ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು

ಈ ಲೇಖನದಲ್ಲಿ ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳ ಪಟ್ಟಿ ಮಾಡಲಾಗಿದೆ. ಭಾರತವು ೨೮ ರಾಜ್ಯ ಮತ್ತು ೯ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ರಾಜ್ಯಗಳು ತಮ್ಮ ಸ್ವಂತ ಸರ್ಕಾರಗಳನ್ನು ರಚಿಸಿಕೊಳ್ಳುತ್ತವೆ. ಕೇಂದ್ರಾಡಳಿತ ಪ್ರದೇಶಗಳ ಆಡಳಿತವನ್ನು ಕೇಂದ್ರ ಸರ್ಕಾರವು ನಡೆಸುತ್ತದೆ. ಆದರೆ, ಕೇಂದ್ರಾಡಳಿತ ಪ್ರದೇಶಗಳಾಗಿರುವ ಪುದುಚೆರಿ ಮತ್ತು ದೆಹಲಿಗಳು ಮಾತ್ರ ತಮ್ಮ ಸ್ವಂತ ಸರ್ಕಾರವನ್ನು ರಚಿಸಿಕೊಳ್ಳುತ್ತವೆ.

ರಾಜ್ಯಗಳು ಮತ್ತು ರಾಜಧಾನಿಗಳು

ಪಟ್ಟಿಯಲ್ಲಿ ಆಡಳಿತ, ಶಾಸಕಾಂಗ ಮತ್ತು ನ್ಯಾಯಾಂಗ ರಾಜಧಾನಿಗಳನ್ನು ಸೇರಿಸಲಾಗಿದೆ. ಆಡಳಿತ ರಾಜಧಾನಿಯು ರಾಜ್ಯ ಸರ್ಕಾರದ ಕಛೇರಿಗಳು ಇರುವ ಸ್ಥಳ; ಶಾಸಕಾಂಗ ರಾಜಧಾನಿಯು ರಾಜ್ಯದ ವಿಧಾನ ಸಭೆ ಇರುವ ಸ್ಥಳ ಮತ್ತು ನ್ಯಾಯಾಂಗ ರಾಜಧಾನಿಯು ರಾಜ್ಯದ ಉಚ್ಚ ನ್ಯಾಯಾಲಯ ಇರುವ ಸ್ಥಳ.

ಕ್ರಮ ಸಂಖ್ಯೆ ರಾಜ್ಯ ಅಥವಾ
ಕೇಂದ್ರಾಡಳಿತ ಪ್ರದೇಶ
ಆಡಳಿತ ರಾಜಧಾನಿ ಶಾಸಕಾಂಗ ರಾಜಧಾನಿ ನ್ಯಾಯಾಂಗ ರಾಜಧಾನಿ ಸ್ಥಾಪನೆಯಾದ ವರ್ಷ ಹಿಂದಿನ ರಾಜಧಾನಿ
1 ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು ಪೋರ್ಟ್ ಬ್ಲೇರ್   ಕೊಲ್ಕತ್ತಾ 1955 ಕೊಲ್ಕತ್ತಾ (1945–1955)
2 ಆಂಧ್ರಪ್ರದೇಶ ಹೈದರಾಬಾದ್ (ಕಾನೂನಿನ ಪ್ರಕಾರ 2024ರ ತನಕ)
ಅಮರಾವತಿ (2017ರಿಂದ ಅಸ್ತಿತ್ವದಲ್ಲಿರುವುದು)[1][2][lower-alpha 1]
ಅಮರಾವತಿ[1] ಅಮರಾವತಿ 1956
2017
ಕರ್ನೂಲ್ (1953-1956)
3 ಅರುಣಾಚಲ ಪ್ರದೇಶ ಇಟಾನಗರ ಇಟಾನಗರ ಗುವಾಹಟಿ 1986  
4 ಅಸ್ಸಾಂ ದಿಸ್ಪುರ್ ಗುವಾಹಟಿ ಗುವಾಹಟಿ 1975 ಶಿಲ್ಲಾಂಗ್[lower-alpha 2] (1874–1952)
5 ಬಿಹಾರ ಪಾಟ್ನಾ ಪಾಟ್ನಾ ಪಾಟ್ನಾ 1912  
6 ಚಂಡೀಗಡ ಚಂಡೀಗಡ[lower-alpha 3]   ಚಂಡೀಗಡ 1966  
7 ಛತ್ತೀಸ್‌ಘಡ್ ರಾಯ್ಪುರ್[lower-alpha 4] ರಾಯ್‌ಪುರ ಬಿಲಾಸ್‌ಪುರ 2000  
8 ದಾದ್ರಾ ಮತ್ತು ನಗರ್ ಹವೇಲಿ ಸಿಲ್ವಾಸ   ಮುಂಬೈ 1945 ಮುಂಬೈ (1954–1961)
ಪಣಜಿ (1961–1987)
9 ದಮನ್ ಮತ್ತು ದಿಯು ದಮನ್   ಮುಂಬೈ 1987 ಅಹಮದಾಬಾದ್ (1961–1963)
ಪಣಜಿ (1963–1987)
10 ರಾಷ್ಟ್ರೀಯ ರಾಜಧಾನಿ ಪ್ರದೇಶ ದೆಹಲಿ ನವದೆಹಲಿ ನವದೆಹಲಿ ನವದೆಹಲಿ 1931  
11 ಗೋವಾ ಪಣಜಿ[lower-alpha 5] ಪೋರ್ವೋರಿಂ ಮುಂಬೈ 1961 ಪಣಜಿ (1961–1987)
12 ಗುಜರಾತ್ ಗಾಂಧಿನಗರ ಗಾಂಧಿನಗರ ಅಹಮದಾಬಾದ್ 1960 ಅಹಮದಾಬಾದ್ (1960–1970)
13 ಹರಿಯಾಣ ಚಂಡೀಗಡ ಚಂಡೀಗಡ ಚಂಡೀಗಡ 1966  
14 ಹಿಮಾಚಲ ಪ್ರದೇಶ ಶಿಮ್ಲಾ ಶಿಮ್ಲಾ (ಬೇಸಿಗೆ)
ಧರ್ಮಶಾಲಾ (ಚಳಿಗಾಲ)[6]
ಶಿಮ್ಲಾ  1971
2017
ಬಿಲಾಸ್‌ಪುರ (1950–1956)
15 ಜಮ್ಮು ಮತ್ತು ಕಾಶ್ಮೀರ ಶ್ರೀನಗರ (ಬೇಸಿಗೆ)[7]
ಜಮ್ಮು (ಚಳಿಗಾಲ)
ಶ್ರೀನಗರ (ಬೇಸಿಗೆ)
ಜಮ್ಮು (ಚಳಿಗಾಲ)
ಶ್ರೀನಗರ (ಬೇಸಿಗೆ)
ಜಮ್ಮು (ಚಳಿಗಾಲ)
1947
2019
 
16 ಜಾರ್ಖಂಡ್ ರಾಂಚಿ ರಾಂಚಿ ರಾಂಚಿ 2000  
17 ಕರ್ನಾಟಕ ಬೆಂಗಳೂರು ಬೆಂಗಳೂರು ಬೆಂಗಳೂರು 1956 ಮೈಸೂರು
18 ಕೇರಳ ತಿರುವನಂತಪುರಮ್ ತಿರುವನಂತಪುರಮ್ ಕೊಚ್ಚಿನ್ 1956  
19 ಲಡಾಖ್ ಲೇಹ್ ಲೇಹ್ ಲೇಹ್ 2019  
20 ಲಕ್ಷದ್ವೀಪ ಕವರಟ್ಟಿ   ಕೊಚ್ಚಿನ್ 1956  
21 ಮಧ್ಯಪ್ರದೇಶ ಭೋಪಾಲ್ ಭೋಪಾಲ್ ಜಬಲ್‌ಪುರ 1956 ನಾಗ್‌ಪುರ[lower-alpha 6] (1861–1956)
22 ಮಹಾರಾಷ್ಟ್ರ ಮುಂಬೈ[lower-alpha 7] ಮುಂಬೈ  (ಬೇಸಿಗೆ)
ನಾಗ್‌ಪುರ (ಚಳಿಗಾಲ)
ಮುಂಬೈ 1818  
23 ಮಣಿಪುರ ಇಂಫಾಲ್ ಇಂಫಾಲ್ ಇಂಫಾಲ್ 1947  
24 ಮೇಘಾಲಯ ಶಿಲ್ಲಾಂಗ್ ಶಿಲ್ಲಾಂಗ್ ಶಿಲ್ಲಾಂಗ್ 1970  
25 ಮಿಜೋರಂ ಐಝ್ವಾಲ್ ಐಝ್ವಾಲ್ ಗುವಾಹಟಿ 1972  
26 ನಾಗಾಲ್ಯಾಂಡ್ ಕೋಹಿಮ ಕೋಹಿಮ ಗುವಾಹಟಿ 1963  
27 ಒಡಿಶಾ ಭುವನೇಶ್ವರ ಭುವನೇಶ್ವರ ಕಟಕ್ 1948 ಕಟಕ್ (1936–1948)
28 ಪಾಂಡಿಚೆರಿ ಪಾಂಡಿಚೆರಿ ಪಾಂಡಿಚೆರಿ ಚೆನ್ನೈ 1954 ಮದ್ರಾಸ್ (1948–1954)
29 ಪಂಜಾಬ್ ಚಂಡೀಗಡ ಚಂಡೀಗಡ ಚಂಡೀಗಡ 1966  
30 ರಾಜಸ್ಥಾನ ಜೈಪುರ ಜೈಪುರ ಜೋಧ್‌ಪುರ 1950  
31 ಸಿಕ್ಕಿಂ ಗ್ಯಾಂಗ್ಟಾಕ್[lower-alpha 8] ಗ್ಯಾಂಗ್ಟಾಕ್ ಗ್ಯಾಂಗ್ಟಾಕ್ 1890  
32 ತಮಿಳುನಾಡು ಚೆನ್ನೈ[lower-alpha 9] ಚೆನ್ನೈ ಚೆನ್ನೈ 1956  
33 ತೆಲಂಗಾಣ ಹೈದರಾಬಾದ್[lower-alpha 10] ಹೈದರಾಬಾದ್ ಹೈದರಾಬಾದ್ 2014  
34 ತ್ರಿಪುರ ಅಗರ್ತಲ ಅಗರ್ತಲ ಅಗರ್ತಲ 1956  
35 ಉತ್ತರ ಪ್ರದೇಶ ಲಕ್ನೋ ಲಕ್ನೋ ಅಲಹಾಬಾದ್ 1938  
36 ಉತ್ತರಾಖಂಡ ಡೆಹ್ರಾಡೂನ್[lower-alpha 11] ಡೆಹ್ರಾಡೂನ್ ನೈನಿತಾಲ್ 2000  
37 ಪಶ್ಚಿಮ ಬಂಗಾಳ ಕೊಲ್ಕತ್ತಾ ಕೊಲ್ಕತ್ತಾ ಕೊಲ್ಕತ್ತಾ 1947  

ಟಿಪ್ಪನಿಗಳು

  1. "After 2200 Years, Amaravati Gets Back Power!". Gulte.com. Retrieved 4 August 2017.
  2. "AP Government Portal - Official Andhra Pradesh State Govt. Portal". Ap.gov.in. Archived from the original on 3 August 2017. Retrieved 4 August 2017. Cite uses deprecated parameter |dead-url= (help)
  3. Baruah 1999, p. xiii.
  4. Menon & Banerjea 2002, p. 5.
  5. Ring 1996, p. 288.
  6. "Dharamshala Declared Second Capital of Himachal". www.hillpost.in (in ಇಂಗ್ಲಿಷ್). Retrieved 2017-01-21.
  7. "What is the Darbar Move in J&K all about?". The Hindu. 2017-05-08. Retrieved 2019-03-19.
  8. Boland-Crewe & Lea 2002, p. 155.
  9. Kumāra 1998, p. 136.
  10. Kini 1974, pp. 34–35.
  11. Spate 1953, p. 200.
  12. Sati & Kumar 2004, pp. 9–10.

Andhra Pradesh was formed combining erstwhile Andhra Rashtram and Telugu speaking regions of Madras Presidency and Hyderabad princely state. The capital of Andhra Rashtram was Kurnool.

ಉಲ್ಲೇಖಗಳು


ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು

ಅಗರ್ತಲ | ಇಂಫಾಲ | ಇಟಾನಗರ | ಐಝ್ವಾಲ್ | ಕವರಟ್ಟಿ | ಕೋಹಿಮ | ಕೊಲ್ಕತ್ತ | ಗಾಂಧಿನಗರ | ಗ್ಯಾಂಗಟಕ್ | ಚೆನ್ನೈ | ಚಂಡೀಗಡ | ಜೈಪುರ | ತಿರುವನಂತಪುರಮ್ | ದಮನ್ | ದಿಸ್ಪುರ್ | ಡೆಹ್ರಾಡೂನ್ | ನವ ದೆಹಲಿ | ಪಟ್ನಾ | ಪಣಜಿ | ಪುದುಚೆರಿ | ಪೋರ್ಟ್ ಬ್ಲೇರ್ | ಬೆಂಗಳೂರು | ಭುವನೇಶ್ವರ | ಭೂಪಾಲ್ | ಮುಂಬೈ | ರಾಂಚಿ | ರಾಯ್ಪುರ್ | ಲಕ್ನೌ | ಶಿಮ್ಲಾ | ಶಿಲ್ಲಾಂಗ್ | ಶ್ರೀನಗರ | ಸಿಲ್ವಾಸ | ಹೈದರಾಬಾದ್

  1. ತೆಲಂಗಾಣ ರಾಜ್ಯ ರಚನೆಯ ನಂತರ, ಆಂಧ್ರಪ್ರದೇಶ ಪುನರ್ನಿರ್ಮಾಣ ಕಾಯ್ದೆ 2014ರ ಪ್ರಕಾರ, ಎರಡೂ ರಾಜ್ಯಗಳಿಗೆ ಹತ್ತು ವರ್ಷಗಳ ಕಾಲ ಹೈದರಾಬಾದ್ ರಾಜಧಾನಿಯಾಗಿರುತ್ತದೆ. ಅಮರಾವತಿಯನ್ನು ಆಂಧ್ರಪ್ರದೇಶದ ಹೊಸ ರಾಜಧಾನಿ ಎಂದು ಏಪ್ರಿಲ್ 2016ರಲ್ಲಿ ಆಂಧ್ರಪ್ರದೇಶ ಸರ್ಕಾರ ಘೋಷಿಸಿದೆ.
  2. 1971ರವರೆಗೆ ಶಿಲ್ಲಾಂಗ್ ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ಜಂಟಿ ರಾಜಧಾನಿಯಾಗಿತ್ತು..[3]
  3. ಚಂಡೀಗಡವು ಪಂಜಾಬ್ ಮತ್ತು ಹರಿಯಾಣ ಎರಡೂ ರಾಜ್ಯಗಳಿಗೆ ಜಂಟಿ ರಾಜಧಾನಿಯಾಗಿದೆ.[4]
  4. ರಾಯ್‌ಪುರ ಛತ್ತೀಸ್‌ಘಡ ರಾಜ್ಯದ ತಾತ್ಕಾಲಿಕ ರಾಜಧಾನಿಯಾಗಿದ್ದು, ನಯಾ ರಾಯ್‌ಪುರ ಎಂಬ ನಗರವನ್ನು ಹೊಸ ರಾಜಧಾನಿಯಾಗಿ ನಿಗದಿಪಡಿಸಲಾಗಿದೆ.
  5. ಪೋರ್ಚುಗೀಸರ ಆಳ್ವಿಕೆ ಕಾಲದಿಂದಲೂ ಅಂದರೆ 1843ರಿಂದಲೂ ಪಣಜಿ ಗೋವಾದ ರಾಜಧಾನಿಯಾಗಿದೆ.[5]
  6. 1861ರಿಂದ 1950ರ ತನಕ ನಾಗ್‌ಪುರ, ಸೆಂಟ್ರಲ್ ಪ್ರಾಂತ್ಯದ ರಾಜಧಾನಿಯಾಗಿತ್ತು.[8] ಆ ಬಳಿಕ 1950ರಲ್ಲಿ ಸೆಂಟ್ರಲ್ ಪ್ರಾಂತ್ಯದ ಬಹುಪಾಲು ಮಧ್ಯಪ್ರದೇಶಕ್ಕೆ ಸೇರ್ಪಡೆಯಾಯಿತು.[8] ನಾಗ್‌ಪುರ ರಾಜ್ಯದ ರಾಜಧಾನಿಯಾಗಿ ಮುಂದುವರೆದಿತ್ತು.[9] 1956ರಲ್ಲಿ ಸೆಂಟ್ರಲ್ ಪ್ರಾಂತ್ಯ ಮತ್ತು ಬಿರಾರ್ (ವಿದರ್ಭ) ಮಧ್ಯಪ್ರದೇಶದಿಂದ ಬೇರ್ಪಟ್ಟು ಬಾಂಬೆ ರಾಜ್ಯದಲ್ಲಿ ವಿಲೀನವಾಗಿದ್ದರಿಂದ ನಾಗ್‌ಪುರದ ರಾಜಧಾನಿ ಸ್ಥಾನ ಹೊರಟುಹೋಯಿತು. ಮುಂದೆ 1960ರಲ್ಲಿ ನಾಗ್‌ಪುರ ಕರಾರಿನ ಪ್ರಕಾರ ನಾಗ್‌ಪುರ ಮಹಾರಾಷ್ಟ್ರದ ಎರಡನೇ ರಾಜಧಾನಿಯಾಗಿ ಆಯ್ಕೆಯಾಯಿತು.[10]
  7. 1950ರ ತನಕ ಬಾಂಬೆ ಪ್ರೆಸಿಡೆನ್ಸಿಯ ರಾಜಧಾನಿಯಾಗಿದ್ದ ಬಾಂಬೆ / ಮುಂಬೈ ಆ ಬಳಿಕ ಬಾಂಬೆ ರಾಜ್ಯದ ರಾಜಧಾನಿಯಾಯಿತು. ನಂತರ 1960ರಲ್ಲಿ ಬಾಂಬೆ ರಾಜ್ಯವು ಗುಜರಾತ್ ಮತ್ತು ಮಹಾರಾಷ್ಟ್ರ ಎಂದು ವಿಭಜನೆಯಾಯಿತು.
  8. 1890ರಿಂದಲೂ ಗ್ಯಾಂಗ್ಟಾಕ್ ಸಿಕ್ಕಿಂನ ರಾಜಧಾನಿಯಾಗಿದೆ. ಭಾರತದ ಒಕ್ಕೂಟಕ್ಕೆ ಸಿಕ್ಕಿಂ 1975ರಲ್ಲಿ ಸೇರ್ಪಡೆಯಾಯಿತು.[11]
  9. 1839ರಿಂದ ಮದ್ರಾಸ್ ಪ್ರಾಂತ್ಯದ ರಾಜಧಾನಿಯಾಗಿದ್ದ ಚೆನ್ನೈ (ಮದ್ರಾಸ್), ನಂತರ 1956ರಲ್ಲಿ ಮದ್ರಾಸ್ ರಾಜ್ಯಕ್ಕೆ ಸೇರ್ಪಡೆಯಾಯಿತು. ಬಳಿಕ 1968ರಲ್ಲಿ ರಾಜ್ಯದ ಹೆಸರನ್ನು ತಮಿಳುನಾಡು ಎಂದು ಬದಲಾಯಿಸಲಾಯಿತು.
  10. ತೆಲಂಗಾಣ ರಾಜ್ಯ ರಚನೆಯ ನಂತರ, ಆಂಧ್ರಪ್ರದೇಶ ಪುನರ್ನಿರ್ಮಾಣ ಕಾಯ್ದೆ 2014ರ ಪ್ರಕಾರ, ಎರಡೂ ರಾಜ್ಯಗಳಿಗೆ ಹತ್ತು ವರ್ಷಗಳ ಕಾಲ ಹೈದರಾಬಾದ್ ರಾಜಧಾನಿಯಾಗಿರುತ್ತದೆ. ಅಮರಾವತಿಯನ್ನು ಆಂಧ್ರಪ್ರದೇಶದ ಹೊಸ ರಾಜಧಾನಿ ಎಂದು ಏಪ್ರಿಲ್ 2016ರಲ್ಲಿ ಆಂಧ್ರಪ್ರದೇಶ ಸರ್ಕಾರ ಘೋಷಿಸಿದೆ.
  11. ಡೆಹ್ರಾಡೂನ್ ಉತ್ತರಾಖಂಡ್ ರಾಜ್ಯದ ತಾತ್ಕಾಲಿಕ ರಾಜಧಾನಿಯಾಗಿದ್ದು, ಗೈರ್‌ಸೈನ್ ನೂತನ ರಾಜಧಾನಿ ಎಂದು ನಿಗದಿ ಮಾಡಲಾಗಿದೆ.[12]
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.