ಬಿ. ಎಸ್. ಲಿಂಗದೇವರು
ಬಿ.ಎಸ್.ಲಿಂಗದೇವರು ಕನ್ನಡದ ಕಿರುತೆರೆ ಮತ್ತು ಚಲನಚಿತ್ರ ನಿರ್ದೇಶಕರು ಮತ್ತು ನಿರ್ಮಾಪಕರು. ಹಲವಾರು ಧಾರಾವಾಹಿಗಳನ್ನು ಮತ್ತು ಸಿನೆಮಾಗಳನ್ನು ಮಾಡಿದ್ದಾರೆ. ಉತ್ತಮ ಕಾದಂಬರಿಯಾಧಾರಿತ ಧಾರಾವಾಹಿಗಳನ್ನು ಮತ್ತು ಸಿನೆಮಾಗಳನ್ನು ಮಾಡುವ ಮೂಲಕ ಪ್ರಶಂಸೆಗೊಳಗಾಗಿದ್ದಾರೆ. ೧೯೬೭ರಲ್ಲಿ ಜನಿಸಿದ ಲಿಂಗದೇವರು ಈ ಕ್ಷೇತ್ರಕ್ಕೆ ಬಂದಾಗಿನಿಂದ ನಟ, ನಿರ್ದೇಶಕ, ನಿರ್ಮಾಪಕರಾಗಿ ೧೯೯೦ನೇ ಇಸವಿಯಿಂದ ಸಾವಿರಕ್ಕೂ ಹೆಚ್ಚಿನ ಎಪಿಸೋಡುಗಳನ್ನು ತಯಾರಿಸಿದ್ದಾರೆ.
ಬಿ.ಎಸ್.ಲಿಂಗದೇವರು | |
---|---|
ಜನನ | ೧೯೬೭ |
ವೃತ್ತಿ | ಸಿನಿಮಾ ನಿರ್ದೇಶಕರು, ಸಿನಿಮಾ ನಿರ್ಮಾಪಕರು |
ಟೆಲಿ ಸೀರಿಯಲ್ ಗಳು
- ಶಿಕಾರಿ - ಯಶವಂತ ಚಿತ್ತಾಲ ಕಾದಂಬರಿಯಾಧಾರಿತ
- ಬಂಡಾಯ - ವ್ಯಾಸರಾಯ ಬಲ್ಲಾಳರ ಕಾದಂಬರಿಯಾಧಾರಿತ
- ಜೀವನಚಕ್ರ - ಸಿ.ಎನ್.ಮುಕ್ತಾರ ಕಾದಂಬರಿಯಾಧಾರಿತ
ಮೆಗಾಧಾರಾವಾಹಿ
ಕಲ್ಯಾಣಿ
ಸಿನೆಮಾಗಳು
- ಮೌನಿ (ಯು.ಆರ್.ಅನಂತಮೂರ್ತಿಯವರ ಕತೆಯಾಧಾರಿತ)
- ಕಾಡಬೆಳದಿಂಗಳು
- ನಾನು ಅವನಲ್ಲ... ಅವಳು
ಇತರ
- ಶರಣವಾಹಿನಿ - ೧೨ನೇ ಶತಮಾನದ ಅಪ್ರಸಿದ್ಧ ವಚನಕಾರರ ಬಗೆಗಿನ ಸರಣಿ
- ವಾರ್ತಾ ಇಲಾಖೆ, ರೇಷ್ಮೆ ಇಲಾಖೆ, Department of Agriculture Marketing, DSERT, Central Institute of Indian Languages, ಭಾರತ ಕೇಂದ್ರ ಸರ್ಕಾರಗಳಿಗಾಗಿ ಡಾಕ್ಯುಮೆಂಟರಿಗಳನ್ನು ತಯಾರಿಸಿದ್ದಾರೆ.
ನಿರ್ವಹಿಸಿದ ಜವಾಬ್ದಾರಿಗಳು
- ಜ್ಯೂರಿ ಸದಸ್ಯ, ೨೦೧೦-೧೧, Natioanal film award, Government Of India.(2011)
- ಸಬ್ಸಿಡಿ ಸಿನೆಮಾ ಆಯ್ಕೆ ಸಮಿತಿ ಅಧ್ಯಕ್ಷ, ೨೦೧೧, Government of Karnataka (2013)
- ಜ್ಯೂರಿ ಸದಸ್ಯ, ೨೦೧೩, Natioanal film award, Government Of India.(2014).
- Worked as Technical Director for a project titled, Information support system in Science and Mathematics for Rural higher secondary schools. Project sponsored by “The office of the Principal Scientific Advisor, Government of India.
ಪ್ರದರ್ಶನಗಳು/ಪ್ರಶಸ್ತಿಗಳು
- ಮೌನಿ ಚಿತ್ರವು ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇಂಡಿಯನ್ ಪನೋರಾಮಾ ವಿಭಾಗಕ್ಕೆ ಹಾಗೂ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿದೆ. ಅತ್ಯುತ್ತಮ ಕತೆಗಾಗಿ ರಾಜ್ಯಪ್ರಶಸ್ತಿ ದೊರೆತಿದೆ. ಮುಖ್ಯ ಪಾತ್ರಕ್ಕಾಗಿ jury “special mention” ರಾಷ್ಟೀಯ ಪ್ರಶಸ್ತಿ ದೊರೆತಿದೆ.
- ಕಾಡಬೆಳದಿಂಗಳು ಚಿತ್ರವು ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇಂಡಿಯನ್ ಪನೋರಾಮಾ ವಿಭಾಗಕ್ಕೆ ಹಾಗೂ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿದೆ. ಈ ಚಿತ್ರದ ಕತೆಗಾಗಿ ಜೋಗಿಯವರಿಗೆ ಅತ್ಯುತ್ತಮ ಕತೆಗಾರ ರಾಜ್ಯಪ್ರಶಸ್ತಿ ದೊರೆತಿದೆ.
- ನಾನು ಅವನಲ್ಲ... ಅವಳು ಸಿನೆಮಾದಲ್ಲಿ ಅತ್ಯುತ್ತಮ ನಟನೆಗಾಗಿ ವಿಜಯ್ ಅವರಿಗೆ ರಾಷ್ಟ್ರಪ್ರಶಸ್ತಿ ಹಾಗೂ ಅತ್ಯುತ್ತಮ ಮೇಕಪ್ ಗಾಗಿ ರಾಷ್ಟ್ರಪ್ರಶಸ್ತಿ.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.