ಎನ್.ವೀರಾಸ್ವಾಮಿ

ನಾಗಪ್ಪ ವೀರಾಸ್ವಾಮಿ (೧೭ ಏಪ್ರಿಲ್ ೧೯೩೨ – ೨೩ ಆಗಸ್ಟ್ ೧೯೯೨)-  ಕನ್ನಡ ಚಲನಚಿತ್ರ ನಿರ್ಮಾಪಕ ಮತ್ತು ವಿತರಕ, ಈಶ್ವರಿ ಪ್ರೊಡಕ್ಷನ್ಸ್ ಸಂಸ್ಥೆಯ ಅಡಿಯಲ್ಲಿ     ೧೯೭೦ ರಿಂದ ಆರಂಭಿಸಿ ೧೯೯೨ ರಲ್ಲಿ ತಮ್ಮ ಸಾವಿನ ತನಕದ ಅವಧಿಯಲ್ಲಿ   ೧೭ ಕನ್ನಡ ಚಿತ್ರಗಳನ್ನು  ಮತ್ತು ಒಂದು ಹಿಂದಿ ಚಿತ್ರವನ್ನು    ನಿರ್ಮಿಸಿದ್ದಾರೆ.  ಅವರು ಕನ್ನಡ ಚಿತ್ರ ತಾರೆ ಮತ್ತು ತಾರಾನಿರ್ದೇಶಕ ವಿ. ರವಿಚಂದ್ರನ್  ಅವರ  ತಂದೆ .[1]

N. Veeraswamy
ಜನನ
Nagappa Veeraswamy

17 ಏಪ್ರಿಲ್ 1932
Otteri, North Arcot, Madras Presidency, British India
ನಿಧನ23 ಆಗಸ್ಟ್ 1992(1992-08-23) (ವಯಸ್ಸು 60)
ರಾಷ್ಟ್ರೀಯತೆIndian
ವೃತ್ತಿFilm producer, distributor
Years active1955–1992
ಸಂಗಾತಿ(ಗಳು)Pattammal
ಮಕ್ಕಳು5; including V. Ravichandran

ಆರಂಭಿಕ ಜೀವನ ಮತ್ತು ವೃತ್ತಿ ಜೀವನ

ವೀರಾಸ್ವಾಮಿ  ೧೭  ಏಪ್ರಿಲ್ ೧೯೩೨ ರಂದು  ಹಿಂದಿನ ಮದ್ರಾಸ್ ಪ್ರಾಂತದ ಉತ್ತರ ಆರ್ಕಾಟ್ ಜಿಲ್ಲೆಯ ಒಟ್ಟೇರಿಯಲ್ಲಿ  ತಮಿಳು ಮಾತನಾಡುವ ಮುದಲಿಯಾರ್ ಕುಟುಂಬವೊಂದರಲ್ಲಿ  ಜನಿಸಿದರು.   ತಂದೆ  ನಾಗಪ್ಪ ಮತ್ತು ತಾಯಿ ಕಾಮಾಕ್ಷಮ್ಮ . ೧೯೫೦ ರ ದಶಕದ ಆರಂಭದಲ್ಲಿ  ಅವರು  ಡ್ರಿಮ್ಲ್ಯಾಂಡ್ ಚಲನಚಿತ್ರ ನಿಗಮದಲ್ಲಿ  ಒಬ್ಬ ಅಟೆಂಡೆಂಟ್  ಆಗಿ  ಕೆಲಸ ಆರಂಭಿಸಿ ಚಲನಚಿತ್ರರಂಗದಲ್ಲಿ ತೊಡಗಿಕೊಂಡರು . ಅವರು  ೧೯೫೫ರಲ್ಲಿ ತನ್ನ ಸ್ನೇಹಿತ ಗಂಗಪ್ಪ ಅವರೊಡನೆ ಸೇರಿ ಉದಯ ಪಿಕ್ಚರ್ಸ್ ಲಾಂಛನದ ಅಡಿಯಲ್ಲಿ   ಚಿತ್ರ ವಿತರಣೆ ಆರಂಭಿಸಿದರು.    ೧೯೬೨ ರಲ್ಲಿ, ಅವರು ಈಶ್ವರೀ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದರು .[2]  ೧೯೭೧ರಲ್ಲಿ ಆ ಸಂಸ್ಥೆಯ ಮೊದಲ ಚಿತ್ರವಾಗಿ  ಕುಲಗೌರವ  ಅನ್ನು ಬಿಡುಗಡೆ ಮಾಡಲಾಯಿತು, ಮತ್ತು ಅದರಲ್ಲಿ ರಾಜ್‌ಕುಮಾರ್   ಪ್ರಮುಖ ಪಾತ್ರ ವಹಿಸಿದ್ದರು. ಎರಡು ನಂತರದ ಚಲನಚಿತ್ರಗಳು, ನಾಗರಹಾವು (೧೯೭೨) ಮತ್ತು ಭೂತಯ್ಯನ ಮಗ ಅಯ್ಯು (೧೯೭೪), ತುಂಬ ವ್ಯಾಪಕವಾಗಿ ಜನಪ್ರಿಯವಾಗಿ  ವಿಮರ್ಶಾತ್ಮಕ ಮತ್ತು ವಾಣಿಜ್ಯ ಯಶಸ್ಸನ್ನು ಕಂಡವು. ಅವರು ನಂತರ  ನಾ ನಿನ್ನ ಮರೆಯಲಾರೆ (೧೯೭೬), ಚಕ್ರವ್ಯೂಹ (೧೯೮೩), ರಾಮಾಚಾರಿ (೧೯೯೧) ಮತ್ತು ಹಳ್ಳಿಮೇಷ್ಟ್ರು (೧೯೯೨) ನಂತಹ ಅನೇಕ ಯಶಸ್ವೀ ಚಿತ್ರಗಳನ್ನು  ತಯಾರಿಸಿದರು. ರಾಮಾಚಾರಿ ಮತ್ತು ಹಳ್ಳಿ ಮೇಷ್ಟ್ರು ಚಿತ್ರಗಳಲ್ಲಿ ಅವರ ಮಗ ವಿ ರವಿಚಂದ್ರನ್  ಅವರು ಪ್ರಮುಖ ಪಾತ್ರಗಳಲ್ಲಿದ್ದು ಅವರ ವೃತ್ತಿಜೀವನದ ಮೈಲಿಗಲ್ಲುಗಳಾದವು .[3][4]

ಚಲನಚಿತ್ರಗಳ ಪಟ್ಟಿ

ಹಿಂದಿ

  • ಇಂಕ್ವಿಲಾಬ್ (೧೯೮೪)

ತಮಿಳು

  • ಪಡಿಕ್ಕಾದವನ್ (೧೯೮೫)

ಉಲ್ಲೇಖಗಳು

  1. "Ravichandaran's father N Veeraswamy was a famous producer". The Times of India. Retrieved 2 November 2015.
  2. "Eshwari Pictures Veeraswamy Profile". chitraloka.com. 16 April 2014. Archived from the original on 2 November 2015. Retrieved 2 November 2015.
  3. "N Veeraswamy Remembered". Indiaglitz. 18 April 2013. Archived from the original on 2 November 2015. Retrieved 2 November 2015.
  4. "What do Rajinikanth and Rajkumar have in common?". indiatimes.com. Retrieved 15 May 2015.

ಬಾಹ್ಯ ಕೊಂಡಿಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.