ರಾಮನಗರ
ರಾಮನಗರ ಕರ್ನಾಟಕದ ಒಂದು ಜಿಲ್ಲಾ ಕೇಂದ್ರ. ಈ ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿದ್ದ ರಾಮನಗರ ೨೦೦೭ರಲ್ಲಿ ಪ್ರತ್ಯೇಕ ಜಿಲ್ಲೆಯಾಯಿತು. ರಾಮನಗರವು ರೇಷ್ಮೆ ನಗರವೆಂದು ಖ್ಯಾತಿಗಳಿಸಿದೆ. ರಾಮನಗರ ಜಿಲ್ಲೆಯಲ್ಲಿನ ತಾಲ್ಲೂಕುಗಳೆಂದರೆ ಚನ್ನಪಟ್ಟಣ, ರಾಮನಗರ, ಮಾಗಡಿ, ಕನಕಪುರ. ನೂತನ ತಾಲೂಕು ಕೇಂದ್ರವಾಗಿ ಕನಕಪುರ ತಾಲೂಕಿನ ಹಾರೋಹಳ್ಳಿ, ಕೋಡಿಹಳ್ಳಿ ಘೋಷಣೆ ಮತ್ತು ಕುಣಿಗಲ್ ತಾಲ್ಲೂಕು ಸೇರ್ಪಡೆ ಮಾಡಿಕೊಳ್ಳಲಾಗಿದೆ.
ರಾಮನಗರ ರೇಷ್ಮೆ ನಗರ | |
---|---|
ನಗರ | |
ದೇಶ | ![]() |
ರಾಜ್ಯ | ಕರ್ನಾಟಕ |
ಜಿಲ್ಲೆ | ರಾಮನಗರ |
Elevation | ೭೪೭ |
Population (2011) | |
• Total | ೯೫,೧೬೭[1] |
Languages | |
• Official | ಕನ್ನಡ |
Time zone | UTC+5:30 (IST) |
Website | www.ramanagaracity.mrc.gov.in |
ರಾಮನಗರ ಜಿಲ್ಲೆಯ ತಾಲ್ಲೂಕುಗಳು ಮತ್ತು ಹೋಬಳಿಗಳು
01.ರಾಮನಗರ
1.ಕಸಬಾ 2.ಬಿಡದಿ 3.ಕೂಟಗಲ್ 4.ಕೈಲಾಂಚ
02.ಚನ್ನಪಟ್ಟಣ
1.ಕಸಬಾ 2.ಮಳೂರು 3.ಬೇವೂರು 4.ವಿರೂಪಾಕ್ಷಿ ಪುರ
03.ಮಾಗಡಿ
1.ಕಸಬಾ 2.ಮಾಡಬಾಳ್ 3.ಸೋಲೂರು 4.ಕುದೂರು
04.ಕನಕಪುರ
1.ಕಸಬಾ 2.ಸಾತನೂರು 3 4
05.ಹಾರೋಹಳ್ಳಿ
1.ಕಸಬಾ 2.ದೊಡ್ಡ ಮರಳವಾಡಿ 3 4
06.ಕೋಡಿಹಳ್ಳಿ
1.ಕಸಬಾ 2.ಉಯ್ಯಂಬಳ್ಳಿ 3.ಹಲಗೂರು 4
07.ಕುಣಿಗಲ್
1.ಕಸಬಾ 2.ಯಡಿಯೂರು 3. 4
08.ಹುಲಿಯೂರು ದುರ್ಗ
1.ಕಸಬಾ 2.ಅಂಭೃತೂರು 3.ಹುತ್ರಿದುರ್ಗ 4
ರಾಮನಗರದ ವಿಶೇಷತೆ
- ಕರ್ನಾಟಕಕ್ಕೆ ಮೂವರು ಮುಖ್ಯಮಂತ್ರಿಗಳನ್ನು ನೀಡಿದ ಜಿಲ್ಲೆಯಾಗಿದೆ. ಅವರೆಂದರೆ ವಿಧಾನ ಸೌಧ ನಿರ್ಮಾತೃ kengal ಹನುಮಂತಯ್ಯ, ಮೊಟ್ಟ ಮೊದಲ ಕನ್ನಡದ ಪ್ರಧಾನಿಯೆಂಬ ಹೆಗ್ಗಳಿಕೆಗೆ ಪಾತ್ರವಾದ H D DEVEGOWDA [[2]], ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪುತ್ರ ಹೆಚ್.ಡಿ.ಕುಮಾರಸ್ವಾಮಿ ರಾಮನಗರ ಜಿಲ್ಲೆಯ ಪ್ರಮುಖ ಸ್ಥಳಗಳೆಂದರೆ ಜಾನಪದ ಲೋಕ , ಕೆಂಗಲ್, ದೊಡ್ಡ ಮಳೂರು.
- ರಾಮನಗರ ಮಿನಿ ವಿಧಾನ ಸೌಧ ವನ್ನು ಹೊಂದಿದೆ. ಹೆಚ್ಚಾಗಿ ಬೆಟ್ಟ ಗುಡ್ಡಗಳಿಂದ ಕೂಡಿದ ಪ್ರದೇಶವಾಗಿದೆ. ರಾಮನಗರ - ಇದು ಹಿಂದಿಯ 'ಶೋಲೆ' ಖ್ಯಾತಿಯ ರೇಷ್ಮೆ ಸೀಮೆ! ರೇಷ್ಮೆ ನಗರ ರಾಮನಗರ ಬೆಂಗಳೂರಿನಿಂದ ೪೭ ಕಿಲೋಮೀಟರು ದೂರದಲಿದ್ದು, ನೈರುತ್ಯ ದಿಕ್ಕಿನಲ್ಲಿದೆ.
- ಇದು ರಾಮನಗರ ಜಿಲ್ಲೆಯ ಜಿಲ್ಲಾಕೇಂದ್ರ. ಕರ್ನಾಟಕ ರಾಜ್ಯದ ಇತರೆ ಭಾಗಗಳಂತೆ ಇದೂ ಕೂಡ ಗಂಗ, ಚೋಳ, ಹೊಯ್ಸಳ ಹಾಗು ಮೈಸೂರು ರಾಜರ ಆಳ್ವಿಕೆಗೆ ಒಳಪಟ್ಟಿತ್ತು ಆದರೆ ಈ ಪಟ್ಟಣ ಏಕಾಏಕಿ ಪ್ರಸಿದ್ದಿಗೆ ಬಂದದ್ದು ಸುಮಾರು 70ರ ದಶಕದಲ್ಲಿ ಇಲ್ಲಿ ನಡೆದ 'ಶೋಲೆ' ಚಲನ ಚಿತ್ರದ ಚಿತ್ರೀಕರಣದಿಂದ.
- ರಾಮನಗರ ಜಿಲ್ಲೆಯು ಪ್ರಮುಖ ಧಾರ್ಮಿಕ ನಾಯಕರುಗಳಾದ ಆದಿ ಚುಂಚನಗಿರಿ ಕ್ಷೇತ್ರದ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ಮತ್ತು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳ ತವರು ಜಿಲ್ಲೆ, ರಾಮನಗರ ತಾಲೂಕಿನ ಬಿಡದಿಯ ಬಾನಂದೂರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ತವರಾದರೆ ಮಾಗಡಿ ತಾಲೂಕಿನ ವೀರಾಪುರ ಶ್ರೀ ಶಿವಕುಮಾರ ಸ್ವಾಮೀಜಿಗಳ ತವರು
ರಾಮನಗರದ ಬೆಟ್ಟ ಪ್ರದೇಶ
- ರಾಮನಗರವು, ಶಿವರಾಮಗಿರಿ, ಸೋಮಗಿರಿ, ಕೃಷ್ಣಗಿರಿ, ಯತಿರಾಜಗಿರಿ, ರೇವಣ ಸಿದ್ದೇಶ್ವರ, ಸಿಡಿಲಕಲ್ಲು ಹಾಗು ಜಲ ಸಿದ್ದೇಶ್ವರ ಎಂಬ 7 ಭವ್ಯ ಬೆಟ್ಟಗಳಿಂದ ಸುತ್ತುವರಿದಿದೆ. ಇಲ್ಲಿ ರೇಷ್ಮೆಯನ್ನು ಹೆಚ್ಚಾಗಿ ಬೆಳೆಯುವುದರಿಂದ ಈ ಊರು ರೇಷ್ಮೆ ನಗರವೆಂದೂ ಹೆಸರುವಾಸಿ. ವಿಶ್ವ ವಿಖ್ಯಾತ ಮೈಸೂರು ರೇಷ್ಮೆ ಸೀರೆಗಳನ್ನು ರಾಮನಗರದ ರೇಷ್ಮೆಯನ್ನು ಬಳಸಿಯೇ ನೇಯಲಾಗುತ್ತದೆ.
- ಪ್ರಕೃತಿ ಪ್ರೇಮಿಗಳಿಗೆ ಖುಷಿ ಕೊಡುವ ವಿಚಾರವೆಂದರೆ ಇಲ್ಲಿರುವ ಬೆಟ್ಟಗಳು ಈಗ ಅಳಿವಿನಂಚಿನಲ್ಲಿರುವ ಹಳದಿ ಕುತ್ತಿಗೆಯ ಬುಲ್ ಬುಲ್ ಹಾಗು ಉದ್ದ ಕೊಕ್ಕಿನ ರಣಹದ್ದುಗಳಿಗೆ ಮನೆಯಾಗಿರುವುದು. ಇಲ್ಲೇ ಜಾನಪದ ಲೋಕವಿದ್ದು ಕರ್ನಾಟಕದ ಜಾನಪದ ಕಲೆ ಹಾಗು ಸಂಸೃತಿಗೆ ಸಂಬಂದ್ದಪಟ್ಟ ಸಣ್ಣ ವಸ್ತು ಸಂಗ್ರಹಾಲಯವನ್ನು ಇಲ್ಲಿ ನೋಡಬಹುದು.
- ಈ ಪ್ರದೇಶ ಬೆಟ್ಟಗಳಿಂದ ಸುತ್ತುವರಿದಿದ್ದು ಪರ್ವತಾರೋಹಣ ಪ್ರಿಯರಿಗೆ ಹೇಳಿ ಮಾಡಿಸಿದ ತಾಣವಾಗಿದೆ ಹಾಗೂ ಇದು ಈ ಪ್ರದೇಶದ ಪ್ರವಾಸೋದ್ಯಮಕ್ಕೂ ಆಸರೆಯಾಗಿದೆ. ರಾಮನಗರ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವುದರಿಂದ ಇಲ್ಲಿಗೆ ಈ ಎರಡೂ ನಗರಗಳಿಂದ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು.
ರಾಮನಗರ ಜಿಲ್ಲೆಯ ಕಲೆ
ರಾಮನಗರ ಜಿಲ್ಲೆಯು ವಿಶೇಷವಾಗಿ ಜಾನಪದ ಕಲೆಗೆ ಹೆಸರು ವಾಸಿಯಾದ ಜಿಲ್ಲೆ. ಇಲ್ಲಿ ಅನೇಕ ಪ್ರಕಾರದ ಜಾನಪದ ಕಲೆಗಳು ಅನಾವರಣಗೊಂಡಿವೆ. ಅದಕ್ಕಾಗಿಯೇ ವಿಶೇಷವಾಗಿ ಜಾನಪದ ಲೋಕವನ್ನು ಕಾಣಬಹುದು. ಜಾನಪದ ಕಲೆಗಳ ಸಂಗ್ರಹ ಇಲ್ಲಿದೆ. ಜಾನಪದ ಗಾಯನದಲ್ಲಿ ಬಾನಂದೂರು ಕೆಂಪಯ್ಯನವರು ಹೆಸರುವಾಸಿಯಾಗಿದ್ದಾರೆ. ಅನೇಕ ಹಳ್ಳಿಗಳಲ್ಲಿ ತಾಸು ಗಟ್ಟಲೆಯಲ್ಲದೆ, ದಿನಗಟ್ಟಲೆ ವಿವಿಧ ಕೆಲಸ ಕಾರ್ಯಗಳು, ಸಂಪ್ರದಾಯ ಆಚರಣೆಯ ಜಾನಪದ ವಿವಿಧ ಪ್ರಕಾರದ ಗೀತೆಗಳನ್ನು ಹಾಡುವ ಹಿರಿಯ ತಲೆಗಳು ಜಿಲ್ಲೆಯಲ್ಲಿವೆ.
ಶಾಸ್ತ್ರೀಯ ಸಂಗೀತ
ರಾಮನಗರ ಜಿಲ್ಲೆಯಲ್ಲಿ ಶಾಸ್ತ್ರೀಯ ಸಂಗೀತದ ಕೊರತೆ ಕಾಣುತ್ತದೆ. ಆದರೆ ಇತಿಹಾಸವನ್ನು ಕೆದಕಿದಾಗ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸಾತನೂರಿನ ಗ್ರಾಮದಲ್ಲಿ ಪುಂಡರೀಕ ವಿಠಲನೆಂಬ ಶ್ರೇಷ್ಠ ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕನಿದ್ದದ್ದು ತಿಳಿದುಬರುತ್ತದೆ. ಈತ ಅಕ್ಬರನ ಆಸ್ಥಾನದಲ್ಲಿ, ತಾನ್ ಸೇನನ ಸಮಕಾಲೀನನಾಗಿದ್ದನಂತೆ. ಈತ ಅಕ್ಬರನ ಬಿರುದಿನೊಂದಿಗೆ ಗೌರವಿಸಲ್ಪಟ್ಟವನೆಂದು ಹೇಳಲಾಗಿದೆ. ಇವನು ಆಗಿನ ಕಾಲಕ್ಕೆ ದಕ್ಷಿಣ ಭಾರತದ ಖ್ಯಾತ ಹಿಂದೂಸ್ಥಾನಿ ಗಾಯಕನಾಗಿದ್ದನೆಂದು ಸ್ಮರಿಸುತ್ತಾರೆ.
ಈಗಿನ ಪರಿಸ್ಥಿತಿ ನೋಡಿದಾಗ ಶಾಸ್ತ್ರೀಯ ಸಂಗೀತಕ್ಕೆ ಹೇಳಿ ಮಾಡಿಸಿದ ವಾತಾವರಣವಿಲ್ಲ. ರಾಮನಗರದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುವ ವಿದ್ವಾನ್ ನಾರಾಯಣ ಅಯ್ಯಂಗಾರ್ ಅವರ ಹೆಸರು ಕೇಳಿಬರುತ್ತದೆ. ಆದರೂ ಕನಕಪುರದ ಕವಿ, ಲೇಖಕ ಯೋಗ ರವೀಶ್ ಭಾರತ್ ರವರನ್ನು ಮದುವೆಯಾಗಿ ಬಂದಿರುವ ವಡವಾಟಿ ಶಾರದಾ ಭರತ್ ಈ ಜಿಲ್ಲೆಯ ಏಕೈಕ ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕರಾಗಿದ್ದರೆಂದು ಹೇಳಿದರೆ ತಪ್ಪಾಗಲಾರದು. ಶಾರದಾ ಕೇವಲ ಶಾಸ್ತ್ರೀಯ ಸಂಗೀತಕ್ಕೆ ಸೀಮಿತರಾಗದೆ ವಿಶೇಷವಾಗಿ ವಚನ ಸಂಗೀತ ಗಾಯನದಲ್ಲಿ ಹೆಸರು ಮಾಡಿರುವ ನಮ್ಮ ರಾಜ್ಯದ ಖ್ಯಾತ ಗಾಯಕರು. ಇವರು ಹಾಡುವ ವಚನ ಸಂಗೀತ ಗಾಯನ ಕೇಳಲು ಮಧುರವಾಗಿರುವುದಷ್ಟೇ ಅಲ್ಲದೆ, ವಿಶೇಷವಾದ ವಚನ ಗಾಯನದ ಪರಂಪರೆಯನ್ನು ಪರಿಚಯಿಸುತ್ತದೆ. ಈ ನಿಟ್ಟಿನಲ್ಲಿ ಅವರು ಆಕಾಶವಾಣಿ ಮತ್ತು ದೂರದರ್ಶನದ "ಎ" ಗ್ರೇಡ್ ಕಲಾವಿದರಾಗಿದ್ದಾರೆ. ಆಕಾಶವಾಣಿ ಸಂಗೀತ ಸಮ್ಮೇಳನದಲ್ಲಿ ಕಾರ್ಯಕ್ರಮ ನೀಡಿದ ಜಿಲ್ಲೆಯ ಮೊದಲ ಗಾಯಕರಾಗಿದ್ದಾರೆ. ಆಕಾಶವಾಣಿ ಸಂಗೀತ ಸಮ್ಮೇಳನದಲ್ಲಿ ದೇವರ ನಾಮದಲ್ಲಿ ವಚನ ಗಾಯನ ಹಾಡಿದ ಭಾರತದ ಮೊದಲ ಗಾಯಕರು ಎಂಬ ಕೀರ್ತಿಗೆ ವಡವಾಟಿ ಶಾರದಾ ಭರತ್ ಪಾತ್ರರಾಗಿದ್ದಾರೆ. 2016ರ ಸೆಪ್ಟಂಬರ್ 24ರಂದು ಮೊದಲ ಬಾರಿಗೆ ಗುಲ್ಬರ್ಗಾದ ಡಾ. ಎಸ್, ಎಂ. ಪಂಡಿತ್ ರಂಗ ಮಂದಿರದಲ್ಲಿ ನಡೆಯಿತು. ಈ ಕಾರ್ಯಕ್ರಮವು 29.11.2016ರ ಮಂಗಳವಾರ ರಾತ್ರಿ 10 ಗಂಟೆಗೆ ಭಾರತದ ಎಲ್ಲಾ ಬಾನುಲಿ ಕೇಂದ್ರಗಳಿಂದ ಏಕ ಕಾಲದಲ್ಲಿ ಪ್ರಸಾರವಾಯಿತು. 3.12.2016 ರಂದು ಚಂದನವಾಹಿನಿಯಲ್ಲಿ ಬೆಳಿಗ್ಗೆ ಹಾಗೂ ರಾತ್ರಿ 10.30 ಗಂಟೆಗೆ ಪ್ರಸಾರವಾಯಿತು. ಇವರು ಸರ್ಕಾರದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ರಾಮನಗರ ಜಿಲ್ಲೆಯ ಪ್ರಪ್ರಥಮ ಸದಸ್ಯರಾಗಿ 2014ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವತಿಯಿಂದ ಇವರ ಅವಧಿಯಲ್ಲಿ 21ನೇ ಫ಼ೆಬ್ರವರಿ 2015ರಲ್ಲಿ ರಾಮನಗರ ಜಿಲ್ಲೆಯ ಪ್ರಪ್ರಥಮ ಜಿಲ್ಲಾ ಸಂಗೀತ ನೃತ್ಯೋತ್ಸವವು ನಡೆದಿದೆ. 16 ಮಾರ್ಚ್ 2016ರಲ್ಲಿ ಜಿಲ್ಲೆಯ ಪ್ರಪ್ರಥಮ ಜಿಲ್ಲಾ ಯುವ ಸಂಗೀತ ನೃತ್ಯೋತ್ಸವವು ಜರುಗಿದೆ.ಪ್ರಥಮ ನಮ್ಮ ಸಾಧಕರು ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಪ್ರಪ್ರಥಮ ಬಾರಿಗೆ ಸರ್ಕಾರದ ವತಿಯಿಂದ ಜಿಲ್ಲೆಯಲ್ಲಿ 19.11.2016ರಂದು ಗಂಗೋತ್ಸವ ಹಾಗೂ ರೇಷ್ಮೆ ನಾಡ ಜಿಲ್ಲಾ ಸಂಗೀತ ನೃತ್ಯೋತ್ಸವವನ್ನು ಆಯೋಜಿಸಿದ ಕೀರ್ತಿ ವಡವಾಟಿ ಶಾರದಾ ಭರತ್ ಅವರಿಗೆ ಸಲ್ಲುತ್ತದೆ.
ಇತ್ತೀಚಿನ ಒಳ್ಳೆ ಬೆಳವಣಿಗೆಯೆಂದರೆ ಭರತನಾಟ್ಯಕ್ಕೆ ಪ್ರೋತ್ಸಾಹ ದೊರಕುತ್ತಿರುವುದು. ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿಯ ಎಲ್ಲಾ ತಾಲ್ಲೂಕುಗಳಲ್ಲೂ ಭರತ ನಾಟ್ಯ ಕಲಿಸುತ್ತಿರುವವರು ಹೆಚ್ಚಾಗುತ್ತಿರುವುದರಿಂದ ಭರತನಾಟ್ಯ ಕಲಾವಿದರು ಸೃಷ್ಟಿಯಾಗುತ್ತಿದ್ದಾರೆ. ಕಲೆಯ ಅಭಿವೃದ್ಧಿ ದೃಷ್ತಿಯಿಂದ ಇದೊಂದು ಒಳ್ಳೆಯ ಬೆಳವಣಿಗೆಯಾಗಿದೆ.
- ರಾಮನಗರದ ಮಾಯಗಾನಹಳ್ಳಿಯ ಬಳಿಯ ಒಂದು ಸುಂದರ ತೋಟದಲ್ಲಿ ತೆಗೆದ ಚಿತ್ರ
- ರಾಮನಗರ ರೇಷ್ಮೆ ಗೂಡಿನ ಮಾರುಕಟ್ಟೆ
- ರಾಮದೇವರ ಬೆಟ್ಟದಿಂದ ರಾಮನಗರದ ನೋಟ
- ಕ್ಲೋಸ್ಪೆಟ್ ಗ್ರಾನೈಟ್ ಗಳ ಹರಡಿರುವಿಕೆ
- ಪ್ರಣಯಾಚರಣೆಯಲ್ಲಿರುವ ಉದ್ದ ಕೊಕ್ಕಿನ ರಣಹದ್ದುಗಳು
- ಉದ್ದ ಕೊಕ್ಕಿನ ರಣಹದ್ದು
- ಈಜಿಪ್ಟಿನ ರಣಹದ್ದು
ಹೆಚ್ಚಿನ ಮಾಹಿತಿ
- ರಾಮನಗರದ ಇತಿಹಾಸ:ರಾಮನಗರದ ಇತಿಹಾಸ -- ಸಂಪತ್. ಎಸ್;d: 06 ಜನವರಿ 2020,