ಡಿ. ವಿ. ಸದಾನಂದ ಗೌಡ

ದೇವರಗುಂಡ ವೆಂಕಪ್ಪ ಸದಾನಂದ ಗೌಡ ಅಥವಾ ಡಿ. ವಿ. ಸದಾನಂದ ಗೌಡ (ಜನನ. ೧೮, ಮಾರ್ಚ್ ೧೯೫೩) ಒಬ್ಬ ಭಾರತೀಯ ಜನತಾ ಪಕ್ಷದ ರಾಜಕಾರಣಿ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ. ಅವರು ೧೫ನೇ ಲೋಕಸಭೆಯಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರಗಳನ್ನು ಕೂಡ ಪ್ರತಿನಿಧಿಸುತ್ತಿದ್ದಾರೆ. ಇವರು ಒಳ್ಳೆಯ ಸಂಘಟಕ ಹಾಗೂ ಕನ್ನಡ ಅರೆಭಾಷೆ ಮತ್ತು ತುಳು ಭಾಷಾಪ್ರೇಮಿ.

ಡಿ. ವಿ. ಸದಾನಂದ ಗೌಡ

೨೬ ನೆಯ ಕರ್ನಾಟಕದ ಮುಖ್ಯ ಮಂತ್ರಿ
ಅಧಿಕಾರ ಅವಧಿ
೦೩ ಆಗಸ್ಟ್ ೨೦೧೧  ೧೨ ಜುಲೈ ೨೦೧೨
ಪೂರ್ವಾಧಿಕಾರಿ ಬಿ.ಎಸ್. ಯಡ್ಯೂರಪ್ಪ
ಉತ್ತರಾಧಿಕಾರಿ ಜಗದೀಶ್ ಶೆಟ್ಟರ್
ಮತಕ್ಷೇತ್ರ ಉಡುಪಿ ಚಿಕ್ಕಮಗಳೂರು
ವೈಯಕ್ತಿಕ ಮಾಹಿತಿ
ಜನನ (1953-03-19) 19 March 1953
ದಕ್ಷಿಣ ಕನ್ನಡ, ಕರ್ನಾಟಕ
ರಾಜಕೀಯ ಪಕ್ಷ ಬಿಜೆಪಿ
ಸಂಗಾತಿ(ಗಳು) ಡಾಟಿ ಸದಾನಂದ ಗೌಡ
ಮಕ್ಕಳು ಒಬ್ಬ ಮಗ
ವಾಸಸ್ಥಾನ ಪುತ್ತೂರು,ಕರ್ನಾಟಕ ಪುತ್ತೂರು
ಧರ್ಮ ಹಿಂದು
ಜಾಲತಾಣ http://sadanandagowda.com
As of ಸೆಪ್ಟೆಂಬರ್ ೨೩, ೨೦೦೬
ಮೂಲ:

ಜನನ, ಬಾಲ್ಯ ಹಾಗೂ ವೃತ್ತಿಜೀವನ

ಸದಾನಂದ ಗೌಡರು, ಕೊಡಗು ದೇವರಗುಂಡ ಗೌಡ ಪರಿವಾರದ ಮಂಡೆಕೊಲು ಗ್ರಾಮ ಸುಳ್ಯ ತಾಲ್ಲೂಕಿನ ವೆಂಕಪ್ಪಗೌಡ ಮತ್ತು ಕಮಲಾ ದಂಪತಿಗಳ ಪುತ್ರನಾಗಿ ಜನಿಸಿದರು. ಅವರ ಪ್ರಾರಂಭಿಕ ವಿದ್ಯಾಭ್ಯಾಸ, ಪುತ್ತೂರು ತಾಲ್ಲೂಕಿನ ಕೆಯ್ಯೂರ್,ಹಾಗೂ ಸುಳ್ಯದಲ್ಲಿ ನಡೆಯಿತು. ಫಿಲೋಮಿನಾ ಕಾಲೇಜಿನಲ್ಲಿ ವಿಜ್ಞಾನದಲ್ಲಿ ಪದವಿಗಳಿಸಿ ನಂತರ, ವೈಕುಂಠ ಬಾಳಿಗ ಲಾ ಕಾಲೇಜಿನಲ್ಲಿ ಕಾನೂನು ಪದವಿ ಗಳಿಸಲು ಹೊರಟರು. ಮುಂದೆ, ಅವರು, ಲಾ ಕಾಲೇಜಿನ ವಿದ್ಯಾರ್ಥಿ ಸಂಘದ ಮುಖ್ಯ ಕಾರ್ಯದರ್ಶಿಯ ಸ್ಥಾನಕ್ಕೆ ಚುನಾಯಿತರಾದರು. ಜಿಲ್ಲಾ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಮುಖ್ಯ ಕಾರ್ಯದರ್ಶಿಯಾಗಿ ಬಹಳ ಪ್ರಖ್ಯಾತರಾಗಿದ್ದರು. ೧೯೭೬ರಲ್ಲಿ, ಅವರು ಸುಳ್ಯ ಮತ್ತು ಪುತ್ತೂರಿನಲ್ಲಿ, ವಕೀಲಿ ವೃತ್ತಿಯನ್ನು ಆರಂಭಿಸಿದರು. ಸದಾನಂದರು, ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸ್ವಲ್ಪಕಾಲ ಸೇವೆ ಸಲ್ಲಿಸಿದರು. ೧೯೮೧ರಲ್ಲಿ ಡಾಟಿ ಸದಾನಂದ ಅವರನ್ನು ಮದುವೆಯಾದರು. ಈ ದಂಪತಿಗಳ ಮಗ ಕಾರ್ತಿಕ್ ಗೌಡ, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಿಂದ ಪದವಿ ಗಳಿಸಿದ್ದಾರೆ. ಸದಾನಂದ ಗೌಡರ ಮೊದಲನೆಯ ಮಗ, ಕೌಶಿಕ್ ಗೌಡ ಮೆಡಿಕಲ್ ವಿದ್ಯಾರ್ಥಿಯಾಗಿದ್ದರು. ೨೦೦೩ ರಲ್ಲಿ ಪುತ್ತೂರಿನ ಬಳಿ ಒಂದು ರಸ್ತೆ ಅಪಘಾತದಲ್ಲಿ ಮೃತರಾದರು[1].

ರಾಜಕೀಯ ಜೀವನ

ಸದಾನಂದ ಗೌಡ ಅವರು ಅಂದಿನ ಜನ ಸಂಘದ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದರು. ನಂತರ ಸುಳ್ಯ ವಿಧಾನಸಭಾ ಕ್ಷೇತ್ರದ ಪಕ್ಷಾಧ್ಯಕ್ಷ, ದಕ್ಷಿಣ ಕನ್ನಡ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ, ದಕ್ಷಿಣ ಕನ್ನಡ ಬಿಜೆಪಿ ಉಪಾಧ್ಯಕ್ಷ, ರಾಜ್ಯ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿ (೧೯೮೩-೮೮), ರಾಜ್ಯ ಬಿಜೆಪಿ ಪಕ್ಷದ ಕಾರ್ಯದರ್ಶಿ (೨೦೦೩-೦೪) ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ (೨೦೦೪) ಆಗಿ ಕಾರ್ಯ ನಿರ್ವಹಿಸಿದ್ದಾರೆ. ೧೯೯೪ ಮತ್ತು ೧೯೯೯ರಲ್ಲಿ ದಕ್ಷಿಣ ಕನ್ನಡದ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು. ತಮ್ಮ ಎರಡನೇ ಅವಧಿಯಲ್ಲಿ ರಾಜ್ಯ ವಿರೋಧ ಪಕ್ಷದ ಉಪನಾಯಕರಾದರು. ೨೦೦೪ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ವೀರಪ್ಪ ಮೊಯ್ಲಿ ಅವರನ್ನು ೩೨,೩೧೪ ಮತಗಳಿಂದ ಸೋಲಿಸಿ ೧೪ನೇ ಲೋಕಸಭೆಗೆ ಆಯ್ಕೆಯಾದರು[2]. ೨೦೦೯ರಲ್ಲಿ ಪಕ್ಷವು ಅವರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ವರ್ಗಾಯಿಸಿತು[3] ಸದ್ಯ ಮೋದಿ ಸರ್ಕಾರದಲ್ಲಿ ಅಂಕಿಅಂಶ ಹಾಗೂ ಯೋಜನಾ ಜಾರಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ,

'ಜನಸಂಘ', ಹಾಗೂ ಬಿ.ಎಂ.ಎಸ್

'ಜನಸಂಘದ ಸಕ್ರಿಯ ರಾಜಕಾರಣ'ದಲ್ಲಿ ಭಾಗಿಯಾಗಿದ್ದರು. ಭಾರತೀಯ ಮಜ್ದೂರ್ ಸಂಘ (ಬಿ.ಎಂ.ಎಸ್) ನಲ್ಲೂ ಕಾರ್ಯ ನಿರ್ವಹಿಸಿದ್ದ 'ಸದಾನಂದ ಗೌಡರು,' 'ಸುಳ್ಯ ತಾಲ್ಲೂಕು ಆಟೋ ರಿಕ್ಷಾ ಚಾಲಕರ ಹಾಗೂ ಮಾಲಿಕರ ಸಂಘ'ದಲ್ಲಿಯೂ ಸೇವೆ ಸಲ್ಲಿಸಿದ್ದರು.

ಕಲಾಪ್ರೇಮಿ ಹಾಗೂ ಕ್ರೀಡಾಸಕ್ತ

ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಅವರು ಖೋಖೋ ಆಟದಲ್ಲಿ ಅತ್ಯಂತ ಆಸಕ್ತಿತೋರಿಸಿ 'ಮೈಸೂರು ವಿಶ್ವವಿದ್ಯಾಲವನ್ನು ಪ್ರತಿನಿಧಿಸಿ'ದ್ದರು. 'ಬ್ಯಾಡ್ ಮಿಂಟನ್' ಮತ್ತು 'ಟೆನ್ನಿಸ್' ಆಟಗಳನ್ನೂ ಆಡುತ್ತಿದ್ದರು. 'ಕರಾವಳಿಯ ಬಹು ಜನಪ್ರಿಯ-ಜಾನಪದ ಕಲೆ'ಯಾದ ಯಕ್ಷಗಾನದ ಬಗ್ಗೆ ಅತ್ಯಂತ ಗೌರವವಿದೆ. ಸಮಯ ದೊರೆತಾಗ ಆಟಗಳನ್ನು ವೀಕ್ಷಿಸುತ್ತಾರೆ.

ಮುಖ್ಯಮಂತ್ರಿ ಸ್ಥಾನ

ಬಿ.ಜೆ.ಪಿ.ಪಕ್ಷ'ದ ಮುಖ್ಯಮಂತ್ರಿಗಳಾಗಿದ್ದ, ಯಡಿಯೂರಪ್ಪನವರನ್ನು ಅವರ ಮೇಲಿನ ಹಲವಾರು ಆರೋಪಗಳ ಮೇರೆಗೆ ವಿವಾದಾಸ್ಪದ ಕಾರ್ಯಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್' ಪದವಿಯಿಂದ ತಾ, ೩೧,ರ ಜುಲೈ ೨೦೧೧ ರಂದು ಕೆಳಗಿಳಿಸಲಾಯಿತು. ಇನ್ನೂ ಎರಡು ವರ್ಷ ಪಕ್ಷದ ಸರಕಾರ ಕಾರ್ಯವಹಿಸಬಹುದಾದ ಹಿನ್ನೆಲೆಯಲ್ಲಿ ಮತ್ತೊಬ್ಬ ಉತ್ತಮ ವ್ಯಕ್ತಿಯನ್ನು ಕರ್ನಾಟಕದ ಮುಖ್ಯಮಂತ್ರಿಯಾಗಿ ಆರಿಸಬೇಕಾಗಿತ್ತು. ಅದರ ಪ್ರಕಾರ, ೩, ಆಗಸ್ಟ್ ೨೦೧೧ ರಂದು ಆಯೋಜಿಸಲಾಗಿದ್ದ ಗೌಪ್ಯಮತದಾನದಲ್ಲಿ ಡಿ.ವಿ.ಸದಾನಂದ ಗೌಡ'ರು, ತಮ್ಮ ಪ್ರತಿ ಸ್ಪರ್ಧಿ ಜಗದೀಶ್ ಶೆಟ್ಟರ್ ಗಿಂತ ಅಧಿಕ ಮತದಿಂದ ಚುನಾಯಿತರಾಗಿ ರಾಜ್ಯದ ೨೬ ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಸದಾನಂದ ಗೌಡರು ಅಲಂಕರಿಸಿದ ಪದವಿಗಳು

  • 1994-2004 Member, Karnataka Legislative Assembly (two terms)
  • 1995-1996 Member, Cell for preparing Draft Bill on Prohibiting atrocities on Women, Government of Karnataka
  • 2001-2002 Member, Committee for Energy, Fuel & Power, Karnataka Legislative
  • 2002-2003 Member, Public Undertaking Committee, Karnataka Legislative Assembly
  • 2003-2004 President, Public Accounts Committee, Karnataka Legislative Assembly
  • 1999-2004 Deputy Leader of Opposition, Karnataka Legislative Assembly
  • Member, Committee on Commerce
  • National Secretary, BJP
  • 1983-1988 State Secretary, BJP Yuva Morcha, Karnataka
  • 2004-2006 Elected to 14th Lok Sabha
  • 2006-Present State President, BJP, Karnataka
  • 5 August 2006-onwards Member, Committee on Commerece
  • 18 January 2006-onwards Member, Sub-committee of the Department Related ==pArlimeMTari==
  • Standing Committee on Commerce for Special Economic Zones
  • 5 Aug. 2007 onwards Member, Committee on Commerce
  • 2009 Elected to 15th Lok Sabha
  • Chief Ministerial candidate
  • Voted the new Chief minister of Karnataka.He was supported by former chief Minister BS Yediyurappa.
  • D V Sadananda Gowda 26th Chief Minister of Karnataka State

ಬಾಹ್ಯ ಸಂಪರ್ಕಗಳು

ಉಲ್ಲೇಖಗಳು



This article is issued from Wikipedia. The text is licensed under Creative Commons - Attribution - Sharealike. Additional terms may apply for the media files.