ವೀರಶೈವ
ವೀರಶೈವವು ಹಿಂದೂ ಧರ್ಮದ ಶೈವ ಶಾಖೆಯ ಒಂದು ಪಂಥ. ಈ ಪಂಥದ ಅನುಯಾಯಿಗಳು ಪ್ರಮುಖವಾಗಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶಗಳಲ್ಲಿ ಕಂಡುಬರುತ್ತಾರೆ. ವೀರಶೈವರು ಸಂಸ್ಕೃತದಲ್ಲಿ ರಚಿತವಾದ ಸಿದ್ಧಾಂತ ಶಿಖಾಮಣಿ ಗ್ರಂಥವನ್ನು ತಮ್ಮ ತಾತ್ವಿಕ ಗ್ರಂಥವೆಂದು ಒಪ್ಪಿಕೊಳ್ಳುತ್ತಾರೆ.
ಮೂಲ
ಶಿವನು ವೀರಶೈವ ಪಂಥವನ್ನು ಐವರು ಆಚಾರ್ಯರು (ಪಂಚಾಚಾರ್ಯರು) ಮೂಲಕ ಸ್ಥಾಪಿಸಿದನೆಂದು ಪ್ರತೀತಿ.
- ರೇಣುಕಾಚಾರ್ಯ
- ದಾರುಕಾಚಾರ್ಯ
- ಏಕೋರಾಮಾರಾಧ್ಯ
- ಪಂಡಿತಾರಾಧ್ಯ
- ವಿಶ್ವಾರಾಧ್ಯ
ಶ್ರೀ ಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯ ಮುನಿಗೆ ವೀರಶೈವ ತತ್ವದ ಉಪದೇಶ ನೀಡಿದರು ಎಂದು ವೀರಶೈವರು ನಂಬುತ್ತಾರೆ.
ಜಗದ್ಗುರು(ಪೀಠ) | ಮೂಲ |
---|---|
ಜಗದ್ಗುರು ರೇಣುಕಾಚಾರ್ಯ (ರಂಭಾಪುರಿ) | ಶ್ರೀ ಸೋಮೇಶ್ವರ ಲಿಂಗ |
ಜಗದ್ಗುರು ದಾರುಕಾಚಾರ್ಯ (ಉಜ್ಜನಿ) | ಶ್ರೀ ಸಿದ್ದೇಶ್ವರ ಲಿಂಗ |
ಜಗದ್ಗುರು ಏಕೋರಾಮರಾಧ್ಯ (ಕೇದಾರ) | ಶ್ರೀ ರಾಮನಾಥ ಲಿಂಗ |
ಜಗದ್ಗುರು ಪಂಡಿತಾರಾಧ್ಯ (ಶ್ರೀಶೈಲ) | ಶ್ರೀ ಮಲ್ಲಿಕಾರ್ಜುನ ಲಿಂಗ |
ಜಗದ್ಗುರು ವಿಶ್ವಾರಾಧ್ಯ (ಕಾಶೀ) | ಶ್ರೀ ವಿಶ್ವನಾಥ ಲಿಂಗ |
ಶಿವನ ಮುಖಗಳು
ಪಂಚಾಚಾರ್ಯರು ಶಿವನ ಐದು ಮುಖಗಳನ್ನು ಪ್ರತಿನಿಧಿಸುತ್ತಾರೆ. ಶಿವನ ಐದು ಮುಖಗಳು
- ಸದ್ಯೋಜಾತ
- ವಾಮದೇವ
- ಅಘೋರ
- ತತ್ಪುರುಷ
- ಈಶಾನ
ನೋಡಿ
ಹೆಚ್ಚಿನ ಓದು
ಮಹಾರಾಷ್ಟ್ರ ಸರ್ಕಾರದ ತಾಣ: https://cultural.maharashtra.gov.in/english/gazetteer/KOLHAPUR/people_lingayats.html
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.