ದೇವರ ಮನೆ ಮೂಡಿಗೆರೆ

ದೇವರ ಮನೆ
ದೇವರ ಮನೆ ನಗರದ ಪಕ್ಷಿನೋಟ
ದೇವರ ಮನೆ ಕಾಲಭೈರವೇಶ್ವರ ದೇಗುಲ

ದೇವರ ಮನೆ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಚಿಕ್ಕಮಗಳೂರು
ನಿರ್ದೇಶಾಂಕಗಳು 13.061586° N 75.538752° E
ವಿಸ್ತಾರ
 - ಎತ್ತರ
 km²
 - ೯೭೫ ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ

 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೭೭೧೧೩
 - +೦೮೨೬೩
 - ಕೆ ಎ-೧೮
ಅಂತರ್ಜಾಲ ತಾಣ: www.devaramane.org

ತಾಣ

ಮೂಡಿಗೆರೆಯಿಂದ ೨೦ ಕಿ.ಮಿ ಒಳಗೆ ಅಂದರೆ ಸಬ್ಬೇನಹಳ್ಳಿ ಗುತ್ತಿ ಹೀಗೆ ಪ್ರಯಾಣಿಸಿದರೆ ಸಿಗುವುದೇ ದೇವರಮನೆಯ ಶ್ರೀ ಕಾಲಭೈರವೇಶ್ವರ ದೇವಸ್ಥಾನ. ಈ ದೇವಸ್ಥಾನವನ್ನು ಚೋಳರ ಕಾಲದಲ್ಲಿ ವೆಂಕಣ್ಣನೆಂಬ ಶಿಲ್ಪಿಯು ನಿರ್ಮಿಸಿದನೆಂಬ ಪ್ರತೀತಿ ಇದೆ.ನೋಡಲು ಸುಂದರವಾಗಿರುವ ಈ ದೇವಸ್ಥಾನವು ಗುಡ್ಡ ಗಾಡಿನ ತಪ್ಪಲಿನಲ್ಲಿ ನಿರ್ಮಿಸಲಾಗಿದೆ ಇತ್ತೀಚೆಗೆ ರಾಜ್ಯದ ವಿವಿದೆಡೆ ಇಂದ ಪ್ರವಾಸಿಗರು ಬರುತಿದ್ದಾರೆ.

Geography

ದೇವರಮನೆ is located at 13.061586°N 75.538752°E / 13.061586; 75.538752.

ಐತಿಹ್ಯ

ಕೈಲಾಸದಲ್ಲಿ ಶಿವ ಬಸವನನ್ನು ಕುರಿತು "ಬಸವ ಭೂಲೋಕಕ್ಕೆ ಹೋಗಿ ಅಲ್ಲಿರುವ ಜನರು ಸುಕವಾಗಿದ್ದಾರೆಯೆ ನೋಡಿಕೊಂಡು ಬಾ" ಎಂದು ಕಳುಹಿಸಿದನು. ಅಂತೆಯೆ ಬಸವ ಭುವಿಗಿಳಿದು ನೋಡಿದಾಗ ಜನರೆಲ್ಲ ಕ್ಷಾಮ,ಬರಗಾಲದಿಂದ ನರಳುತಿದ್ದರು ಆದರೆ ಶಿವನ ಮುಂದೆ ತೆರಳಿದ ಬಸವ "ಎಲ್ಲರೂ ಚೆನ್ನಾಗಿದ್ದಾರೆಂದು" ಸುಳ್ಳುಹೇಳುತ್ತದೆ.ಮುಂದೆ ನಿಜವನ್ನರಿತ ಶಿವ ಬಸವನ ತಪ್ಪಿಗೆ ಪ್ರತಿಕಾರವಾಗಿ ಬಸವನನ್ನು ಭುವಿಗೆ ಅಟ್ಟಿ; ಜನರಿಗೆ ಉಳುಮೆಯಲ್ಲಿ ಸಹಾಯಮಾಡುವಂತೆ ಆಜ್ಞಾಪಿಸುತ್ತಾನೆ. ಹೀಗೆ ಬಸವ ಬರುತ್ತಲೆ ಹಿಂದೆಯೆ ಭೈರವನೂ ಬಂದು ದೇವರಮನೆಯಲ್ಲಿ ನೆಲೆಸುತ್ತಾನೆ. ಇದಕ್ಕೂಮೊದಲು ಜನರು ತಾವೇ ನೊಗವನ್ನು ಹೊತ್ತು ಉಳುತಿದ್ದರು ಈಗ ಉಳುಮೆಗೆ ಬಸವನು ದೂರೆತದ್ದರ ಪ್ರತೀಕವಾಗಿ ಇಂದಿಗೂ ಸುಗ್ಗಿಯ ಸಂದರ್ಭದಲ್ಲಿ 'ಒಳ್ಳೆಮಾತಿನವರು' ನೊಗ ಎಳೆಯುತ್ತಾರೆ.

ಬಟ್ಟಲು ಭಾವಿ

ಭುವಿಗೆ ಬಂದ ಭೈರವನ ಪೂಜೆಗಾಗಿ 'ವಕ್ಕಲಿಗರು' ತೊಡಗಿಕೊಳ್ಳುತ್ತಾರೆ. ಹೀಗೆ ಕಾಲ ಉರುಳುತ್ತಿರಲು ಯಾವುದೋ ಒಂದು ಸಂದರ್ಭದಲ್ಲಿ ವಕ್ಕಲಿಗರ ಮನೆತನವೆಲ್ಲ ನಶಿಸಿ ಒಂದು ತಾಯಿ ಮತ್ತು ೧೨ವರುಷದ ಮಗು ಉಳಿಯುತ್ತಾರೆ. ಮುಂದೆ ಈ ಬಾಲಕ ತಪಸ್ಸಿಗಿಳಿಯುತ್ತಾನೆ. ಹಾಗೂ ಜಲದೇವತೆ ಆತನಿಗೆ ಪ್ರತ್ಯಕ್ಷಳಾಗಿ ಕೈಗೊಂದು ತೆಂಗಿನ ಬಟ್ಟಲನ್ನಿತ್ತು "ಇದರಿಂದ ಈ ಭಾವಿಯಲ್ಲಿ ನೀರು ತೆಗೆದುಕೊಂಡು ಹೋಗಿ ಶಿವನಿಗೆ ಪೂಜಿಸುವಂತೆ" ಸಲಹೆ ನೀಡುತ್ತಾಳೆ. ಮುಂದೆ ಇದೇ 'ಬಟ್ಟಲು ಭಾವಿ' ಎಂದು ಹೆಸರು ಪಡೆಯುತ್ತದೆ.

ದೇವಾಲಯ ನಿರ್ಮಾಣ

ಈ ದೇವಾಲಯವನ್ನು ಪಾಂಡವರು ನಿರ್ಮಿಸಿದರೋ, ಹೊಯ್ಸಳರು ನಿರ್ಮಿಸಿದರೋ ಅಥವಾ ವೇಣೂರಿನ ಅರಸನ ನಿರ್ಮಾಣವೊ ಎಂಬುದರಲ್ಲಿ ಗೊಂದಲವಿದೆ. ನಕ್ಷತ್ರಾಕಾರದ ಜಗಲಿ, ಗುಂಡನೆಯ ಕಂಬಗಳು ಮತ್ತು ದೇವಾಲಯದ ಹೊರಗೆ ಧೀಪ ಸ್ಥಂಬಗಳನ್ನು ಗಮನಿಸಿದರೆ ಇದು ಹೊಯ್ಸಳರ ನಿರ್ಮಾಣವೆನ್ನ ಬಹುದು ಆದರು ಇಲ್ಲಿ ಅಷ್ಟೇನು ಕಲಾತ್ಮಕ ಕೆತ್ತನೆಗಳು ಕಂಡುಬರುವುದಿಲ್ಲ. ಅಲ್ಲದೆ ಇಲ್ಲಿಗೆ ದಕ್ಷಿಣ ಕನ್ನಡದ ಜನರು ಬರುತಿದ್ದ ನಿದರ್ಶನಗಳಿಂದ ಇದನ್ನು ವೇಣೂರ ಅರಸನ ನಿರ್ಮಾಣವೆಂನ್ನಬಹುದು. ಸಧ್ಯಕ್ಕೆ ಯಾವುದೆ ಶಾಸನ ಮಾಹಿತಿ ಇಲ್ಲದ ಕಾರಣ ನಿರೀಕ್ಷಿಸಬೇಕು. (ದೇವಾಲಯದ ಹೊಸ್ತಿಲಲ್ಲಿ 'ವೆಂಕಣ್ಣನ ನಮಸ್ಕಾರಗಳು' ಎಂಬ ಕನ್ನಡ ಲಿಪಿ ಇದೆ)

ಬಲ್ಲಾಳನ ಗವಿ

ಗುಡ್ಡ್ವನ್ನೇರುತ್ತಿರುವ ಪ್ರವಾಸಿಗರು

ಹೊಯ್ಸಳ ಅರಸ ಬಲ್ಲಾಳನು ನಿರ್ಮಿಸಿದನು ಎಂದು ನಂಭಲಾದ ಭಯಾನಕ ಮತ್ತು ಬೃಹತ್ತಾದ ಗವಿಯೊಂದು ಇಂದಿಗೂ ದೇವರಮನೆ ಕಾಡಿನಲ್ಲಿದ್ದು ತನ್ನ ನಿಗೂಢತೆಯನ್ನು ಮೆರೆದಿದೆ. ಮೆಟ್ಟಿಲು ಗಳನ್ನು ಹೊಂದಿರುವ ಈ ಸುರಂಗ ಮಾರ್ಗ ಎಲ್ಲಿಗೆ ಸಂಪರ್ಕ ನೀಡುತ್ತದೆ, ಎಷ್ಟು ಉದ್ದಯಿದೆ ಎಂಬುದು ರಹಸ್ಯವಾಗೆ ಉಳಿದಿದೆ.

ಕಾಟಿಮೆಟ್ಟಿದಕಲ್ಲು

ಸಾವಿರಾರು ವರ್ಷಗಳ ಹಿಂದೆ ಕಲ್ಲು ಇಂದಿಗಿಂತ ಮೃದು ವಿತ್ತು ಎಂಬುದು ವಿಜ್ಞಾನದ ಮಾತು. ಇದಕ್ಕೆ ಸಾಕ್ಷಿಯಂತೆ ದೇವರ ಮನೆಯ ಸಮೀಪ ಬೆಟ್ಟದ ಮೇಲೆ ಕಾಡಿನಲ್ಲಿ ಚಲಿಸಿದರೆ ಸಿಗುವುದೆ 'ಕಾಟಿಮೆಟ್ಟಿದಕಲ್ಲು' ಇಲ್ಲಿ ಹಿಂದೊಮ್ಮೆ ಕಾಟಿಯೊಂದು ತನ್ನ ಕರುವಿಗೆ ಕೊಡುವ ವೇಳೆಗೆ ಕರು ಮಂಡಿಯೂರಿದ ಗುರುತುಗಳಿವೆ.

ಸೂಳೆರ್ಪೆಂಡಿ

ಹಿಂದೆ ವೈಶ್ಯವಾಟಿಕೆ ನಡೆಯುತ್ತಿತ್ತು ಎನ್ನಲಾದ ಸ್ಥಳ.

ವಿಶೇಷ ಹಬ್ಬಗಳು

ಕಾರ್ತಿಕ ವಿಳ್ಯದ ಹಬ್ಬ

ಮಟಕ್ಕೆ ಹತ್ತುವುದು

ಊರ ಹಬ್ಬ

ವೀಳ್ಯದ ಹಬ್ಬ

external

  • Duration: ೧೨.೦೦pm
  • Created by: ವಿದ್ಯಾಕುಮಾರ್ ಜಿ.ವಿ
  • Date recorded: ೦೬-೦೩-೧೧
  • Corresponding article version: [ Click here to see the article as it was read]
  • Accent:

Refer to:

  • List of spoken articles
  • Wikiproject Spoken Wikipedia
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.