ಬ್ಯೂಗಲ್ ರಾಕ್

ಬೆಂಗಳೂರು ನಿರ್ಮಾತೃ ಮಾಗಡಿ ಕೆಂಪೇಗೌಡನ ಒಂದು ಸರಹದ್ದು ಬ್ಯೂಗಲ್ ರಾಕ್ ಎಂಬ ಕಹಳೆ ಬಂಡೆಯಲ್ಲಿದೆ. ಗಡಿ ಕಾಯುವ ದಳಪತಿಗಳು ಬಸವನಗುಡಿ ಸಮೀಪದ ಗುಡ್ಡದ ಮೇಲಿನ ಸ್ತೂಪವೊಂದರ ಮೇಲೆ ಪರಿವೀಕ್ಷಣೆ ಮಾಡುತ್ತಿದ್ದರಂತೆ.ಸರತಿಯಂತೆ ಕಹಳೆ ಹೊತ್ತ ಯೋಧರು ಶತ್ರುಗಳ ಪ್ರವೇಶವನ್ನು ಕಹಳೆ ಮೊಳಗಿಸುವ ಮೂಲಕ ತಿಳಿಸುತ್ತಿದ್ದರಂತೆ. ಸುಮಾರು ಮೂರು-ನಾಲ್ಕು ದಶಕಗಳ ಹಿಂದೆ ಇಲ್ಲಿ ಸೇವಾದಳ ನಡೆಸಲಾಗುತ್ತಿತ್ತು. ಅಲ್ಲಿಗೆ ಬಡಾವಣೆಯ ಹುಡುಗರು ಹೋಗುತ್ತಿದ್ದುದರ ನೆನಪು, ಕಾನ್ಕಾನ ಹಳ್ಳಿ ಗೋಪಿಯವರು ತರಗತಿಗಳನ್ನು ನಡೆಸುತ್ತಿದ್ದುದು, ಆ ಶಿಸ್ತು....ಆ ಸ್ಫೂರ್ತಿ... ಆ ಪೀಳಿಗೆಯವರಿಗೆ ಅಲ್ಲಿಗೆ ಹೋದಾಗಲೆಲ್ಲ ನೆನಪಿಗೆ ಬರುವುದರಲ್ಲಿ ಸಂದೇಹವೇ ಇಲ್ಲ ![1][2] ಸದ್ಯಕ್ಕೆ ಇಲ್ಲಿನ ಉದ್ಯಾನವನ ಅಂದವಾಗಿ ನಿರ್ಮಾಣವಾಗಿದೆ. ಉಬ್ಬು -ತಗ್ಗು ಪ್ರದೇಶವಾದ ಕಾರಣ ಹಸಿರಿನ ಹರವು ಕಣ್ಮನಗಳನ್ನು ತಣಿಸುತ್ತಾ, ಮುಂಜಾನೆ-ಮುಸ್ಸಂಜೆ ವಾಯುವಿಹಾರಕ್ಕೂ , ಲಘು ವ್ಯಾಯಾಮಕ್ಕೆ ಸೂಕ್ತವಾದ ಸ್ಠಳವೂ ಆಗಿದೆ. ವಾರಾಂತ್ಯಗಳಲ್ಲಿ ಸಂಗೀತ ಕಾರಂಜಿಯ ವ್ಯವಸ್ಠೆ ಇದೆ. ಬಸವನಗುಡಿ ಹಾಗೂ ಹನುಮಂತನಗರದ ಸಾಂಸ್ಕೃತಿಕ ಸಂಘಟನಾ ಕೂಟಗಳು ಸಮೀಪದಲ್ಲಿವೆ. ಆಗ್ಗಾಗ್ಗೆ ವಾದ್ಯಗೋಷ್ಠಿಗಳು ಇಲ್ಲಿ ನಡೆಯುತ್ತವೆ.

ಬ್ಯೂಗಲ್ ರಾಕ್
Bugle Rock
neighbourhood
A soldier with bugle at the Bugle rock
Country ಭಾರತ
ರಾಜ್ಯಕರ್ನಾಟಕ
ಜಿಲ್ಲೆಬೆಂಗಳೂರು ನಗರ ಜಿಲ್ಲೆ
Metroಬೆಂಗಳೂರು
Languages
  Officialಕನ್ನಡ
ಸಮಯ ವಲಯIST (ಯುಟಿಸಿ+5:30)

ಉಲ್ಲೇಖಗಳು


This article is issued from Wikipedia. The text is licensed under Creative Commons - Attribution - Sharealike. Additional terms may apply for the media files.