ಕುಸುಮಾಕರ ದೇವರಗೆಣ್ಣೂರು

ಕುಸುಮಾಕರ ದೇವರಗೆಣ್ಣೂರು ( ೧೯೩೦-೨೦೧೨) ಕಾವ್ಯನಾಮದಲ್ಲಿ ಸಾಹಿತ್ಯಕೃಷಿ ಮಾಡುತ್ತಿರುವ ವಸಂತ ಅನಂತ ದಿವಾಣಜಿ ಇವರು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ದೇವರಗೆಣ್ಣೂರ ಗ್ರಾಮದಲ್ಲಿ ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ , ಪುಣೆ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು.

೧೯೫೬ರಲ್ಲಿ ಸೊಲ್ಲಾಪುರದ ದಯಾನಂದ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ೩೫ ವರ್ಷಗಳವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು.

ಇವರು ೨೦೧೨ರಲ್ಲಿ ತೀರಿಕೊಂಡರು.

ಸಾಹಿತ್ಯ

ಕುಸುಮಾಕರ ದೇವರಗೆಣ್ಣೂರು ಇವರು ಅನೇಕ ಮರಾಠಿ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.ಕನ್ನಡದಲ್ಲಿ ೫ ಕಾದಂಬರಿಗಳನ್ನು ರಚಿಸಿದ್ದಾರೆ.

  • ನಾಲ್ಕನೆಯ ಆಯಾಮ,
  • ನಿರೀಂದ್ರಿಯ,
  • ಪರಿಘ,
  • ಬಯಲು-ಬಸಿರು,
  • ದುರ್ದಮ್ಯ(ಮರಾಠಿಯಿಂದ ಕನ್ನಡಕ್ಕೆ ಅನುವಾದ)
  • ಕಾವ್ಯ:- ಸ್ವಪ್ನನೌಕೆ.
  • ಪಿ.ಎಚ್ ಡಿ. ಮಹಾಪ್ರಬಂಧ :- ಪ್ರಸಾದ ಯೋಗ (ಪುರಂದರ ದಾಸರನ್ನು ಕುರಿತು)
  • ಸಾಹಿತ್ಯ ವಿಮರ್ಶೆ:- ಗಾಳಿ ಹೆಜ್ಜೆ ಹಿಡಿದ ಸುಗಂಧ
  • ೧೯೬೬‘ನಾಲ್ಕನೆಯ ಆಯಾಮ’ ಕಾದಂಬರಿ

‘ನಿರೀಂದ್ರಿಯ’ ಕಾದಂಬರಿ

  • ‘ಬಯಲು-ಬಸಿರು’

.

  • ಗೌರವ ಗ್ರಂಥ:-ಅವಗಾಹ.

ಪ್ರಶಸ್ತಿ

  • ೨೦೦೬ರಲ್ಲಿ ಸತ್ಯಕಾಮ ಪ್ರಶಸ್ತಿ ಪ್ರದಾನವಾಗಿದೆ.
  • ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ೨೦೦೩
  • ಮುಂಬೈನ ಗುರುನಾರಾಯಣ ಪ್ರಶಸ್ತಿ ಲಭಿಸಿದೆ.
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು.

ಉಲ್ಲೇಖಗಳು

    This article is issued from Wikipedia. The text is licensed under Creative Commons - Attribution - Sharealike. Additional terms may apply for the media files.