ಘಂಟಸಾಲ

ಘಂಟಸಾಲ (ಡಿಸೆಂಬರ್ ೪, ೧೯೨೨ - ಫೆಬ್ರುವರಿ ೧೧, ೧೯೭೪) ವಿಶಿಷ್ಟ ಧ್ವನಿಯ ಹಿನ್ನೆಲೆಗಾಯಕರಾಗಿ ಚಲನಚಿತ್ರಲೋಕದಲ್ಲಿ ಅಜರಾಮರರಾಗಿದ್ದಾರೆ. ಹಿಂದಿನ ಪೀಳಿಗೆಯವರಲ್ಲಿ ಘಂಟಸಾಲ ಅವರ ಹಾಡುಗಳನ್ನು ಕೇಳದವರೇ ವಿರಳ. ಅಂದಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಪ್ರಾರಂಭ ಆಗುತ್ತಿದ್ದುದೇ ಘಂಟಸಾಲ ಅವರು ಹಾಡಿದ ಭಕ್ತಿಗೀತೆ “ನಮೋ ವೆಂಕಟೇಶ ನಮೋ ತಿರುಮಲೇಶ" ಎಂಬ ಹಾಡಿನಿಂದ. ಯಾವುದೇ ಗಣೇಶನ ಹಬ್ಬ ಬಂದರೆ ಘಂಟಸಾಲ ಹಾಡಿರುವ ಹಂಸದ್ವನಿ ರಾಗದ “ವಾತಾಪಿ ಗಣಪತಿಂ ಭಜೇಹಂ” ಇರಲೇಬೇಕು. ತಿರುಪತಿಗೆ ಹೋದರೆ ಏಳೇಳು ಬೆಟ್ಟಗಳಲ್ಲೂ ಹೋದ ಹೋದೆಡೆಗಳಲ್ಲೆಲ್ಲಾ ಘಂಟಸಾಲ ದ್ವನಿಯೇ ಮಾರ್ದನಿಸುತ್ತಿರುತ್ತದೆ. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಅದರಲ್ಲೂ ಪ್ರಮುಖವಾಗಿ ತೆಲುಗು, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಘಂಟಸಾಲ ಪ್ರಖ್ಯಾತಿ ಪಡೆದಿದ್ದರು.

ಘಂಟಸಾಲ
ಚಿತ್ರ:Ghantasala Venkateswara Rao (Telugu Indian Playback Singer).jpg
ಘಂಟಸಾಲ ಅವರು ೧೯೫೧ರ ವರ್ಷದಲ್ಲಿ
ಜನನ
ಘಂಟಸಾಲ ವೆಂಕಟೇಶ್ವರ ರಾವ್

ಡಿಸೆಂಬರ್ ೪, ೧೯೨೨
ಚೌಟಪಲ್ಲಿ, ಗುಡಿವಾಡ, ಕೃಷ್ಣಜಿಲ್ಲೆ, ಆಂದ್ರಪ್ರದೇಶ
ನಿಧನಫೆಬ್ರುವರಿ ೧೧, ೧೯೭೪
ಚೆನ್ನೈ
ವೃತ್ತಿಚಲನಚಿತ್ರ ಹಿನ್ನೆಲೆ ಗಾಯಕರು, ಸಂಗೀತ ನಿರ್ದೇಶಕರು
Years active೧೯೪೨–೧೯೭೪
Known forವಿಶಿಷ್ಟಧ್ವನಿಯ ಚಲನಚಿತ್ರ ಹಿನ್ನೆಲೆ ಗಾಯನ
ಜಾಲತಾಣwww.ghantasala.info

ಭಕ್ತಿಸಂಗೀತ

ತಿರುಮಲ ತಿರುಪತಿ ದೇವಸ್ಥಾನವನ್ನು ನೆನೆದಾಗಲೆಲ್ಲ ಘಂಟಸಾಲ ಅವರ ಹೆಸರೂ ನೆನಪಾಗುತ್ತದೆ. ಅವರು ಹಾಡಿದ ತಿರುಮಲ ಒಡೆಯ ಶ್ರೀನಿವಾಸರ ಕುರಿತ ಒಂದೊಂದು ಹಾಡೂ ಅನರ್ಘ್ಯ ರತ್ನಗಳು. ಭಗವದ್ಗೀತೆಯನ್ನು ಮನೆ ಮನೆಗೂ ತಮ್ಮ ಸುಶ್ರಾವ್ಯ ದ್ವನಿಯಲ್ಲಿ ತಲುಪಿಸಿದವರಲ್ಲಿ ಕೂಡ ಘಂಟಸಾಲ ಮೊದಲಿಗರು. ಅದೇ ರೀತಿ ರಾಮದಾಸರ ಕೃತಿ, ಜಯದೇವ ಕವಿಯ ಅಷ್ಟಪದಿ ಹೀಗೆ ಅಸಂಖ್ಯಾತ ಶಾಸ್ತ್ರೀಯ ಹಾಡುಗಳು ಕೂಡ ಘಂಟಸಾಲ ಅವರ ದ್ವನಿಯಲ್ಲಿ ಜನಮಾನಸಕ್ಕೆ ಹತ್ತಿರದಲ್ಲಿ ನಿಂತವು.

ಘಂಟಸಾಲ ಸಂಗೀತ ನಿರ್ದೇಶನದ ಕೆಲವೊಂದು ಚಲನಚಿತ್ರಗಳು

ಇವರು ಹಲವಾರು ಚಲನಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ.

ಘಂಟಸಾಲ ಅವರು ಹಾಡಿರುವ ಕೆಲವು ಚಲನಚಿತ್ರಗೀತೆಗಳು

ಪ್ರಶಸ್ತಿ /ಪುರಸ್ಕಾರ

  • ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ - ೧೯೭೧.
  • ತಿರುಪತಿ ದೇವಸ್ಥಾನದ ಮೊದಲ ಆಸ್ಥಾನ ವಿದ್ವಾಂಸ ಎಂಬ ಹೆಗ್ಗಳಿಕೆ.

ವಿದಾಯ

ಘಂಟಸಾಲ ಅವರು ಫೆಬ್ರುವರಿ 11, 1974ರಲ್ಲಿ ಈ ಲೋಕವನ್ನಗಲಿದರು. ಆದರೆ ಅವರು ಹಾಡಿದ ಹಾಡುಗಳು ಮತ್ತು ಅವರ ಹೆಸರು ಚಿರಸ್ಮರಣೀಯ.

ನೋಡಿ

ಆಕರಗಳು

  1. ಘಂಟಸಾಲ ಕುರಿತಾದ ತಾಣ
  2. ಇಂಗ್ಲಿಷ್ ವಿಕಿಪೀಡಿಯಾದಲ್ಲಿ
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.