ಯಾದಗಿರಿ ಜಿಲ್ಲೆ
ಯಾದಗಿರಿ | |
![]() ![]() ಯಾದಗಿರಿ
| |
ರಾಜ್ಯ - ಜಿಲ್ಲೆ |
ಕರ್ನಾಟಕ - ಯಾದಗಿರಿ ಜಿಲ್ಲೆ |
ನಿರ್ದೇಶಾಂಕಗಳು | |
ವಿಸ್ತಾರ - ಎತ್ತರ |
- km² - 389 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (2001) - ಸಾಂದ್ರತೆ |
58802 - -/ಚದರ ಕಿ.ಮಿ. |
ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 585201 / 585202 - +08473 - KA--- |
ಯಾದಗಿರಿ ಇತಿಹಾಸ
ಈ ಹಿಂದೆ ಈ ಪ್ರದೇಶವನ್ನು "ಯಾದವ" ಎಂಬ ರಾಜವಂಶದವರು ಆಳುತ್ತಿದ್ದರಂತೆ . "ಯಾದವರ" ಈ ವಂಶವನ್ನು ಕೆಲವು ಕಡೆ ಯದುವಂಶ ಎಂದು ಕೂಡಾ ಕೆಲವು ಕಡೆ ಉಲ್ಲೆಖಿಸಲಾಗಿದೆ ಎಂಬುವದು ಬಲ್ಲ ಮೂಲಗಳಿಂದ ತಿಳಿಯುತ್ತದೆ. ಯಾದಗಿರಿ, ಕ್ರಿ. ಪೂ 1347 ರಿಂದ 1425 ರ ವರೆಗೆ ಯಾದವರ ರಾಜಧಾನಿಯಾಗಿತ್ತು. ಆಕಾಲದ ಪ್ರಮುಖರಾದ ಸಂತವರು, ಚಾಲುಕ್ಯರು, ರಾಷ್ಟ್ರಕೂಟರು, ಶಾಹಿಗಳು, ಆದಿಲ್ ಶಾಹಿಗಳು, ನಿಜಾಮ್ ಶಾಹಿಗಳು ಯಾದಗಿರಿಯನ್ನ ಆಳಿದ್ದಾರೆ. ಯಾದಗಿರಿಯಲ್ಲಿ ಒಂದು ಭವ್ಯ ವಾದ ಗುಡ್ಡ ಯಾದಗಿರಿಯ ಹೃದಯ ಭಾಗದಲ್ಲಿದೆ ಇದನ್ನು ಬೆಟ್ಟವೆಂತಲು ಕರೆಯಬಹುದಾಗಿದೆ. ಯಾದವರು ಆಳುತ್ತಿದ್ದ ಈ ನಾಡಿಗೆ ಬೆಟ್ಟ ಅಂದರೆ ಗಿರಿ ಸೇರಿರುವದರಿಂದ ಇದನ್ನು ಮುಂದೆ ಯಾದಗಿರಿ ಎಂದು ಕರೆಯಲಾಯಿತು . ಯಾದವನ ಗಿರಿ’, ಯಾದವ ಗಿರಿ’,ಯಾದಗಿರಿ’, ಯಾದ್ಗೀರ್’ ಎಂದು ಸರಳೀಕೃತಗೊಂಡಿದೆ. ಹೀಗೆ ಹಲವು ನಾಮಗಳಿಂದ ಕರೆಯಲಾಗುತ್ತಿದೆ.
ಯಾದಗಿರಿ ನಗರ
ರಾಜ್ಯದ 30ನೇ ಜಿಲ್ಲೆಯಾಗಿ ಯಾದಗಿರಿ ಡಿಸೆಂಬರ ೩೦ ೨೦೦೯ ರಿಂದ ಅಸ್ತಿತ್ವಕ್ಕೆ ಬಂದಿದೆ . ಶಹಾಪುರ ಮತ್ತು ಸುರಪುರ ತಾಲ್ಲೂಕುಗಳನ್ನು ಸೇರಿಸಿ ಹೊಸ ಜಿಲ್ಲೆ ರಚನೆಯಾಗಿದೆ . ಸಂಪುಟ ಸಭೆಯಲ್ಲಿ ಆ. 27 ೨೦೦೮ ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗುಲ್ಬರ್ಗಾ ಜಿಲ್ಲೆ�ಯನ್ನು ವಿಭಜಿಸಿ ಯಾದಗಿರಿ ಪಟ್ಟಣವನ್ನು ಕೇಂದ್ರವಾಗಿಸಿಕೊಂಡು ಹೊಸ ಜಿಲ್ಲೆ ರಚಿಸಲು ಅಂತಿಮ ನಿರ್ಣಯ ಕೈಗೊಂಡು, ಈ ಸಂಬಂಧ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು . ಈ ವಿಚಾರವನ್ನು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಡಿಸೆಂಬರ ೨೩ ೨೦೦೯ ಬುಧವಾರ ವಿಧಾನಸಭೆಯಲ್ಲಿ ಘೋಷಿಸಿದರು.
ಯಾದಗಿರಿ ಜಿಲ್ಲೆ
ಯಾದಗಿರಿ ಕರ್ನಾಟಕ ರಾಜ್ಯದ 30ನೇ ಜಿಲ್ಲೆ . ಯಾದಗಿರಿ ತಾಲೂಕಿನ ಉತ್ತರದಲ್ಲಿ ಸೇಡಂ, ವಾಯುವ್ಯದಲ್ಲಿ ಚಿತ್ತಾಪುರ, ಪಶ್ಚಿಮದಲ್ಲಿ ಶಹಾಪುರ ಮತ್ತು ಪೂರ್ವದಲ್ಲಿ ಆಂಧ್ರ ಪ್ರದೇಶದ ಮಹಬೂಬನಗರದ ಮಖ್ತಲ್ ತಾಲೂಕುಗಳಿವೆ.
ಶಿಕ್ಷಣ
ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 1,024 ಪ್ರಾಥಮಿಕ ಶಾಲೆಗಳು, 149 ಪ್ರೌಢ ಶಾಲೆಗಳು, 40 ಪದವಿ ಪೂರ್ವ ಕಾಲೇಜುಗಳು, ಮತ್ತು 6 ಪದವಿ ಕಾಲೇಜುಗಳಿವೆ. ಇಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನಡೆಸಲ್ಪಡುವ ಒಟ್ಟು 1223 ಅಂಗನವಾಡಿ ಶಾಖೆಗಳಿವೆ.
ವೈದ್ಯಕೀಯ ಸೌಲಭ್ಯಗಳು
ಈ ಜಿಲ್ಲೆಯಲ್ಲಿ 3 ಆಸ್ಪತ್ರೆಗಳು, 3 ಆಯುರ್ವೇದ ಆಸ್ಪತ್ರೆಗಳು, 37 ಜನಸಾಮಾನ್ಯ ಆರೋಗ್ಯ ಕೇಂದ್ರಗಳು ಮತ್ತು 120 ಕುಟುಂಬ ಕಲ್ಯಾಣ ಕೇಂದ್ರಗಳಿವೆ .
ಪ್ರಮುಖ ಕಾರ್ಯಗಳು
- ಕಂದಾಯ ಗ್ರಾಮ,
- ತಾಲ್ಲೂಕು ರಚನೆ
- ಉಪವಿಭಾಗ ಹಾಗೂ ಜಿಲ್ಲೆಯ ಗಡಿಗಳ ರಚನೆ
- ವಿವಿಧ ಕಚೇರಿಗಳ ಸಂಕೀರ್ಣ ನಿರ್ಮಾಣ ಸಂಬಂಧ ನಿವೇಶನ ಗುರುತಿ�ಸಲು ಸ್ಥಳ ಪರಿಶೀಲನೆ ಕಾರ್ಯ ಮುಗಿದಿದೆ.
ಐಎಎಸ್ ಅಧಿಕಾರಿಗಳು
- ಶಿಲ್ಪಾಶರ್ಮ IAS ,CEO ZP yadgir
- ಕೂರ್ಮರಾವ್ IAS, DC Yadgir
- ಹೃಷಿಕೇಶ ಭಗವಾನ್ IPS, SP yadgir
ಜಿಲ್ಲೆಯ ರಚನೆ
ಯಾದಗಿರಿ ಜಿಲ್ಲೆಯೂ ಹಲವು ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದೆ. ಯಾದಗಿರಿಯಲ್ಲಿ ಹರಿಯುವ ಪ್ರಮುಖ ನದಿಗಳೆಂದರೆ ಕೃಷ್ಣ ಮತ್ತು ಭೀಮ. ಔದ್ಯೋಗಿಕರಣಕ್ಕೆ ಉತ್ತಮ ಅವಕಾಶಗಳಿದ್ದು, ಈಗಾಗಲೇ ಅಲ್ಲಿನ ಹಿರೆತುಮ್ಕುರ್ ಹಳ್ಳಿಯ ಹತ್ತಿರ ಸಕ್ಕರೆ ಮತ್ತು ಇಂಧನ ಕಾರ್ಖಾನೆಗಳು ಆರಂಭವಾಗಿವೆ.
ಯಾದಗಿರಿ ಜಿಲ್ಲೆಯ ತಾಲ್ಲೂಕುಗಳು
- YADGIR,ಯಾದ್ಗಿರ್
- SHAHAAPURA,ಶಹಾಪುರ
- [[SHORAPURA,ಶೋರಾಪುರು|SURPUR,ಸುರಪುರ]
- GURMITKAL,ಗುರಮಿಟ್ಕಲ್
- WODGERE,ವಡಗೆರಾ
- HUNASAGI,ಹುಣಸಗಿ
ಉಲ್ಲೇಖಗಳು
![]() |
ವಿಕಿಮೀಡಿಯ ಕಣಜದಲ್ಲಿ Yadgir district ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |
- http://www.prajavani.net/Content/Dec242009/state20091223162263.asp?section=updatenews
- http://kannada.webdunia.com/newsworld/news/regional/0809/26/1080926045_1.htm
[[ವರ್ಗ:ಕರ್ನಾಟಕದ ಜಿಲ್ಲೆಗಳು]
Yadgir District Temples :-
1. Mailapur Mailaralinga. (Yadgir tq)
2. Tintani mouneshwara. (Surpura Tq)