ಮಂಡ್ಯ

ಮಂಡ್ಯ ಕರ್ನಾಟಕದ ಒಂದು ಜಿಲ್ಲೆ - ಮಂಡ್ಯ ಜಿಲ್ಲೆಯ ಜಿಲ್ಲಾ ಕೇಂದ್ರಸ್ಥಳ ಮಂಡ್ಯ ನಗರ. ಮಂಡ್ಯ ಎಂಬ ಹೆಸರು 'ಮಾಂಡವ್ಯ ಋಷಿ'ಯಿಂದ ಬಂದದ್ದೆಂದು ಹೇಳಲಾಗುತ್ತದೆ. ಮಂಡ್ಯವು ಮೈಸೂರು ಮತ್ತು ಬೆಂಗಳೂರುನಗರಗಳ ಮಧ್ಯದಲ್ಲಿದ್ದು ಬೆಂಗಳೂರಿನಿಂದ ಸುಮಾರು ೧೦೦ ಕಿಮೀ ದೂರದಲ್ಲಿದೆ. ಮಂಡ್ಯ ಜಿಲ್ಲೆಯ ಒಟ್ಟು ವಿಸ್ತೀರ್ಣ ೪೮೫೦ ಚ. ಕಿಮೀ. ೨೦೧೧ ರ ಜನಗಣತಿಯಂತೆ ಇಲ್ಲಿನ ಜನಸಂಖ್ಯೆ ೧೭,೬೧,೭೧೮(೮೮೭೩೦೭ ಪುರುಷರು, ೮೭೪೪೧೧ ಮಹಿಳೆಯರು). ಇಲ್ಲಿಯ ಜನರ ಪ್ರಮುಖ ಕಸುಬು ಕೃಷಿ. ಜಿಲ್ಲೆಯ ಪ್ರಮುಖ ಬೆಳೆ ಕಬ್ಬು ಹಾಗೂ ಭತ್ತ. ಇಲ್ಲಿನ ಜನರು ನೇರ ನುಡಿಗೆ, ಹೃದಯವಂತಿಕೆಗೆ ಹೆಸರಾದವರು. ಮಂಡ್ಯ ನಗರವು ೭೬° ೧೯' ಮತ್ತು ೭೭° ೨೦' ಪೂರ್ವ ರೇಖಾಂಶ ಮತ್ತು ೧೨° ೧೩' ಮತ್ತು ೧೩° ೦೪' ಉತ್ತರ ಅಕ್ಷಾಂಶಗಳಲ್ಲಿನಿರ್ದೇಶಿತವಾಗಿದೆ ಬಿ ಹೊಸೂರು ಮಂಡ್ಯ ೫೭೧೪೦೨
ಟೀ ಮಲ್ಲಿಗೆರೆ ಗ್ರಾಮ ತಗ್ಗಹಳ್ಳಿ ಪೋಸ್ಟ್ ಮಂಡ್ಯ ತಾಲೂಕು ಮಂಡ್ಯ ಡಿಸ್ಟಿಕ್ಟ್ ೫೭೨೪೦೫

ಮಂಡ್ಯ

ಮಂಡ್ಯ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಮಂಡ್ಯ
ನಿರ್ದೇಶಾಂಕಗಳು 12.52° N 76.9° E
ವಿಸ್ತಾರ
 - ಎತ್ತರ
17.03 km²
 - 678 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೧೩೧೨೧೧
 - /ಚದರ ಕಿ.ಮಿ.
Deputy Commissioner B N Krishnaiah IAS [1]
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 571401
 - +08232
 - KA 11
ಅಂತರ್ಜಾಲ ತಾಣ: www.mandya.nic.in/

ಮಂಡ್ಯದ ಜನತೆ

ನಿಷ್ಕಲ್ಮಶ ಮನಸ್ಸು, ಪ್ರೀತಿ, ಸ್ನೇಹ, ಬಾಂಧವ್ಯ, ಸಂಸ್ಕಾರ ಸಂಪ್ರದಾಯಕ್ಕೆ ಮತ್ತೊಂದು ಹೆಸರು ಮಂಡ್ಯದ ಜನತೆ.

ಮಂಡ್ಯದ ಜನರು ದಾನ ಧರ್ಮಕ್ಕೆ ಹೆಸರುವಾಸಿ ,ಹಾಗೂ ದೇಹಿ ಎಂದು ಬಂದವರಿಗೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಾರೆ,ಮಾನವೇ ತಮ್ಮ ಪ್ರಾಣ ಎಂದುಕೊಂಡು ಬದುಕುತ್ತಿದ್ದಾರೆ

ಇಲ್ಲಿ ಒಕ್ಕಲಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ

ಸ್ನಾತಕೋತ್ತರ ಕೇಂದ್ರಗಳು

  • ಸರ್ ಎಂ ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ .ತೂಬಿನಕೆರೆ . ಈ ಕಾಲೇಜು ಮಂಡ್ಯ ನಗರದಿಂದ ಎಂಟು ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ವ್ಯಾಸಂಗ ಮಾಡಲು ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುತ್ತಾರೆ. ಈ ಕಾಲೇಜಿನ ಸುತ್ತಮುತ್ತ ಉತ್ತಮ ಪರಿಸರ ಹೊಂದಿದೆ


  • ಪಿಇಎಸ್ ಸ್ನಾತಕೋತ್ತರ ಕೇಂದ್ರ ಮಂಡ್ಯ. ಈ ಕಾಲೇಜು ಮಂಡ್ಯದ ನಗರದ ಒಳಗೆ ಇದೆ. ಇದು ಒಂದು ಖಾಸಗಿ ಶಿಕ್ಷಣ ಸಂಸ್ಥೆ ಯಾಗಿದ್ದು, ಇಲ್ಲಿ ವ್ಯಾಸಂಗ ಮಾಡಲು ಉತ್ತಮ ಸೌಕರ್ಯಗಳನ್ನು ಒದಗಿಸುತ್ತಾರೆ
  • ಮೆಡಿಕಲ್ ಕಾಲೇಜು

ತಾಣಗಳು

  • ನಾಗಮಂಗಲ ತಾಲೂಕಿನ ವ್ಯಾಪ್ತಿಯಲ್ಲಿ ಬರುವ 'ಮಗೋಪು' ಬರ್ತ್ ಪ್ಲೇಸ್ ತುಂಬಾ ಪ್ರಸಿದ್ಧವಾದ ಜಾಗ ಮದ್ದೇನಹಟ್ಟಿ

[ಫ್ಯಾಕ್ಟರಿ ವೃತ್ತ ]][ಸಕ್ಕರೆ ನಾಡು] ವಾಡೆ ಮಲ್ಲೇಶ್ವರ ಸ್ವಾಮಿ ದೇವಾಲಯ, ಕುಂತೂರು ಅಭಯ ಆಂಜನೇಯ ದೇವಾಲಯ ಕುಂತೂರು(ಹಲಗೂರು ಚನ್ನಪಟ್ಟಣ ರಸ್ತೆ) ಸೋಮೇಶ್ವರ ದೇವಾಸ್ಥಾನ ಕೀಲಾರ (ಮಂಡ್ಯ ದಿಂದ ೧೨ ಕಿಮೀ} ಬಸವನ ಬೆಟ್ಟ

  • ಮಂಡ್ಯದ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಮಂಡ್ಯ
  • ಎಳನೀರು ಮಾರುಕಟ್ಟೆ[ಹೆಚ್.ಕೆ.ವಿ ನಗರ ಮದ್ದೂರು]
  • ಉಗ್ರನರಸಿಂಹ ಸ್ವಾಮಿ ದೇವಸ್ಥಾನ ಮದ್ದೂರು
  • [ಮದ್ದೂರಮ್ಮ ದೇವಾಲಯ ಮದ್ದೂರು]]
  • ಶ್ರೀ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನ ಮದ್ದೂರು
  • ಕೃಷ್ಣರಾಜಸಾಗರ ಅಣೆಕಟ್ಟು ಮತ್ತು ಬೃಂದಾವನ ಉದ್ಯಾನ
  • ಶ್ರೀರಂಗಪಟ್ಟಣ
  • ಮೇಲುಕೋಟೆ ಐತಿಹಾಸಿಕ ಕ್ಷೇತ್ರ, ಚೆಲುವ ನಾರಾಯಣ ಸ್ವಾಮಿ ದೇವಾಲಯ, ಯೋಗಾನರಸಿಂಹ ಸ್ವಾಮಿ ದೇವಾಲಯ
  • ಕುಂತಿಬೆಟ್ಟಬೇಬಿ ಬೆಟ್ಟ ಪಾಂಡವಪುರ
  • ರಂಗನತಿಟ್ಟು ಪಕ್ಷಿಧಾಮ ಶೀರಂಗಪಟ್ಟಣ
  • ಕೊಕ್ಕರೆ ಬೆಳ್ಳೂರು ಪಕ್ಷಿಧಾಮ ಮದ್ದೂರು
  • ಹರವು ಶ್ರೀ ರಾಮ ದೇವರ ಪ್ರಾಚೀನ ಸ್ಮಾರಕ, ಕ್ರಿ.ಶ ೧೩೬೯ ರಲ್ಲಿ, ವಿಜಯನಗರದ ಮೊದಲನೆ ದೊರೆ, ವೀರ ಬುಕ್ಕಣ್ಣ ಒಡೆಯರ್​ ನಿರ್ಮಿಸಿದರು.
  • ಸೋಮನಳ್ಳಮ್ಮ ದೇವಸ್ಥಾನ
  • ಹನುಮಂತನಗರ ಆತ್ಮಲಿಂಗೆಶ್ವರ ದೇವಾಲಯ ಹಾಗೂ ಉದ್ಯಾನವನ.ಈ ದೇವಾಲಯವು ಭಾರತಿ ನಗರದಿಂದ(ಕೆ.ಎಮ್.ದೊಡ್ಡಿಯಿಂದ) ೩ ಕಿ.ಮಿ. ದೂರದಲ್ಲಿದೆ.
  • ಹೊಸಹೊಳಲು ದೇವಸ್ಥಾನ
  • ವೇಣುಗೋಪಾಲ ಸ್ವಾಮಿ ದೇವಾಲಯ ಹೊಸಕನ್ನಂಬಾಡಿ
  • ಕರಿಘಟ್ಟ ಶ್ರೀ ವೆಂಕಟೇಶ್ವರ ದೇವಾಲಯ,ಈ ಗಿರಿಧಾಮವು ಲೋಕಪಾವನಿ ನದಿಯ ತೀರದಲ್ಲಿದೆ
  • ಮುಳ್ಳಕಟ್ಟೆ ದೇವಸ್ಥಾನ
  • ಸೋಮನಾಥಪುರ ದೇವಸ್ಥಾನ
  • ಶಿವನ ಸಮುದ್ರ ಜಲಪಾತ (ಗಗನ ಚುಕ್ಕಿ ಮತ್ತು ಭರಚುಕ್ಕಿ)
  • ಶ್ರೀ ಆದಿಚುಂಚನಗಿರಿ ಶ್ರೀಕ್ಷೇತ್ರ
  • ಮುತ್ತತ್ತಿ ಕಾವೇರಿ ನದಿ ದಡದ ಪುಣ್ಯ
  • ಭೀಮೇಶ್ವರಿ
  • ಶಿವಪುರದ ಸತ್ಯಗ್ರಹ ಸೌಧ ಮದ್ದೂರು
  • ಕೆರೆ ತೊಣ್ಣೂರು
  • ಶ್ರೀರಂಗನಾಥ ಸ್ವಾಮಿ ದೇವಾಲಯ ಶ್ರೀರಂಗಪಟ್ಟಣ
  • ಕೆರಗೋಡು ಪಂಚಲಿಂಗೇಶ್ವರ ದೇವಸ್ಥಾನ
  • ಬಸರಾಳು ಮಾಧವರಾಯ ದೇವಸ್ಥಾನ (೧೨೪೮ ಇಸ್ವಿಯ ಪ್ರಾಚೀನ ದೇವಾಲಯ)
  • ನಿಮಿಷಾಂಭ ದೇವಸ್ಥಾನ ಗಂಜಾಂ ಶ್ರೀರಂಗಪಟ್ಟಣ
  • ವೈದ್ಯನಾಥಪುರ ವೈದ್ಯನಾಥೇಶ್ವರ ಸ್ವಾಮಿಯ ಪ್ರಸಿದ್ಧ ಯಾತ್ರಾಸ್ಥಳ
  • ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಆಲೂರು
  • ಶ್ರೀ ಬೀರೇಶ್ವರ ದೇವಸ್ಥಾನ ಆಲೂರು-ನೀಲಕಂಠನಹಳ್ಳಿ
  • ಮಾಯಮ್ಮ ದೇವಸ್ಥಾನ ನೀಲಕಂಠನಹಳ್ಳಿ*(ಬೊಮ್ಮಲಿಂಗೇಶ್ವರ,ಬಸವೇಶ್ವರ, ವೀರಭದ್ರೇಶ್ವರ,ರಾಕಸಮ್ಮ)
  • [[ಸುಜ್ಜಲೂರಿನ ಮಾರಮ್ಮ ದೇವಸ್ಥಾನ|ಸುಜ್ಜಲೂರಿನ ಮಾರಮ್ಮ ದೇವಸ್ಥಾನ, ಸೋಮೇಶ್ವರಲಿಂಗ,ಗಂಗರ ಕಾಲದ ಏರಿಲಿಂಗಸ್ವಾಮಿ ದೇವಸ್ಥಾನ[ಈಗ ನವೀಕರಿಸಲಾಗಿದೆ],ಕೆ ಎನ್ ನಾಗೇಗೌಡರ ಕಾಲದ ಮೇಸಂದ್ರಿ[ದೊಡ್ಡಕೆರೆಯ ಕೋಡಿಕಟ್ಟೆ]
  • ದೇವರ ಮನೆ ಮೂಡಿಗೆರೆ, ಕಾಲಭೈರವೇಶ್ವರ
  • ನಂಬಿನಾಯಕನಹಳ್ಳಿ .ಪಟ್ಟಲದಮ್ಮನ ದೇವಾಲಯ.
  • ಗೋವಿಂದನಹಳ್ಳಿ ಪಂಚಲಿಂಗೇಶ್ವರ ದೇವಸ್ಥಾನ
  • ವರಹನಾಥ ಕಲ್ಲಹಳ್ಳಿ ಲಕ್ಶ್ಮೀ ಭೂವರಹನಾಥ ಸ್ವಾಮಿ ದೇವಸ್ಥಾನ ಕೃಷ್ಣರಾಜಪೇಟೆ
  • ಹೇಮಗಿರಿ ಜಲಪಾತ
  • ಕೌಡ್ಲೆ: ಕೌಡ್ಲೆ ಪಟ್ಟಲದಮ್ಮ ದೇವಿ ದೇವಾಲಯ, ಚೆನ್ನಕೇಶವಸ್ವಾಮಿ ದೇವಾಲಯ, ತೋರಳಮ್ಮ ದೇವಾಲಯ, ಈಶ್ವರ ದೇವಾಲಯ
    • ಮಲ್ಲೇನಹಳ್ಳಿ ಗ್ರಾಮದ ಶ್ರೀ ಹುರಿಗೆಜ್ಜೆ ಬಸವೇಶ್ವರ ಸ್ವಾಮಿ ದೇವಸ್ಥಾನ ಮತ್ತು ಮಲ್ಲೇಶ್ವರ ದೇವಸ್ಥಾನ ಮಂಡ್ಯ ತಾಲ್ಲೂಕು ದುದ್ದ ಹೋಬಳಿ ಮಂಡ್ಯದಿಂದ 17ಕಿ.ಮೀ ದೂರವಿದೆ ***
  • ಮಂಡ್ಯ ಕೊಪ್ಪಲು: ಕಾವೇರಿ ಬೋರೇದೇವರ ದೇವಸ್ಥಾನ,ಮಂಡ್ಯ ಕೊಪ್ಪಲು
  • ಕಾಡುಕೊತ್ತನಹಳ್ಳಿ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯ, ನೂರಾರು ವರ್ಷಗಳ ಇತಿಹಾಸ ಇದೆ.ಮದ್ದೂರು ತಾಲೂಕ್ , ಕೆ.ಎಮ್ ದೊಡ್ಡಿ ಇಂದ 8 ಕಿ ಮಿ ದೂರದಲ್ಲಿದೆ.
  • ಮುತ್ತೇಗೆರೆ: ಪಟ್ಟಲದಮ್ಮ ದೇವಸ್ಥಾನ ,ಮಾಯಮ್ಮ ದೇವಸ್ಥಾನ ಮಂಡ್ಯದಿಂದ ೨೫ ಕಿ.ಮೀ. ದೂರದಲ್ಲಿದೆ
  • ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ಯಲಿಯೂರು,ಮಂಡ್ಯ ತಾಲ್ಲೊಕ್, ಮಂಡ್ಯದಿಂದ 10 ಕಿ.ಮೀ. ದೂರದಲ್ಲಿದೆ ಹಾಗೂ ಯಲಿಯೂರು ರೈಲ್ವೆ ನಿಲ್ದಾಣದಿಂದ 1 ಕಿ.ಮೀ. ದೂರದಲ್ಲಿದೆ
  • ಹುನುಗನಹಳ್ಳಿ:ಶ್ರೀ ಶನೀಶ್ವರಸ್ವಾಮಿ ದೇವಾಲಯ ಮಂಡ್ಯದಿಂದ ೨೪ ಕಿ.ಮೀ. ದೂರದಲ್ಲಿದೆ,
  • ಎಮ್.ಹ‍‍ಟ್ಣ:ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಮಂಡ್ಯದಿಂದ ೨೪ ಕಿ.ಮೀ. ದೂರದಲ್ಲಿದೆ
  • ಚೋಕನಹಳ್ಳಿ ಶ್ರೀ ದಳವಾಯೀ ಬೀರೇಶ್ವರ ದೇವಾಲಯ,ಚೋಕನಹಳ್ಳಿ. ಮಂಡ್ಯದಿಂದ ಶಿವಳ್ಳಿ ಮಾರ್ಗ
  • ಮಲ್ಲನಕುಪ್ಪೆ: ಶಕ್ತಿ ದೇವತೆ ಶ್ರೀ ದಂಡಿನೇಶ್ವರಿ ದೇವಸ್ಥಾನ, ಆತ್ಗೂರು ಹೋಬಳಿ, ಮದ್ದೂರು ತಾಲ್ಲೋಕ್,
  • ಕುರುಬರ ಬಸ್ತಿ ೧೯ ಅಡಿಯ ಜೈನ ಮಂದಿರ ಬಾಹುಬಲಿ ವಿಗ್ರಹ ಕೃಷ್ಣರಾಜಪೇಟೆ
  • ಬೆಟ್ಟದ ರಂಗನಾಥಸ್ವಾಮಿ ದೇವಸ್ಥಾನ ಬೆಟ್ಟದ ಹೊಸೂರು ಕೃಷ್ಣರಾಜಪೇಟೆ

ತಾಲ್ಲೂಕುಗಳು

ಮಂಡ್ಯ ತಾಲ್ಲೂಕಿನ ಪ್ರಮುಖ ಗ್ರಾಮಗಳು‍

ಚಿಕ್ಕಮಂಡ್ಯ, ಮಾರಗೌಡನಹಳ್ಳಿ.ಈಚಗೆರೆ, ಚೋಕನಹಳ್ಳಿ, kommerahalli ಕೀಲಾರ (ಕಲೆಯ ತವರೂರು & ನಿತ್ಯ ಸಚಿವ ಕೆ.ವಿ. ಶಂಕರೇಗೌಡರ ಹುಟ್ಟೂರು), ಎಚ್.ಮಲ್ಲಿಗೆರೆ, ಹುಲಿವಾನ, ಹನಕೆರೆ,ಹೊನಗಳ್ಳಿಮಠ, ಕಚ್ಚಿಗೆರೆ,ಚನ್ನಕ್ಕೇಗೌಡನ ದೊಡ್ಡಿ,,ಬಿ.ಗೌಡಗೆರೆ, ಗೆಜ್ಜಲಗೆರೆ, ಶ್ರೀನಿವಾಸಪುರ, ಸಂತೆಕಸಲಗೆರೆ,ಕೊತ್ತತ್ತಿ,ಭೂತನಹೊಸೂರು,ತಗ್ಗಹಳ್ಳಿ, ಶಿವಳ್ಳಿ, ವಿ ಸಿ ಫಾರ್ಮ್, ಹುಳ್ಳೇನಹಳ್ಳಿ, ಗಾಣದಾಳು, ಹೊಳಲು, ಕನ್ನಲಿ, ಗೋಪಾಲಪುರ, ಸಾತನೂರು, ಉಮ್ಮಡಹಳ್ಳಿ, ಬೂದನೂರು, ಚಂದಗಾಲು, ದುದ್ದ, ತೂಬಿನಕೆರೆ, ಯಲಿಯೂರು, ಇಂಡವಾಳು, ಸೂನಗಹಳ್ಳಿ ಮಂಗಲ, ಶಿವಪುರ, ಬಸರಾಳು, ಜಿ.ಮಲ್ಲಿಗೆರೆ, ಮುತ್ತೇಗೆರೆ,ಎಮ್.ಹ‍‍ಟ್ಣ, ಹಲ್ಲೇಗೆರೆ, ದೊಡ್ಡಗರುಡನಹಳ್ಳಿ, ಕೆರಗೋಡು, ಆಲಕೆರೆ, ಡಣಾಯ೦ಕನಪುರ , ಉಪ್ಪುರುಕನಹಳ್ಳಿ, ಮುದಗಂದೂರು, ಬೇವುಕಲ್ಲು, ಬಿ.ಹೊಸೂರು, ಹೊಡಾಘಟ್ಟ,, ಪಣಕನಹಳ್ಳಿ, ಕಬ್ಬನಹಳ್ಳಿ, ಹೆಮ್ಮಿಗೆ, ಹಳೆಬೂದನೂರು, ಬೇಲೂರು, ಎರಹಳ್ಳಿ, ಕಾಗೇಹಳ್ಳದ ದೊಡ್ಡಿ, ಗುತ್ತಲು, ಯತ್ತಗದಹಳ್ಳಿ, ಕುರುಬರದೊಡ್ಡಿ, ಮುದು೦ಗೆರೆ,ಬೇವುಕಲ್ ಹ‍‍ಟ್ಣ. ಎಂ.ಮಲ್ಲೇನಹಳ್ಳಿ ಹುಲಿಕೆರೆ ಹನಗನಹಳ್ಳಿ, ಮೊತ್ತಹಳ್ಳಿ

ಕೃಷ್ಣರಾಜಪೇಟೆ ತಾಲ್ಲೂಕಿನ ಪ್ರಮುಖ ಗ್ರಾಮಗಳು‍

ಹೊಸಹೊಳಲು, ಬೂಕನಕೆರೆ (ಬಿ ಎಸ್ ಯಡಿಯೂರಪ್ಪ ಅವರು ಹುಟ್ಟೂರು), ಕಿಕ್ಕೇರಿ, ಹರಿಹರಪುರ, ರಾಜೇನಹಳ್ಳಿ, ಬಲ್ಲೇನಹಳ್ಳಿ, ಗಂಜಿಗೆರೆ, ಮುದುಗೆರೆ, ಮಾವಿನಕೆರೆ, ಸೋಮನಹಳ್ಳಿ, ಸಿಂಧಘಟ್ಟ, ವಿಠಲಾಪುರ, ಐಚನಹಳ್ಳಿ, ಮುರುಕನಹಳ್ಳಿ, ಗೋವಿಂದನ ಹಳ್ಳಿ, ಭೂವರಹನಾಥ ಕಲ್ಲಹಳ್ಳಿ, ಬೆಟ್ಟದ ಹೊಸೂರು,

=== ಮದ್ದೂರು ತಾಲ್ಲೂಕಿನ ಪ್ರಮುಖ ಗ್ರಾಮಗಳು‍ === ಬಿದರಕೋಟೇ ಮಾರಸಿ೦ಗನಹಳ್ಳಿ , ಬೆಸಗರಹಳ್ಳಿ, ಬೆಸಗರಹಳ್ಳಿ ಅಡ್ಡರಸ್ತೆ , ಮಾದರಹಳ್ಳಿ,ವಳಗೆರೆಹಳ್ಳಿ,ಚನ್ನೆಗೌಡನದೋಡ್ಡಿ(ಹೆಚ್.ಕೆ.ವಿ.ನಗರ)' ಎಸ್.ಐ.ಹೊನ್ನಲಗೆರೆ,ವಳಗೆರೆಹಳ್ಳಿ, ಕೊಕ್ಕರೆಬೆಳ್ಳೂರು, ಚಿಕ್ಕರಸಿನಕೆರೆ, ದೊಡ್ಡರಸಿನಕೆರೆ, ಮೆಣಸಗೆರೆ, ಕೆ.ಎಂ.ದೊಡ್ಡಿ, ಆತಗೂರು, ನಿಢಗಟ್ಟ, ಹೆಮ್ಮನಹಳ್ಳಿ , ಕೊಪ್ಪ, ರಾ೦ಪುರ , ಹೊ೦ಬಾಳೆಗೌಡನ ದೊಡ್ಡಿ , ಮುಡೀನಹಳ್ಳಿ,ವಳಗೆರೆಹಳ್ಳಿ, ಗೊರವನಹಳ್ಳಿ, ವೈದ್ಯನಾಥಪುರ, ನೀಲಕಂಠನ ಹಳ್ಳಿ, ಆಲೂರು, ಕೆ.ಹೊನ್ನಲಗೆರೆ,ಚುಂಚಗಹಳ್ಳಿ, ಕಬ್ಬಾರೆ,ಕೊಕ್ಕರೆ ಬೆಳ್ಳೂರು, ಹುಲಿಕೆರೆ,ಹಳ್ಳಿಕೆರೆ, ನಂಬಿನಾಯಕನಹಳ್ಳಿ , ಸಾದೊಳಲು, ನಗರಕೆರೆ, ಅರಳಕುಪ್ಪೆ, ಕೂಳಗೆರೆ, ತೊರೆ ಬೊಮ್ಮನಹಳ್ಳಿ, ಅಣ್ಣೂರು, ಕೌಡ್ಲೆ, ಬೆಕ್ಕಳಲೆ, ಕಿರಂಗೂರು, ಹೊಸಗಾವಿ, ಧರಮನ ಕಟ್ಟೆ, ಕಾಡುಕೊತ್ತನಹಳ್ಳಿ, ಆಬಲವಾಡಿ, ದೇಶಹಳ್ಳಿ, ಶ೦ಕರಪುರ , ಚಾಪುರದೊಡ್ಡಿ , ಚಾಮನಹಳ್ಳಿ, ಮರಳಿಗ, ಗೆಜ್ಜಲಗೆರೆ, ಕದಲೂರು, ಸೋಮನಹಳ್ಳಿ, ಅರುವನಹಳ್ಳಿ, ಹುಳಗನಹಳ್ಳಿ,ಹೊನ್ನಾಯಕ್ಕನಹಳ್ಳಿ, ಅಂಬರಹಳ್ಳಿ ,ಕೆ.ಕೊಡಿಹಳ್ಳಿ , ಶಿವಪುರ. ತೋರೆಶೆಟ್ಟಹಳ್ಳಿ, ಮಲ್ಲನಕುಪ್ಪೆ, ಹನುಮಂತನಗರ, ನಾಗನದೊಡ್ಡಿ ,ಕಣಿಕೆಂಪನ ದೊಡ್ಡಿ, ಮುಳ್ಳಹಳ್ಳಿ ,ನಿಲುವಾಗಿಲು ,ಕೋಡಿಹಳ್ಳಿ ,ದೇವೇಗೌಡನದೊಡ್ಡಿ,ಬನ್ನಹಳ್ಳಿ ಕೂಳಗೆರೆ

ಪಾಂಡವಪುರ ತಾಲ್ಲೂಕಿನ ಪ್ರಮುಖ ಗ್ರಾಮಗಳು

ಮೇಲುಕೋಟೆ (ಚಲುವನಾರಯಣಸ್ವಾಮಿ ಸನ್ನಿಧಿ), ಹರವು(ಶ್ರೀ ರಾಮ ದೇವರ ಪ್ರಾಚೀನ ಸ್ಮಾರಕ, ಕ್ರಿ.ಶ ೧೩೬೯ ರಲ್ಲಿ, ವಿಜಯನಗರದ ಮೊದಲನೆ ದೊರೆ, ವೀರ ಬುಕ್ಕಣ್ಣ ಒಡೆಯರ್​ ನಿರ್ಮಿಸಿದರು) , ನರಹಳ್ಳಿ, ಡಿಂಕಾ, ಬೇಬಿಗ್ರಾಮ, ಕಟ್ಟೇರಿ, ಅರಳಕುಪ್ಪೆ, ಮಾಣಿಕ್ಯನಹಳ್ಳಿ, ನಾರಾಯಣಪುರ, ಹೊನಗಾನಹಳ್ಳಿ, ಹಿರಿಮರಳಿ, ಗುಮ್ಮನಹಳ್ಳಿ, ಕೆನ್ನಾಳು, ಬೊಳೆನಹಳ್ಳಿ, ಮೆನಾಗ್ರ, ಮೂಡಲಕೊಪ್ಪಲು, ಶಂಬೂನಹಳ್ಳಿ, ಕೆ.ಬೆಟ್ಟಹಳ್ಳಿ, ಚಿನಕುರುಳಿ (ಸಿ.ಎಸ್. ಪುಟ್ಟರಾಜು) , ಜಕ್ಕನಹಳ್ಳಿ, ಕ್ಯಾತನಹಳ್ಳಿ (ಕೆ.ಎಸ್. ಪುಟ್ಟಣ್ಣಯ್ಯ), ಚೀಕನಹಳ್ಳಿ, ಸುಂಕಾತೊಣ್ಣೂರು, ಚಿಕ್ಕಾಡೆ, ಹಳೇಬೀಡು, ಟಿ.ಎಸ್.ಛತ್ರ, ಇಂಗಲಗುಪ್ಪೆ(ಇ.ಎಸ್. ವೆಂಕಟರಾಮಯ್ಯ), ಕನಗನಮರಡಿ, ಲಕ್ಷ್ಮೀಸಾಗರ(ಸೋಬಾನೆ ಕೃಷ್ಣೇಗೌಡರು - ಕಲಾವಿದ ಪ್ರತಾಪ್.ಲವೆಂಪ್ರ), ಹೊಸಕನ್ನಂಬಾಡಿ, ಬಸ್ತಿಹಳ್ಳಿ , ಬನ್ನಂಗಾಡಿ, ಬೇವಿನಕುಪ್ಪೆ, ಬಳ್ಳೆಹತ್ತಿಗುಪೆ, ಬಳಘಟ್ಟ, ಹೆಗ್ಗಡಹಳ್ಳಿ, ರಾಗಿಮುದ್ದನನಹಳ್ಳಿ, ಪಟ್ಟಸೋಮನಹಳ್ಳಿ, ನರಹಳ್ಳಿ, ಮಹದೇಶ್ವರಪುರ, ತೊಣ್ಣೂರು ಕೆರೆ (ನಂಬಿ ನಾರಾಯಣ ಸ್ವಾಮಿ ಐತಿಹಾಸಿಕ ದೇವಾಲಯ).ಅರಕನಕೆರೆ.

ಮಳವಳ್ಳಿ ತಾಲ್ಲೂಕಿನ ಪ್ರಮುಖ ಗ್ರಾಮಗಳು ಬೆಂಡರವಾಡಿ,ಕರಲಕಟ್ಟೆ,ಹೊಸಹಳ್ಳಿ,ಮುತ್ತತ್ತಿ, ಕಿರುಗಾವಲು,ಶಿವನಸಮುದ್ರ,ತೊರೆಕಾಡನಹಳ್ಳಿ,ಸಾವ೦ದಿಪುರ,ಹಾಡ್ಲಿ,ಹುಸ್ಕೂರು,ತಲಗವಾದಿ,ಹೊನ್ನಲಗೆರೆ,ಅಂಚೆದೊಡ್ಡಿ,ಮಿಕ್ಕೇರೆ,ಮಂಚನಹಳ್ಳಿ,ಅಂತರವಳ್ಳಿ,ಯತ್ತಂಬಾಡಿ,ಅಂಕನಹಳ್ಳಿ,ಬುಯ್ಯನದೊಡ್ಡಿ,ಬಸಪುರ,ನಿಟ್ಟೂರು,ಕೋಡಿಹಳ್ಳಿ,ಸಾಗ್ಯ,ಪಂಡಿತಹಳ್ಳಿ.ಕುಲುಮೆದೊಡ್ಡಿ,ಸಿದ್ದಾಪುರ,ಕುಂತೂರು,ದೊಡ್ಡಚನ್ನೀಪುರ,ಪುರುದೊಡ್ಡಿ,ಬಸವನಹಳ್ಳಿ,ಕುಂದುರು,ಹುಲ್ಲೆಗಾಲ,ಹುಲ್ಲಹಳ್ಳಿ,ಅಗಸನಪುರ,ಕೋಡಿಪುರ,ನಿಡಘಟ್ಟ,ಸುಣ್ಣದದೊಡ್ಡಿ,ಹೊಸುರು,ಹೊಸಪುರ,ಬ್ಯಾಡರಹಳ್ಳಿ,ಹಲಗೂರು,ರಾಮಂದೂರ,ಮೇಗಳಪುರ,ಕಂಸಾಗರ.

=ಕೃಷ್ಣರಾಜಪೇಟೆ ತಾಲ್ಲೂಕಿನ ಪ್ರಮುಖ ಗ್ರಾಮಗಳು=ಸಾರಂಗಿ ಅಗ್ರಹಾರಬಾಚಹಳ್ಳಿ, ಆನೆಗೊಳೆ,ಅಘಲಯ, ಬಳ್ಳೇಕೆರೆ, ಅಣ್ಣೇಚಾಕನಹಳ್ಳಿ, ತೆರ್ನೇನಹಳ್ಳಿ, ಕಾಮನಹಳ್ಳಿ,ತೆಂಡೇಕೆರೆ, ಅಕ್ಕಿಹೆಬ್ಬಾಳು, ಬೂಕನಕೆರೆ, ಕಿಕ್ಕೇರಿ, ಸಂತೇಬಾಚಹಳ್ಳಿ, ಶೀಳನೆರೆ, ವಸಂತಪುರ, ರಾಯಸಮುದ್ರ,ಬಲ್ಲೇನಹಳ್ಳಿ, ಬಳ್ಳೇಕೆರೆ, ಬೀರುವಳ್ಳಿ, ಬೂಕನಕೆರೆ, ಬಂಡಿಹೊಳೆ, ಭಾರತಿಪುರ, ಚೌಡೇನಹಳ್ಳಿ, ದಬ್ಬೇಘಟ್ಟ, ಗಂಜಿಗೆರೆ, ಹರಳಹಳ್ಳಿ, ಹರಿಹರಪುರ, ಹಿರಿಕಳಲೆ, ಐಕನಹಳ್ಳಿ, ಐಚನಹಳ್ಳಿ, ಲಕ್ಷ್ಮಿಪುರ, ಮಡುವಿನಕೋಡಿ, ಮಾಕವಳ್ಳಿ, ಮಾದಾಪುರ, ಮುರುಕನಹಳ್ಳಿ, ಮಂದಗೆರೆ, ರಂಗನಾಥಪುರ, ಸಾರಂಗಿ, ಸಿಂಧಘಟ್ಟ, ವಿಠಲಾಪುರ,ಮುದುಗೆರೆ, ಗದ್ದೆಹೊಸೂರು,ಆಲಂಬಾಡಿ,ಇತರೆ

ನಾಗಮಂಗಲ ತಾಲ್ಲೂಕಿನ ಪ್ರಮುಖ ಗ್ರಾಮಗಳು

ಮಸಗೋನಹಳ್ಳಿ, ತುಪ್ಪದಮಡು, ಕಾಡುಅಂಕನಹಳ್ಳಿ,ಚುಂಚನಗಿರಿ, ನೆಲ್ಲಿಗೆರೆ, ಬೆಳ್ಳೂರು, ಮುತ್ತಲಮ್ಮನ ಶೆಟ್ಟಹಳ್ಳಿ, ಬಸರಾಳು, ದೇವಲಾಪುರ, ಆರಣಿ, ಕರಡಹಳ್ಳಿ, ಮಾಯಿಗೋನಹಳ್ಳಿ, ಹರದನಹಳ್ಳಿ, ಬ್ರಹ್ಮದೇವರಹಳ್ಳಿ, ಲಾಳನಕೆರೆ, ಭೀಮನಹಳ್ಳಿ, ಕದಬಹಳ್ಳಿ, ದೇವಲಾಪುರ, ದೇವರ ಮಲ್ಲನಾಯಕನಹಳ್ಳಿ, ಚುಂಚನಹಳ್ಳಿ, ಚೀಣ್ಯ, ಗುಡೇನಹಳ್ಳಿ, ಕಾಂತಾಪುರ, ಜವರನಹಳ್ಳಿ, ಅಂಚೆಚಿಟ್ಟನಹಳ್ಳಿ, ಹೊನಕೆರೆ, ಬೋಗಾದಿ, ನೆಲ್ಲಿಗೆರೆ, ಹೊನ್ನಾವರ ಗುಡೆಹೊಸಹಳ್ಳಿ, ಚೌಡಗೋನಹಳ್ಳಿ, ಖರಡ್ಯ ಮಾಚಲಘಟ್ಟ, ಕವಡಳ್ಳೀ

ಶ್ರೀರಂಗಪಟ್ಟಣ ತಾಲ್ಲೂಕಿನ ಪ್ರಮುಖ ಗ್ರಾಮಗಳು

ಕೊಡಿಯಾಲ, ಹುಣಸನಹಳ್ಳಿ, ರಸಗುಪ್ಪೆ , ಬಲ್ಲೇನಹಳ್ಳಿ, ಮಹದೇವಪುರ, ಸಬ್ಬನಕುಪ್ಪೆ, ಮ೦ಡ್ಯ ಕೊಪ್ಪಲು, ಅರಕೆರೆ, ನೆರಾಲಕೆರೆ, ಗಾಮನಹಳ್ಳಿ, ಪಾಲಹಳ್ಳಿ, ಬೆಳಗೊಳ, ಹುಲಿಕೆರೆ, ಕಪರನಕೊಪ್ಪಲು ಕಿರಂಗೂರು ಬಿ.ಅರ್ ಕೊಪ್ಪಲ್. ಅಚ್ಚಪ್ಪನಕೊಪ್ಪಲು ರಾಂಪುರ, ನಗುವನಹಳ್ಳಿ, ಟಿ.ಎಂ.ಹೊಸೂರು, ಕೃಷ್ಣರಾಜಸಾಗರ, ತಡಗವಾಡಿ, ಅಲಾಗುಡು, ನೀಲನ ಕೊಪ್ಪಲು.

ಪ್ರಸಿದ್ಧ ವ್ಯಕ್ತಿಗಳು

  • ಬಿ.ಎಂ. ಶ್ರೀಕಂಠಯ್ಯ - ಕವಿ
  • ಸಿಂಗರಾಯ - ಕನ್ನಡದ ಮೊದಲ ನಾಟಕಕಾರ
  • ತ್ರಿವೇಣಿ - ಕಾದಂಬರಿಗಾರ್ತಿ
  • ಮಂಡ್ಯ ರಮೆಶ್ ಚಿತ್ರ ನಟರು
  • ಎ.ಎನ್.ಮೂತಿ೯ರಾವ್ - ಪ್ರಸಿದ್ಧ ವೈಚಾರಿಕ ಲೇಖಕರು
  • ಕೆ.ಎಸ್.ನರಸಿಂಹಸ್ವಾಮಿ - ಸುಪ್ರಸಿದ್ಧ ಕವಿ
  • ಅರ್ಚಕ ಬಿ.ರಂಗಸ್ವಾಮಿಭಟ್ಟ -ಜಾನಪದ ವಿದ್ವಾಂಸ
  • ಕೆ.ವಿ. ಶಂಕರೇಗೌಡ- ಮಾಜಿ ಶಿ‌ಕ್ಷಣ ಸಚಿವರು, ಆಧುನಿಕ ಮಂಡ್ಯ ನಗರದ ನಿರ್ಮಾತೃ
  • ಜಿ.ಮಾದೇಗೌಡ - ಕಾವೇರಿ ಚಳುವಳಿ ಹೋರಾಟಗಾರರು ಹಾಗೂ ಹಿರಿಯ ರಾಜಕಾರಣಿ
  • ಬಿ.ಎಸ್.ಯಡಿಯೂರಪ್ಪ - ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ,
  • ಪು.ತಿ.ನರಸಿಂಹಾಚಾರ್ - ಕವಿ
  • ಸುಜನಾ ಖ್ಯಾತ ವಿಮರ್ಶಕ, ಕವಿ
  • ಪ್ರೇಂ - ಚಿತ್ರ ನಿರ್ದೇಶಕ
  • ಕೇಸರಿ ಹರವು- ರಾಷ್ಟ್ರಪ್ರಶಸ್ತಿ ವಿಜೇತ, ಚಿತ್ರ ನಿರ್ದೇಶಕರು
  • ಹರವು ದೇವೇಗೌಡ ಪತ್ರಕರ್ತರು, ಬರಹಗಾರರು, ಸಾಂಸ್ಕೃತಿಕ ಸಂಘಟಕರು, ಪ್ರಾಚೀನ ಸ್ಮಾರಕಗಳ ಸಂರಕ್ಷಕರು​​​​
  • ನಾಗತಿಹಳ್ಳಿ ಚಂದ್ರಶೇಖರ್-ಚಿತ್ರ ನಿರ್ದೇಶಕ ಹಾಗೂ ಬರಹಗಾರ
  • ಬೆಸಗರಹಳ್ಳಿ ರಾಮಣ್ಣ- ಪ್ರಸಿದ್ಧ ಕಥೆಗಾರ
  • ಹಂಸಲೇಖ - ಪ್ರಸಿದ್ಧ ಚಲನಚಿತ್ರ ಸಂಗೀತ ನಿರ್ದೇಶಕರು
  • ಕುಮಾರಿ ಜಯಲಲಿತಾ- ಮಾಜಿ ಮುಖ್ಯಮಂತ್ರಿಗಳು ತಮಿಳುನಾಡು ಸರ್ಕಾರ
  • ಆರ್ಯಾಂಬ ಪಟ್ಟಾಭಿ - ಕಾದಂಬರಿಗಾರ್ತಿ, ತ್ರಿವೇಣಿಯವರ ಸಹೋದರಿ
  • ರೂಪ ಅಯ್ಯರ್ - ಅಂತರರಾಷ್ಟ್ರೀಯ ಖ್ಯಾತಿಯ ಚಲನಚಿತ್ರ ನಿದೇ೯ಶಕಿ
  • ಅಜು೯ನ್ - ಚಿತ್ರ ನಿರ್ದೇಶಕ (ಅಂಬಾರಿ)
  • ಜೋಸೈಮನ್- ಚಲನಚಿತ್ರ ನಿರ್ದೇಶಕರು
  • ಅ.ರಾ.ಮಿತ್ರ- ಖ್ಯಾತ ಹಾಸ್ಯ ಬರಹಗಾರರು
  • ಸಂದೇಶ್ ನಾಗರಾಜು- ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕರು, ರಾಜಕಾರಣಿ
  • ಕೆ.ಎಸ್.ಎಲ್ ಸ್ವಾಮಿ-ರವೀ ಎಂದೇ ಪ್ರಖ್ಯಾತರಾದ ಇವರ ಜಂಬೂಸವಾರಿ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರೆತಿದೆ, ಲಗ್ನಪತ್ರಿಕೆ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದ ಇವರು, ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರವರ ಶಿಷ್ಯ
  • ಎಚ್.ಎಲ್.ಎನ್.ಸಿಂಹ- ಎಚ್. ಲಕ್ಷ್ಮಿನಾರಾಯಣ ಇವರ ಪೂರ್ಣ ಹೆಸರು ಕನ್ನಡದ ಮೊದಲ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ, ಡಾ. ರಾಜ್ ಕುಮಾರ್ ರವರ ಮೊದಲ ಚಿತ್ರ 'ಬೇಡರಕಣ್ಣಪ್ಪ' ಚಿತ್ರದ ನಿರ್ದೇಶಕರು.

ಇವರ 'ನಾಂದಿ' ಚಿತ್ರಕ್ಕೆ ಮತ್ತೊಮ್ಮೆ ರಾಷ್ಟ್ರಪ್ರಶಸ್ತಿ ದೊರೆಯಿತಲ್ಲದೆ ಕನ್ನಡದಲ್ಲಿ ಹೊಸ ಅಲೆಯ ಚಿತ್ರಕ್ಕೆ ನಾಂದಿ ಹಾಡಿತ್ತು. ಇವರ ಜನ್ಮ ಸ್ಥಳ ಮಳವಳ್ಳಿ

  • ರವಿಶಂಕರ್ ಚಿತ್ರ ನಟರು
  • ಸತೀಶ್ ನೀನಸಮ್ ಚಿತ್ರ ನಟರು
  • ರತ್ನಜ ಚಿತ್ರ ನಿರ್ದೇಶಕರು (ನೆನಪಿರಲಿ)
  • ಅಂಬರೀಷ್ ಚಲನಚಿತ್ರ ನಟರು

ಹೊಳೆ/ನದಿಗಳು

ಕೃಷಿ

ಮಂಡ್ಯ ಜಿಲ್ಲೆಗೆ ಪ್ರಮುಖ ನೀರು ಸರಬರಾಜಿನ ಆಗರ. ಕಾವೇರಿ ನದಿ, ಕೃಷ್ಣರಾಜಸಾಗರ ಅಣೆಕಟ್ಟಿನ ಮೂಲಕ. ಇಲ್ಲಿನ ಇತರ ಮುಖ್ಯ ನದಿಗಳೆಂದರೆ ಹೇಮಾವತಿ, ಲೋಕಪಾವನಿ, ಲಕ್ಷ್ಮಣ ತೀರ್ಥ ಮತ್ತು ಶಿಂಷಾ. ಇಲ್ಲಿ ಬೆಳೆಯಲ್ಪಡುವ ಬೆಳೆಗಳಲ್ಲಿ ಮುಖ್ಯವಾದವು ಕಬ್ಬು, ಬತ್ತ, ರಾಗಿ, ತೆಂಗು, ಅವರೆ, ಅಲಸಂದೆ, ಹುಚ್ಚೆಳ್ಳು, ವಾಣಿಜ್ಯ ಬೆಳೆ ರೇಷ್ಮೆ, ಮುಂತಾದವು. ಕಬ್ಬು ಮತ್ತು ಸಕ್ಕರೆ ಉತ್ಪಾದನೆಯ ಕಾರಣ ಮಂಡ್ಯ "ಸಕ್ಕರೆಯ ಜಿಲ್ಲೆ ", "ಮಧುರ ಮಂಡ್ಯ" ಎನಿಸಿಕೊಂಡಿದೆ.


ಇವನ್ನೂ ನೋಡಿ

ಮಂಡ್ಯ ದರ್ಶನ

ಬಾಹ್ಯ ಅಂತರಜಾಲ ತಾಣಗಳು

  1. http://www.thehindu.com/news/national/karnataka/New-DC-for-Mandya-takes-charge/article14566329.ece
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.