರಣ ಅಭಿಪ್ರಾಯ.
ಇಸಿಲ - ಇದು ಚಿತ್ರದುರ್ಗದ ಈಶಾನ್ಯ ದಿಕ್ಕಿಗಿರುವ ಬ್ರಹ್ಮಗಿರಿಗೆ ಹೊಂದಿಕೊಂಡಿದೆ. ಅಶೋಕನ ಕಾಲದಲ್ಲಿ ಪ್ರಾಂತೀಯ ರಾಜಧಾನಿಯಾಗಿತ್ತು. ಆ ಕಾಲದಲ್ಲಿ ಇಟ್ಟಿಗೆಯಲ್ಲಿ ನಿರ್ಮಿಸಿದ ಚೈತ್ಯಾಲಯವೊಂದು ಇಲ್ಲಿದೆ. ಅಶೋಕನ ಶಾಸನದಲ್ಲಿ ಇಸಿಲ ಎಂಬ ಶಬ್ಧ ದೊರಕುತ್ತದೆ.
ಸಿದ್ಧಾಪುರ ಇಲ್ಲಿ ಅಶೋಕನ ಶಾಸನ ದೊರಕಿದೆ.
ಒನಕೆ ಓಬವ್ವ

ಒನಕೆ ಓಬವ್ವಳ ಸಾಹಸಗಾಥೆ ಕನ್ನಡ ನಾಡಿನ ಶೌರ್ಯಗಾಥೆಗಳಲ್ಲಿ ಒಂದಾಗಿ ಜನಜನಿತವಾಗಿದೆ. ಮದಕರಿ ನಾಯಕನ ಆಳ್ವಿಕೆಯ ಕಾಲದಲ್ಲಿ, ಹೈದರ-ಅಲಿಯ ಸೈನ್ಯವು ಕೋಟೆಯನ್ನು ಸುತ್ತುವರೆದಿತ್ತು. ಒಬ್ಬ ಮಹಿಳೆಯನ್ನು ಕೋಟೆಯ ಕಿಂಡಿಯಿಂದ ಒಳ ಹೊಗುವುದನ್ನು ಕಂಡ ಹೈದರ-ಅಲಿಯು ತನ್ನ ಸೈನ್ಯವನ್ನು ಆ ಕಂಡಿಯ ಮೂಲಕ ಒಳಗೆ ಕಳುಹಿಸಿ ಕೋಟೆಯನ್ನು ವಶಪಡಿಸಿಕೊಳ್ಳಲು ಸಂಚು ಹೂಡುತ್ತಾನೆ. ಕೋಟೆಯ ಆ ಭಾಗದ ಕಾವಲುಗಾರನ ಹೆಂಡತಿಯೇ ಓಬವ್ವ. ಅವಳು ಗಂಡನಿಗೆ ಊಟ ತರುತ್ತಾಳೆ. ಗಂಡನನ್ನು ಊಟಕ್ಕೆ ಕೂರಿಸಿ, ನೀರು ತರಲು ಹೋಗುತ್ತಾಳೆ. ಅಲ್ಲಿ ಹೈದರ-ಅಲಿಯ ಸೈನಿಕರನ್ನು ಕಿಂಡಿಯ ಮೂಲಕ ನುಸುಳುವದನ್ನು ಕಾಣುತ್ತಾಳೆ. ಎದೆಗುಂದದೆ ಕೈಯಲ್ಲಿದ್ದ ಒನಕೆಯಿಂದಲೇ ಒಳಗೆ ನುಗ್ಗುತ್ತಿರುವ ಒಬ್ಬೊಬ್ಬ ಸೈನಿಕರನ್ನು ಜಜ್ಜಿ ಕೊಲ್ಲುತ್ತಾಳೆ. ಸತ್ತವರನ್ನು ಸಂಶಯ ಬಾರದ ಹಾಗೆ ದೂರ ಎಳೆದು ಹಾಕುತ್ತಾಳೆ. ಅತ್ತ ಊಟ ಮುಗಿಸಿದ ಕಾವಲುಗಾರ ತುಂಬಾ ಹೊತ್ತಿನವರೆಗೂ ಹೆಂಡತಿಗಾಗಿ ಕಾಯ್ದು ಹುಡುಕುತ್ತ ಬರುತ್ತಾನೆ. ಅಲ್ಲಿ ರಕ್ತಸಿಕ್ತವಾದ ಒನಕೆಯನ್ನು ಕೈಯಲ್ಲಿ ಹಿಡಿದು ರಣಚಂಡಿಯ ಅವತಾರದಲ್ಲಿರುವ ಓಬವ್ವನನ್ನು ಸತ್ತು ಬಿದ್ದಿರುವ ನೂರಾರು ಹೈದರ-ಅಲಿಯ ಸೈನಿಕರನ್ನು ನೋಡಿ ಆಶ್ಚರ್ಯಚಕಿತನಾಗುತ್ತಾನೆ. ಕೂಡಲೆ ಕಹಳೆ ಊದಿ ತನ್ನ ಸೇನೆಯನ್ನು ಎಚ್ಚರಗೊಳಿಸುತ್ತಾನೆ ಹಾಗೂ ನಾಯಕನ ಸೇನೆಯು ಕೋಟೆಯನ್ನು ಹೈದರ-ಅಲಿಯ ವಶಕ್ಕೆ ಹೋಗುವದನ್ನು ತಪ್ಪಿಸುತ್ತದೆ. ಓಬವ್ವನ ಸಮಯೋಚಿತ ಯುಕ್ತಿ ಮತ್ತು ಧೈರ್ಯವನ್ನು ಈಗಲೂ ಜನ ನೆನೆಯುತ್ತಾರೆ. ಈ ಘಟನೆಗೆ ಸಾಕ್ಷಿಯಾಗಿ ಈಗಲೂ ಆ ಕಿಂಡಿಯನ್ನು ಏಳು ಸುತ್ತಿನ ಕೋಟೆಯಲ್ಲಿ ಕಾಣಬಹುದು. ಅದು ಚಿತ್ರದುರ್ಗದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ .ಮತ್ತು ಚಿತ್ರದುಗದಲ್ಲಿ [www.chitharadurga.com]
ಚಿತ್ರದುರ್ಗದ ಪ್ರಮುಖ ಪ್ರವಾಸಿ ಸ್ಥಳಗಳು
- ಏಳು ಸುತ್ತು ಕಲ್ಲಿನ ಕೋಟೆ
- ಚಂದ್ರವಳ್ಳಿ ತೋಟ
- ಮುರುಘಾ ಮಠ
- ದೊಡ್ಡಗಟ್ಟ ತುರುವನೂರು
- ಜೋಗಿಮಟ್ಟಿ
- ಮಾರಿಕಣಿವೆ ಅಥವಾ ವಾಣಿವಿಲಾಸ ಸಾಗರ
- ಹಾಲುರಾಮೇಶ್ಪರ
- ನಾಯಕನಹಟ್ಟಿ
- ಆಡು ಮಲ್ಲೇಶ್ವರ
- ಗವಿ ರಂಗಾ
ಜಿಲ್ಲೆಯೆ ತಾಲ್ಲೂಕುಗಳು
ಇದನ್ನೂ ನೋಡಿ
ಪೋಟೋಗ್ಯೇಲರಿ
ದೀಪಸ್ತಂಬ |
ಟಂಕೆಶಾಲೆ |
ಇಸುರುಕಲ್ಲು |
ಶಿಲಾಶಾಸನೆ |
ಉಲ್ಲೇಖಗಳು
ಹೊರಗಿನ ಸಂಪರ್ಕಗಳು
![]() |
ವಿಕಿಮೀಡಿಯ ಕಣಜದಲ್ಲಿ Chitradurga district ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |
- ಬೊಮ್ಮಘ್ಹಟ್ಟ
- ಚಿತ್ರದುರ್ಗದ ಸಂಪೂರ್ಣ ಮಾಹಿತಿ ಕನ್ನಡದಲ್ಲಿ ಚಿತ್ತಾರದುರ್ಗ.ಕಾಂ
- ಚಿತ್ರದುರ್ಗ ಪ್ರವಾಸೀ ಮಾಹಿತಿ
- ಚಿತ್ರದುರ್ಗದ ನಾಯಕರ ಬಗೆಗೆ ಮಾಹಿತಿ
- ಚಿತ್ರದುರ್ಗದ ನಗರಸಭೆ ಹಾಗೂ ಇತರೆ ಮಾಹಿತಿ
- ಚಿತ್ರದುರ್ಗದ ನಾಯಕರ ಬಗೆಗೆ ಇನ್ನಷ್ಟು ವಿವರಗಳು