ಅಣಶಿ ರಾಷ್ಟ್ರೀಯ ಉದ್ಯಾನ

ಅಣಶಿ ರಾಷ್ಟ್ರೀಯ ಉದ್ಯಾನ ಇದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಂಡೇಲಿಯ ಬಳಿಯಿರುವ ಒಂದು ರಾಷ್ಟ್ರೀಯ ಉದ್ಯಾನ. ಈ ಅಭಯಾರಣ್ಯದ ಪ್ರದೇಶವು ಗೋವಾ ಮತ್ತು ಮಹಾರಾಷ್ಟ್ರದ ಗಡಿಯಲ್ಲಿರುವ 6 ಬೇರೆ ಅರಣ್ಯ ಪ್ರದೇಶಗಳನ್ನು ಹೊಂದಿಕೊಂಡಿದ್ದು ಒಟ್ಟು 2200 ಚದರ ಕಿಲೋಮೀಟರ್ ರಕ್ಷಿತ ಅರಣ್ಯ ಪ್ರದೇಶವನ್ನು ಹೊಂದಿದೆ. ಇಲ್ಲಿ ಕಪ್ಪು ಚಿರತೆ, ಹುಲಿ ಮತ್ತು ಆನೆ ಮುಖ್ಯ ಪ್ರಾಣಿಗಳಾಗಿವೆ.

ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಳಿ ನದಿ ಹರಿಯುತ್ತಿದೆ.
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.