ಕಾಶೀನಾಥ್
ಕಾಶಿನಾಥ್ ಒಬ್ಬ ಭಾರತೀಯ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದು, ಪ್ರಧಾನವಾಗಿ ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಅವರು ಹಿಂದಿ ಮತ್ತು ಮಲಯಾಳಂ ಚಲನಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. 80ರ ದಶಕದ ಸ್ಯಾಂಡಲ್‍ವುಡ್‍ನ ಜನಪ್ರಿಯ ನಟ ಹಾಗೂ ನಿರ್ದೇಶಕರಾಗಿದ್ದರು. ಮೂರು ದಶಕಗಳವರೆಗೆ ವೃತ್ತಿಜೀವನದಲ್ಲಿ, ಕಾಶಿನಾಥ್ 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ನಟ ಉಪೇಂದ್ರ, ನಟಿ ಉಮಾಶ್ರೀ ಸಂಗೀತಗಾರ ವಿ. ಮನೋಹರ್ ಮತ್ತು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಸೇರಿದಂತೆ ಹಲವು ಪ್ರತಿಭೆಗಳನ್ನು ಕನ್ನಡ ಚಲನಚಿತ್ರೋದ್ಯಮದಲ್ಲಿ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ[1].
Kashinath | |
---|---|
![]() | |
ಜನನ | 1951 ಕುಂದಾಪುರ, ಮೈಸೂರು ರಾಜ್ಯ, ಭಾರತ |
ನಿಧನ | (aged 67) ಬೆಂಗಳೂರು, ಭಾರತ |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ | ನಟ, ಚಿತ್ರ ನಿರ್ಮಾಪಕ,ನಿರ್ದೇಶಕ, |
ಸಂಗಾತಿ(ಗಳು) | ಚಂದ್ರಪ್ರಭಾ |
ಮಕ್ಕಳು | 2 |
ಬಾಲ್ಯ ಮತ್ತು ಜೀವನ
ಸಿನೆಮಾರಂಗದ ಪಯಣ
- ಹಾಸ್ಯ ಚಿತ್ರ ಅಪರೂಪದ ಅತಿಥಿಗಳು (1976) ಮೂಲಕ ನಿರ್ದೇಶಕರಾಗಿ ತಮ್ಮ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಕಾಶಿನಾಥ್ ಸಸ್ಪೆನ್ಸ್ ಥ್ರಿಲ್ಲರ್ 'ಅಪರಿಚಿತ' (1978) ದೊಂದಿಗೆ ಬೆಳಕಿಗೆ ಬಂದರು. ಅವರು 'ಅನುಭವ' (1984) ಎಂಬ ಯಶಸ್ವೀ ಚಲನಚಿತ್ರದ ಮೂಲಕ ನಟನಾಗಿ ಚಿತ್ರದಲ್ಲಿ ಅಭಿನಯಿಸಿದರು. ಇದೇ ಚಲನಚಿತ್ರವನ್ನು ಹಿಂದಿಯಲ್ಲಿ ಹಿಂದಿ ಭಾಷೆಯಲ್ಲಿ 'ಅನುಭವ್' (1986) ಎಂದು ನಿರ್ದೇಶಿಸಲಾಯಿತು ಮತ್ತು ಅವರು ಬಾಲಿವುಡ್ ಪ್ರವೇಶವನ್ನು ಮಾಡಿದರು.
- ಅವರ ಚಲನಚಿತ್ರಗಳು ಸಾಮಾನ್ಯವಾಗಿ ಭಾರತೀಯ ಸಮಾಜದಲ್ಲಿ ಮಡಿವಂತಿಕೆಯ ವಿಷಯಗಳು ಎಂದು ಪರಿಗಣಿಸಲ್ಪಟ್ಟಿರುವ ವಿಷಯಗಳನ್ನು ಸ್ಪರ್ಶಿಸುತ್ತವೆ.
- ದ್ವಂದ್ವಾರ್ಥಗಳನ್ನು ಹೊಂದಿದ ಸಂಭಾಶಷಣೆಗಳಿಂದಾಗಿ ಅವರ ಸಿನೆಮಾಗಳಿಗೆ ಟೀಕೆಗಳು ಎದುರಾದರೂ, ಅವರ ಚಲನಚಿತ್ರಗಳು ಸಮಾಜ ಮತ್ತು ಉದ್ಯಮದ ಮೇಲೆ ಪ್ರಭಾವ ಬೀರಿವೆ. ಅವರ ಕೆಲವು ಚಲನಚಿತ್ರ ಸಂಭಾಷಣೆಗಳು ಜನಸಾಮಾನ್ಯರ ಆಡುಭಾಷೆಗೆ ಸೇರ್ಪಡೆಯಾಗಿವೆ.
- ಕಾಶೀನಾಥ್ ಅವರು ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೆಬ್ಬಿಸಿದವರು. ಅವರು ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಹಾಗೂ ಚಿತ್ರ ನಿರ್ಮಾಣದಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ಅವರ ವಿಭಿನ್ನ ಶೈಲಿಯ ಚಿತ್ರಗಳಿಂದ ಪ್ರಸಿದ್ಧಿಯಾದರು.
- ಕಾಶಿನಾಥ್ ಚಿತ್ರಗಳಲ್ಲಿ ಪ್ರಮುಖವಾದವು ಅನಂತನ ಅವಾಂತರ, ಅನುಭವ, ಅವಳೇ ನನ್ನ ಹೆಂಡ್ತಿ, ಹೆಂಡತಿ ಎಂದರೆ ಹೇಗಿರಬೇಕು ಇತ್ಯಾದಿ. ಅವರ ಮಂಗಳೂರು ಮಂಜುನಾಥ ಚಿತ್ರದ ಸಂಭಾಷಣೆಗಳು ಬಹಳ ಜನಪ್ರಿಯವಾಗಿವೆ.
- ಅವರ ಗರಡಿಯಲ್ಲಿ ಪಳಗಿದ ಅನೇಕ ಯುವಕರು ಚಿತ್ರರಂಗದಲ್ಲಿ ಬಹಳ ಯಶಸ್ವಿಯಾಗಿದ್ದಾರೆ.ಉಪೇಂದ್ರ, ವಿ. ಮನೋಹರ್, ಸುನೀಲ್ ಕುಮಾರ್ ದೇಸಾಯಿ ಹೀಗೆ ಹಲವು ಮಂದಿ ನಿರ್ದೇಶಕರು,ದುರ್ಗಾಪ್ರಸಾದ್ ಗೋಟೂರಿ, ಎ. ಬಾಲಕೃಷ್ಣ ಮುಂತಾದ ಸಾಹಿತಿಗಳು ಕಾಶಿನಾಥ್‌ರ ಶಿಷ್ಯವೃಂದದವರು.[2]
- ಇವರ ಅಜಗಜಾಂತರ(೧೯೯೧) ಎಂಬ ಚಿತ್ರವನ್ನು ಹಿಂದಿಯಲ್ಲಿ ಜುದಾಯಿ (೧೯೯೭) ಎಂದು ರೀಮೇಕ್ ಮಾಡಲಾಗಿದೆ. ಇದರಲ್ಲಿ ಅನಿಲ್ ಕಪೂರ್, ಶ್ರೀದೇವಿ ಹಾಗೂ ಊರ್ಮಿಳಾ ಮಾತೋಂಡ್ಕರ್ ಅಭಿನಯಿಸಿದ್ದಾರೆ. ಇವರು ಕಡಿಮೆ ವೆಚ್ಛದಲ್ಲಿ ಉತ್ತಮ ಚಿತ್ರಗಳನ್ನು ನಿರ್ಮಿಸುವಲ್ಲಿ ಸಿದ್ಧಹಸ್ತರು.
- ಒಟ್ಟಾರೆ ಕನ್ನಡದಲ್ಲಿ 13, ಹಿಂದಿಯಲ್ಲಿ 2 ಹಾಗೂ ತೆಲುಗಿನಲ್ಲಿ 1 ಚಿತ್ರವನ್ನು ನಿರ್ದೇಶಿಸಿದ್ದರು. ಕನ್ನಡದ ಎರಡು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಕಾಶಿನಾಥ್, ಮೂರು ಚಿತ್ರಗಳಿಗೆ ಚಿತ್ರಗೀತೆ ರಚಿಸಿದ್ದರು. ಕನ್ನಡ, ತೆಲುಗಿನ ತಲಾ ಒಂದು ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದ್ದರು. ಕನ್ನಡದಲ್ಲಿ 36, ತೆಲುಗಿನ ಒಂದು ಚಿತ್ರದಲ್ಲಿ ಅಭಿನಯಿಸಿದ್ದರು. 1991ರಲ್ಲಿ ಅವರು ನಿರ್ದೇಶಿಸಿದ್ದ ಅಜಗಜಾಂತರ ಚಿತ್ರ ಹಿಂದಿಯಲ್ಲಿ ‘ಜುದಾಯಿ’ ಎಂದು ರಿಮೇಕ್ ಆಗಿತ್ತು. ಅವರ ಕೊನೆಯ ಚಿತ್ರ ಚೌಕ ಕೂಡ ಯಶಸ್ವಿ ನೂರು ದಿನ ಪೂರೈಸಿತ್ತು.
ನಿರ್ದೇಶಿತ ಚಲನಚಿತ್ರಗಳು
- ಅಪರಿಚಿತ (1978)
- ಅನುಭವ (1984)
- ಅನಂತನ ಅವಾಂತರ (1989)
- ಅವಳೆ ನನ್ನ ಹೆಂಡತಿ (1988)
- ಚಪಲಚೆನ್ನಿಗರಾಯ (1990)
- ಅಜಗಜಾಂತರ (1991)
- ಅವನೇ ನನ್ನ ಗಂಡ
ನಟಿಸಿದ ಚಲನಚಿತ್ರಗಳು
- ಹೆಂಡತಿ ಎಂದರೆ ಹೀಗಿರಬೇಕು (1995)
- ಲವ್ ಮಾಡಿ ನೋಡು
- ಶ್ (1993)
- ಹಲೋ ಯಮ
- ಚೌಕ (2017)
ನಿಧನ
ನಿರ್ದೇಶಕ ಕಾಶೀನಾಥ್ ಅವರು ರಕ್ತ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ದಿನಾಂಕ:೧೮-೦೧-೨೦೧೮ರಲ್ಲಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು.[3] ಅವರಿಗೆ ೬೭ ವರ್ಷ ವಯಸ್ಸಾಗಿತ್ತು.
ಉಲ್ಲೇಖಗಳು
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.