ರಘುವೀರ್ ಚೌಧರಿ

ರಘುವೀರ್ ಚೌಧರಿ ಗುಜರಾತಿ ಸಾಹಿತಿ ಹಾಗೂ ವಿಮರ್ಶಕ. ಪತ್ರಿಕೆಗಳ ಅಂಕಣಕಾರ. ಅನೇಕ ಸಾಹಿತ್ಯಿಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ೫೧ನೇ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.[1]

ರಘುವೀರ್ ಚೌಧರಿ
ಚಿತ್ರ
ಜನನದ ದಿನಾಂಕ೫ ಡಿಸೆಂಬರ್ 1938
ಹುಟ್ಟಿದ ಸ್ಥಳBapupura
ವೃತ್ತಿಲೇಖಕ, ಕವಿ, literary critic
ರಾಷ್ಟ್ರೀಯತೆಭಾರತ, ಬ್ರಿಟಿಷ್ ರಾಜ್
ಮಾತನಾಡುವ ಅಥವಾ ಬರೆಯುವ ಭಾಷೆಗಳುಗುಜರಾತಿ
ಪೌರತ್ವಭಾರತ, ಬ್ರಿಟಿಷ್ ರಾಜ್
ದೊರೆತ ಪ್ರಶಸ್ತಿಸಾಹಿತ್ಯ ಅಕಾಡೆಮಿ ಪ್ರಶಸ್ತಿ, Ranjitram Suvarna Chandrak, ಜ್ಞಾನಪೀಠ ಪ್ರಶಸ್ತಿ
ಲಿಂಗಪುರುಷ
ಹಸ್ತಾಕ್ಷರAutograph of Raghuvir Chaudhari.jpg
Gujarat University

ಜೀವನ, ವಿದ್ಯಾಭ್ಯಾಸ, ವೃತ್ತಿ

  • ೦೫ ಡಿಸೆಂಬರ್ ೧೯೩೮ರಲ್ಲಿ ಗುಜರಾತ್‍ನ ಗಾಂಧಿನಗರ ಸಮೀಪದ 'ಬಾಪುಪುರ' ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ದಲ್‍ಸಿಂಗ್, ತಾಯಿ ಜೀತಿಬೆನ್.
  • ೧೯೬೦ರಲ್ಲಿ ಬಿ.ಎ. ಪದವಿ ಹಾಗೂ ೧೯೬೨ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ ಹಿಂದಿ ಭಾಷೆ ಮತ್ತು ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದರು. ೧೯೭೭ರಲ್ಲಿ Comparative Study of Hindi and Gujarati Verbal Roots ಎಂಬ ವಿಷಯದಲ್ಲಿ ಪಿ.ಎಚ್.ಡಿ ಪಡೆದರು.
  • ಗುಜರಾತ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದು ೧೯೯೮ರಲ್ಲಿ ನಿವೃತ್ತರಾದರು.
  • 1970ರಲ್ಲಿ ಭಾರತದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ 'ನವನಿರ್ಮಾಣ ಚಳುವಳಿ'ಯಲ್ಲಿ ಭಾಗವಹಿಸಿದ್ದರು[2][3][4][5]

ಸಾಹಿತ್ಯ ಕೃಷಿ

ಇವರು ಕವನ, ಕಾದಂಬರಿ, ನಾಟಕ, ವಿಮರ್ಶೆ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ಮುಖ್ಯವಾಗಿ ಗುಜರಾತಿ ಭಾಷೆಯಲ್ಲಿ ಸಾಹಿತ್ಯ ರಚಿಸುತ್ತಾರೆ ಹಾಗೂ ಕೆಲವು ಹಿಂದಿ ಭಾಷೆಯ ಲೇಖನಗಳನ್ನೂ ಬರೆದಿದ್ದಾರೆ. ೮೦ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ಇವರು ಪತ್ರಿಕೆಗಳಲ್ಲೂ ಸಕ್ರಿಯರಾಗಿದ್ದು ಸಂದೇಶ್, ಜನ್ಮಭೂಮಿ, ನಿರೀಕ್ಷಕ, ದಿವ್ಯಭಾಸ್ಕರ್ ಮುಂತಾದ ಪತ್ರಿಕೆಗಳಲ್ಲಿ ಅಂಕಣಕಾರರಾಗಿದ್ದರು. ಇವರ ರುದ್ರಮಹಾಲಯ ಗುಜರಾತ್‍ನ ಐತಿಹಾಸಿಕ ಕಾದಂಬರಿ ಖ್ಯಾತವಾಗಿತ್ತು. ಅವರ ಕಾದಂಬರಿಗಳಲ್ಲಿರುವ ಹಾಸ್ಯಪ್ರವೃತ್ತಿ ಉಳಿದ ಲೇಖಕರಿಗಿಂತ ಭಿನ್ನ.

ಅವರ ಕೆಲವು ಪ್ರಮುಖ ಕೃತಿಗಳು ಹೀಗಿವೆ.[6]

ಪ್ರಮುಖ ಕಾದಂಬರಿಗಳು

  • ಅಮೃತ
  • ವೇಣುವತ್ಸಲಾ
  • ಸೋಮುತೀರ್ಥ
  • ಪೂರ್ವರಂಗ್
  • ಆವರಣ್

ಪ್ರಮುಖ ನಾಟಕಗಳು

  • ತ್ರಿಷೋ ಪುರಶ್
  • ಸಿಕಂದರ್ ಸಾನಿ

ಪ್ರಮುಖ ನಾಟಕಗಳು

  • ತಮಸಾ
  • ವಹೇತಾ ವೃಕ್ಷ ಪವನ್ಮಾ

ಪ್ರಮುಖ ಸಣ್ಣಕತಾ ಸಂಗ್ರಹಗಳು

  • ಆಕಸ್ಮಿಕ್ ಸ್ಪರ್ಶ
  • ಜೆರ್ ಸಮಾಜ್

ಪ್ರಶಸ್ತಿ, ಮನ್ನಣೆಗಳು

  • ೧೯೭೭ರಲ್ಲಿ 'ಉಪರ್ವಾಸ್'(trilogy) ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ [7]
  • ೧೯೬೫-೭೦ರ ನಡುವೆ ಅನೇಕ ರಾಜ್ಯಪ್ರಶಸ್ತಿಗಳು
  • ೨೦೧೫ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ.[8]
  • ಅವರ ಬರಹಗಳಿಗೆ ‘ಕುಮಾರ್‌ ಚಂದ್ರಕಾ’ ಪುರಸ್ಕಾರ, ‘ಉಮಾ ಸ್ನೇಹರಶ್ಮಿ’ ಮತ್ತು ‘ರಂಜಿತ್‌ರಾಮ್ ಚಿನ್ನದ ಪದಕ’ದ ಗೌರವ ಸಂದಿದೆ.[9]

ಉಲ್ಲೇಖಗಳು

  1. ಗುಜರಾತ್ ಸಾಹಿತಿ ರಘುವೀರ್ ಚೌಧರಿಗೆ ಜ್ಞಾನಪೀಠ ಪ್ರಶಸ್ತಿ, ಕನ್ನಡಪ್ರಭ, ೩೦ ಡಿಸೆಂಬರ್ ೨೦೧೫
  2. Kartik Chandra Dutt (1 January 1999). Who's who of Indian Writers, 1999: A-M. Sahitya Akademi. p. 237. ISBN 978-81-260-0873-5. Retrieved 25 August 2014.
  3. Maharashtra (India) (1971). Maharashtra State Gazetteers: General Series. Directorate of Government Print., Stationery and Publications. pp. 405–406.
  4. "Raghuvir Chaudhary" (in Gujarati). Gujarati Sahitya Parishad. Retrieved 25 August 2014.CS1 maint: unrecognized language (link)
  5. "Raghuveer Chaudhari". Rangdwar Prakashan. Retrieved 25 August 2014.
  6. ನ್ಯೂಸ್ ಮೇಕರ್, ರಘುವೀರ್ ಚೌಧರಿ, ವಿಜಯ ಕರ್ನಾಟಕ, ೦೨ಜನವರಿ೨೦೧೬
  7. Gujarati writer Raghuveer Chaudhari given Jnanpith Award for 2015, Ajay Umat, TNN | Dec 29, 2015
  8. Gujarati Litterateur Raghuveer Chaudhary honoured with 51st Jnanpith Award
  9. ಪ್ರಜಾವಾಣಿ ವಾರ್ತೆ, ೩೧ ಡಿಸೆಂಬರ್ ೨೦೧೫

ಹೊರಸಂಪರ್ಕಗಳು

તમસા ( કાવ્યસંગ્રહ) / રઘુવીર ચૌધરી -ತಮಸಾ, ಗುಜ್ ಲಿಟ್ ತಾಣದಲ್ಲಿ ಚೌಧರಿಯವರ ಕವನ ಸಂಗ್ರಹ (ಗುಜರಾತಿ ಭಾಷೆಯಲ್ಲಿದೆ)

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.