ಕಂಗೇರ್ ಘಾಟಿ ರಾಷ್ಟ್ರೀಯ ಉದ್ಯಾನ
ಕಂಗೇರ್ ಘಾಟಿ ರಾಷ್ಟ್ರೀಯ ಉದ್ಯಾನವು ಭಾರತದ ಚತ್ತೀಸ್ಗಡ ರಾಜ್ಯದಲ್ಲಿದೆ.ಇದನ್ನು ೧೯೯೨ರಲ್ಲಿ ರಾಷ್ಟ್ರೀಯ ಉದ್ಯಾನವನ್ನಾಗಿ ಘೋಷಿಸಲಾಯಿತು.ಇದರ ಮೂಲಕ ಕಂಗೇರ್ ನದಿ ಹರಿಯುವ ಕಾರಣ ಇದಕ್ಕಿ ಈ ಹೆಸರು. ದೇಶದ ವಿವಿಧ ಅಭಯಾರಣ್ಯಗಳಲ್ಲಿ ಬಸ್ತಾರ್ ಪ್ರಾಂತ್ಯದ ಜಗದೀಶಪುರದ ಬಳಿ ಇರುವ ಇದು ದಟ್ಟಾರಣ್ಯಗಳು,ಜಲಪಾತಗಳು,ಜೀವವೈವಿಧ್ಯಗಳಿಂದ ಕೂಡಿದ್ದು,ಸುಣ್ಣ ಕಲ್ಲಿನ ಗುಹೆಗಳು ಇಲ್ಲಿಯ ವಿಶೇಷ.ಇದು ಚತ್ತಿಸ್ಗಡ ರಾಜ್ಯದ ರಾಷ್ಟ್ರ ಪಕ್ಷಿಯಾದ ಬಸ್ತಾರ್ ಮೈನಾ ಹಕ್ಕಿಯ ತವರು ಕೂಡಾ ಆಗಿದೆ.ಸುಮಾರು ೨೦೦ ಚದರ ಕಿ.ಮೀ ವಿಸ್ತೀರ್ಣವಿದೆ.ಒಟ್ಟು ಉದ್ಯಾನವು ವೈವಿದ್ಯಪೂರ್ಣ ಮೇಲ್ಮೈ ಲಕ್ಷಣ ಹೊಂದಿದ್ದು, ಬಯಲು ಪ್ರದೇಶ,ಅರಣ್ಯ, ಕಡಿದಾದ ಪರ್ವತ ಪ್ರದೇಶಗಳಿವೆ. ಇದರಿಂದಾಗಿ ಇಲ್ಲಿ ಹಲವಾರು ಜಾತಿಯ ಸಸ್ಯಗಳೂ,ಪ್ರಾಣಿಗಳೂ ಇದ್ದು ಜೀವವೈವಿದ್ಯದ ಪ್ರಮುಖ ಸ್ಥಳವಾಗಿದೆ.ಇದರೊಳಗೆ ಗುಡ್ಡಗಾಡು ಜನಾಂಗದವರೂ ವಾಸವಾಗಿದ್ದು ಪ್ರಕೃತಿ ಪ್ರೇಮಿಗಳಿಗೆ ಆಕರ್ಷಣೀಯ ತಾಣವಾಗಿದೆ.
Kanger Ghati National Park | |
---|---|
Kanger Valley National Park | |
IUCN category II (national park) | |
![]() ![]() | |
ನೆಲೆ | Jagdalpur, Chhattisgarh, India |
ಅತಿ ಹತ್ತಿರದ ನಗರ | Jagdalpur |
ನಿರ್ದೇಶಾಂಕಗಳು | 18°45′0″N 82°10′0″E |
ವಿಸ್ತೀರ್ಣ | 200 sq km |
ಸ್ಥಾಪಿತ | 1982 |
ಆಡಳಿತ ಮಂಡಳಿ | Conservator of Forest |
http://www.kvnp.in |
ಛಾಯಾಂಕಣ
- Kanger Valley National Park Entrance
- Kotumsar Caves
- Kotumsar Caves
- Kotumsar Caves
- Kotumsar Caves
- Kotumsar Caves
- Kotumsar Caves
- Kotumsar Caves
- Kotumsar Caves
- Kotumsar Caves
- Tirathgarh Waterfalls
- Tirathgarh Waterfalls
- Tirathgarh Waterfalls
- Tirathgarh Waterfalls
ಬಾಹ್ಯ ಸಂಪರ್ಕಗಳು
- cave-biology.org Cave biology (biospeleology) in ಭಾರತ
- kvnp.in Kanger Valley National Park
- National Cave Research and Protection Organization, India
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.