ನಂಬಿನಾಯಕನಹಳ್ಳಿ

ನಂಬಿನಾಯಕನಹಳ್ಳಿ ಯ ಪುರಾತನ ಹೆಸರು ನಿಮ್ಮನಾಯಕನ ಹಳ್ಳಿ ಯಾಗಿತ್ತು ಮತ್ತು ಇಲ್ಲಿನ ಪಟ್ಟಲದಮ್ಮನ ದೇವಾಲಯ ೧೦೦೦ ವರ್ಷ ಹಳೆಯದು ಇಲ್ಲಿನ ಸುತ್ತಮುತ್ತಲಿನ ಜನರು ಮೂಲ ಬದನಾಳು(ಚಾಮರಾಜನಗರ ಜಿಲ್ಲೆಯ) ನಿಂದ ಬಂದವರು ಬದನಾಳು ನಲ್ಲಿ  ಜನರಿಗೆ ಹಿಂದುಧರ್ಮ ಬದಲಿಸಲು ಕಿರುಕುಳ ಮತ್ತು ಹೆಣ್ಣು ಮಕ್ಕಳ ಅಪಹರಣ ಅತಿ ಹೆಚ್ಚು ಗಾಳಿಯಲ್ಲಿ ಹರಡುವ ಕಾಯಿಲೆ ಹೆಚ್ಚಾಗಿ, ಜನರು ಪಟ್ಟಲದಮ್ಮನ ದೇವಿ ಅನುಗ್ರಹದ ಕಳಸ ತಲೆ ಮೇಲೆ ಇರಿಸಿಕೊಂಡು  ಮಂಡ್ಯ ಜಿಲ್ಲೆಯ ಹಳೆಯ ಹೆಸರು ವಿಷ್ಣುಪುರದ ಭೂಭಾಗ ಸೇರಿವುದರಲ್ಲಿ  ರಾತ್ರಿಯಾಗಿತ್ತು ವಿಶ್ರಾಂತಿಗೆಂದು ದೇವಿ ಕಳಸವನ್ನು ಭೂಸ್ಪರ್ಶವಾಗಿ ಜನರು ನಿದ್ರೆ ಗೆ ಜಾರಿ ಬೆಳಿಗ್ಗೆ ಕಳಸ ನೋಡಿದರೆ ದೇವಿ ಹುತ್ತದ ರೂಪದಲ್ಲಿ ಮುಡಿರುತ್ತದೆ,(ಮೂಲ ದೇವಿಯ ಹುತ್ತ ಈಗಲೂ ಇದೆ)ನಂತರ ಇನ್ನೂ ದೂರ ಕ್ರಮಿಸ ಬೇಕು ಎಂದು ಕೊಂಡಿದ್ದ ಜನರಲ್ಲಿ ಜಗಳವಾಡಿ ಹುತ್ತದ ಮಣ್ಣಿನು ತೆಗೆದು ಕೊಂಡು ಹೋಗಿ ಇವಾಗ ಇರುವ ದೇವಾಲಯದ ಸ್ಥಳದಲ್ಲಿ ದೇವಿ ಹುತ್ತದ ರೂಪದಲ್ಲಿ ನೆಲೆಸಿದ್ದಾಳೆ ಹುತ್ತದ ಮಣ್ಣಿನಿಂದ ಮಾಡಿದ ದೇವಿಯ ವಿಗ್ರಹವಿದ್ದು ಈ ಜಾಗ ನಂಬಿನಾಯಕನ ಹಳ್ಳಿ ಯಾಗಿದೆ. (ಸಂಗ್ರಹ)

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.