ಹೆಚ್.ಡಿ.ದೇವೇಗೌಡ
ಎಚ್.ಡಿ. ದೇವೇಗೌಡ (ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ) ಅವರು ಭಾರತದ ೧೨ ನೆಯ ಪ್ರಧಾನ ಮಂತ್ರಿಗಳು ಮತ್ತು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು. [1] .[2][3] 'ಮಣ್ಣಿನ ಮಗ' ಎಂದೇ ಖ್ಯಾತರಾಗಿರುವ ದೇವೇಗೌಡರು ರೈತಪರ ಕಾಳಜಿ ಉಳ್ಳವರು.
![]() | |
---|---|
ಜನನ: | ಮೇ ೧೮, ೧೯೩೩ |
ಜನಿಸಿದ ಸ್ಥಳ: | ಹರದನಹಳ್ಳಿ, ಹೊಳೆನರಸಿಪುರ, ಹಾಸನ, ಕರ್ನಾಟಕ |
ಭಾರತದ ೧೧ ನೆ ಪ್ರಧಾನ ಮಂತ್ರಿ | |
ಸೇವೆ ಪ್ರಾರಂಭಿಸಿದ್ದು: | ಮೇ ೩೦, ೧೯೯೬ |
ಸೇವೆ ಕೊನೆಗೊಂಡಿದ್ದು: | ಏಪ್ರಿಲ್ ೨೧, ೧೯೯೭ |
ರಾಜಕೀಯ ಪಕ್ಷ : | ಜನತಾದಳ(ಎಸ್), JD(S) |
ಪತ್ನಿ : | ಚೆನ್ನಮ್ಮ |
ಮಕ್ಕಳು : | ಬಾಲಕೃಷ್ಣಗೌಡ, ಹೆಚ್ ಡಿ ರೇವಣ್ಣ, ಅನಸೂಯಾ, ಎಚ್. ಡಿ. ಕುಮಾರಸ್ವಾಮಿ, |
ಧರ್ಮ : | ಹಿಂದು |
ಸಹಿ : | ![]() |
ಜಾಲತಾಣ : | hddevegowda |
ಜೀವನ
ದೇವೇಗೌಡರು ಮೇ ೧೮, ೧೯೩೩ ರಂದು ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದರು. ಸಿವಿಲ್ ಎಂಜಿನಿಯರಿಂಗ್‍ನಲ್ಲಿ ಡಿಪ್ಲೊಮಾ ಪಡೆದ ಬಳಿಕ, ದೇವೇಗೌಡ ಅವರು ಹಾಸನ ತಾಲ್ಲೂಕಿನ ಮುತ್ತಿಗೆ ಹಿರೇಹಳ್ಳಿಯ ದೇವೇಗೌಡ ಅವರ ಮಗಳು ಚೆನ್ನಮ್ಮ ಅವರನ್ನು 1954ರಲ್ಲಿ ವಿವಾಹವಾದರು. ಅವರಿಗೆ ಎಚ್.ಡಿ. ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣ ಸೇರಿದಂತೆ ನಾಲ್ಕು ಜನ ಗಂಡು ಮಕ್ಕಳೂ, ಇಬ್ಬರು ಹೆಣ್ಣು ಮಕ್ಕಳೂ ಇದ್ದಾರೆ.[4][5][6] ಎಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕದ ಪ್ರಸ್ತುತ ಮುಖ್ಯಮಂತ್ರಿಗಳಾಗಿದ್ದಾರೆ. ಎಚ್.ಡಿ. ರೇವಣ್ಣ ಅವರು ಕರ್ನಾಟಕ ಸರ್ಕಾರದಲ್ಲಿ ಮಂತ್ರಿಗಳಾಗಿದ್ದರು. ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಅವರು ದೇವೇಗೌಡರ ಅಳಿಯ . ರಾಜಕೀಯದಲ್ಲಿ ರಾಮಕೃಷ್ಣ ಹೆಗಡೆ ಯವರನ್ನು ಮಿತ್ರರನ್ನಾಗಿಸಿ ಕೊಂಡರು.ರನ್ನಾಾ
ಸಾರ್ವಜನಿಕ ಜೀವನ
೧೯೫೩ರಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾದರು. ೧೯೬೨ ರವರೆಗೆ ಕಾಂಗ್ರೆಸ್ ಪಕ್ಷದಲ್ಲಿದ್ದು ನಂತರ, ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ವಿಧಾನ ಸಭೆಗೆ ಚುನಾಯಿತರಾದರು.[7]
ಮುಂದಿನ ಮೂರು ಚುನಾವಣೆಗಳಲ್ಲಿ ಸತತವಾಗಿ ಹೊಳೆನರಸೀಪುರ ಕ್ಷೇತ್ರದಿಂದ ವಿಧಾನಸಭೆಗೆ ಚುನಾಯಿತರಾದರು. ೧೯೭೨ ರಿಂದ ೧೯೭೬ ರವರೆಗೆ ಮತ್ತು ನವೆಂಬರ್ ೧೯೭೬ ರಿಂದ ೧೯೭೭ ರ ವರೆಗೆ ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿದ್ದರು. ೧೯೭೫-೭೬ರ ತುರ್ತು ಪರಿಸ್ಥಿತಿಯಲ್ಲಿ ಬಂಧನಕ್ಕೊಳಗಾಗಿದ್ದ ದೇವೇಗೌಡರು ನಂತರ ಕರ್ನಾಟಕ ಸರ್ಕಾರದಲ್ಲಿ ಲೋಕೋಪಯೋಗಿ ಮತ್ತು ನೀರಾವರಿ ಖಾತೆಗಳ ಸಚಿವರಾದರು. ೧೯೮೭ರಲ್ಲಿ ನೀರಾವರಿ ಖಾತೆಗೆ ಸಾಕಷ್ಟು ಹಣ ಮಂಜೂರು ಮಾಡದೆ ಇದ್ದುದರ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದರು. ೧೯೯೧ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾದರು.
ಮುಖ್ಯಮಂತ್ರಿ
ಇದರ ನಂತರ ಜನತಾ ದಳಕ್ಕೆ ರಾಜ್ಯ ಮಟ್ಟದಲ್ಲಿ ಅಧ್ಯಕ್ಷರಾದ ದೇವೇಗೌಡರು ೧೯೯೪ ರಲ್ಲಿ ಕರ್ನಾಟಕ ರಾಜ್ಯದ ೧೪ ನೆ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.[8][9][10]
ಪ್ರಧಾನಮಂತ್ರಿ
೧೯೯೬ ರಲ್ಲಿ ಯಾವ ಒಂದು ರಾಜಕೀಯ ಪಕ್ಷಕ್ಕೂ ಲೋಕಸಭೆಯಲ್ಲಿ ಸ್ಪಷ್ಟ ಬಹುಮತವಿರಲಿಲ್ಲ. ಆಗ ಅನೇಕ ರಾಜಕೀಯ ಪಕ್ಷಗಳ ಮೈತ್ರಿತ್ವವಾದ ತೃತೀಯ ರಂಗ ದೇವೇಗೌಡರನ್ನು ತಮ್ಮ ನಾಯಕರಾಗಿ ಚುನಾಯಿಸಿತು. ದೇವೇಗೌಡರು ಮೇ ೩೦, ೧೯೯೬ ರಂದು ಭಾರತದ ೧೧ ನೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ೧೯೯೭ರವರೆಗೆ ಪ್ರಧಾನ ಮಂತ್ರಿ ಸ್ಥಾನದಲ್ಲಿದ್ದ ದೇವೇಗೌಡರು, ನಂತರದ ವರ್ಷಗಳಲ್ಲಿ ಜಾತ್ಯತೀತ ಜನತಾ ದಳದ ಅಧ್ಯಕ್ಷರಾಗಿದ್ದಾರೆ.
ಉಲ್ಲೇಖಗಳು
- "Shri H. D. Deve Gowda". pmindia.gov.in.
- "Britannica article".
- "JDS Leader: H. D. Deve Gowda Profile". janata.in. Archived from the original on
|archive-url=
requires|archive-date=
(help). - "Asiaweek article".
- "New Indian Express article".
- "Deve Gowda goes down memory lane". The Hindu.
- Maitra, Susan; Maitra, Ramtanu. "The 'leftist' United Front takes the helm" (PDF). Executive Intelligence Review. larouchepub.com. p. 45.
- "Janata Dal (Secular)". Janatadalsecular.org.in.
- "Janata Dal Secular". Janata.in.
- "Janata Dal (Secular)". Janatadalsecular.org.in.
![]() |
ವಿಕಿಮೀಡಿಯ ಕಣಜದಲ್ಲಿ H. D. Deve Gowda ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |