ವಿಜಯಪುರ ತಾಲ್ಲೂಕು

ಚರಿತ್ರೆ

ವಿಜಯಪುರದ ಪುರಾತನ ಹೆಸರು ಬಿಜ್ಜನಹಳ್ಳಿ. ಈ ಜಿಲ್ಲೆಯು ಐತಿಹಾಸಿಕ ಸ್ಥಳಗಳಿಂದ ಕೂಡಿದೆ. 10-11 ನೆ ಶತಮಾನಗಳಲ್ಲಿ ಕಲ್ಯಾಣಿ ಚಾಲುಕ್ಯರಿಂದ ಸ್ಥಾಪಿತವಾಯಿತು. 13ನೇ ಶತಮಾನದ ಕೊನೆಯ ಹೊತ್ತಿಗೆ ದೆಹಲಿಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಬಂದ ವಿಜಯಪುರ, ಕ್ರಿ.ಶ. 1347ರಲ್ಲಿ ಬೀದರನ ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಗಾಯಿತು.

ಕ್ರಿ.ಶ. 1518 ರಲ್ಲಿ ಬಹಮನಿ ಸುಲ್ತಾನೇಟ್ ಸಾಮ್ರಾಜ್ಯ ಒಡೆದು ಐದು ರಾಜ್ಯಗಳಾಗಿ ಹಂಚಿಹೋಯಿತು. ಆಗ ರೂಪುಗೊಂಡ ರಾಜ್ಯಗಳಲ್ಲಿ ವಿಜಯಪುರವೂ ಒಂದು. ಇದು ಆದಿಲ್ ಶಾಹಿ ಸುಲ್ತಾನರ ರಾಜ್ಯ. ಕ್ರಿ.ಶ. 1686 ರಲ್ಲಿ ಮುಘಲ್ ಸಾಮ್ರಾಜ್ಯದ ಔರಂಗಜೇಬ್ ಈ ಪ್ರದೇಶವನ್ನು ಗೆದ್ದ ನಂತರ ಆದಿಲ್ ಶಾಹಿ ಸುಲ್ತಾನರ ಆಳ್ವಿಕೆ ಕೊನೆಗೊಂಡಿತು.

ಕ್ರಿ.ಶ. 1724ರಲ್ಲಿ ವಿಜಯಪುರ ಹೈದರಾಬಾದನ ನಿಜಾಮರ ಆಳ್ವಿಕೆಗೆ ಒಳಪಟ್ಟಿತು. ಕ್ರಿ. ಶ. 1760 ರಲ್ಲಿ ಮರಾಠರಿಂದ ನಿಜಾಮರು ಸೋಲಲ್ಪಟ್ಟಾಗ ವಿಜಯಪುರ ನಿಜಾಮರಿಂದ ಮರಾಠ ಪೇಶಾವರ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ಕ್ರಿ.ಶ. 1818 ರ 3 ನೆ ಆಂಗ್ಲ-ಮರಾಠಾ ಯುದ್ದದಲ್ಲಿ ಬ್ರಿಟಿಷರಿಂದ ಮರಾಠರು ಸೋಲಲ್ಪಟ್ಟಾಗ ವಿಜಯಪುರ ಮರಾಠರಿಂದ ಬ್ರಿಟಿಷರ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ವಿಜಯಪುರನ್ನು ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿಗೆ ಹಸ್ತಾಂತರಿಸಲಾಯಿತು. ಬಳಿಕ ಸಾತಾರಾ ರಾಜರಿಗೆ ಓಪ್ಪಿಸಲಾಯಿತು.

ಕ್ರಿ.ಶ. 1848 ರಲ್ಲಿ ಸಾತಾರಾ ಮತ್ತು ವಿಜಯಪುರನ್ನು ಮುಂಬಯಿ ಪ್ರಾಂತ್ಯಕ್ಕೆ ಸೇರಿಸಲಾಯಿತು. ಬ್ರಿಟಿಷರಿಂದ ನಿರೂಪಿಸಲ್ಪಟ್ಟ ಕಲಾದಗಿ ಜಿಲ್ಲೆಗೆ ಈಗಿನ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಸೇರಿಸಲ್ಪಟ್ಟವು. ಕಲಾದಗಿ ಜಿಲ್ಲಾ ಕೇಂದ್ರವನ್ನು ಕ್ರಿ.ಶ. 1885 ರಲ್ಲಿ ವಿಜಯಪುರಕ್ಕೆ ಜಿಲ್ಲಾಡಳಿತ ಪ್ರದೇಶವಾಗಿ ವರ್ಗಾವಣೆ ಮಾಡಲಾಯಿತು ಮತ್ತು ವಿಜಯಪುರನ್ನು ಆಗಿನ ಮುಂಬಯಿ (ಬಾಂಬೆ) ರಾಜ್ಯಕ್ಕೆ ಸೇರಿಸಲಾಯಿತು.

ತದನಂತರ ಕ್ರಿ.ಶ. 1956 ರಲ್ಲಿ ಆಗಿನ ಮೈಸೂರು ರಾಜ್ಯಕ್ಕೆ (ಈಗಿನ ಕರ್ನಾಟಕ ರಾಜ್ಯಕ್ಕೆ) ಸೇರಿಸಲಾಯಿತು. ವಿಜಯಪುರ ನಗರವು ಒಂದು ಕಾಲದಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ನಗರವಾಗಿತ್ತು. ಪ್ರಸ್ತುತ ವಿಜಯಪುರ ನಗರವು ಕರ್ನಾಟಕ ರಾಜ್ಯದ 9ನೇ ಅತಿ ದೊಡ್ಡ ನಗರವಾಗಿದೆ. ವಿಜಯಪುರ ನಗರವನ್ನು ಕರ್ನಾಟಕ ರಾಜ್ಯ ಸರ್ಕಾರವು 2013ರಲ್ಲಿ ವಿಜಯಪುರ ಮಹಾನಗರ ಪಾಲಿಕೆ ಯೆಂದು ಘೋಷಿಸಿದೆ.

ಅದು ಸಮುದ್ರಮಟ್ಟದಿಂದ 600 ಮೀಟರ್ ಎತ್ತರದಲ್ಲಿರುವ ಗುಡ್ಡದ ಮೇಲೆ ನಿರ್ಮಿತವಾಗಿದೆ ಮತ್ತು ಅದಕ್ಕೆ ಹೇರಳವಾದ ಅಂತರ್ಜಲದ ಲಭ್ಯತೆ ಇದೆ. ಯುದ್ಧತಂತ್ರದ ದೃಷ್ಟಿಯಿಂದ, ಇವೆರಡೂ ಬಹಳ ಮುಖ್ಯವಾದ ಸಂಗತಿಗಳು. ಈ ನಗರವು ಇಷ್ಟೊಂದು ಸುರಕ್ಷಿತವಾಗಿರುವುದರಿಂದಲೇ, ಇದನ್ನು ಮತ್ತೆ ಮತ್ತೆ ರಾಜಧಾನಿಯಾಗಿ ಆಯ್ಕೆ ಮಾಡಲಾಯಿತು.

ವಿಜಯಪುರವು ಏಳನೆಯ ಶತಮಾನದಲ್ಲಿಯೇ ವೈಭವಯುತವಾಗಿತ್ತೆಂದು ತೀರ್ಮಾನಿಸಲು, ಅಲ್ಲಿ ಸಿಕ್ಕಿರುವ ಒಂದು ಶಿಲಾಸ್ತಂಭ ಮತ್ತು ಶಾಸನಗಳು ಹಾಗೂ ಸಾಹಿತ್ಯಕೃತಿಗಳಲ್ಲಿ ದೊರಕಿರುವ ಆಧಾರಗಳು ಬಹಳ ನೆರವು ನೀಡಿವೆ. ಆದರೆ, ಆ ಕಾಲದ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳ ವೈಭವದ ಸಾಕ್ಷಿಯಾಗಿ ಯಾವ ಕುರುಹೂ ಉಳಿದಿಲ್ಲ.

ಯೂಸುಫ್ ಆಲಿ ಷಾ, ಬಹಮನಿ ಸಾಮ್ರಾಜ್ಯದಿಂದ ಬಿಡುಗಡೆ ಪಡೆದು ಸ್ವತಂತ್ರ ರಾಜ್ಯವನ್ನು ಸ್ಥಾಪಿಸಲು ತೀರ್ಮಾನಿಸಿದನು. ಹೊಸ ರಾಜಮನೆತನವನ್ನು ಆದಿಲ್ ಶಾಹಿಯೆಂದು ಕರೆಯಲಾಯಿತು. ಅವನು ವಿಜಯಪುರವನ್ನು ತನ್ನ ರಾಜಧಾನಿಯಾಗಿ ಆರಿಸಿಕೊಂಡನು. ಆದಿಲ್ ಶಾಹಿಗೆ ಸೇರಿದ ಅನೇಕ ರಾಜರುಗಳು ವಿಜಯಪುರ ನಗರದ ವಿಭಿನ್ನ ಹಂತಗಳ ಬೆಳವಣಿಗೆಗೆ ಕಾರಣರಾದರು. ಯೂಸುಫ್ ಆಲಿ ಷಾ, ಇಸ್ಮೈಲ್ ಆಲಿ ಷಾ, ಇಬ್ರಾಹಿಂ ಆಲಿ ಷಾ-1, ಆಲಿ ಅದಿಲ್ ಷಾ, ಇಬ್ರಾಹಿಂ ಆಲಿ ಷಾ-2 ಮತ್ತು ಮೊಹಮ್ಮದ್ ಅದಿಲ್ ಷಾ ಅವರು ಆ ರಾಜರಲ್ಲಿ ಮುಖ್ಯರು.

ವಿಜಯನಗರ ಸಾಮ್ರಾಜ್ಯ, ಮುಘಲ್ ಸಾಮ್ರಾಜ್ಯ ಮತ್ತು ಬಹಮನಿ ಸಾಮ್ರಾಜ್ಯದಿಂದ ಪ್ರತ್ಯೇಕವಾದ ಇತರ ಸುಲ್ತಾನರೊಂದಿಗಿನ ನಿರಂತರವಾದ ಕಲಹವು, ಆದಿಲ್ ಶಾಹಿಯ ಸ್ಥಿರತೆಯನ್ನು ಕುಂದಿಸಿತು. ಕಾಲಕ್ರಮದಲ್ಲಿ, ಮಹಾರಾಷ್ಟ್ರದ ಪೇಷ್ವೆಗಳು ಹಾಗೂ ಹೈದರಾಬಾದಿನ ನಿಜಾಮರು ವಿಜಯಪುರವನ್ನು ಆಕ್ರಮಿಸಿಕೊಂಡರು. ಅಂತಿಮವಾಗಿ, ಬ್ರಿಟಿಷರು ಅದರ ಒಡೆಯರಾಗಿ, ಅದನ್ನು ಮುಂಬಯಿ ಪ್ರೆಸಿಡೆನ್ಸಿಗೆ ಸೇರಿಸಿದರು.

ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳಿಗೆ ವಿಜಯಪುರ ಒಳ್ಳೆಯ ನಿದರ್ಶನ. ಅಲ್ಲಿರುವ ಶಿಲ್ಪಗಳನ್ನು ಮಸೀದಿಗಳು, ಸಮಾಧಿಗಳು, ಅರಮನೆಗಳು ಮತ್ತು ಕೋಟೆ ಎಂಬ ನಾಲ್ಕು ವಿಭಾಗಗಳಾಗಿ ವರ್ಗೀಕರಿಸಬಹುದು. ಈಚಿನ ದಿನಗಳಲ್ಲಿ ರೂಪು ತಳೆದಿರುವ ಕೆಲವು ಹಿಂದೂ ದೇವಾಲಯಗಳಿಗೆ, ಕಲೆಯ ದೃಷ್ಟಿಯಿಂದ ಹೆಚ್ಚಿನ ಮಹತ್ವವಿಲ್ಲ.

ಈ ಕಿರು ಬರೆಹದಲ್ಲಿ, ವಿಜಯಪುರದ ಪ್ರಮುಖ ಸ್ಮಾರಕಗಳ ಸಂಕ್ಷಿಪ್ತ ಪರಿಚಯ ಮಾತ್ರ ಸಾಧ್ಯ. ಈ ಬರೆಹವನ್ನು ಇಲ್ಲಿಯೇ ಒದಗಿಸಿರುವ ಪುರಕ ಮಾಹಿತಿಗಳಿಂದ ವಿಸ್ತರಿಸಿಕೊಳ್ಳಬೇಕು. ವಿಜಯಪುರದ ಕೋಟೆಯು ಭಾರತದ ಬಹಳ ದೊಡ್ಡ ಕೋಟೆಗಳಲ್ಲಿ ಒಂದು. ದೀರ್ಘ ವೃತ್ತಾಕಾರದ(ಎಲಿಪ್ಟಿಕಲ್) ಈ ಕೋಟೆಯ ಪರಿಧಿಯು ಆರು ಮೈಲಿಗಳಿಗಿಂತಲೂ ಹೆಚ್ಚಾಗಿದೆ. ಕೋಟೆಯ ಗೋಡೆಗಳು ಹೆಚ್ಚು ಕಡಿಮೆ ಐವತ್ತು ಅಡಿ ದಪ್ಪವಾಗಿವೆ. ಅದರ ಎತ್ತರ 1820 ಅಡಿಗಳು. ಅದರ ಸುತ್ತಲೂ ಮೂವತ್ತರಿಂದ ಐವತ್ತು ಅಡಿಗಳಷ್ಟು ಆಳವಾದ ಕಂದಕವಿದೆ.

ಕೋಟೆಯನ್ನು, ಬೇರೆ ಬೇರೆ ವಿನ್ಯಾಸಗಳ 96 ಒರಗುಗಂಬಗಳಿಂದ(ಬ್ಯಾಸ್ಟಿಯನ್)(ಒತ್ತು ಅಟ್ಟಾಲಕ) ಬಲಪಡಿಸಲಾಗಿದೆ. ಇವುಗಳಲ್ಲದೆ, ಕೋಟೆಯ ದ್ವಾರಗಳಲ್ಲಿ ಇನ್ನೂ ಹತ್ತು ಒರಗುಗಂಬಗಳಿವೆ. ಕೋಟೆಯೊಳಗೆ ಪ್ರವೇಶಿಸಲು ಐದು ಬಾಗಿಲುಗಳಿವೆ. ಅವುಗಳನ್ನು ಮೆಕ್ಕಾ ದರ್ವಾಜಾ, ಶಾಹಪುರ ದರ್ವಾಜಾ, ಬಹಮನೀ ದರ್ವಾಜಾ, ಆಲಿಪುರ ದರ್ವಾಜಾ ಮತ್ತು ಮನಗೋಳೀ ದರ್ವಾಜಾ(ಫತೇ ದರ್ವಾಜಾ) ಎಂಬ ಹೆಸರುಗಳಿಂದ ಗುರುತಿಸಲಾಗಿದೆ.

ಈ ಕೋಟೆಯ ಇತಿಹಾಸದಲ್ಲಿಯೇ ಇದನ್ನು ಭೇದಿಸಿ ಒಳನುಗ್ಗಲು ಯಾವ ಶತ್ರುವಿಗೂ ಸಾಧ್ಯವಾಗಿಲ್ಲವೆಂದು ಹೇಳಲಾಗಿದೆ. ಕೋಟೆಯ ಹೊರವಲಯದಲ್ಲಿ ಬಹು ವಿಶಾಲವಾದ ನಗರವೊಂದರ ಅವಶೇಷಗಳಿವೆ. ಇಲ್ಲಿರುವ ಅಸಂಖ್ಯಾತ ಗೋರಿಗಳು, ಮಸೀದಿಗಳು, ಅರಮನೆಗಳು ಮತ್ತು ಇತರ ನಿರ್ಮಾಣಗಳು, ಈ ನಗರದ ಗತವೈಭವಕ್ಕೆ ವಿಪುಲವಾದ ಸಾಕ್ಷಿಗಳನ್ನು ಒದಗಿಸುತ್ತವೆ.

ಗೋಲ್ ಗುಂಬಜ್ ವಿಜಯಪುರದ ಅತ್ಯಂತ ಆಕರ್ಷಕವಾದ ಸ್ಮಾರಕ. ಇದನ್ನು ಮುಹಮ್ಮದ್ ಆದಿಲ್ ಷಾ,(1627-56) ತನ್ನ ಸಮಾಧಿ ಹಾಗೂ ಸ್ಮಾರಕವಾಗಿ ನಿರ್ಮಿಸಿದನು. ಅದರ ಕಟ್ಟುವಿಕೆಯ ಹೊಣೆ ಹೊತ್ತವನು, ದಾಬುಲ್ ನ ಪ್ರಸಿದ್ಧ ವಾಸ್ತುಶಿಲ್ಪಯಾದ ಯಾಕುಬ್. ಗೋಲ್ ಗುಂಬಜ್ ನ ತಳಹದಿಯು 205 ಅಡಿಗಳ ಚಚ್ಚೌಕ. ಅದರ ಸುತ್ತಲೂ ಇರುವ ಗೋಡೆಗಳು 198 ಅಡಿ ಎತ್ತರವಾಗಿವೆ.

ಈ ಗೋಡೆಗಳ ಮೇಲೆ ಗುಂಬಜವು ಕಣ್ಣಿಗೆ ಕಾಣುವ ಯಾವುದೇ ಆಸರೆಯೂ ಇಲ್ಲದೆ ನಿಂತಿದೆ. ಗೋಡೆಗಳಿಂದ ಸುತ್ತುವರಿಯಲ್ಪಟ್ಟ ಮತ್ತು ಗುಂಬಜದ ಕೆಳಗಿರುವ ವಿಶಾಲವಾದ ಹಾಲಿನ(ಹಾಲ್) ವಿಸ್ತೀರ್ಣವು 1833767 ಚದುರಡಿಗಳು. ಗೋಲ್ ಗುಂಬಜನ ಗೋಡೆಗಳಲ್ಲಿ ಪ್ರತಿಯೊಂದರಲ್ಲಿಯೂ ಮೂರು ಕಮಾನುಗಳನ್ನು ರಚಿಸಲಾಗಿದೆ.

ಗೋಲ್ ಗುಂಬಜ್ ನ ಮಧ್ಯದಲ್ಲಿರುವ ಗೋಳಾಕೃತಿಯ ಶಿಖರವು ಯಾವುದೇ ಕಂಬ ಅಥವಾ ರಚನೆಯನ್ನು ಆಧರಿಸಿ ನಿಂತಿಲ್ಲ. ರೋಮ್ ನಗರದಲ್ಲಿರುವ ಸೈಂಟ್ ಪೀಟರ್ ಬ್ಯಾಸಿಲಿಕಾದ ಡೋಮನ್ನು ಹೊರತುಪಡಿಸಿದರೆ, ಇದು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದು. ಈ ಡೋಮ್ ನಿಂತಿರುವುದು ಪೆಂಡಾಂಟಿವ್ ಎಂಬ ತತ್ವದ ಮೇಲೆ. ಪರಸ್ಪರ ಕ್ರಾಸ್ ಆಗುವ ಕಮಾನುಗಳ ವ್ಯವಸ್ಥೆಯೇ ಈ ಡೋಮಿಗೆ ಆಧಾರವಾಗಿರುತ್ತದೆ. ಭಾರತದಲ್ಲಿ ಬೇರೆಲ್ಲಿಯೂ ಈ ಬಗೆಯ ರಚನೆಯಿಲ್ಲ.

ಸ್ಪೇನ್ ದೇಶದ ಕಾರ್ಡೋಬಾದಲ್ಲಿರುವ ಬೃಹತ್ ಮಸೀದಿಯಲ್ಲಿ ಮಾತ್ರ ಇಂತಹ ರಚನೆಯನ್ನು ಬಳಸಲಾಗಿದೆ. ಎತ್ತರದ ಬಿಂದುವಿನಲ್ಲಿ ಕೊನೆಯಾಗುವ ಎಂಟು ಕಮಾನುಗಳು, ನಿಯತ ವಾದ ಜಾಗಗಳಲ್ಲಿ ಒಂದನ್ನೊಂದು ಅರ್ಧಿಸುತ್ತವೆ. ಈ ಗುಂಬಜ್ ನಲ್ಲಿರುವ ಪ್ರತಿಧ್ವನಿಗುಣವು ಅದರ ವಿಶೇಷ ಲಕ್ಷಣಗಳಲ್ಲಿ ಒಂದು. ಇಲ್ಲಿ ಆಡಿದ ಮಾತು ಅಥವಾ ಮಾಡಿದ ಶಬ್ದವು ಹನ್ನೊಂದು ಬಾರಿ ಪ್ರತಿಧ್ವನಿಸುತ್ತದೆ. ಅದನ್ನು ಮೂವತ್ತೇಳು ಕಿಲೋಮೀಟರುಗಳ ದೂರದಿಂದ ಕೇಳಬಹುದು.

ಹಾಲ್ ನಿಂದ 33.22 ಮೀಟರುಗಳ ಎತ್ತರದಲ್ಲಿ ಸುಮಾರು ಮೂರೂಕಾಲು ಅಡಿ ಅಗಲದ ಗ್ಯಾಲರಿಯಿದೆ. ಇದು ಗುಂಬಜಿನ ಒಳ ಪರಿಧಿಯ ಸುತ್ತಲೂ ವೃತ್ತಾಕಾರವಾಗಿ ಹರಡಿಕೊಂಡಿದೆ. ಇದನ್ನು ಪಿಸುಗುಟ್ಟುವ ಗ್ಯಾಲರಿ(ವಿಷ್ಪರಿಂಗ್ ಗ್ಯಾಲರಿ) ಎಂದು ಕರೆಯುತ್ತಾರೆ. ಏಕೆಂದರೆ, ಇಲ್ಲಿ ಅತ್ಯಂತ ಮೆಲುದನಿಯಲ್ಲಿ ಆಡಿದ ಮಾತನ್ನು ಕೂಡ ಗ್ಯಾಲರಿಯ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಕೇಳಬಹುದು.

ಒಂದೇ ಒಂದು ಬಾರಿ ಗಟ್ಟಿಯಾಗಿ ಚಪ್ಪಾಳೆ ತಟ್ಟಿದರೆ, ಅದು ಹತ್ತು ಸಲ ಪ್ರತಿಧ್ವನಿಸುತ್ತದೆ. ಗುಂಬಜಿನ ಗೋಡೆಗಳ ಹೊರ ಭಾಗದ ಮೇಲೆ ಪಾರಿವಾಳಗಳು, ಆನೆಗಳು, ಕಮಲ ದಳಗಳು, ಮತ್ತು ಕಂಠಹಾರಗಳ ಸುಂದರವಾದ ಕೆತ್ತನೆ ಹಾಗೂ ಶಿಲ್ಪಗಳನ್ನು ನೋಡಬಹುದು. ಹಾಲಿನ ಮಧ್ಯದಲ್ಲಿರುವ ವೇದಿಕೆಯ ಮೇಲೆ, ಮುಹಮ್ಮದ್ ಆದಿಲ್ ಷಾ ಮತ್ತು ಅವನ ಬಂಧುಗಳ ಕೃತಕವಾದ ಸಮಾಧಿಗಳಿವೆ. ನಿಜವಾದ ಸಮಾಧಿಗಳು ನೆಲಮಾಳಿಗೆಯಲ್ಲಿ ಸುರಕ್ಷಿತವಾಗಿವೆ.

ವಿಜಯಪುರದಲ್ಲಿ ಚಾರಿತ್ರಿಕ ಮಹತ್ವದ ಇನ್ನೂ ಅನೇಕ ಸಂಗತಿಗಳಿವೆ. ಅವುಗಳ ಬಗೆಗಿನ ವಿವರಗಳನ್ನು ಮುಸ್ಲಿಂ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಯಾವುದೇ ವೆಬ್ ಸೈಟಿನಲ್ಲಿ ಪಡೆಯಬಹುದು. ವಿಜಯಪುರವು ಸೂಫಿಸಂತರು ಹಾಗೂ ಅವರು ನಿರೂಪಿಸಿದ ಧರ್ಮಕ್ಕಾಗಿಯೂ ಪ್ರಸಿದ್ಧವಾಗಿದೆ. ಅವರು ಧಾರ್ಮಿಕ ಸಮನ್ವಯದ ಅತ್ಯುತ್ತಮ ಮಾದರಿಗಳನ್ನು ನೀಡಿದ್ದಾರೆ.

ಅಷ್ಟೇ ಅಲ್ಲ, ಶಾಶ್ವತವಾದ ಮೌಲ್ಯವಿರುವ ಕಾವ್ಯವೂ ಅವರಿಂದ ರಚಿತವಾಗಿದೆ. ವಿಜಯಪುರವು ಕರ್ನಾಟಕದ ಪ್ರಮುಖ ಪ್ರವಾಸೀ ಆಕರ್ಷಣೆಗಳಲ್ಲಿ ಒಂದು. ಅದು ತನ್ನ ವಾಸ್ತುಶಿಲ್ಪ ಮತ್ತು ಚಾರಿತ್ರಿಕ ಮಹತ್ವಗಳಿಗೋಸ್ಕರ ಹೆಸರುವಾಸಿಯಾಗಿದೆ.

ಕ್ರಿ.ಶ. 1489 ರಿಂದ 1686 ರ ಅವಧಿಯಲ್ಲಿ ರಾಜ್ಯಭಾರ ಮಾಡಿದ ಆದಿಲ್ ಶಾಹಿ ರಾಜವಂಶದ ಉನ್ನತಿಯ ದಿನಗಳಲ್ಲಿ, ಈ ನಗರವು ಸ್ಥಾಪಿತವಾಯಿತು. ಆದರೆ, ಅದರ ಚರಿತ್ರೆಯು ಏಳನೆಯ ಶತಮಾನದಷ್ಟು ಹಿಂದೆ ಹೋಗುತ್ತದೆ. ಆಗ, ಆ ಊರನ್ನು ವಿಜಯಪುರವೆಂದು ಕರೆಯುತ್ತಿದ್ದರು. ಈಗಲೂ ಸ್ಥಳೀಯರು ವಿಜಯಪುರ ಎಂಬ ಹೆಸರನ್ನೇ ಬಳಸುತ್ತಾರೆ.

ಭೌಗೋಳಿಕ

ಈ ತಾಲ್ಲೂಕದ ವಿಸ್ತೀರ್ಣ 2659 ಚ.ಕಿ.ಮೀ ಮತ್ತು ವಾರ್ಷಿಕ ಮಳೆ 59 ಸೆ.ಮೀ. ವಿಜಾಪುರ ತಾಲ್ಲೂಕವು 115 ಹಳ್ಳಿಗಳು,44 ಗ್ರಾಮ ಪಂಚಾಯತಗಳು, ಮತ್ತು 3 ಹೊಬಳ್ಳಿಗಳನ್ನೊಳಗೊಂಡಿದೆ.

ವಿಜಯಪುರ ತಾಲ್ಲೂಕವು ಪೂರ್ವಕ್ಕೆ ಸಿಂದಗಿ ತಾಲ್ಲೂಕು, ದಕ್ಷಿಣಕ್ಕೆ ಬಸವನ ಬಾಗೇವಾಡಿ ತಾಲ್ಲೂಕು, ದಕ್ಷಿಣ-ಪಶ್ಚಿಮಕ್ಕೆ ಜಮಖಂಡಿ ತಾಲ್ಲೂಕು, ಪಶ್ಚಿಮಕ್ಕೆ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕು, ಉತ್ತರ-ಪಶ್ಚಿಮಕ್ಕೆ ಮಹಾರಾಷ್ಟ್ರಸಾಂಗಲಿ ಜಿಲ್ಲೆಯ ಜತ್ತ ತಾಲ್ಲೂಕು ಮತ್ತು ಉತ್ತರಕ್ಕೆ ಇಂಡಿ ತಾಲ್ಲೂಕಿನಿಂದ ಆವೃತಗೊಂಡಿದೆ.

ಕರ್ನಾಟಕ ಸರ್ಕಾರವು ಫೆಬ್ರುವರಿ ೮, ೨೦೧೩ ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನಲ್ಲಿ ತಿಕೋಟಾ ಮತ್ತು ಬಬಲೇಶ್ವರ ನಗರಗಳನ್ನು ಹೊಸ ತಾಲ್ಲೂಕಗಳನ್ನಾಗಿ ರಚಿಸಿದೆ.

ವಿಜಯಪುರ ತಾಲ್ಲೂಕವು ವಿಜಯಪುರ ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ತಾಲ್ಲೂಕಾಗಿದೆ.

ಹವಾಮಾನ

  • ಬೇಸಿಗೆ-ಚಳಿಗಾಲ- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ವಿಜಯಪುರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣತೆ ಅಂದರೆ 42.7 ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ 9.5 ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆ ಕಾಲ - 35 °C - 42 °C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು ಮಳೆಗಾಲ - 18 °C - 28°Cಡಿಗ್ರಿ ಸೆಲ್ಸಿಯಸ್
  • ಮಳೆ - ಪ್ರತಿ ವರ್ಷ ಮಳೆ 300 - 600ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ - ಗಾಳಿ ವೇಗ 18.2 ಕಿಮಿ/ಗಂ (ಜೂನ), 19.6 ಕಿಮಿ/ಗಂ (ಜುಲೈ)ಹಾಗೂ 17.5 ಕಿಮಿ/ಗಂ (ಅಗಸ್ಟ್) ಇರುತ್ತದೆ.

ಸಾಂಸ್ಕೃತಿಕ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮಿಶ್ರಿತ ವಿಶಿಷ್ಠವಾದ ಕನ್ನಡ ವಿಜಯಪುರ ಕನ್ನಡವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ (ಚಡಚಣ, ತಾಂಬಾ, ವಂದಾಲ ಮುಂ.)ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: ಜೋಳ, ಸಜ್ಜೆ, ಶೇಂಗಾ,ಚಿಕ್ಕು, ಸೂರ್ಯಕಾಂತಿ, ಉಳ್ಳಾಗಡ್ಡಿ (ಈರುಳ್ಳಿ). ವಿಜಯಪುರದ ದ್ರಾಕ್ಷಿ, ದಾಳಿಂಬೆ, ನಿಂಬೆ ಹಣ್ಣುಗಳು ಪರರಾಜ್ಯ ಹಾಗೂ ಪರದೇಶಗಳಿಗೆ ರಫ್ತು ಆಗುತ್ತವೆ.

ಆಹಾರ

ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರ ದ ಜೋಳದ ರೊಟ್ಟಿ , ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಚಾರಿತ್ರಿಕ ಘಟನೆಗಳು

ಧಾರ್ಮಿಕ ಕೇಂದ್ರಗಳು

  • ಅರಕೇರಿ - ಪ್ರಸಿದ್ಧ ಶ್ರೀ ಅಮೋಘ ಸಿದ್ದೇಶ್ವರ ದೇವಾಲಯವಿದೆ
  • ಬಬಲಾದಿ - ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿಗಳ ವಂಶ ಪಾರಂಪರ್ಯ ಗದ್ದುಗೆಗಳು ಮತ್ತು ಭವ್ಯವಾದ ಚಂದ್ರಗಿರಿ ಮಠವಿದೆ.
  • ಹಣಮಸಾಗರ - ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿಗಳ ಶಾಖಾ ಮಠವಿದೆ.
  • ಕತ್ನಳ್ಳಿ - ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿಗಳ ಶಾಖಾ ಮಠವಿದೆ.
  • ಬಬಲೇಶ್ವರ - ಮಹಾನ್ ತಪಶ್ವಿ ಶ್ರೀ ಗುರುಪಾದೇಶ್ವರ ಮಠವಿದೆ.
  • ದೇವರ ಗೆಣ್ಣೂರ - ಶ್ರೀ ಮಹಾಲಕ್ಷ್ಮಿ ದೇವಾಲಯ ಸಕಲ ಭಕ್ತರ ಧಾರ್ಮಿಕ ಸ್ಥಾನವಾಗಿದೆ.
  • ಹಲಗಣಿ - ಶ್ರೀ ಹಲಗಣೇಶ (ಹನುಮಾನ) ದೇವಾಲಯವು ಭಕ್ತಿಯ ಪರಾಕಾಷ್ಟೆಯಾಗಿದೆ.
  • ಕಂಬಾಗಿ - ಶ್ರೀ ಹನುಮಾನ ದೇವಾಲಯವಿದೆ.
  • ಕಾಖಂಡಕಿ - ದಾಸ ಸಾಹಿತ್ಯದ ಮಹಿಪತಿದಾಸರ ವೃಂದಾವನವಿದೆ.
  • ಉಪ್ಪಲದಿಣ್ಣಿ - ಪ್ರಖ್ಯಾತ ಹಾಗೂ ಐತಿಹಾಸಿಕ ಶ್ರೀ ಸಂಗಮನಾಥ ದೇವಾಲಯವಿದೆ.
  • ಬೆಳ್ಳುಬ್ಬಿ - ಪ್ರಖ್ಯಾತ ಹಾಗೂ ಐತಿಹಾಸಿಕ ಶ್ರೀ ಮಳೇಮಲ್ಲೇಶ್ವರ ದೇವಾಲಯವಿದೆ.
  • ಕನ್ನೂರ - ಸ.ಸ.ಗಣಪತರಾವ ಮಹಾರಜರು ಸ್ಥಾಪಿಸಿರುವ ಶಾಂತಿ ಕುಟೀರ ಆಶ್ರಮವಿದೆ.
  • ದ್ಯಾಬೇರಿ - ಪ್ರಖ್ಯಾತ ಶ್ರೀ ವಾಗ್ದೇವಿ ದೇವಾಲಯವಿದೆ.
  • ಸಾರವಾಡ - ಇತಿಹಾಸ ಪ್ರಸಿದ್ಧ ಈಶ್ವರ ದೇವಾಲಯವಿದೆ.
  • ನಿಡೋಣಿ - ಪ್ರಸಿದ್ದ ಶ್ರೀ ರಾಮೇಶ್ವರ ದೇವಾಲಯವಿದೆ.
  • ಸುತಗುಂಡಿ - ಪ್ರಖ್ಯಾತ ಶ್ರೀ ಪರಮಾನಂದ ದೇವಸ್ಥಾನವಿದೆ.
  • ಸೋಮದೇವರಹಟ್ಟಿ - ಪ್ರಸಿದ್ದ ಶ್ರೀ ದುರ್ಗಾದೇವಿ ದೇವಾಲಯವಿದೆ
  • ತಿಕೋಟಾ - ವಿಜಯಪುರದಲ್ಲಿರುವ ಕಪ್ಪು ಕಲ್ಲಿನ ತಾಜಮಹಲ್ ಎಂದು ಕರೆಯಿಸಿಕೊಳ್ಳುವ ಇಬ್ರಾಹಿಂ ರೋಜಾದ ಶಿಲ್ಪಿ ಮಲೀಕ್‌ ಸಂದಲನ ಸಮಾಧಿಯಿದೆ. ಅದರಂತೆ ಇಸ್ಲಾಂ ಧರ್ಮದ ಸೂಫಿ ಸಂತನಾಗಿದ್ದ ಹಾಜಿಮಸ್ತಾನ್ ದರ್ಗಾ ಮತ್ತು ಬಡಕಲ್ಲ ಸಾಹೇಬರ ದರ್ಗಾಯಿದೆ.

ಪ್ರಮುಖ ವ್ಯಕ್ತಿಗಳು

ಸಂಸ್ಕೃತಿ

ಲಂಬಾಣಿ ಜನಾಂಗದ ಮಹಿಳೆ
ಉತ್ತರ ಕರ್ನಾಟಕದ ಊಟ
ಕೃಷ್ಣ ಗೋಪಾಲ ಜೋಶಿ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ.ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ಮಹಿಳೆ ಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. ಜಿಲ್ಲೆಯಲ್ಲಿ ಲಂಬಾಣಿ ಜನಾಂಗವು ವಿಶೇಷವಾಗಿದೆ.

ಧರ್ಮಗಳು

ವಿಜಯಪುರ ತಾಲ್ಲೂಕಿನಲ್ಲಿ ಹಿಂದೂ, ಮುಸ್ಲಿಂ, ಕ್ರಿಸ್ಟಿಯನ್ ಹಾಗೂ ಜೈನ ಧರ್ಮದ ಜನರಿದ್ದಾರೆ.

ಹಬ್ಬಗಳು

ಪ್ರತಿವರ್ಷ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸ ವ, ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಭಾಷೆಗಳು

ತಾಲ್ಲೂಕಿನ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ, ಉರ್ದು ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.

ಕಲೆ

ಲಾವಣಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹಂತಿ ಪದಗಳು ಮತ್ತು ಮೊಹರಮ್ ಹೆಜ್ಜೆ ಕುಣಿತ ಮುಂತಾದವುಗಳು ಈ ನಾಡಿನ ಕಲೆಯಾಗಿದೆ.

ಹಣಕಾಸು

ತಾಲ್ಲೂಕಿನಲ್ಲಿ ಅನೇಕ ಹಣಕಾಸು ಸಂಸ್ಥೆಗಳು ಕಾರ್ಯಾನಿರ್ವಹಿಸುತ್ತವೆ. ವಿಜಯಪುರ ನಗರದ ಬಸವನ ಬಾಗೇವಾಡಿ ರಸ್ತೆಯ ಇಬ್ರಾಹಿಮಪುರ ಗೇಟಿನ ಬಳಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಕಚೇರಿಯಿದೆ.

ಆರ್ಥಿಕತೆ

ತಾಲ್ಲೂಕಿನಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದಿದೆ.

ವ್ಯಾಪಾರ

ವಿಜಯಪುರ ನಗರವು ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ.

ಉದ್ಯೋಗ

ತಾಲ್ಲೂಕಿನಲ್ಲಿ ಫಲವತ್ತಾದ ಭೂಮಿ ಇದುವುದರಿಂದ ಸುಮಾರು 70% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಜಿಲ್ಲೆಯ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ತಯಾರಿಕೆ, ಕುರಿ ಮತ್ತು ಆಡು ಸಾಕಾಣಿಕೆ ಉಪ ಕಸುಬುಗಳಾಗಿವೆ.

ಕೃಷಿ

ಕೃಷಿ ಬಿಜಾಪೂರ ತಾಲ್ಲೂಕಿನ ಮುಖ್ಯ ವೃತ್ತಿ. ಕೃಷಿಗೆ ನೀರಿನ ಸರಬರಾಜು ಭೀಮಾ ನದಿ ಮತ್ತು ಆಲಮಟ್ಟಿಯಲ್ಲಿನ ಕೃಷ್ಣಾ ಅಣೆಕಟ್ಟಿನಿಂದ ಆಗುತ್ತದೆ. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ಜೋಳ, ನೆಲಗಡಲೆ (ಶೆಂಗಾ), ಸೂರ್ಯಕಾಂತಿ ಮತ್ತು ಕಬ್ಬು.

ನೀರಾವರಿ

ವಿಜಯಪುರ ತಾಲ್ಲೂಕಿನ ಪ್ರತಿಶತ ೩೦ ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕೆರೆಗಳು

ವಿಜಯಪುರ ತಾಲ್ಲೂಕಿನ ಕೆರೆಗಳು

ಡೋಮನಾಳ, ಕಗ್ಗೋಡ, ಮಮದಾಪುರ ಸಣ್ಣ ಕೆರೆ, ಮಮದಾಪುರ ದೊಡ್ಡ ಕೆರೆ, ಹೊನ್ನುಟಗಿ, ಲೋಹಗಾಂವ, ಅರಕೇರಿ, ನಿಡೋಣಿ ಹಳೆ ಕೆರೆ, ನಿಡೋಣಿ ಹೊಸ ಕೆರೆ, ಉಪ್ಪಲದಿನ್ನಿ, ಕುಮಟಗಿ ಹಳೆ ಕೆರೆ, ಕುಮಟಗಿ ಹೊಸ ಕೆರೆ, ಯತ್ನಾಳ, ದ್ಯಾಬೇರಿ, ಅಂಕಲಗಿ, ಆಹೇರಿ, ಹುಣಶ್ಯಾಳ, ಯಕ್ಕುಂಡಿ, ಮಖಣಾಪುರ, ಹಂಚನಾಳ, ಕಗ್ಗೋಡ, ಭರಟಗಿ, ಕಾತ್ರಾಳ, ಬೊಮ್ಮನಹಳ್ಳಿ, ಕುಮಠೆ, ಕನಮಡಿ, ಡೋಮನಾಳ, ಆಗೇರ ಜಂಬಗಿ.

ವಿಜಯಪುರ ತಾಲ್ಲೂಕಿನ ಜಿನುಗು ಕೆರೆಗಳು

ಬಬಲೇಶ್ವರ, ಸೋಮದೇವರಹಟ್ಟಿ-1, ಸೋಮದೇವರಹಟ್ಟಿ-2, ಬಿಜ್ಜರಗಿ, ನಾಗರಾಳ, ಹುಣಶ್ಯಾಳ-1, ಹುಣಶ್ಯಾಳ-2, ಬೇಗಂ ತಲಾಬ್ ಕೆರೆ, ಅಲಿಯಾಬಾದ್(ಅಲಿಬಾದ್), ರಾಂಪುರ, ಕುಮಠೆ, ಟಕ್ಕಳಕಿ, ಲೋಹಗಾಂವ, ಕಾಖಂಡಕಿ -1, ಕಾಖಂಡಕಿ-2, ಧನ್ನರಗಿ, ಇಟ್ಟಂಗಿಹಾಳ, ಇಟ್ಟಂಗಿಹಾಳ, ಕಿಲಾರಹಟ್ಟಿ.

ಸಪ್ತ ಕೆರೆ ಒಡಲು ತುಂಬುವ ಕೃಷ್ಣೆ

ಸತತ ಬರ, ಅಂತರ್ಜಲ ಕುಸಿತದಿಂದ ಹನಿ ಕುಡಿಯುವ ನೀರಿಗೂ ತತ್ವಾರ ಪಡುವ ವಿಜಯಪುರ ತಾಲ್ಲೂಕಿನ ಕೆಲ ಗ್ರಾಮಗಳ ಜನರ ಸಮಸ್ಯೆಗೆ ಈಗ ಇತಿಶ್ರೀ ಬೀಳುವ ಸಮಯ. ಜಲಸಂಪನ್ಮೂಲ ಇಲಾಖೆ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ವತಿಯಿಂದ ರೂಪಿಸಿದ ಸಪ್ತ ಕೆರೆ ತುಂಬುವ ಯೋಜನೆಯಿಂದಾಗಿ ನೆಮ್ಮದಿ ಪಡೆದಿದೆ.

ಬ್ಯಾಂಕುಗಳು

ರಾಷ್ತ್ರೀಕೃತ ಬ್ಯಾಂಕುಗಳು

ಖಾಸಗಿ ಬ್ಯಾಂಕುಗಳು

ಸಹಕಾರಿ ಬ್ಯಾಂಕುಗಳು

ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕುಗಳು

* ಡಿ.ಸಿ.ಸಿ.ಬ್ಯಾಂಕ, ವಿಜಯಪುರ .(ಮುಖ್ಯ ಕಚೇರಿ)

  • ಶಾಖಾ ಡಿ.ಸಿ.ಸಿ.ಬ್ಯಾಂಕಗಳು

ಬಬಲೇಶ್ವರ, ತಿಕೋಟಾ, ಕೃಷ್ಣಾನಗರ

ಭಾರತೀಯ ಜೀವ ವಿಮಾ ನಿಗಮ(ಎಲ್.ಐ.ಸಿ.)ದ ಕಚೇರಿಗಳು

ಖಜಾನೆ ಕಚೇರಿಗಳು

ವಿಜಯಪುರ ನಗರದಲ್ಲಿ ಮುಖ್ಯ ಖಜಾನೆ ಕಚೇರಿಯಿದೆ.

ಹಳ್ಳಿಗಳು

ವಿಜಯಪುರ ತಾಲ್ಲೂಕಿನ ಹಳ್ಳಿಗಳು

ಗ್ರಾಮ ಪಂಚಾಯತಿಗಳು

ವಿಜಯಪುರ ತಾಲ್ಲೂಕಿನ ಗ್ರಾಮ ಪಂಚಾಯತಿಗಳು

ನೆಮ್ಮದಿ (ಹೋಬಳಿ) ಕೇಂದ್ರಗಳು

ವಿಜಯಪುರ ತಾಲ್ಲೂಕಿನ ನೆಮ್ಮದಿ ಕೇಂದ್ರಗಳು / ಹೋಬಳಿ ಕೇಂದ್ರಗಳು

ಬಬಲೇಶ್ವರ, [[ವಿಜಯಪುರ ]], ತಿಕೋಟಾ, ನಾಗಠಾಣ, ಮಮದಾಪುರ.

ನಾಡ ಕಚೇರಿಗಳು

ವಿಜಯಪುರ ತಾಲ್ಲೂಕಿನ ನಾಡ ಕಚೇರಿಗಳು

ಮಮದಾಪುರ

ಕಂದಾಯ ಕಚೇರಿಗಳು

ವಿಜಯಪುರ ತಾಲ್ಲೂಕಿನ ಕಂದಾಯ ಕಚೇರಿಗಳು

ಬಬಲೇಶ್ವರ, ವಿಜಯಪುರ, ತಿಕೋಟಾ, ನಾಗಠಾಣ, ಮಮದಾಪುರ.

ತಾಲ್ಲೂಕು ಪಂಚಾಯತಿ

ವಿಜಯಪುರ ತಾಲ್ಲೂಕಿನಲ್ಲಿ ಒಟ್ಟು 33 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ.

ವಿಜಯಪುರ ತಾಲ್ಲೂಕು ಐತಿಹಾಸಿಕ ಹಿನ್ನಲೆಯುಳ್ಳ ತಾಲ್ಲೂಕಾಗಿದ್ದು ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುತ್ತದೆ. ಸ್ಮಾರಕಗಳ ಪೈಕಿ ವಿಜಯಪುರ ನಗರದಲ್ಲಿರುವಂತಹ ಗೋಲಗುಮ್ಮಟವು ಜಗತ್ಪ್ರಸಿದ್ಧವಾಗಿದೆ. ವಿಜಯಪುರ ತಾಲೂಕು 119 ಕಂದಾಯ ಗ್ರಾಮಗಳನ್ನು ಹೊಂದಿದ್ದು 46 ಗ್ರಾಮ ಪಂಚಾಯಿತಿಗಳು ಇರುತ್ತವೆ. ಕರ್ನಾಟಕ ಪಂಚಾಯತರಾಜ್ ಅಧಿನಿಯಮ 1993 ಎಂದು ನೂತನ ಶಾಸನವನ್ನು ಜಾರಿಗೆ ತರಲಾಗಿದೆ.ಅದು 1993ರ ಏಪ್ರೀಲ್ 30 ರಂದು ಮಾನ್ಯ ರಾಜ್ಯಪಾಲರ ಅನುಮೋದನೆ ಪಡೆಯುವ ಮೂಲಕ ಕರ್ನಾಟಕ ಪಂಚಾಯತರಾಜ್ ಕಾಯ್ದೆ [(1993 ರ ಕರ್ನಾಟಕ ಅಧಿನಿಯಮ ಸಂಖ್ಯೆ 14)]ಪ್ರಕಾರ ಜಾರಿಗೆ ಬಂದಿದೆ. ಅದರಂತೆ ಜನರು ಹೆಚ್ಚು ಹೆಚ್ಚಾಗಿ ಪಾಲ್ಗೋಳ್ಳುವಂತೆ ಮಾಡುವ ಮತ್ತು ಗ್ರಾಮೀಣಾಭೀವೃದ್ಧಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಸಲುವಾಗಿ ಮತ್ತು ಸ್ಥಳೀಯ ಸ್ವಯಂ ಸರ್ಕಾರದ ಘಟಕಗಳಂತೆ ಕಾರ್ಯ ನಿರ್ವಹಿಸುವದಕ್ಕಾಗಿ ಪಂಚಾಯತಿಗಳಿಗೆ ಸಂಬಂಧಪಟ್ಟಂತೆ ಸಂವಿಧಾನದ ತಿದ್ದುಪಡಿಗೆ ಅನುಸಾರವಾಗಿ ರಾಜ್ಯದಲ್ಲಿ ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟಗಳಲ್ಲಿ ಚುನಾಯಿತ ಸಂಸ್ಥೆಗಳು ಇರುವ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸ್ಥಾಪಿಸಲು ಸದರಿ ಅಧಿನಿಯಮವನ್ನು ಜಾರಿಗೆ ತರಲಾಗಿದೆ. ಸದರಿ ಅಧಿನಿಯಮದ ಸೆಕ್ಷೆನ್ 119 ರ ಮತ್ತು 120 ರ ಪ್ರಕಾರ ವಿಜಯಪುರದ ತಾಲೂಕು ಪಂಚಾಯತಿಯನ್ನು ಸ್ಥಾಪಿಸಿ ರಚನೆ ಮಾಡಲಾಗಿದೆ. ತಾಲೂಕು ಪಂಚಾಯತಿಯಲ್ಲಿ ಅಧಿನಿಯಮದ ಸೆಕ್ಷೆನ್ 121 ರ ಪ್ರಕಾರ ನಿರ್ಧರಿಸಿದಂತೆ ಒಟ್ಟು 33 ಜನ ಚುನಾಯಿತ ಸದಸ್ಯರಿರುತ್ತಾರೆ. ಹಾಗೂ ಸೆಕ್ಷೆನ್ 138 ರ ಪ್ರಕಾರ ಚುನಾಯಿತರಾದ ಒಬ್ಬ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿರುತ್ತಾರೆ. ಈ ಸಂಸ್ಥೆಯು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಸೆಕ್ಷೆನ್ 119(1) ಮತ್ತು (2) ರ ಪ್ರಕಾರ ವಿಜಯಪುರ ತಾಲ್ಲೂಕು ಪಂಚಾಯತ ಎಂಬ ಹೆಸರಿನ ನಿಗಮಿತ ನಿಕಾಯವಾಗಿರುತ್ತದೆ.

ವಿಜಯಪುರ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು

ಜಿಲ್ಲಾ ಪಂಚಾಯತ

ವಿಜಯಪುರ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು

ಉಚಿತ ಪ್ರಸಾದನಿಲಯಗಳು

ವಿಜಯಪುರ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು

ವಿಜಯಪುರ, ಅರ್ಜುಣಗಿ, ಹೊನವಾಡ, ಕಳ್ಳಕವಟಗಿ, ಬಿಜ್ಜರಗಿ, ಬಾಬಾನಗರ, ನಿಡೋಣಿ, ಮಮದಾಪುರ, ತಿಕೋಟಾ, ನಾಗಠಾಣ, ಶಿವಣಗಿ, ಭುರಣಾಪುರ, ಕನ್ನೂರ, ಬೊಮ್ಮನಳ್ಳಿ, ಲೋಹಗಾಂವ, ಬಬಲೇಶ್ವರ, ಹೊನ್ನಳ್ಳಿ, ಐನಾಪುರ, ಕತಕನಹಳ್ಳಿ, ಕಾಖಂಡಕಿ, ಕಗ್ಗೋಡ, ಹೊನ್ನುಟಗಿ.

ವಿಜಯಪುರ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು

ವಿಜಯಪುರ, ತಿಕೋಟಾ, ನಾಗಠಾಣ, ಹೊನ್ನುಟಗಿ.

  • ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ, ವಿಜಯಪುರ

ವಿಜಯಪುರ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು

  • ಆದಿನಾಥ ಅಲ್ಪಸಂಖ್ಯಾತರ ಉಚಿತ ಪ್ರಸಾದ ನಿಲಯ, ವಿಜಯಪುರ
  • ಸಜ್ಜನ ಗಾಣಿಗೇರ ಉಚಿತ ಪ್ರಸಾದ ನಿಲಯ, ವಿಜಯಪುರ
  • ಕಾಳಿದಾಸ ಉಚಿತ ಪ್ರಸಾದ ನಿಲಯ, ವಿಜಯಪುರ
  • ಶ್ರೀ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ವಿಜಯಪುರ
  • ಶ್ರೀ ಶಾಂತವೀರ ಉಚಿತ ಪ್ರಸಾದ ನಿಲಯ, ಬಬಲೇಶ್ವರ
  • ಸಲಫಿಯಾ ಅಲ್ಪಸಂಖ್ಯಾತರ ಉಚಿತ ಪ್ರಸಾದ ನಿಲಯ, ಐನಾಪುರ
  • ಮಾತೋಶ್ರೀ ಶೆಂಕ್ರಮ್ಮ ತಾಯಿ ಉಚಿತ ಪ್ರಸಾದ ನಿಲಯ, ಕತಕನಹಳ್ಳಿ
  • ಶ್ರೀ ಮಲ್ಲಿಕಾರ್ಜುನ ಉಚಿತ ಪ್ರಸಾದ ನಿಲಯ, ಹೊನ್ನಳ್ಳಿ
  • ಸತಿ ಸಾಮಕಾ ಮಾತಾ ಉಚಿತ ಪ್ರಸಾದ ನಿಲಯ, ಮಿಂಚನಾಳ ಎಲ್‌ಟಿ
  • ಜೈ ಹನುಮಾನ ಉಚಿತ ಪ್ರಸಾದ ನಿಲಯ, ಕನ್ನಾಳ
  • ವಿನೋಬಾ ಭಾವೆ ಉಚಿತ ಪ್ರಸಾದ ನಿಲಯ, ಯೋಗಾಪುರ, ವಿಜಯಪುರ
  • ಡಾ.ಬಿ.ಆರ್.ಅಂಬೇಡ್ಕರ್ ಉಚಿತ ಪ್ರಸಾದ ನಿಲಯ, ವಿಜಯಪುರ
  • ಶ್ರೀ ಮಂಗಮ್ಮಾದೇವಿ ಉಚಿತ ಪ್ರಸಾದ ನಿಲಯ, ಹೊನಗನಹಳ್ಳಿ
  • ಶ್ರೀ ರೇಣುಕಾ ಉಚಿತ ಪ್ರಸಾದ ನಿಲಯ, ಹಡಗಲಿ
  • ಶ್ರೀ ಅಮೋಘ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ಜಾಲಗೇರಿ ಎಲ್‌ಟಿ
  • ಶ್ರೀ ಗಣಪತಿ ಮಹಾರಾಜ ಉಚಿತ ಪ್ರಸಾದ ನಿಲಯ, ಶಾಂತಿ ಕುಟೀರ, ಕನ್ನೂರ
  • ಶ್ರೀ ಸಿದ್ದಾರ್ಥ ಉಚಿತ ಪ್ರಸಾದ ನಿಲಯ, ವಿಜಯಪುರ
  • ಬಂಜಾರಾ ಉಚಿತ ಪ್ರಸಾದ ನಿಲಯ, ವಿಜಯಪುರ

ವಿಜಯಪುರ ಜಿಲ್ಲೆಯ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯಗಳು

ವಿಜಯಪುರ ಜಿಲ್ಲೆಯ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಗಳು

ವಿಜಯಪುರ(9), ನಾಗಠಾಣ, ಬಬಲೇಶ್ವರ, ತಿಕೋಟಾ

ದೂರವಾಣಿ ಸಂಕೇತ ಹಾಗೂ ವಿನಿಮಯ ಕೇಂದ್ರಗಳು

ದೂರವಾಣಿ ವಿನಿಮಯ ಕೇಂದ್ರಗಳು

ವಿಜಯಪುರ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು

ಅರಕೇರಿ, ಬಬಲೇಶ್ವರ, ಬಿಜ್ಜರಗಿ, [[ವಿಜಯಪುರ ]], ಗುಣದಾಳ, ಹೊನಗನಹಳ್ಳಿ, ಹೊನವಾಡ, ಹೊನ್ನುಟಗಿ, ಕನಮಡಿ, ಕನ್ನೂರ, ಕಳ್ಳಕವಟಗಿ, ಕಾಖಂಡಕಿ, ಲೋಹಗಾಂವ, ಮಮದಾಪುರ, ನಾಗಠಾಣ, ನಿಡೋಣಿ, ಸಾರವಾಡ, ಶಿವಣಗಿ, ಜುಮನಾಳ, ತಾಜಪುರ ಹೆಚ್, ಟಕ್ಕಳಕಿ, ತಿಡಗುಂದಿ, ತಿಕೋಟಾ, ತೊರವಿ, ಉತ್ನಾಳ, ಯಕ್ಕುಂಡಿ .

ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆಗಳು

ಉಪ ಮತ್ತು ಶಾಖಾ ಅಂಚೆ ಕಚೇರಿಗಳು

ವಿಜಯಪುರ ನಗರ ಭಾಗದ ಅಂಚೆ ಸೂಚ್ಯಂಕ ಸಂಖ್ಯೆಗಳು ಮತ್ತು ಅಂಚೆ ಕಚೇರಿಗಳು

ವಿಜಯಪುರ ಜಿಲ್ಲೆಯ ಅಂಚೆ ಸೂಚ್ಯಂಕ ಸಂಖ್ಯೆಗಳು ಮತ್ತು ಅಂಚೆ ಕಚೇರಿಗಳು

ಬಬಲೇಶ್ವರ - 586113

ಕನ್ನೂರ - 586119

ಸಾರವಾಡ - 586125

ಶಿವಣಗಿ - 586127

ದೂರವಾಣಿ ಕೈಪಿಡಿ

ಸಾರ್ವಜನಿಕ ಸಹಾಯವಾಣಿ

  • ಜಿಲ್ಲಾಧಿಕಾರಿಗಳು - 250021
  • ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿಗಳು - 250152, 250022
  • ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿಗಳು - 250040
  • ನಿಯಂತ್ರಣ ಕೊಠಡಿ - 250844
  • ಜಿಲ್ಲಾ ಪಂಚಾಯತಿ ಅಧ್ಯಕ್ಷ ರು - 277240
  • ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರು - 276953
  • ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಜಿಲ್ಲಾ ಪಂಚಾಯತಿ) - 276038
  • ಉಪ ಕಾರ್ಯದರ್ಶಿ(ಜಿಲ್ಲಾ ಪಂಚಾಯತಿ) - 277293
  • ಮುಖ್ಯ ಯೋಜನಾ ಅಧಿಕಾರಿ(ಜಿಲ್ಲಾ ಪಂಚಾಯತಿ) - 276936
  • ಮುಖ್ಯ ಲೆಕ್ಕಪರಿಶೋಧಕ ಅಧಿಕಾರಿ(ಜಿಲ್ಲಾ ಪಂಚಾಯತಿ) - 276763
  • ಜಿಲ್ಲಾ ಪ್ರಧಾನ ನ್ಯಾಯಾಧೀಶ - 276140
  • ಯೋಜನಾ ನಿರ್ದೇಶಕರು(ಜಿಲ್ಲಾ ಪಂಚಾಯತಿ) - 278737
  • ಜಿಲ್ಲಾ ಆರೋಗ್ಯ ಅಧಿಕಾರಿ - 250107
  • ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು - 250151
  • ಜಂಟಿ ಕೃಷಿ ನಿರ್ದೇಶಕರು - 250194
  • ಜಲಾನಯನ ಅಭಿವೃದ್ಧಿ ಇಲಾಖೆ - 278290
  • ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಉಪ ನಿರ್ದೇಶಕರು - 251028
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು - 276353
  • ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು - 250244
  • ಜಿಲ್ಲಾ ಯುವಜನ ಸೇವೆ - 251085
  • ಖಾದಿ ಮತ್ತು ಗ್ರಾಮೋಧ್ಯೋಗ ಇಲಾಖೆ - 254851
  • ದಾಖಲೆ ಮಾಡಿಡುವ ಉಪ ನಿರ್ದೇಶಕರು - 223848
  • ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ - 250695
  • ಅಲ್ಪಸಂಖ್ಯಾತ ಹಿಂದುಳಿದ ವರ್ಗಗಳ ಇಲಾಖೆ - 276932
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನಿಗಮ - 276743
  • ಸಾಮಾಜಿಕ ಅರಣ್ಯ ಇಲಾಖೆಯ ಉಪ ಮುಖ್ಯ ಸಂರಕ್ಷಣಾಧಿಕಾರಿ - 272165
  • ಮೀನುಗಾರಿಕೆ - 250734
  • ರೇಷ್ಮೆ ತಯಾರಿಕೆ ಇಲಾಖೆ - 251336
  • ವಯಸ್ಕರ ಶಿಕ್ಷಣ ಇಲಾಖೆ - 252392
  • ಕೈಮಗ್ಗ ಮತ್ತು ಜವಳಿ ಇಲಾಖೆ - 251268
  • ಕನ್ನಡ ಮತ್ತು ಸಾಂಸ್ಕೃತಿಕ ಕೇಂದ್ರ - 251261
  • ರಾಷ್ಟ್ರೀಯ ಮಾಹಿತಿ ಕೇಂದ್ರ ಜಿಲ್ಲಾ ಘಟಕ (ನಿರ್ಮಿತಿ)- 276577
  • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ - 250073
  • ವರಮಾನ ತೆರಿಗೆ ಇಲಾಖೆ - 270071
  • ಕೈಗಾರಿಕಾ ವರಮಾನ ತೆರಿಗೆ ಇಲಾಖೆ - 270287
  • ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮ - 259596
  • ನಗರ ಸಭೆ ಕಚೇರಿ - 250557
  • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ - 251344
  • ರೈಲು ನಿಲ್ದಾಣ - 250883
  • ಕನ್ನಡ ಮತ್ತು ಸಂಸ್ಕೃತಿ ವಿಭಾಗ - 251261
  • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವಿಭಾಗ - 250107, 250121, 258038
  • ಪ್ರವಾಸೋದ್ಯಮ ವಿಭಾಗ - 250359
  • ಮುಖ್ಯ ಅಂಚೆ ಕಚೇರಿ - 250041
  • ಉದ್ಯೋಗ ಕಚೇರಿ - 251148, 252761
  • ಜಿಲ್ಲಾ ನ್ಯಾಯಾಲಯ - 241803, 250140 250937
  • ಜಿಲ್ಲಾ ಕಾರ್ಮಿಕ ನ್ಯಾಯಾಲಯ - 250937
  • ಅರಣ್ಯ ಇಲಾಖೆ - 251837
  • ಕರ್ನಾಟಕ ಲೋಕಾಯುಕ್ತ - 252252
  • ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಾರ್ಯಾಲಯ - 253846
  • ಸಂಸ್ಥೆ ಮತ್ತು ಸಂಘಗಳ ನೋಂದನಿ ಅಧಿಕಾರಿಗಳ ಕಾರ್ಯಾಲಯ - 261776

ವಿಜಯಪುರ ತಾಲ್ಲೂಕು ಸರ್ಕಾರಿ ಕಾರ್ಯಾಲಯಗಳು

  • ಲೋಕೋಪಯೋಗಿ ಇಲಾಖೆ ಕಾರ್ಯಾಲಯ - 250045, 320500
  • ನಗರ ಸಭೆ ಕಾರ್ಯಾಲಯ - 251004, 320141
  • ಜಿಲ್ಲಾ ಖಜಾನೆ ಕಾರ್ಯಾಲಯ - 320680
  • ಆಹಾರ ಮತ್ತು ನಾಗರಿಕ ಪುರೈಕೆ ಕಾರ್ಯಾಲಯ - 320220
  • ಪ್ರಾದೇಶಿಕ ಸಾರಿಗೆ ಕಚೇರಿ - 276218, 320671
  • ಜಿಲ್ಲಾ ನೋಂದನಿ ಅಧಿಕಾರಿಗಳ ಕಾರ್ಯಾಲಯ - 320524
  • ಉಪನೋಂದನಿ ಅಧಿಕಾರಿಗಳ ಕಾರ್ಯಾಲಯ - 320525
  • ಜಿಲ್ಲಾ ಪ್ರಧಾನ ನ್ಯಾಯಾಧೀಶರ ಕಾರ್ಯಾಲಯ - 320275

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು

ವಿಜಯಪುರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು

ಸರ್ಕಾರೇತರ ಸಂಸ್ಥೆಗಳು

40ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳು(ಎನ್.ಜಿ.ಓ.) ಸಮಾಜದ ಒಳಿತಿಗಾಗಿ ಶ್ರಮಿಸುತ್ತಿವೆ. ಅವುಗಳು ಈ ಕೆಳಗಿನಂತಿವೆ.

ಶಿಕ್ಷಣ

ಪ್ರಮುಖ ಶಿಕ್ಷಣ ಸಂಸ್ಥೆಗಳು

ಕೇಂದ್ರೀಯ ಪಠ್ಯ ಕ್ರಮದ ಮಹಾವಿದ್ಯಾಲಯಗಳು

  • ಸೈನಿಕ ಶಾಲೆ,ವಿಜಯಪುರ
  • ಸಂಗನಬಸವ ಅಂತರಾಷ್ಟ್ರೀಯ ವಸತಿ ಶಾಲೆ, ಕವಲಗಿ, ವಿಜಯಪುರ
  • ಬಿ.ಎಂ.ಪಾಟೀಲ ಅಂತರಾಷ್ಟ್ರೀಯ ಶಾಲೆ, ವಿಜಯಪುರ
  • ಶಾರದಾ ಅಂತರಾಷ್ಟ್ರೀಯ ಶಾಲೆ, ವಿಜಯಪುರ
  • ಬಿ.ಟಿ.ಪಾಟೀಲ ಸ್ಮಾರಕ ನಂದಿ ಅಂತರಾಷ್ಟ್ರೀಯ ವಸತಿ ಶಾಲೆ, ಚಿಕ್ಕಗಲಗಲಿ, ವಿಜಯಪುರ
  • ಕೇಂದ್ರೀಯ ವಿದ್ಯಾಲಯ, ವಿಜಯಪುರ
  • ಡಪ್ಪೊಡಿಲ್ಸ್ ಅಂತರಾಷ್ಟ್ರೀಯ ಶಾಲೆ, ವಿಜಯಪುರ
  • ಪ್ರೇರಣಾ ಅಂತರಾಷ್ಟ್ರೀಯ ಶಾಲೆ, ಭೂತನಾಳ, ವಿಜಯಪುರ
  • ಜೈನ ಅಂತರಾಷ್ಟ್ರೀಯ ಶಾಲೆ, ಜುಮನಾಳ, ವಿಜಯಪುರ

ಪ್ರಮುಖ ಶಿಕ್ಷಣ ಸಂಸ್ಥೆಗಳು

ವಿಶ್ವವಿದ್ಯಾಲಯಗಳು

ತಾಂತ್ರಿಕ ಮಹಾವಿದ್ಯಾಲಯಗಳು

ಪಾಲಿಟೆಕ್ನಿಕ್ ಮಹಾವಿದ್ಯಾಲಯಗಳು

  • ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ವಿಜಯಪುರ
  • ಸಿಕ್ಯಾಬ್ ಮಲಿಕ್ ಸಂದಲ್ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ವಿಜಯಪುರ
  • ಬಿ.ಎಲ್.ಡಿ.ಇ.ಎ. ಪಾಲಿಟೆಕ್ನಿಕ್ ಮಹಾವಿದ್ಯಾಲಯ, ವಿಜಯಪುರ
  • ಶ್ರೀ ಸುಭಾಸ ನಾಗೂರ ಸ್ಮಾರಕ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ವಿಜಯಪುರ

ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯಗಳು

  • ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ವಿಜಯಪುರ
  • ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಮಮದಾಪುರ, ವಿಜಯಪುರ

ಪದವಿ ಮಹಾವಿದ್ಯಾಲಯಗಳು

ವಾಣಿಜ್ಯ (ಬಿ. ಬಿ. ಎ.) ಮಹಾವಿದ್ಯಾಲಯಗಳು

ಸ್ನಾತಕೋತ್ತರ ವಾಣಿಜ್ಯ (ಎಂ. ಬಿ. ಎ.) ಮಹಾವಿದ್ಯಾಲಯಗಳು

ಪದವಿ ಗಣಕಯಂತ್ರ ಅನ್ವಯಿಕ (ಬಿ. ಸಿ. ಎ.) ಮಹಾವಿದ್ಯಾಲಯಗಳು

ಸ್ನಾತಕೋತ್ತರ ಗಣಕಯಂತ್ರ ಅನ್ವಯಿಕ (ಎಂ. ಸಿ. ಎ.) ಮಹಾವಿದ್ಯಾಲಯಗಳು

ವೈದ್ಯಕೀಯ ಮಹಾವಿದ್ಯಾಲಯಗಳು

  • [[ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪ ತ್ರೆ ಹಾಗೂ ಸಂಶೋಧನಾ ಕೇಂದ್ರ, ವಿಜಯಪುರ]] (ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯ)
  • [[ಅಲ್-ಅಮೀನ್ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪ ತ್ರೆ ಹಾಗೂ ಸಂಶೋಧನಾ ಕೇಂದ್ರ, ವಿಜಯಪುರ]]

ಔಷಧ ಮಹಾವಿದ್ಯಾಲಯಗಳು

  • [[ಬಿ.ಎಲ್.ಡಿ.ಇ. ಔಷಧ ಮಹಾವಿದ್ಯಾಲಯ, ವಿಜಯಪುರ]]
  • [[ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ]]

ಆರ್ಯುವೇದ ಮಹಾವಿದ್ಯಾಲಯಗಳು

  • [[ಬಿ.ಎನ್.ಎಮ್. ಆರ್ಯುವೇದ ಮಹಾವಿದ್ಯಾಲಯ, ವಿಜಯಪುರ]]
  • [[ಬಿ.ಎಲ್.ಡಿ.ಇ.ಆರ್ಯುವೇದ ಮಹಾವಿದ್ಯಾಲಯ, ವಿಜಯಪುರ]]
  • [[ಆರ್ಯುವೇದ ಮಹಾವಿದ್ಯಾಲಯ, ಸಿಂದಗಿ, ವಿಜಯಪುರ]]
  • [[ರಾಜೇಶ್ವರಿ ಕರ್ಪೂರಮಠ ಸ್ಮಾರಕ ಆರ್ಯುವೇದ ಮಹಾವಿದ್ಯಾಲಯ, ವಿಜಯಪುರ]]

ಹೋಮಿಯೋಪಥಿ ಮಹಾವಿದ್ಯಾಲಯಗಳು

  • ಅಲ್ - ಅಮೀನ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ, ವಿಜಯಪುರ

ಯುನಾನಿ ಮಹಾವಿದ್ಯಾಲಯಗಳು

ದಂತ ವೈದ್ಯಕೀಯ ಮಹಾವಿದ್ಯಾಲಯಗಳು

  • ಅಲ್ - ಅಮೀನ್ ದಂತ ವೈದ್ಯಕೀಯ ಮಹಾವಿದ್ಯಾಲಯ, ವಿಜಯಪುರ

ಶುಶ್ರೂಷಾ (ನರ್ಸಿಂಗ್) ಸ್ನಾತಕೋತ್ತರ ಮಹಾವಿದ್ಯಾಲಯಗಳು

  • ಬಿ. ಎಮ್. ಪಾಟೀಲ ಶುಶ್ರೂಷಾ ಮಹಾವಿದ್ಯಾಲಯ, ವಿಜಯಪುರ
  • ತುಳಜಾ ಭವಾನಿ ಶುಶ್ರೂಷಾ ಮಹಾವಿದ್ಯಾಲಯ, ವಿಜಯಪುರ

ಶುಶ್ರೂಷಾ (ನರ್ಸಿಂಗ್) ಮಹಾವಿದ್ಯಾಲಯಗಳು

  • ಬಿ. ಎಮ್. ಪಾಟೀಲ ಶುಶ್ರೂಷಾ ಮಹಾವಿದ್ಯಾಲಯ, ವಿಜಯಪುರ
  • ತುಳಜಾ ಭವಾನಿ ಶುಶ್ರೂಷಾ ಮಹಾವಿದ್ಯಾಲಯ, ವಿಜಯಪುರ
  • ಅಲ್ - ಅಮೀನ್ ಫಾತೀಮಾ ಶುಶ್ರೂಷಾ ಮಹಾವಿದ್ಯಾಲಯ, ವಿಜಯಪುರ
  • ಶ್ರೀ ಸಿದ್ದೇಶ್ವರ ಶುಶ್ರೂಷಾ ಮಹಾವಿದ್ಯಾಲಯ, ವಿಜಯಪುರ

ಶುಶ್ರೂಷಾ (ನರ್ಸಿಂಗ್) ಶಾಲೆಗಳು

ಸಹಾಯಕ ವೈದ್ಯಕೀಯ (ಪ್ಯಾರಾಮೆಡಿಕಲ್) ವಿಜ್ಞಾನ ಸಂಸ್ಥೆಗಳು

  • ಸಿಕ್ಯಾಬ್ ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ , ವಿಜಯಪುರ
  • ಜಿ. ಎಮ್. ಈ. ಟಿ, ಡಾ. ಗೌಡ'ಸ್ ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ , ವಿಜಯಪುರ
  • ಡಾ. ಆರ್. ಎನ್. ಬಿರಾದಾರ ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ , ವಿಜಯಪುರ
  • ಡಾ. ಆರ್. ಎನ್. ಬಿರಾದಾರ ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ , ವಿಜಯಪುರ
  • ಪಾಟೀಲ ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ , ವಿಜಯಪುರ
  • ರಾಧಾಕೃಷ್ಣ ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ , ವಿಜಯಪುರ
  • ರೇಶ್ಮಿ ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ , ವಿಜಯಪುರ

ಕೃಷಿ ಮಹಾವಿದ್ಯಾಲಯ

  • ಕೃಷಿ ಮಹಾವಿದ್ಯಾಲಯ,ಹಿಟ್ಟಿನಹಳ್ಳಿ , ವಿಜಯಪುರ

ತೋಟಗಾರಿಕೆ ಸಂಶೋಧನಾ ಕೇಂದ್ರ

  • ತೋಟಗಾರಿಕೆ ಸಂಶೋಧನಾ ಕೇಂದ್ರ, ತಿಡಗುಂದಿ, ವಿಜಯಪುರ

ಮೀನುಗಾರಿಕೆ ಸಂಶೋಧನಾ ಕೇಂದ್ರ

  • ಮೀನುಗಾರಿಕೆ ಸಂಶೋಧನಾ ಕೇಂದ್ರ, ಭೂತನಾಳ, ವಿಜಯಪುರ

ಪ್ರಾದೇಶಿಕ ನರವಿಜ್ಞಾನ ಸಂಶೋಧನಾ ಕೇಂದ್ರ

ಕಾನೂನು ಮಹಾವಿದ್ಯಾಲಯಗಳು

  • ಶ್ರೀ ಸಿದ್ದೇಶ್ವರ ಕಾನೂನು ಮಹಾವಿದ್ಯಾಲಯ, ವಿಜಯಪುರ
  • ಅಂಜುಮನ್ ಕಾನೂನು ಮಹಾವಿದ್ಯಾಲಯ, ವಿಜಯಪುರ

ಕೈಗಾರಿಕಾ ತರಬೇತಿ ಮಹಾವಿದ್ಯಾಲಯಗಳು

ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯಗಳು

  • ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ, ವಿಜಯಪುರ
  • ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ, ಬಬಲೇಶ್ವರ, ವಿಜಯಪುರ

ಅನುದಾನಿತ ಕೈಗಾರಿಕಾ ತರಬೇತಿ ಮಹಾವಿದ್ಯಾಲಯಗಳು

  • ಬಿ.ಡಿ.ಪಿ.ಎಚ್.ಡಬ್ಲು. ಎ. ಕೈಗಾರಿಕಾ ತರಬೇತಿ ಮಹಾವಿದ್ಯಾಲಯ, ವಿಜಯಪುರ

ಇದರೊಂದಿಗೆ ೩೦ಕ್ಕೂ ಹೆಚ್ಚು ಅನುದಾನ ರಹಿತ ಕೈಗಾರಿಕಾ ತರಬೇತಿ ಮಹಾವಿದ್ಯಾಲಯಗಳಿವೆ.

ಮೊರಾರ್ಜಿ ದೇಸಾಯಿ ಶಾಲೆಗಳು

ಕಿತ್ತೂರ ರಾಣಿ ಚೆನ್ನಮ್ಮ ಶಾಲೆಗಳು

  • ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ, ಕಾರಜೋಳ, ವಿಜಯಪುರ
  • ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ, ಬಬಲೇಶ್ವರ, ವಿಜಯಪುರ

ಕಸ್ತೂರಬಾ ಗಾಂಧಿ ಬಾಲಿಕಾ ಶಾಲೆಗಳು

  • ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ, ಅರಕೇರಿ, ವಿಜಯಪುರ

ಸ್ನಾತಕೋತ್ತರ ಮಹಾವಿದ್ಯಾಲಯಗಳು

  • [[ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ]]
  • ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ
  • ಫೂಲಸಿಂಗ ನಾರಾಯಣ ಚವ್ಹಾಣ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ
  • ಫೂಲಸಿಂಗ ನಾರಾಯಣ ಚವ್ಹಾಣ ಕಲಾ ಮಹಾವಿದ್ಯಾಲಯ, ವಿಜಯಪುರ
  • ಸಂಗನಬಸವ ಕಲಾ ಮತ್ತು ಕನ್ನ್ನಾಳ ಚನ್ನಬಸಪ್ಪ ಪಾಟೀಲ ವಿಜ್ಞಾನ ಮಹಾವಿದ್ಯಾಲಯ, ವಿಜಯಪುರ
  • ಬಂಜಾರಾ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ
  • ಎಮ್.ಎಸ್.ಖೇಡ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ
  • ವಚನ ಸಂಗಮ ಆವರಣ, ವಿಜಯಪುರ

ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯಗಳು

  • ಅಂಜುಮನ್ ಇಸ್ಲಾಂ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ವಿಜಯಪುರ
  • ಬಿ.ಎಲ್.ಡಿ.ಈ. ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ವಿಜಯಪುರ
  • ಎಸ್.ಎಮ್.ಆರ್.ಕೆ ಮಹಿಳಾ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ವಿಜಯಪುರ
  • ಶಾಮಿಲಿ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ವಿಜಯಪುರ
  • ಶ್ರೀ ಅಭಿನವ ವಿದ್ಯಾ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ವಿಜಯಪುರ
  • ಶ್ರೀ ಜಗಜೋತಿ ಬಸವೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ವಿಜಯಪುರ
  • ಶ್ರೀ ಕಾಳಿದಾಸ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ವಿಜಯಪುರ
  • ಶ್ರೀ ನೂರಂದೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ವಿಜಯಪುರ
  • ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಕನ್ನಾಳ, ವಿಜಯಪುರ
  • ಶ್ರೀ ಜಗದ್ಗುರು ಗುರುಸಿದ್ದೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಕನ್ನಾಳ, ವಿಜಯಪುರ
  • ಶ್ರೀ ಮಲ್ಲಿಕಾರ್ಜುನ ವಿದ್ಯಾ ವರ್ಧಕ ಸಂಸ್ಥೆಯ ಆರ್.ಎಮ್.ಕೆ. ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ವಿಜಯಪುರ
  • ವಿಜಯಪುರ ಜಿಲ್ಲಾ ಅಲ್ಪ ಸಂಖ್ಯಾತರ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ವಿಜಯಪುರ

ಪ್ರೌಢ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯಗಳು

  • ಅಂಜುಮನ್ ಇಸ್ಲಾಂ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ
  • ಬಂಜಾರಾ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ
  • ಸ್ನಾತಕೋತ್ತರ ಮತ್ತು ಸಂಶೋಧನಾ ಇಲಾಖೆ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ
  • ಬಿ.ಎಲ್.ಡಿ.ಈ. ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿಜಿ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ
  • ಕುಮಾರಿ ಮೊನಿಕಾ ಬಸವರಾಜ ಕನ್ನಿ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ
  • ಎಸ್.ಎಮ್.ಆರ್.ಕೆ ಮಹಿಳಾ ವಿದ್ಯಾವರ್ಧಕ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ
  • ಶ್ರೀ ಜಗಜೋತಿ ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ
  • ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ
  • ಡಾ.ಬಿ.ಡಿ.ಜತ್ತಿ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ

ದೈಹಿಕ ಶಿಕ್ಷಕರ ತರಬೇತಿ ಮಹಾವಿದ್ಯಾಲಯಗಳು

  • ಬಿ.ಎಲ್.ಡಿ.ಈ. ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ
  • ನರೇಂದ್ರ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ
  • ಬಂಜಾರಾ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ
  • ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ದೈಹಿಕ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ

ಅನುದಾನಿತ ಚಿತ್ರಕಲಾ ಮಹಾವಿದ್ಯಾಲಯಗಳು

  • ಶ್ರೀ ಸಿದ್ದೇಶ್ವರ ಕಲಾಮಂದಿರ, ಮುದ್ದಿನಕನ್ನಿ , ವಿಜಯಪುರ

ಸಂಗೀತ ಮಹಾವಿದ್ಯಾಲಯಗಳು

  • ಗುರು ಪಂಚಾಕ್ಷರಿ ಸಂಗೀತ ಮಹಾವಿದ್ಯಾಲಯ, ವಿಜಯಪುರ

ಸ್ವಾಯತ್ತತೆ ಮಾನ್ಯತೆ ಹೊಂದಿರುವ ಮಹಾವಿದ್ಯಾಲಯಗಳು

  • ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ

ಆಶ್ರಮ ಶಾಲೆಗಳು

ತರಬೇತಿ ಕೇಂದ್ರಗಳು

ನ್ಯಾಕ್ (ರಾಷ್ಟ್ರೀಯ ಮೌಲ್ವೀಕರಣ ಮತ್ತು ಮಾನ್ಯತಾ ಪರಿಷತ್ತು) ಮಾನ್ಯತೆ ಹೊಂದಿರುವ ಮಹಾವಿದ್ಯಾಲಯಗಳು

ಕ್ರ.ಸಂ. ಸಂಸ್ಥೆಯ ಹೆಸರು ದರ್ಜೆ
1 ಬಿ.ಎಲ್.ಡಿ.ಇ.ಎ. ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ ಬಿ
2 ಬಿ.ಎಲ್.ಡಿ.ಇ.ಎ. ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ವಿಜಯಪುರ ಬಿ
3 ಬಿ.ಎಲ್.ಡಿ.ಇ.ಎ. ಕೆ. ಸಿ. ಪಿ. ವಿಜ್ಞಾನ ಮತ್ತು ಸಂಗನಬಸವ ಕಲಾ ಮಹಾವಿದ್ಯಾಲಯ, ವಿಜಯಪುರ ಬಿ ++
4 ಅಂಜುಮನ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ವಿಜಯಪುರ ಬಿ
5 ಸಿಕ್ಯಾಬ್ ಎ.ಆರ್.ಎಸ್.ಇನಾಂದಾರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ವಿಜಯಪುರ ಬಿ +
6 ಶಾಂತವೀರ ಕಲಾ ಮಹಾವಿದ್ಯಾಲಯ, ಬಬಲೇಶ್ವರ, ವಿಜಯಪುರ ಬಿ
7 ನ್ಯೂ ಕಲಾ ಮಹಾವಿದ್ಯಾಲಯ, ತಿಕೋಟಾ, ವಿಜಯಪುರ ಬಿ +
15 ಬಿ.ಎಲ್.ಡಿ.ಇ.ಎ. ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ ಬಿ +

ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರಗಳು

ಕಿಯೋನಿಕ್ಸ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರಗಳು

  • ಶ್ರೇಯಸ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ವಿಜಯಪುರ
  • ಟೆಕ್ನೋ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ವಿಜಯಪುರ
  • ಸುರಪುರ ಹೈಟೆಕ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ತಿಕೋಟಾ

ಆರಕ್ಷಕ (ಪೋಲಿಸ್) ಠಾಣೆ

ವಿಜಾಪುರ ತಾಲ್ಲೂಕಿನ ಪೋಲಿಸ್ ಠಾಣೆಗಳು

  1. ಹೊರ ಪೋಲಿಸ್ ಠಾಣೆ, ಗುಣದಾಳ
  2. ಹೊರ ಪೋಲಿಸ್ ಠಾಣೆ, ಮಮದಾಪುರ
  1. ಹೊರ ಪೋಲಿಸ್ ಠಾಣೆ, ಕನಮಡಿ

ವಿದ್ಯುತ್ ಪರಿವರ್ತನಾ ಕೇಂದ್ರಗಳು

ವಿಜಯಪುರ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು

  • ೨೨೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ವಿಜಯಪುರ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ತಿಕೋಟಾ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಮಮದಾಪುರ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಶಿರಬೂರ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಕೆ.ಐ.ಎ.ಡಿ.ಬಿ., ವಿಜಯಪುರ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ವಿಜಯಪುರ ನಗರ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಭೂತನಾಳ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಬಬಲೇಶ್ವರ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ತಿಡಗುಂದಿ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಹೊನ್ನುಟಗಿ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ದೇವರ ಗೆಣ್ಣೂರ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಬಬಲೇಶ್ವರ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಬಿಜ್ಜರಗಿ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಜಂಬಗಿ

ತೋಟಗಾರಿಕೆ

ತೋಟಗಾರಿಕೆ ಆಧಾರಿತ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ಉಳ್ಳಾಗಡ್ಡಿ, ಅರಿಷಿಣ, ಬಾಳೆ ಇತ್ಯಾದಿ ಬೆಳೆಯುತ್ತಾರೆ.

ಕೃಷಿ ಮಾರುಕಟ್ಟೆಗಳು

ವಿಜಯಪುರ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು

ರೈತ ಸಂಪರ್ಕ ಕೇಂದ್ರಗಳು

  • ವಿಜಯಪುರ - ಮಮದಾಪುರ, ಬಬಲೇಶ್ವರ, ತಿಕೋಟಾ, ನಾಗಠಾಣ.

ಬೀಜ ಉತ್ಪಾದಕ ಕಂಪನಿಗಳು

  • ಮೆ. ಗ್ರೇನ್ ಗೋಲ್ಡ್ ಅಗ್ರಿ ಟೆಕ್ನಾಲಜಿ ಪ್ರೈ.ಲಿ., ವಿಜಯಪುರ.
  • ಮಿತ್ರ ಅಗ್ರೊ ಕಾರ್ಪೊರೇಶನ್, [[ವಿಜಯಪುರ ]].

ಆಹಾರ ಸಂಸ್ಕರಣೆ ಘಟಕಗಳು

  • ಶ್ರೀ ಬಸವೇಶ್ವರ ಅಗ್ರೋ ಆಹಾರ ಸಂಸ್ಕರಣೆ ಘಟಕ, ವಿಜಯಪುರ

ಮದ್ಯ ಘಟಕಗಳು

ನರ್ಸರಿಗಳು

  • ಮಾದರಿ ನರ್ಸರಿ, ಕೃಷಿ ವಿಶ್ವವಿದ್ಯಾಲಯ , ತಾ||ಜಿ|| ವಿಜಯಪುರ
  • ಜಿ. ಆರ್. ನರ್ಸರಿ ಮತ್ತು ಫಾರ್ಮಸ್, ಜುಮನಾಳ, ತಾ||ಜಿ|| ವಿಜಯಪುರ
  • ಭಾವಿಕಟ್ಟಿ ನರ್ಸರಿ, ಮಹಲ ಭಾಗಯತ, ತಾ||ಜಿ|| ವಿಜಯಪುರ

ಅರಣ್ಯ ಇಲಾಖೆಯ ನರ್ಸರಿಗಳು

ಶೀತಲಿಕರಣ ಘಟಕಗಳು

ಹಾಲು ಉತ್ಪಾದಕ ಘಟಕಗಳು

ಕೆ.ಎಮ್.ಎಫ್.(ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ)ನ ಸಹಾಯದೊಂದಿಗೆ ವಿಜಯಪುರ ನಗರದ ಹೊರವಲಯದ ಭೂತನಾಳ ಗ್ರಾಮದಲ್ಲಿ ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವನ್ನು ಸ್ಥಾಪಿಸಲಾಗಿದೆ. ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಭೂತನಾಳ, ವಿಜಯಪುರ. ಇದನ್ನು ವಿಜಯಪುರ ಡೈರಿಯಂತಲು ಕರೆಯುತ್ತಾರೆ. ಡೈರಿಯು ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಡೈರಿ ಸಹಕಾರಿ ಸಂಘಗಳನ್ನು ಹೊಂದಿದೆ.

ವಿಜಯಪುರ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು

ನ್ಯಾಯಾಲಯಗಳು

ಪೋಲಿಸ್ ಠಾಣೆ, ಎ.ಪಿ.ಎಮ್.ಸಿ., ವಿಜಯಪುರ

ವಿಜಯಪುರ ಜಿಲ್ಲಾ ಹಾಗೂ ಸೇಶನ್ಸ್ ನ್ಯಾಯಾಲಯವು 1904ರಲ್ಲಿ ಸ್ಥಾಪನೆಯಾಯಿತು.

ನದಿಗಳು

ವಿಜಯಪುರ ಜಿಲ್ಲೆಯಲ್ಲಿ ಹರಿಯುವ ನದಿಗಳೆಂದರೆ ಕೃಷ್ಣಾ ಮತ್ತು ಡೋಣಿ.

  1. ಕೃಷ್ಣಾ
  2. ಡೋಣಿ

ಬೆಳೆಗಳು

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ, ಅಕ್ಕಿ, ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ದಾಳಿಂಬೆ, ಚಿಕ್ಕು , ನಿಂಬೆ,ಮಾವು, ಬಾಳೆ,ಬಾರಿಹಣ್ಣು , ಕಬ್ಬು , ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಕ್ಕರೆ ಕಾರ್ಖಾನೆಗಳು

ಪ್ರಾಥಮಿಕ ಆರೋಗ್ಯ ಕೇಂದ್ರಗಳು

ವಿಜಯಪುರ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು

ಆಸ್ಪತ್ರೆಗಳು

ವಿಜಯಪುರ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಒಳ್ಳೆಯ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತವೆ.

ಸಾಮಾನ್ಯ ಆಸ್ಪತ್ರೆಗಳು

ಯಶಸ್ವಿನಿ ಯೋಜನೆ ಹೊಂದಿರುವ ಆಸ್ಪತ್ರೆಗಳು

ವಾಜಪೇಯಿ ಆರೋಗ್ಯಶ್ರೀ ಯೋಜನೆ ಹೊಂದಿರುವ ಆಸ್ಪತ್ರೆಗಳು

ಪಶು ಆಸ್ಪತ್ರೆಗಳು

ಪಶು ಆಸ್ಪತ್ರೆ, ವಿಜಯಪುರ

ಪಶು ಚಿಕಿತ್ಸಾಲಯಗಳು

ಗುಣದಾಳ, ಹೊನವಾಡ, ಹೊಸಟ್ಟಿ, ತಿಡಗುಂದಿ, ಜೈನಾಪುರ, ಕಾಖಂಡಕಿ, ಬಿಜ್ಜರಗಿ, ಕಾರಜೋಳ, ಐನಾಪುರ, ಅರಕೇರಿ.

ಪ್ರಾಥಮಿಕ ಪಶು ಚಿಕಿತ್ಸಾಲಯಗಳು

ಹೊನ್ನುಟಗಿ, ಜಂಬಗಿ ಹೆಚ್, ಕಗ್ಗೋಡ, ಶಿವಣಗಿ, ಕನ್ನಾಳ, ಮಮದಾಪೂರ, ನಿಡೋಣಿ, ಲೋಹಗಾಂವ.

ಪಶು ಕೃತಕ ಗರ್ಭಧಾರಣಾ ಕೇಂದ್ರಗಳು

ಕವಲಗಿ, ಹೊನಗನಹಳ್ಳಿ , ನಾಗಠಾಣ, ತೊರವಿ, ಹಿಟ್ನಳ್ಳಿ , ಸಾರವಾಡ.

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು

ರಾಷ್ಟ್ರೀಯ ಹೆದ್ದಾರಿಗಳು

ವಿಜಯಪುರ ತಾಲ್ಲೂಕಿನಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗುತ್ತವೆ. ಅವುಗಳೆಂದರೆ ರಾಷ್ಟ್ರೀಯ ಹೆದ್ದಾರಿ - 13 ಮತ್ತು ರಾಷ್ಟ್ರೀಯ ಹೆದ್ದಾರಿ - 218

  • ರಾಷ್ಟ್ರೀಯ ಹೆದ್ದಾರಿ - 13 => ಸೋಲಾಪೂರ - ವಿಜಯಪುರ - ಇಲಕಲ್ಲ - ಹೊಸಪೇಟೆ - ಚಿತ್ರದುರ್ಗ - ಶಿವಮೊಗ್ಗ - ಮಂಗಳೂರ.
  • ರಾಷ್ಟ್ರೀಯ ಹೆದ್ದಾರಿ - 218 => ಹುಬ್ಬಳ್ಳಿ - ನವಲಗುಂದ - ನರಗುಂದ - ಬಾಗಲಕೋಟ (ಗದ್ದನಕೇರಿ ಕ್ರಾಸ್) -ಬೀಳಗಿ(ಕ್ರಾಸ್) - ವಿಜಯಪುರ - ಸಿಂದಗಿ - ಜೇವರ್ಗಿ - ಗುಲಬುರ್ಗಾ - ಹುಮನಾಬಾದ.

ರಾಜ್ಯ ಹೆದ್ದಾರಿಗಳು

ವಿಜಯಪುರ ತಾಲ್ಲೂಕಿನಲ್ಲಿ 5 ರಾಜ್ಯ ಹೆದ್ದಾರಿ ಇವೆ.ಅವು ಕೆಳಗಿನಂತಿವೆ,

  • ರಾಜ್ಯ ಹೆದ್ದಾರಿ - 12 => ವಿಜಯಪುರ - ಅಥಣಿ - ಚಿಕ್ಕೋಡಿ - ಸಂಕೇಶ್ವರ
  • ರಾಜ್ಯ ಹೆದ್ದಾರಿ - 55 => ಬಬಲೇಶ್ವರ - ಕಂಬಾಗಿ - ಗಲಗಲಿ - ಮುಧೋಳ -ಯಾದವಾಡ - ಯರಗಟ್ಟಿ
  • ರಾಜ್ಯ ಹೆದ್ದಾರಿ - 65 => ವಿಜಯಪುರ - ಬಬಲೇಶ್ವರ - ಜಮಖಂಡಿ - ಮುಧೋಳ - ರಾಮದುರ್ಗ - ಸವದತ್ತಿ -ಧಾರವಾಡ

ಆಕಾಶವಾಣಿ ಕೇಂದ್ರ

ವಿಜಯಪುರ ನಗರದ ಅಥಣಿ ರಸ್ತೆಯಲ್ಲಿ ಆಕಾಶವಾಣಿ ಕೇಂದ್ರವಿದೆ. 101.8 ಮೆಗಾ ಹರ್ಟ್ಸ್ ತರಂಗಾಂತರದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಇದು ಮಹಾತ್ಮ ಗಾಂಧಿ ವೃತ್ತದಿಂದ 4 ಕಿ.ಮೀ. ಅಂತರದಲ್ಲಿ ಅಥಣಿಗೆ ಹೋಗುವ ಮಾರ್ಗದಲ್ಲಿ ಎಡಕ್ಕೆ ವರ್ತುಲ ರಸ್ತೆಯಲ್ಲಿದೆ.

ಕೇಂದ್ರ ಸರಕಾರವು ಸ್ಥಾಪಿಸಿದ 'ಪ್ರಸಾರ ಭಾರತಿ’ಯ ಮೊದಲ ಮಗುವಾಗಿ ದಿನಾಂಕ : 18-09-1997 ರಂದು ಎಫ್.ಎಮ್.ಬ್ಯಾಂಡಿನಲ್ಲಿ ಕಾರ್ಯನಿರ್ವಹಿಸುವ ಕೇಂದ್ರವಾಗಿ ಆರಂಭವಾಗಿದೆ. ಕೆಲವು ಸ್ವಂತ ಕಾರ್ಯಕ್ರಮಗಳನ್ನು ಸಿದ್ಧಪಡಿಸಿ ಪ್ರಸಾರಮಾಡುವುದರೊಂದಿಗೆ ದೆಹಲಿ, ಬೆಂಗಳೂರು, ಮುಂಬಯಿ ವಿವಿಧ ಭಾರತಿ ಕೆಂದ್ರಗಳ ಕಾರ್ಯಕ್ರಮಗಳನ್ನು ಮರು ಪ್ರಸಾರ ಮಾಡುತ್ತದೆ.

2x*3 ಕಿ.ವ್ಯಾ. ಪ್ರಸಾರ ಸಾಮರ್ಥ್ಯ ಹೊಂದಿರುವ ಇದರ ಪ್ರಸಾರವು ಸುಮಾರು 80. ಕಿ.ಮೀ. ದೂರದವರೆಗೂ ಕೇಳಿಬರುತ್ತದೆ. ಇದು ಕೃಷಿ, ಜಾನಪದ ಕಲೆ, ಶಿಕ್ಷಣ, ಸಾಹಿತ್ಯ, ಸಂಗೀತ, ಮನರಂಜನೆ ಹಾಗೂ ಮಕ್ಕಳ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶ ನೀಡುತ್ತದೆ.

ವಾಹನ ಸಾರಿಗೆ

ವಿಜಯಪುರ ಪಟ್ಟಣವು ನಗರ ಹಾಗೂ ಗ್ರಾಮೀಣ ಸಾರಿಗೆ ಹೊಂದಿದೆ. ಪಟ್ಟಣದಲ್ಲಿ 9 ಫೆಬ್ರುವರಿ 2013 ರಂದು ಅತ್ಯಾಧುನಿಕ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಗರ ಸಾರಿಗೆ ವಾಹನಗಳು ಪ್ರಾರಭವಾಗಿ ನಗರದ ಜನತೆಗೆ ಪ್ರಯಾಣದ ಸೌಕರ್ಯವನ್ನು ಕಲ್ಪಿಸಲಾಗಿದೆ.

ನಗರ ಸಾರಿಗೆ ವಾಹನ ಗಳಿಗೆ ವಿಜಯಪುರ ನಗರ ಸಾರಿಗೆ (ದಿ ಸಿಟಿ ಆಫ್ ವಿಕ್ಟರಿ) ಎಂದು ಹೆಸರಿಸಲಾಗಿದೆ ಮತ್ತು ದಿನದ ಪಾಸನ್ನು ಪಡೆದು ನಗರದ ತುಂಬೆಲ್ಲ ಹಾಗೂ ಪ್ರವಾಸಿ ಸ್ಥಳಗಳನ್ನು ನೋಡಬಹುದಾಗಿದೆ. ಸರಕಾರೇತರ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಾರಿಗೆ ವಾಹನಗಳು ಜಿಲ್ಲೆ ಯಾದ್ಯಂತ ಸಂಚರಿಸುತ್ತವೆ.

ವಿಜಯಪುರದಿಂದ ಮುಂಬಯಿ, ಪುನಾ, ಬೆಂಗಳೂರು, ಹೈದರಾಬಾದುಗಳಿಗೆ ಐಷಾರಾಮಿ ಬಸ್ಸುಗಳು ಓಡಾಡುತ್ತವೆ. ಇತರೆ ನಿಗಮದ ಬಸ್ಸುಗಳು,ಅಂತರರಾಜ್ಯ (ಗೋವಾ ಮತ್ತು ಮಹಾರಾಷ್ಟ್ರ) ವಾಹನಗಳು ಕೂಡ ಸಂಚರಿಸುತ್ತವೆ. ವಿಜಯಪುರ ಜಿಲ್ಲೆಯ ವಾಹನ ನೋಂದಣಿ ಸಂಖ್ಯೆ - ಕೆ ಎ - 28 ಆಗಿದೆ. ವಿಜಯಪುರ ನಗರದ ಬಾಗಲಕೋಟ ರಸ್ತೆಯಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಹೊಂದಿದೆ.

ರೈಲು ಸಾರಿಗೆ

ವಿಜಯಪುರ ತಾಲ್ಲೂಕಿನ ರೈಲು ನಿಲ್ದಾಣಗಳು

ವಿಜಯಪುರ ತಾಲ್ಲೂಕಿನಿಂದ ಇತರೆ ತಾಲ್ಲೂಕಿಗೆ ಇರುವ ದೂರ

ವಿಜಯಪುರ ಜಿಲ್ಲೆಯ ತಾಲ್ಲೂಕಿನಿಂದ ತಾಲ್ಲೂಕಿಗೆ ಇರುವ ದೂರವನ್ನು ಈ ಕೆಳಗಿನ ಕೊಷ್ಟಕದಲ್ಲಿ ಕೊಡಲಾಗಿದೆ.

ಕ್ರ.ಸಂ. ತಾಲ್ಲೂಕುಗಳು ಬಸವನ ಬಾಗೇವಾಡಿ ವಿಜಯಪುರ ಇಂಡಿ ಮುದ್ದೇಬಿಹಾಳ ಸಿಂದಗಿ
1 ಬಸವನ ಬಾಗೇವಾಡಿ 0 45 85 37 57
2 ವಿಜಯಪುರ 45 0 55 82 60
3 ಇಂಡಿ 85 55 0 100 50
4 ಮುದ್ದೇಬಿಹಾಳ 37 82 100 0 80
5 ಸಿಂದಗಿ 57 60 50 80 0

ಸರಕಾರಿ ವಾಹನ ನಿಲ್ದಾಣಗಳು

ವಾಹನ ತರಬೇತಿ ಶಾಲೆಗಳು

ವಿಜಯಪುರ ನಗರದಲ್ಲಿ 20 ಕ್ಕೂ ಹೆಚ್ಚು ವಾಹನ ತರಬೇತಿ ಶಾಲೆಗಳಿವೆ.

ವಾಹನ ಮಾರಾಟ ಮಳಿಗೆಗಳು

ಕ್ರೀಡಾಂಗಣ

ವಿಜಯಪುರ ತಾಲ್ಲೂಕಿನ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಡಾ|| ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣವನ್ನು 1982ರಲ್ಲಿ ನಿರ್ಮಿಸಲಾಯಿತು. ಕ್ರೀಡಾಂಗಣದಲ್ಲಿ ಸೈಕಲ್ ಟ್ರ್ಯಾಕ್, ಜಿಮ್, ಬಾಸ್ಕೆಟ್ ಬಾಲ್ ಮೈದಾನ, ವಾಲಿಬಾಲ್ ಮೈದಾನ, ಸ್ಕೆಟಿಂಗ್ ಮೈದಾನ ಮತ್ತು ಒಳಾಂಗಣ ಕ್ರೀಡಾಂಗಣ ಇದೆ. ಈ ಕ್ರೀಡಾಂಗಣ ದಲ್ಲಿ ಹಲವಾರು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳು ನಡೆದಿವೆ.

ಕ್ರೀಡೆ

ವಿಜಯಪುರ ತಾಲ್ಲೂಕು ಸೈಕ್ಲಿಸ್ಟಗಳ ಕಣಜ. ಪ್ರಮುಖವಾಗಿ ಪ್ರೇಮಲತಾ ಸುರೇಬಾನ, ಯಲಗುರೇಶ ಗಡ್ಡಿ, ಲಕ್ಕಪ್ಪ ಕುರಣಿ, ಗೀತಾಂಜಲಿ ಜ್ಯೋತೆಪ್ಪನ್ನವರ ಮತ್ತು ನೀಲಮ್ಮ ಮಲ್ಲಿಗವಾಡ ಮುಂತಾದವರು. ರಾಜೇಶ್ವರಿ ಗಾಯಕವಾಡರವರು ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟನಲ್ಲಿ ಭಾಗವಹಿಸಿದ್ದಾರೆ. ಇಲ್ಲಿನ ಅನೇಕ ಕ್ರೀಡಾಪಟುಗಳು ರಾಜ್ಯ , ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ಪ್ರೀಮಿಯರ್ ಲೀಗ್ನ ವಿಜಯಪುರ ಬುಲ್ಸ್ ಕ್ರಿಕೆಟ್ ತಂಡ ಇದೆ.

ಚಿತ್ರ ಮಂದಿರಗಳು

ವಿಜಯಪುರ ನಗರದಲ್ಲಿ 7 ಚಿತ್ರ ಮಂದಿರಗಳು ಇವೆ.

ವಿಜಯಪುರ

  • 1. ಲಕ್ಷ್ಮಿ ಚಿತ್ರ ಮಂದಿರ
  • 2. ಡ್ರ್ರೀಮಲ್ಯಾಂಡ್ ಚಿತ್ರ ಮಂದಿರ
  • 3. ಜಯಶ್ರೀ ಚಿತ್ರ ಮಂದಿರ
  • 4. ಅಮೀರ ಚಿತ್ರ ಮಂದಿರ
  • 5. ಅಲಂಕಾರ ಚಿತ್ರ ಮಂದಿರ
  • 6. ಅಪ್ಸರಾ ಚಿತ್ರ ಮಂದಿರ
  • 7. ತ್ರಿಪುರ ಸುಂದರಿ ಚಿತ್ರ ಮಂದಿರ

ರಾಜಕೀಯ

ವಿಜಯಪುರ ತಾಲ್ಲೂಕಿನಲ್ಲಿ ಎರಡು ವಿಧಾನ ಸಭಾ ಕ್ಷೇತ್ರಗಳಿವೆ.

  • ಬಬಲೇಶ್ವರ ವಿಧಾನ ಸಭಾ ಕ್ಷೇತ್ರ

ಬಬಲೇಶ್ವರ ವಿಧಾನ ಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಬಬಲೇಶ್ವರ ಮತಕ್ಷೇತ್ರ(2018)ದಲ್ಲಿ 1,06,256 ಪುರುಷರು, 1,02,647 ಮಹಿಳೆಯರು ಸೇರಿ ಒಟ್ಟು 2,08,903 ಮತದಾರರಿದ್ದಾರೆ.

ಕ್ಷೇತ್ರದ ಇತಿಹಾಸ

ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಮಹಾಕ್ರಾಂತಿಯ ನಂತರ ಶರಣ ಹರಳಯ್ಯ 63 ಶರಣರೊಂದಿಗೆ ಶೇಗುಣಸಿ ಹೊರ ವಲಯದಲ್ಲಿ ಕೆಲ ಕಾಲ ತಂಗಿದ್ದ ಐತಿಹ್ಯ ಇಲ್ಲಿನ ಹರಳಯ್ಯನ ಗುಂಡಿ ಇದೆ. ಮಮದಾಪುರದಲ್ಲಿ ಆದಿಲ್‌ಶಾಹಿ ಅರಸರು ಕಟ್ಟಿಸಿದ ಸುಂದರ ಕೆರೆ ಶತ ಶತಮಾನಗಳ ಕಾಲ ವಿಶಿಷ್ಟ ತಳಿಯ ಭತ್ತ ಬೆಳೆಯಲು ಆಸರೆಯಾಗಿತ್ತು ಎಂಬುದು ಇಲ್ಲಿನ ಐತಿಹ್ಯ. ಬಬಲೇಶ್ವರದ ಗುರುಪಾದೇಶ್ವರ ಬೃಹನ್ಮಠಕ್ಕೆ ತನ್ನದೇ ಪರಂಪರೆಯಿದೆ. ಕಾಖಂಡಕಿಯ ಮಹಿಪತಿದಾಸರ ಪರಂಪರೆ ರಾಜ್ಯದಲ್ಲೇ ಹೆಸರುವಾಸಿ. ಕಾರಹುಣ್ಣಿಮೆ ಸಂದರ್ಭ ಇಲ್ಲಿ ನಡೆಯುವ ಓರಿ ಓಡಿಸುವ ಸ್ಪರ್ಧೆ ಮೈಮನ ರೋಮಾಂಚನಗೊಳಿಸುತ್ತದೆ. ಪ್ರಸಿದ್ಧ ಅರಕೇರಿ ಅಮೋಘ ಸಿದ್ಧೇಶ್ವರ ದೇವಾಲಯ, ಕಂಬಾಗಿ ಮತ್ತು ಹಲಗಣಿ ಗ್ರಾಮದ ಹಣಮಂತ ದೇವಾಲಯಗಳು, ಐತಿಹಾಸಿಕ ಬಬಲಾದಿಯ ಗುರು ಚಕ್ರವರ್ತಿ ಸದಾಶಿವ ಮಠ, ಬೆಳ್ಳುಬ್ಬಿಯ ಮಳೇಮಲ್ಲೇಶ್ವರ ದೇವಾಲಯ ಹಾಗೂ ದೇವರ ಗೆಣ್ಣೂರನ ಮಹಾಲಕ್ಷ್ಮಿ ದೇವಾಲಯಗಳಿವೆ. ಪ್ರಸಿದ್ಧ ದೇಸಗತಿ ಮನೆತನ ವಿಜಯಪುರ ತಾಲ್ಲೂಕಿನ ಜೈನಾಪುರ ಗ್ರಾಮದಲ್ಲಿ ವಾಸವಾಗಿದೆ.

ಒಂದೆಡೆ ಹೊಳಿ ದಂಡೆ. ಸಮೃದ್ಧಿಯ ಕೃಷಿ ಚಿತ್ರಣ. ಇನ್ನೊಂದೆಡೆ ಎತ್ತರದ ಪ್ರದೇಶ. ಹನಿ ಹನಿ ನೀರಿಗೂ ತತ್ವಾರ. ಮಳೆಯಾಶ್ರಿತ ಬೆಳೆ ಪದ್ಧತಿ. ಕೃಷ್ಣೆ–ಡೋಣಿ ಹರಿಯುವಿಕೆ. ಸಾರವಾಡ ಸುತ್ತಮುತ್ತಲಿನ ಬಿಳಿಜೋಳ ಎಲ್ಲೆಡೆ ಪ್ರಸಿದ್ಧಿ. ಕೃಷ್ಣಾ ನದಿ ತಟದ ಕಬ್ಬು ಬೆಳೆಗಾರರಿಗಾಗಿ ಜಿಲ್ಲೆಯ ಇತಿಹಾಸದಲ್ಲೇ ಆರಂಭಗೊಂಡ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣಾನಗರದಲ್ಲಿದೆ. ರಜತ ಮಹೋತ್ಸವ ಕಂಡ ಈ ಕಾರ್ಖಾನೆ ಈ ಭಾಗದ ರೈತರ ಆರ್ಥಿಕಾಭಿವೃದ್ಧಿಯ ಬೆನ್ನೆಲುಬಾಗಿರುವುದು ಇಲ್ಲಿನ ವಿಶೇಷ. ತಿಕೋಟಾ ಭಾಗ ದ್ರಾಕ್ಷಿಯ ಕಣಜ ಎಂದೇ ಖ್ಯಾತವಾಗಿದೆ. ವಿದೇಶಕ್ಕೂ ಇಲ್ಲಿನ ದ್ರಾಕ್ಷಿ ರಫ್ತಾಗುತ್ತಿದೆ. ಒಟ್ಟಾರೆ ಬಬಲೇಶ್ವರ ವಿಧಾನಸಭಾ ಕ್ಷೇತ್ರ ವಿಶಿಷ್ಟ ಭೌಗೋಳಿಕ ನೆಲೆಯನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿದೆ.

ಬಬಲೇಶ್ವರ ವಿಧಾನಸಭೆ ಕ್ಷೇತ್ರ 2008ರಲ್ಲಿ ಮರು ವಿಂಗಡಣೆ ಆದ ಬಳಿಕ ಬಬಲೇಶ್ವರ ಎಂದು ನಾಮಕರಣಗೊಂಡಿದೆ. 2008ರ ಮೊದಲು ತಿಕೋಟಾ ವಿಧಾನಸಭೆ ಕ್ಷೇತ್ರವಾಗಿತ್ತು. ನಾಲ್ಕು ಬಾರಿ ಕಾಂಗ್ರೆಸ್‌ನ ಬಿ.ಎಂ.ಪಾಟೀಲರು ಹಾಗೂ ಅವರ ಪುತ್ರ ಎಂ.ಬಿ.ಪಾಟೀಲರು ನಾಲ್ಕು ಬಾರಿ ಆಯ್ಕೆಯಾಗಿ ಅತಿ ಹೆಚ್ಚು ವರ್ಷಗಳ ಕಾಲ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು ವಿಶೇಷವಾಗಿದೆ. ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ತಿಕೋಟಾ ವಿಧಾನಸಭಾ ಕ್ಷೇತ್ರ ಬಬಲೇಶ್ವರ ವಿಧಾನಸಭಾ ಕ್ಷೇತ್ರ ದೊಳಗೆ ವಿಲೀನವಾಯಿತು. ಕ್ಷೇತ್ರಕ್ಕೆ ಉಪ ಚುನಾವಣೆ ಸೇರಿದಂತೆ ಒಟ್ಟು 14 ವಿಧಾನಸಭಾ ಚುನಾವಣೆ ನಡೆದಿದ್ದು, ಇದರಲ್ಲಿ ಎಂಟು ಚುನಾವಣೆಗಳಲ್ಲಿ ಇಲ್ಲಿನ ಮತದಾರರು ಬಿ.ಎಂ.ಪಾಟೀಲ ಹಾಗೂ ಎಂ.ಬಿ.ಪಾಟೀಲಗೆ ಹರಸಿದ್ದಾರೆ. ತಂದೆ–ಮಗ ಇಬ್ಬರೂ ಸಚಿವರಾಗಿರುವುದು ಇಲ್ಲಿನ ವಿಶೇಷ.

1994ರಲ್ಲಿ ಜನತಾದಳದಿಂದ ಆಯ್ಕೆಯಾದ ಶಿವಾನಂದ ಪಾಟೀಲರು ಕಾಂಗ್ರೆಸ್‌ನ ಬಿ.ಎಂ.ಪಾಟೀಲ ಅವರ ಪುತ್ರ ಎಂ.ಬಿ.ಪಾಟೀಲರನ್ನು ಸೋಲಿಸಿದ್ದರು. 1999ರಲ್ಲಿ ಕಾಂಗ್ರೆಸ್‌ನ ಎಂ.ಬಿ.ಪಾಟೀಲರನ್ನು ಸೋಲಿಸಿ ಜನತಾದಳದಿಂದ ಆಯ್ಕೆಯಾದ ಶಿವಾನಂದ ಪಾಟೀಲ ಅವರು ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಶಿವಾನಂದ ಪಾಟೀಲ ಅವರು ಬಸವನಬಾಗೇವಾಡಿ ಕ್ಷೇತ್ರಕ್ಕೆ ವಲಸೆ ಹೋದ ಬಳಿಕ ಎಂ.ಬಿ.ಪಾಟೀಲರು ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್‌ ಸಾಧಿಸಿದ್ದಾರೆ. ಇದರಲ್ಲಿ ಎರಡು ಬಾರಿ ಜೆಡಿಎಸ್‌ ಪಕ್ಷದಿಂದ ಸೋತಿರುವ ಬಿಜೆಪಿಯ ವಿಜುಗೌಡ ಪಾಟೀಲರು ಶಿವಾನಂದ ಪಾಟೀಲ ಅವರ ಕಿರಿಯ ಸಹೋದರ ಎಂಬುದು ಗಣನೀಯ.

2008ರಲ್ಲಿ ತಿಕೋಟಾ ವಿಧಾನಸಭಾ ಕ್ಷೇತ್ರವನ್ನು ಬಬಲೇಶ್ವರ ವಿಧಾನಸಭಾ ಕ್ಷೇತ್ರ ಎಂದು ನಾಮಕರಣ ಮಾಡಲಾಯಿತು. ಆಗ ಬಸವನಬಾಗೇವಾಡಿ ಕ್ಷೇತ್ರದಲ್ಲಿದ್ದ ಮಮದಾಪುರ ಹೋಬಳಿಯ 28 ಹಳ್ಳಿಗಳು ಬಬಲೇಶ್ವರ ಕ್ಷೇತ್ರಕ್ಕೆ ಸೇರ್ಪಡೆಯಾದರೆ, ತಿಕೋಟಾ ವ್ಯಾಪ್ತಿಯಲ್ಲಿದ್ದ ಕೆಲ ಹಳ್ಳಿಗಳು ನಾಗಠಾಣ(ಹಳೆಯ ಬಳ್ಳೋಳ್ಳಿ) ಕ್ಷೇತ್ರದ ಪಾಲಾದವು.

ಕ್ಷೇತ್ರದ ವಿಶೇಷತೆ

  • ಸ್ವಾತಂತ್ರ್ಯ ಹೋರಾಟಗಾರ ಮತ್ತು ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಹಿರಿಯರಾದ ಚೆನ್ನಬಸಪ್ಪ ಅಂಬಲಿಯವರು ಈ ಕ್ಷೇತ್ರದ 1951ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದು ವಿಶೇಶವಾಗಿದೆ.
  • ಬಬಲೇಶ್ವರ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿದರೂ ಕಾಂಗ್ರೆಸ್ಸೇತರ ಪಕ್ಷಗಳೂ ಬಲ್ಯ ಮೆರೆದಿವೆ. 1957ರಿಂದ ನಿರಂತರ ಗೆದ್ದಿದ್ದ ಕಾಂಗ್ರೆಸ್‌ ಪಕ್ಷ ಮೊದಲ ಸೋಲು ಕಂಡಿದ್ದು 1978ರ ಕಾಂಗ್ರೆಸ್‌ ಅಭ್ಯರ್ಥಿ ಶಿವರಾಯ ಜಿದ್ದಿ ಅವರನ್ನು ಸೋಲಿಸಿದ ಜನತಾ ಪಕ್ಷದ ಬದುಗೌಡ ಬಾಪುಗೌಡ ಪಾಟೀಲ ಮೊದಲ ಬಾರಿಗೆ ಕಾಂಗ್ರೆಸ್‌ ರಹಿತ ಶಾಸಕ ಎನಿಸಿದರು.
  • 1962ರಲ್ಲಿ ಶಾಸಕರಾಗಿದ್ದ ಬಿ.ಎಂ.ಪಾಟೀಲರನ್ನು 1983 ಚುನಾವಣೆ ಬಳಿಕ 1989ರವರೆಗೆ ನಡೆದ ಮೂರು ಚುನಾವಣೆಗಳಲ್ಲಿ ಬಿ.ಎಂ.ಪಾಟೀಲರನ್ನು ಗೆಲ್ಲಿಸಿ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗಳಿಸುವಂತೆ ಮಾಡಿತ್ತು.
  • 1991ರಲ್ಲಿ ಬಿ.ಎಂ.ಪಾಟೀಲರು ನಿಧನರಾದಾಗ, ತೆರವಾದ ಸ್ಥಾನಕ್ಕೆ ಉಪ ಚುನಾವಣೆಯಲ್ಲಿ ಎಂ.ಬಿ.ಪಾಟೀಲರು ಸ್ಪರ್ಧಿಸಿ ಆಯ್ಕೆಯಾಗಿದ್ದರು.
  • ಶಿವಾನಂದ ಪಾಟೀಲರು 1994ರಲ್ಲಿ ಜನತಾ ಪಕ್ಷದಿಂದ ಮತ್ತು 1999ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು.
  • ಬಿ.ಎಂ.ಪಾಟೀಲರು ವೀರಪ್ಪ ಮೊಯ್ಲಿ ಮಂತ್ರಿಮಂಡಳದಲ್ಲಿ ನಾಗರಿಕ ಆಡಳಿತ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದರು ಹಾಗೂ ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು.
  • ಎಂ.ಬಿ.ಪಾಟೀಲರು ಸಿದ್ದರಾಮಯ್ಯನವರ ಮಂತ್ರಿಮಂಡಳದಲ್ಲಿ ನೀರಾವರಿ ಸಚಿವರಾಗಿದ್ದರು.
  • ಎಂ.ಬಿ.ಪಾಟೀಲರು ಎಚ್.ಡಿ.ಕುಮಾರಸ್ವಾಮಿ ಸಮ್ಮಿಸ್ರ ಸರ್ಕಾರದ ಮಂತ್ರಿಮಂಡಳದಲ್ಲಿ ಗೃಹ ಸಚಿವರಾಗಿದ್ದರು.

ಜನಪ್ರತಿನಿಧಿಗಳ ವಿವರ

ವರ್ಷ ವಿಧಾನ ಸಭಾ ಕ್ಷೆತ್ರ ವಿಜೇತ ಪಕ್ಷ ಮತಗಳು ಉಪಾಂತ ವಿಜೇತ ಪಕ್ಷ ಮತಗಳು
ಬಬಲೇಶ್ವರ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
2018 ಬಬಲೇಶ್ವರ ವಿಧಾನ ಸಭಾ ಕ್ಷೇತ್ರ ಎಂ.ಬಿ.ಪಾಟೀಲ ಕಾಂಗ್ರೇಸ್ 98339 ವಿಜುಗೌಡ ಪಾಟೀಲ ಬಿಜೆಪಿ 68624
2013 ಬಬಲೇಶ್ವರ ವಿಧಾನ ಸಭಾ ಕ್ಷೇತ್ರ ಎಂ.ಬಿ.ಪಾಟೀಲ ಕಾಂಗ್ರೇಸ್ 62061 ವಿಜುಗೌಡ ಪಾಟೀಲ ಜೆ.ಡಿ.ಎಸ್ 57706
2008 ಬಬಲೇಶ್ವರ ವಿಧಾನ ಸಭಾ ಕ್ಷೇತ್ರ ಎಂ.ಬಿ.ಪಾಟೀಲ ಕಾಂಗ್ರೇಸ್ 55525 ವಿಜುಗೌಡ ಪಾಟೀಲ ಜೆ.ಡಿ.ಎಸ್ 38886
ತಿಕೋಟಾ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
2004 ತಿಕೋಟಾ ವಿಧಾನ ಸಭಾ ಕ್ಷೇತ್ರ ಎಂ.ಬಿ.ಪಾಟೀಲ ಕಾಂಗ್ರೇಸ್ 48274 ಎಂ.ಎಸ್.ರುದ್ರಗೌಡರ ಜೆ.ಡಿ.ಯು. 19040
1999 ತಿಕೋಟಾ ವಿಧಾನ ಸಭಾ ಕ್ಷೇತ್ರ ಶಿವಾನಂದ ಪಾಟೀಲ ಬಿ.ಜೆ.ಪಿ. 49080 ಎಂ.ಬಿ.ಪಾಟೀಲ ಕಾಂಗ್ರೇಸ್ 41649
1994 ತಿಕೋಟಾ ವಿಧಾನ ಸಭಾ ಕ್ಷೇತ್ರ ಶಿವಾನಂದ ಪಾಟೀಲ ಜೆ.ಡಿ 50679 ಎಂ.ಬಿ.ಪಾಟೀಲ ಕಾಂಗ್ರೇಸ್ 25897
1991 ತಿಕೋಟಾ ವಿಧಾನ ಸಭಾ ಕ್ಷೇತ್ರ(Bypoll) ಎಂ.ಬಿ.ಪಾಟೀಲ ಕಾಂಗ್ರೇಸ್ 32832 ಶಿವಾನಂದ ಪಾಟೀಲ ಜೆ.ಡಿ. 28228
1989 ತಿಕೋಟಾ ವಿಧಾನ ಸಭಾ ಕ್ಷೇತ್ರ ಬಿ.ಎಂ.ಪಾಟೀಲ ಕಾಂಗ್ರೇಸ್ 37832 ಬಿ.ಆರ್.ಪಾಟೀಲ ಜೆ.ಡಿ. 33228
1985 ತಿಕೋಟಾ ವಿಧಾನ ಸಭಾ ಕ್ಷೇತ್ರ ಬಿ.ಎಂ.ಪಾಟೀಲ ಕಾಂಗ್ರೇಸ್ 26829 ಬಿ.ಆರ್.ಪಾಟೀಲ ಜೆ.ಎನ್.ಪಿ. 25914
1983 ತಿಕೋಟಾ ವಿಧಾನ ಸಭಾ ಕ್ಷೇತ್ರ ಬಿ.ಎಂ.ಪಾಟೀಲ ಕಾಂಗ್ರೇಸ್ 27884 ಬಿ.ಎಮ್.ಕೊತೀಹಾಳ ಜೆ.ಎನ್.ಪಿ. 18092
1978 ತಿಕೋಟಾ ವಿಧಾನ ಸಭಾ ಕ್ಷೇತ್ರ ಬಿ.ಬಿ.ಪಾಟೀಲ ಜೆ.ಎನ್.ಪಿ. 21317 ಎಸ್.ಎ.ಜಿದ್ದಿ ಕಾಂಗ್ರೇಸ್ 16899
ತಿಕೋಟಾ ವಿಧಾನಸಭಾ ಕ್ಷೇತ್ರ ಮೈಸೂರು ರಾಜ್ಯ
1972 ತಿಕೋಟಾ ವಿಧಾನ ಸಭಾ ಕ್ಷೇತ್ರ ಜಿ.ಎನ್.ಪಾಟೀಲ ಎನ್.ಸಿ.ಓ. 22119 ಎಸ್.ಎ.ಜಿದ್ದಿ ಕಾಂಗ್ರೇಸ್ 14156
1967 ತಿಕೋಟಾ ವಿಧಾನ ಸಭಾ ಕ್ಷೇತ್ರ ವಿ.ಎಸ್.ಬಸಲಿಂಗಯ್ಯ ಕಾಂಗ್ರೇಸ್ 16329 ಎನ್.ಕೆ.ಉಪಾಧ್ಯಯ ಸಿ.ಪಿ.ಎಮ್. 3353
1962 ತಿಕೋಟಾ ವಿಧಾನ ಸಭಾ ಕ್ಷೇತ್ರ ಬಿ.ಎಂ.ಪಾಟೀಲ ಕಾಂಗ್ರೇಸ್ 19957 ಬಿ.ಜಿ.ಬಿರಾದಾರ ಎಸ್.ಡಬ್ಲೂ.ಎ. 4024
1957 ತಿಕೋಟಾ ವಿಧಾನ ಸಭಾ ಕ್ಷೇತ್ರ ಸಿ.ಜೆ.ಅಂಬಲಿ ಕಾಂಗ್ರೇಸ್ 12933 ಡಾ.ಬಸವರಾಜ ನಾಗೂರ ಪಕ್ಷೇತರ 8262
ತಿಕೋಟಾ-ಬೀಳಗಿ ವಿಧಾನಸಭಾ ಕ್ಷೇತ್ರ ಬಾಂಬೆ ರಾಜ್ಯ
1951 ತಿಕೋಟಾ-ಬೀಳಗಿ ವಿಧಾನ ಸಭಾ ಕ್ಷೇತ್ರ ಸಿ.ಜೆ.ಅಂಬಲಿ ಕಾಂಗ್ರೇಸ್ 21042 ಆರ್.ಎಂ.ಪಾಟೀಲ ಕೆ.ಎಮ್.ಪಿ.ಪಿ 9001
  • [[ವಿಜಯಪುರ ನಗರ ವಿಧಾನಸಭಾ ಕ್ಷೇತ್ರ

ವಿಜಯಪುರ ನಗರ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ವಿಜಯಪುರ ನಗರ ಮತಕ್ಷೇತ್ರ(2018)ದಲ್ಲಿ 1,21,753 ಪುರುಷರು, 1,19,882 ಮಹಿಳೆಯರು ಸೇರಿ ಒಟ್ಟು 2,41,635 ಮತದಾರರಿದ್ದಾರೆ.

ಕ್ಷೇತ್ರದ ಇತಿಹಾಸ

1957ರಲ್ಲಿ ಮೊದಲ ಚುನಾವಣೆಯಿಂದ ಚುನಾವಣೆ ಎದುರಾದಾಗ ಸ್ಪರ್ಧೆಯಲ್ಲಿದ್ದ ಮೊದಲ ಅವಧಿಯಲ್ಲೇ ಕಾಂಗ್ರೆಸ್‌ ಅಭ್ಯರ್ಥಿ ಮಹಾಲದಾರ ಗೌಸ್‌ ಮೊಹಿದ್ದೀನ್‌ ಅವರನ್ನು ಸೋಲಿಸಿ ಐಎನ್‌ಡಿ ಪಕ್ಷದ ಸರದಾರ ಡಾ||ಬಸವರಾಜ ನಾಗೂರ ಗೆದ್ದರೂ ನಗರದ ಕ್ಷೇತ್ರ ಕಾಂಗ್ರೆಸ್‌ ಭದ್ರ ಕೋಟೆ ಎನಿಸಿತ್ತು. ನಂತರ ನಡೆದ ಮೂರು ಚುನಾವಣೆಗಳಲ್ಲಿ 1972ರವರೆಗೆ ಕಾಂಗ್ರೆಸ್‌ನ ರೇವಣಸಿದ್ದಪ್ಪ ನಾವದಗಿ, ಪಿ.ಬಿ. ಮಲ್ಲನಗೌಡ, ಕೆ.ಟಿ. ರಾಠೊಡ ಗೆದ್ದಿದ್ದರು. 1978ರಲ್ಲಿ ಜೆಎನ್‌ಪಿ ಪಕ್ಷದ ಸೈಯದ್‌ ಹಬೀಬುದ್ದೀನ್‌ ಭಕ್ಷಿ ಆಯ್ಕೆ ಆಗುವ ಮೂಲಕ ಕ್ಷೇತ್ರದಲ್ಲಿ ಆಯ್ಕೆಯಾದ ಮೊದಲ ಮುಸ್ಲಿಂ ಶಾಸಕ ಎನಿಸಿದರು. 1983ರಲ್ಲಿ ಜನತಾ ಪಕ್ಷದ ಚಂದ್ರಶೇಖರ ಗಚ್ಚಿನಮಠ ಗೆದ್ದರೆ, 1985ರಲ್ಲಿ ಗೆದ್ದಿದ್ದ ಕಾಂಗ್ರೆಸ್‌ನ ಉಸ್ತಾದ ಮಹಬೂಬ ಪಟೇಲ್‌ 1989ರಲ್ಲೂ ಆಯ್ಕೆಯಾಗಿದ್ದರು.1994ರಲ್ಲಿ ಬಸನಗೌಡ ಪಾಟೀಲ ಯತ್ನಾಳ ಮೂಲಕ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆದರೆ, 1999ರಲ್ಲಿ ಯತ್ನಾಳ ಅವರನ್ನು ಸೋಲಿಸಿ ಉಸ್ತಾದ್‌ ಅವರು ಸೇಡು ತೀರಿಸಿಕೊಂಡರು. 2004 ಹಾಗೂ 2008ರಲ್ಲಿ ಅಪ್ಪು ಪಟ್ಟಣಶೆಟ್ಟಿ ಸತತ ಎರಡು ಬಾರಿ ಗೆದ್ದು ಬಿಗಿದ್ದರು. 2013ರಲ್ಲಿ ಕಾಂಗ್ರೆಸ್‌ನ ಡಾ| ಎಂ.ಎಸ್‌. ಬಾಗವಾನ ಆಯ್ಕೆಯಾದರು.

ವಿಜಯಪುರ ನಗರ ಕ್ಷೇತ್ರ ಕಾಂಗ್ರೆಸ್‌ ಮಟ್ಟಿಗೆ ಮುಸ್ಲಿಂ ಸಮುದಾಯಕ್ಕೆ ಇಲ್ಲಿ ಟಿಕೆಟ್‌ ಖಾತ್ರಿ ಮಾಡಿರುವ ಕ್ಷೇತ್ರ. ಇಸ್ಲಾಂ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಕಾರಣಕ್ಕೆ ಕಳೆದ ನಾಲ್ಕಾರು ದಶಕಗಳಿಂದ ಕಾಂಗ್ರೆಸ್‌ ಇಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಿಗೆ ಟಿಕೆಟ್‌ ಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದೆ.

ಕ್ಷೇತ್ರದ ವಿಶೇಷತೆ

ಅಪ್ಪಾಸಾಹೇಬ ಪಟ್ಟಣಶೆಟ್ಟಿಯವರನ್ನು ಹೊರೆತುಪಡಿಸಿ 1951ರಿಂದ 2013ವರೆಗೆ ಯಾರಿಗೂ ಎರಡು ಬಾರಿ ಕ್ಷೇತ್ರದ ಜನತೆ ಆಯ್ಕೆ ಮಾಡಿಲ್ಲ. ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಹೆಚ್ಚಾಗಿರುವುದರಿಂದ ನಾಲ್ಕು ಬಾರಿ ಮುಸ್ಲಿಂ ನಾಯಕರು ಆಯ್ಕೆಯಾಗಿದ್ದಾರೆ.

ಜನಪ್ರತಿನಿಧಿಗಳ ವಿವರ

ವರ್ಷ ವಿಧಾನ ಸಭಾ ಕ್ಷೆತ್ರ ವಿಜೇತರು ಪಕ್ಷ ಮತಗಳು ಉಪಾಂತ ವಿಜೇತರು ಪಕ್ಷ ಮತಗಳು
ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
2013 ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ಡಾ.ಮಕಬುಲ್ ಬಾಗವಾನ ಕಾಂಗ್ರೇಸ್ 48615 ಬಸನಗೌಡ ಪಾಟೀಲ(ಯತ್ನಾಳ) ಜೆ.ಡಿ.ಎಸ್ 39235
2008 ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬಿ.ಜೆ.ಪಿ. 34217 ಎಸ್.ಎ.ಹೊರ್ತಿ ಕಾಂಗ್ರೇಸ್ 16653
2004 ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬಿ.ಜೆ.ಪಿ. 70001 ಎಮ್.ಎಲ್.ಉಸ್ತಾದ್ ಕಾಂಗ್ರೇಸ್ 45968
1999 ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ಎಮ್.ಎಲ್.ಉಸ್ತಾದ್ ಕಾಂಗ್ರೇಸ್ 42902 ಅಪ್ಪು ಪಟ್ಟಣಶೆಟ್ಟಿ ಬಿ.ಜೆ.ಪಿ. 39749
1994 ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ಬಸನಗೌಡ ಪಾಟೀಲ(ಯತ್ನಾಳ) ಬಿ.ಜೆ.ಪಿ. 45286 ಹಬೀಬ್ ಉಸ್ಮಾನ್ ಪಟೇಲ್ ಜೆ.ಡಿ.ಎಸ್. 29158
1989 ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ಹಬೀಬ್ ಉಸ್ಮಾನ್ ಪಟೇಲ್ ಕಾಂಗ್ರೇಸ್ 45623 ಎಸ್.ಆರ್.ಔರಂಗಾಬಾದ್ ಜೆ.ಡಿ.ಎಸ್ 34355
1985 ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ಬಿ.ಎಂ.ಪಾಟೀಲ ಕಾಂಗ್ರೇಸ್ 26829 ಬಿ.ಆರ್.ಪಾಟೀಲ ಜೆ.ಎನ್.ಪಿ. 25914
1983 ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ಚಂದ್ರಶೇಖರ ಗಚ್ಚಿನಮಠ ಬಿ.ಜೆ.ಪಿ 28795 ಖಾಜಿಹುಸೇನ್ ಜಾಹಾಗೀರದಾರ ಕಾಂಗ್ರೇಸ್ 24974
1978 ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ಹಬೀಬುದ್ದೀನ್ ಬಕ್ಷಿ ಜೆ.ಎನ್.ಪಿ. 26191 ಕೆ.ಟಿ.ರಾಠೋಡ ಕಾಂಗ್ರೇಸ್ 16663
ವಿಜಯಪುರ ವಿಧಾನಸಭಾ ಕ್ಷೇತ್ರ ಮೈಸೂರು ರಾಜ್ಯ
1972 ವಿಜಯಪುರ ವಿಧಾನಸಭಾ ಕ್ಷೇತ್ರ ಕೆ.ಟಿ.ರಾಠೋಡ ಕಾಂಗ್ರೇಸ್ 23205 ವಿಷ್ಣು ಕೇಶವ ಪಂಡಿತ ಎನ್.ಸಿ.ಓ. 13970
1967 ವಿಜಯಪುರ ವಿಧಾನಸಭಾ ಕ್ಷೇತ್ರ ಬಸನಗೌಡ ಪಾಟೀಲ ಕಾಂಗ್ರೇಸ್ 18818 ಕರಬಸಪ್ಪ ಸ್ವತಂತ್ರ 5396
1962 ವಿಜಯಪುರ ವಿಧಾನಸಭಾ ಕ್ಷೇತ್ರ ರೇವಣಸಿದ್ದಪ್ಪ ನಾವದಗಿ ಕಾಂಗ್ರೇಸ್ 13828 ನಬೀಸಾಬ್ ಬಾಳಾಸಿಂಗ್ ಸ್ವತಂತ್ರ 4846
1957 ವಿಜಯಪುರ ವಿಧಾನಸಭಾ ಕ್ಷೇತ್ರ ಡಾ.ಬಸವರಾಜ ನಾಗೂರ ಪಕ್ಷೇತರ 11827 ಮೊಹದ್ದಿನ್ ಮಹಾಲ್ದಾರ ಕಾಂಗ್ರೇಸ್ 7995
ವಿಜಯಪುರ ವಿಧಾನಸಭಾ ಕ್ಷೇತ್ರ ಬಾಂಬೆ ರಾಜ್ಯ
1951 ವಿಜಯಪುರ ವಿಧಾನಸಭಾ ಕ್ಷೇತ್ರ ಮಲ್ಲನಗೌಡ ಪಾಟೀಲ ಕಾಂಗ್ರೇಸ್ 10406 ನಬೀಸಾಬ್ ಬಾಳಾಸಿಂಗ್ ಸಿ.ಪಿ.ಐ. 6069

ವಿಜ್ಞಾನ

ಭಾಸ್ಕರಾಚಾರ್ಯರು ವಿಜಯಪುರದ ಗಣಿತಜ್ಞರು.

ಭಾಸ್ಕರಾಚಾರ್ಯ (1114 - 1185), ಅಥವಾ ಎರಡನೆಯ ಭಾಸ್ಕರ, ಭಾರತದ ಗಣಿತಜ್ಞ ಹಾಗೂ ಖಗೋಳ ಶಾಸ್ತ್ರಜ್ಞ. ಕರ್ನಾಟಕದ [[ವಿಜಯಪುರ|ವಿಜಯಪುರದ]] ಬಳಿ ಬಿಜ್ಜಡ ಬೀಡ ಎಂಬಲ್ಲಿ ಜನಿಸಿದ ಭಾಸ್ಕರಾಚಾರ್ಯ ಉಜ್ಜಯಿನಿಯ ಖಗೋಳಶಾಸ್ತ್ರ ಕೇಂದ್ರದಲ್ಲಿ ಮುಖ್ಯಸ್ಥನಾದನು.

ಅಲ್ಲಿ ವರಾಹಮಿಹಿರ ಮತ್ತು ಬ್ರಹ್ಮಗುಪ್ತರ ಗಣಿತ ಸಂಪ್ರದಾಯವನ್ನು ಮುಂದುವರೆಸಿದನು. ದಶಮಾನ ಪದ್ದತಿ ಹಾಗೂ ಆಧುನಿಕ ಬೀಜಗಣಿತದಲ್ಲಿ ಉಪಯೋಗಿಸಲ್ಪಡುವ ಅಕ್ಷರಪದ್ದತಿಯನ್ನು ಮೊದಲಿಗೆ ಬಳಕೆಗೆ ತಂದವರು ಇವರು.

ಭಾಸ್ಕರಾಚಾರ್ಯನ ಮುಖ್ಯಕೃತಿಗಳು:

  • ಲೀಲಾವತಿ (ಮುಖ್ಯವಾಗಿ ಅಂಕಗಣಿತದ ಬಗ್ಗೆ, ತನ್ನ ಮಗಳ ಮನೋರಂಜನೆಗಾಗಿ ಬರೆದದ್ದೆಂದು ಹೇಳಲಾಗುತ್ತದೆ).
  • ಬೀಜಗಣಿತ
  • ಸಿದ್ಧಾಂತಶಿರೋಮಣಿ

ಇದರಲ್ಲಿ ಎರಡು ಭಾಗಗಳಿವೆ:

  • ಗೋಳಾಧ್ಯಾಯ
  • ಗ್ರಹಗಣಿತ

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಉಪ ಕಚೇರಿಯು ವಿಜಯಪುರ ನಗರದಲ್ಲಿದೆ.

ತಂತ್ರಜ್ಞಾನ

ವಿಜಯಪುರ ಕೃಷಿ ಹವಾಮಾನ ಸೇವೆಗಳು

ಇದು ಒಂದು ಆಧುನಿಕ ಉಪಕರಣವಾಗಿದ್ದು ಕೃಷಿ ಮಹಾವಿದ್ಯಾಲಯದ ಆವರದಲ್ಲಿ ಸ್ಥಾಪಿಸಲಾಗಿದೆ. ವಿಜಯಪುರ ಜಿಲ್ಲೆಯ ಕೃಷಿ ಹವಾಮಾನ ಸೇವೆಗಳನ್ನು ಒದಗಿಸುತ್ತದೆ.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಉಪ ಕಚೇರಿಯು ವಿಜಯಪುರ ನಗರದಲ್ಲಿದೆ.

ಹೋಟೆಲುಗಳು

ಉಲ್ಲೇಖಗಳು

    ದಿಕ್ಕುಗಳು

    ಬಾಹ್ಯ ಸಂಪರ್ಕಗಳು

    This article is issued from Wikipedia. The text is licensed under Creative Commons - Attribution - Sharealike. Additional terms may apply for the media files.