ರವಿಚಂದ್ರನ್

ವೀರಾಸ್ವಾಮಿ ರವಿಚಂದ್ರನ್ ಕನ್ನಡ ಚಿತ್ರರಂಗದಲ್ಲಿ ವಿ.ರವಿಚಂದ್ರನ್ ಎನ್ನುವ ಹೆಸರಿನಲ್ಲಿ ಪ್ರಸಿದ್ಧರು. ಕನ್ನಡ ಚಿತ್ರರಂಗಕ್ಕೆ ಶ್ರೀಮಂತಿಕೆ ಮತ್ತು ಬೆಳ್ಳಿಪರದೆಗೆ ಹೊಸರಂಗು ತಂದ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಅನೇಕ ರೀಮೇಕ್ ಸಿನಿಮಾಗಳನ್ನು ಕನ್ನಡಕ್ಕೆ ತಂದರೂ ಮೂಲಸಿನಿಮಾದ ಛಾಯೆ ಇರದ ತಮ್ಮದೇ ಆದ ಶೈಲಿಯಲ್ಲಿ ಕನ್ನಡ ಸೊಗಡಿನ ಸೂಪರ್ ಹಿಟ್ ಗಳನ್ನು ನೀಡಿದ್ದಾರೆ.[1]

ವಿ ರವಿಚಂದ್ರನ್
V Ravichandaran
ಜನನ
ವೀರಾಸ್ವಾಮಿ ರವಿಚಂದ್ರನ್

(1961-05-30) 30 May 1961
ಬೆಂಗಳೂರು, ಕರ್ನಾಟಕ
ವಾಸಿಸುವ ಸ್ಥಳಬೆಂಗಳೂರು,ಕರ್ನಾಟಕ,ಭಾರತ
ರಾಷ್ಟ್ರೀಯತೆಭಾರತೀಯ
Other namesಕ್ರೇಜಿಸ್ಟಾರ್, ಕನಸುಗಾರ, ಚಿತ್ರಬ್ರಹ್ಮ, ತಾಂತ್ರಿಕತೆಯ ಮಾಂತ್ರಿಕ, ರವಿಮಾಮ, ಕನ್ನಡದ ಶೋಮ್ಯಾನ್
ವೃತ್ತಿನಾಯಕನಟ, ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ, ಗೀತರಚನೆಕಾರ, ಸಂಗೀತ ನಿರ್ದೇಶಕ, ಸಂಕಲನಕಾರ, ಸಂಭಾಷಣೆಕಾರ, ನೃತ್ಯಸಂಯೋಜಕ, ರೇಡಿಯೋ ಜಾಕಿ, ಪೋಷಕ ನಟ
Years active1981–ಪ್ರಸ್ತುತ
ಸಂಗಾತಿ(ಗಳು)ಸುಮಥಿ (m. 1986)
ಮಕ್ಕಳುಮನೋರಂಜನ್ ರವಿಚಂದ್ರನ್ (ಜೇಷ್ಠ ಪುತ್ರ)
ಗೀತಾಂಜಲಿ (ಮಗಳು)
ವಿಕ್ರಮ್ ರವಿಚಂದ್ರನ್ (ದ್ವಿತೀಯ ಪುತ್ರ)
ತಂದೆ ತಾಯಿವೀರಾಸ್ವಾಮಿ (ತಂದೆ)
ಪಟ್ಟಮ್ಮಲ್ (ತಾಯಿ)
ಜಾಲತಾಣwww.vravichandran.in

ಪರಿವಾರ

'ರವಿಚಂದ್ರನ್', ಕನ್ನಡದ ಖ್ಯಾತ ನಿರ್ಮಾಪಕರಾದ ಎನ್.ವೀರಾಸ್ವಾಮಿಯವರು ಮಗ. ತಮ್ಮ ತಂದೆ ಸ್ಥಾಪಿಸಿದ ಈಶ್ವರಿ ಸಂಸ್ಥೆಯ ಮೂಲಕ ಅನೇಕ ಉತ್ತಮ ಚಿತ್ರಗಳನ್ನು ನಿರ್ಮಿಸಿದ್ದಾರೆ. ರವಿಚಂದ್ರನ್ ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ ಸಿಪಾಯಿ ಚಿತ್ರದೊಡನೆ ಈಶ್ವರಿ ಸಂಸ್ಥೆ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡಿತು.

ನಿರ್ದೇಶನ

ರವಿಚಂದ್ರನ್ ಒಬ್ಬ ಬಹುಮುಖ ಪ್ರತಿಭೆಯ ನಟ, ಚಿತ್ರ ನಿರ್ಮಾಣ, ನಿರ್ದೇಶನ, ಸಾಹಿತ್ಯ, ಸಂಗೀತ, ಸಂಕಲನ, ಸಂಭಾಷಣೆ ಮುಂತಾದ ಚಿತ್ರರಂಗದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ತಾಂತ್ರಿಕತೆಯ ಪರಿಪೂರ್ಣ ಜ್ಞಾನ ಹೊಂದಿರುವ ಹಾಗೂ ತಂತ್ರಜ್ಞಾನದ ವಿನೂತನ ರೀತಿಯ ಪ್ರಯೋಗ ಇವರ ನಿರ್ದೇಶನದ ಚಿತ್ರಗಳಲ್ಲಿ ಕಾಣಬಹುದು. ಇವರ ಚಿತ್ರಗಳಲ್ಲಿ ಕಂಡುಬರುವ ಪ್ರಮುಖ ಅಂಶವೆಂದರೆ ಮನಸೂರೆ ಮಾಡುವ ಸಂಗೀತ, ರಂಗುರಂಗಿನ ಸೆಟ್ಟುಗಳು, ಪ್ರತಿಯೊಂದು ಫ಼್ರೇಮಿನಲ್ಲೂ ಹೊಸತನ. ಆಯಾ ಕಾಲಗಟ್ಟಕ್ಕೆ ಅಧುನಿಕ ತಂತ್ರಜ್ಞಾನವನ್ನು ಕನ್ನಡಕ್ಕೆ ತಂದ ಹಿರಿಮೆ ರವಿಚಂದ್ರನ್ ಅವರದು. ವಿದೇಶಗಳಲ್ಲಿ ಹಾಡುಗಳ ಚಿತ್ರಿಕರಣ ಕಾಲ ಪ್ರಾರಂಭವಾದ ಮೇಲೂ ರವಿಚಂದ್ರನ್ ಹಳ್ಳಿಸೊಗಡಿನ 'ರಾಮಾಚಾರಿ' ಸಿನಿಮಾದ ಮೂಲಕ ಹೆಸರಾದರು.

ಯಶಸ್ವಿ ಚಿತ್ರಗಳು

ಪ್ರೇಮಲೋಕ, ರಣಧೀರ, ಶಾಂತಿ ಕ್ರಾಂತಿ, ಯುಗಪುರುಷ, ಯುದ್ದಕಾಂಡ, ರಾಮಾಚಾರಿ, ಅಂಜದ ಗಂಡು, ಸ್ವಾಭಿಮಾನ, ನಾನು ನನ್ನ ಹೆಂಡ್ತಿ, ಮನೆದೇವ್ರು, ಗೋಪಿಕೃಷ್ಣ, ಬಣ್ಣದಗೆಜ್ಜೆ, ಶ್ರೀರಾಮಚಂದ್ರ, ಆಣ್ಣಯ್ಯ, ಗಡಿಬಿಡಿ ಗಂಡ, ರಸಿಕ, ಕಲಾವಿದ, ಸಿಪಾಯಿ, ಪುಟ್ನಂಜ, ಕನಸುಗಾರ, ಮಾಂಗಲ್ಯಂ ತಂತುನಾನೇನ, ಪ್ರೀತ್ಸೋದ್ ತಪ್ಪಾ, ಯಾರೇ ನೀನು ಚೆಲುವೆ, ನಾನು ನನ್ನ ಹೆಂಡ್ತೀರು, ಓ ನನ್ನ ನಲ್ಲೆ, ಏಕಾಂಗಿ, ಮಲ್ಲ, ರಾಮಕೃಷ್ಣ, ಕೋದಂಡರಾಮ, ಅಹಂ ಪ್ರೇಮಾಸ್ಮಿ, ಸಾಹುಕಾರ, ಹಠವಾದಿ, ಹೂ, ಅಪೂರ್ವ, ಮುಂತಾದ ಜನಪ್ರಿಯ ಚಿತ್ರಗಳನ್ನು ಇವರು ಚಂದನವನಕ್ಕೆ ನೀಡಿದ್ದಾರೆ. 'ರಾಮಾಚಾರಿ' ಚಿತ್ರವು ಆಗಿನ ಕಾಲದಲ್ಲೇ ಕೆನಡಾದ ಓಂಟಾರಿಯೋ ಫ಼್ಹಿಲಂ ಫ಼ೆಸ್ಟಿನಲ್ಲಿ ಪ್ರದರ್ಶನಗೊಂಡಿದ್ದು ಗಮನಾರ್ಹ ಸಂಗತಿ.

ರೀಮೇಕ್ ಅಲ್ಲ ರವಿಮೇಕ್

ರೀಮೇಕ್ ಹೇಗೆ ಮಾಡಬೇಕು ಎಂಬುದಕ್ಕೆ ರವಿಚಂದ್ರನ್ ಸಿನಿಮಾಗಳು ನಿಜಕ್ಕೂ ಮಾದರಿಯಾಗಿ ನಿಲ್ಲುತ್ತವೆ. ಹಿಂದಿಯ 'ಹೀರೋ' ಸಿನಿಮಾ ರವಿಚಂದ್ರನ್ ಎಂಬ ಅಪ್ಪಟ ಕಲಾವಿದನ ಕುಂಚದಲ್ಲಿ 'ರಣಧೀರ'ನಾದಾಗ, ಮೂಲನಿರ್ದೇಶಕರಾದ ಸುಭಾಷ್ ಗಾಯ್ ಅವರೇ ರವಿಚಂದ್ರನ್ ಅವರ ನಿರ್ದೇಶನವನ್ನು ಕೊಂಡಾಡಿದ್ದರು. ಅನ್ಯಭಾಷೆಯ ಸಿನಿಮಾಗಳನ್ನು ಯಥಾವತ್ ಭಟ್ಟಿ ಇಳಿಸದೆ ತಮ್ಮದೇ ಶೈಲಿಯಲ್ಲಿ ಕನ್ನಡೀಕರಣಗೊಳಿಸುವಲ್ಲಿ ಇವರು ನಿಸ್ಸೀಮರು. ಹಾಗಾಗಿ, ರೀಮೇಕ್ ಗಳ ನಡುವೆ ರವಿಮೇಕ್ ಗಳು ವಿಶಿಷ್ಟವಾಗಿ ಎದ್ದುನಿಲ್ಲುತ್ತವೆ.

ಕೊಡುಗೆಗಳು

ಕನ್ನಡ ಚಿತ್ರರಂಗದ ದೇಸಿದೊರೆ, ನಾದಬ್ರಹ್ಮ ಹಂಸಲೇಖರವರನ್ನು ತಮ್ಮ 'ಪ್ರೇಮಲೋಕ' ಸಿನಿಮಾದ ಮೂಲಕ ಸಂಗೀತ ನಿರ್ದೇಶಕರಾಗಿ ಪರಿಚಯಿಸಿ ಕನ್ನಡ ಗೀತಪರಂಪರೆಯಲ್ಲೊಂದು ಹೊಸ ಸಂಚಲನ ಮೂಡಿಸಿದರು. ಸುಮಾರು ಎರಡು ದಶಕಗಳ ಕಾಲ ರವಿಚಂದ್ರನ್-ಹಂಸಲೇಖ ಜೋಡಿ ಚಂದನವನದಲ್ಲಿ ಅತಿ ಯಶಸ್ವಿ ಜೋಡಿಯೆನಿಸಿಕೊಂಡಿತು.'ಪ್ರೇಮಲೋಕ', 'ರಣಧೀರ' ಸಿನಿಮಾಗಳ ಆಡಿಯೋ ಕ್ಯಾಸೆಟ್ಟುಗಳು ದಾಖಲೆಯ ಮಾರಾಟ ಕಂಡು ಇತಿಹಾಸ ಬರೆದಿವೆ. ಇಂದಿಗೂ ಎಫ಼್.ಎಮ್ ಹಾಗೂ ಟಿ.ವಿ. ವಾಹಿನಿಗಳಲ್ಲಿ ಇವರ ಹಾಡುಗಳದ್ದೆ ಸಿಂಹಪಾಲು. ಜೂಹಿ ಚಾವ್ಲಾ, ಖುಷ್ಬು, ಮೂನ್ ಮೂನ್ ಸೇನ್, ಮಧುಬಾಲ, ಮೀನಾ, ರೋಜಾ, ಭಾನುಪ್ರಿಯ, ಶಿಲ್ಪಾಶೆಟ್ಟಿ ಮುಂತಾದ ಹೆಸರಾಂತ ಪರಭಾಷಾ ನಾಯಕಿಯರನ್ನು ಕನ್ನಡಕ್ಕೆ ತಂದಿದ್ದು ವಿ.ರವಿಚಂದ್ರನ್. ಪ್ರೇಮಕಥೆಗಳ ಬಹುತೇಕ ಕೋನಗಳನ್ನು ಮುಟ್ಟಿ, ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡ ಹೆಗ್ಗಳಿಕೆ ಇವರದು. ಕನ್ನಡಕ್ಕೆ ದೊಡ್ಡ ಬಜೆಟ್ ಸಿನಿಮಾಗಳ ಮೂಲಕ ದೃಶ್ಯಶ್ರೀಮಂತಿಕೆಯನ್ನು ತಂದು ಕೊಟ್ಟವರು ರವಿಚಂದ್ರನ್. ಹಂಸಲೇಖ ಮಾತ್ರವಲ್ಲದೆ ಎಲ್.ಎನ್.ಶಾಸ್ತ್ರಿ, ಸುಮಾ ಶಾಸ್ತ್ರಿ, ಹರಿಕೃಷ್ಣ, ಗೌತಮ್ ಶ್ರೀವತ್ಸ ಮುಂತಾದ ಸಂಗೀತ ನಿರ್ದೇಶಕರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಜಿ ಎಸ್ ವಿ ಸೀತಾರಾಂ ಅವರು ಇವರ ಬಹುಕಾಲದ ಛಾಯಾಗ್ರಾಹಕರಾಗಿದ್ದಾರೆ.

ಚಿತ್ರ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ

'ನಾನು ನನ್ನ ಹೆಂಡ್ತೀರು' ಚಿತ್ರದ ಮೂಲಕ ರವಿಚಂದ್ರನ್ ಸಂಗೀತ ನಿರ್ದೇಶಕರಾದರು. ನಂತರ ತೆರೆಕಂಡ ಓ ನನ್ನ ನಲ್ಲೆ, ಏಕಾಂಗಿ, ಮಲ್ಲ, ಹಠವಾದಿ, ಅಪೂರ್ವ ಸೇರಿದಂತೆ ಹದಿನೈದಕ್ಕು ಹೆಚ್ಚು ಚಿತ್ರಗಳಿಗೆ ಇವರ ಸಂಗೀತ ನಿರ್ದೇಶನವಿದೆ. ಚೋರ ಚಿತ್ತಚೋರ ಚಿತ್ರದ 'ದಿಲ್ಲು ದಿಲ್ಲು ಸೇರಿದಾಗ' ಹಾಡು ಇವರು ಬರೆದ ಮೊದಲ ಸಾಹಿತ್ಯ.

ರವಿಚಂದ್ರನ್ ಚಿತ್ರಗಳು

# ವರ್ಷ ಚಿತ್ರ
೧೯೮೨ ಖದೀಮ ಕಳ್ಳರು
೧೯೮೩ ಚಕ್ರವ್ಯುಹ
೧೯೮೪]] ಪ್ರಳಯಾಂತಕ
೧೯೮೪ ಪ್ರೇಮಿಗಳ ಸವಾಲ್
೧೯೮೫ ಸಾವಿರ ಸುಳ್ಳು
೧೯೮೪ ಪಿತಾಮಹ
ವರ್ಷ- ಕನ್ನಡಚಿತ್ರಗಳು ನಾನೇ ರಾಜ
೧೯೮೬ ಅಸಂಭವ
ವರ್ಷ-ಕನ್ನಡಚಿತ್ರಗಳು ಸ್ವಾಭಿಮಾನ
೧೦ ೧೯೮೫ ನಾನು ನನ್ನ ಹೆಂಡ್ತಿ
೧೧ ೧೯೮೬ ಬಾ ನನ್ನ ಪ್ರೀತಿಸು
೧೨ ೧೯೮೬ ರಾಮಣ್ಣ ಶಾಮಣ್ಣ
೧೩ ೧೯೮೮ ಪ್ರೇಮಲೋಕ
೧೪ ೧೯೮೮ ರಣಧೀರ
೧೫ ೧೯೮೮ ಸಂಗ್ರಾಮ
೧೬ ೧೯೮೮ ಅಂಜದ ಗಂಡು
೧೭ ೧೯೮೯ ಯುಗ ಪುರುಷ
೧೭೮ ೧೯೮೯ ಕಿಂದರ ಜೋಗಿ
೧೯ ೧೯೮೯ ಬ್ರಹ್ಮ ವಿಷ್ಣು ಮಹೇಶ್ವರ
೨೦ ೧೯೮೯ ಯುದ್ಢಕಾಂಡ
೨೧ ೧೯೮೯ ಪೋಲಿ ಹುಡುಗ
೨೨ ೧೯೮೯ ಬಣ್ಣದ ಗೆಜ್ಜೆ
೨೩ ೧೯೯೦ ಅಭಿಮನ್ಯು
೨೪ ೧೯೯೧ ಶಾಂತಿ ಕ್ರಾಂತಿ
೨೫ ೧೯೯೧ ರಾಮಾಚಾರಿ
೨೬ ೧೯೯೨ ಹಳ್ಳಿ ಮೇಷ್ಟ್ರು
೨೭ ೧೯೯೨ ಗೋಪಿಕೃಷ್ಣ
೨೮ ೧೯೯೨ ಗುರುಬ್ರಹ್ಮ
೨೯ ೧೯೯೨ ಮನೆದೇವ್ರು
೩೦ ೧೯೯೨ ಚಿಕ್ಕೆಜಮಾನ್ರು
೩೧ ೧೯೯೨ ಶ್ರೀರಾಮಚಂದ್ರ
೩೨ ೧೯೯೩ ಗಡಿಬಿಡಿ ಗಂಡ
೩೩ ೧೯೯೩ ಅಣ್ಣಯ್ಯ
೩೪ ೧೯೯೪ ಚಿನ್ನ
೩೫ ೧೯೯೪ ರಸಿಕ
೩೬ ೧೯೯೪ ಜಾಣ
೩೭ ೧೯೯೪ ಮಾಂಗಲ್ಯಂ ತಂತುನಾನೇನ
೩೮ ವರ್ಷ-ಕನ್ನಡಚಿತ್ರಗಳು ಪುಟ್ನಂಜ
೩೯ ೧೯೯೭ ಕಲಾವಿದ
೪೦ ೧೯೯೭ ಮೊಮ್ಮಗ
೪೧ ೧೯೯೭ ಸಿಪಾಯಿ
೪೨ ೧೯೯೭ ಚೆಲುವ
೪೩ ೧೯೯೮ ಪ್ರೀತ್ಸೋದ್ ತಪ್ಪಾ?
೪೪ ೧೯೯೮ ಯಾರೇ ನೀನು ಚೆಲುವೆ
೪೫ ೧೯೯೯ ನಾನು ನನ್ನ ಹೆಂಡ್ತೀರು
೪೬ ೧೯೯೯ ರವಿಮಾಮ
೪೭ ೧೯೯೯ ಸ್ನೇಹ
೪೮ ೧೯೯೯ ಓ ಪ್ರೇಮವೇ
೪೯ ೧೯೯೯ ಚೋರ ಚಿತ್ತ ಚೋರ
೫೦ ೨೦೦೦ ಮಹಾತ್ಮ
೫೧ ೨೦೦೦ ಪ್ರೀತ್ಸು ತಪ್ಪೇನಿಲ್ಲ
೫೨ ೨೦೦೦ ಓ ನನ್ನ ನಲ್ಲೆ
೫೩ ೨೦೦೦ ಪ್ರೇಮಕ್ಕೆ ಸೈ
೫೪ ೨೦೦೧ ಕನಸುಗಾರ
೫೫ ೨೦೦೦ ಉಸಿರೇ
೫೬ ೨೦೦೨ ಪ್ರೀತಿ ಮಾಡೋ ಹುಡುಗರಿಗೆಲ್ಲ
೫೭ ೨೦೦೨ ಏಕಾಂಗಿ
೫೮ ೨೦೦೨ ಕೋದಂಡರಾಮ
೫೯ ೨೦೦೩ ಒಂದಾಗೋಣ ಬಾ
೬೦ ೨೦೦೪ ಮಲ್ಲ
೬೧ ೨೦೦೪ ರಾಮಕೃಷ್ಣ
೬೨ ೨೦೦೪ ಸಾಹುಕಾರ
೬೩ ೨೦೦೫ ಅಹಂ ಪ್ರೇಮಾಸ್ಮಿ
೬೪ ೨೦೦೫ ಪಾಂಡು ರಂಗ ವಿಠಲ
೬೫ ೨೦೦೬ ರವಿ ಶಾಸ್ತ್ರೀ
೬೬ ೨೦೦೬ ಹಠವಾದಿ
೬೭ ೨೦೦೫ ಒಡಹುಟ್ಟಿದವಳು
೬೮ ೨೦೦೫ [ನೀಲಕಂಠ]]
೬೯ ವರ್ಷ-ಕನ್ನಡಚಿತ್ರಗಳು ಯುಗಾದಿ
೭೦ ೨೦೦೮ ನೀ ಟಾಟಾ ನಾ ಬಿರ್ಲಾ
೭೧ ೨೦೦೮ ರಾಜಕುಮಾರಿ
'೭೨ ೨೦೧೨ ಹೂ
೭೫ ೨೦೧೩ ದಶಮುಖ
೭೬ ೨೦೧೪ ಪರಮಶಿವ
೭೭ ೨೦೧೪ ಕ್ರೇಜಿ ಸ್ಟಾರ್
೭೮ ೨೦೧೩ ಕ್ರೇಜಿ ಲೋಕ
೭೯ ೨೦೧೪ ಮಾಣಿಕ್ಯ
೮೦ ೨೦೧೪ ದೃಶ್ಯ
೮೧ ೨೦೧೪ ಪರಮ ಶಿವ
೮೨ ೨೦೧೫ ಆಪೂರ್ವ
೮೩ ೨೦೧೫ ಲವ ಯು ಆಲಿಯ
೮೪ ೨೦೧೫ ಮುಂಗಾರು ಮಳೆ ೨
೮೫ ೨೦೧೫ ಲಕ್ಷ್ಮಣ

ಹೆಬ್ಬುಲಿ

ಉಲ್ಲೇಖಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.