ಎಸ್.ನಿಜಲಿಂಗಪ್ಪ

ರಾಷ್ಟ್ರ ನಾಯಕ ಸಿದ್ದವ್ವನಹಳ್ಳಿ ನಿಜಲಿಂಗಪ್ಪ - (ಡಿಸೆಂಬರ್ ೧೦, ೧೯೦೨ )ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹಲುವಾಗಲು ಎಂಬ ಚಿಕ್ಕಹಳ್ಳಿಯೊಂದರ ಮಧ್ಯಮವರ್ಗದ ಕುಟುಂಬವೊಂದರಲ್ಲಿ ಜನಿಸಿದ ಎಸ್. ನಿಜಲಿಂಗಪ್ಪನವರು ಶಾಂತ ಸ್ವಭಾವಕ್ಕೆ ಮತ್ತು ಸಜ್ಜನಿಕೆಗೆ ಪ್ರಸಿಧ್ಧರಾದ ದೇಶಪ್ರೇಮಿ ಮತ್ತು ರಾಜಕಾರಣಿ.

'ಎಸ್.ನಿಜಲಿಂಗಪ್ಪ'
S.Nijalingappa

ಕರ್ನಾಟಕದ 4 ನೇ ಮುಖ್ಯಮಂತ್ರಿ
ಅಧಿಕಾರ ಅವಧಿ
1 ನವೆಂಬರ್ 1956 - 16 ಮೇ 1958  16 May 1958
ರಾಜ್ಯಪಾಲ ಜಯಚಾಮರಾಜ_ಒಡೆಯರ್
ಪೂರ್ವಾಧಿಕಾರಿ ಕಡಿದಾಳ್_ಮಂಜಪ್ಪ
ಉತ್ತರಾಧಿಕಾರಿ ಬಿ.ಡಿ.ಜತ್ತಿ
ಅಧಿಕಾರ ಅವಧಿ
21 June 1962  29 May 1968
ರಾಜ್ಯಪಾಲ ಜಯಚಾಮರಾಜ_ಒಡೆಯರ್
ಜನರಲ್ ಶ್ರೀನಾಗೇಶ್
ವಿ ವಿ ಗಿರಿ
ಜಿ.ಎಸ್.ಪಾಠಕ್
ಪೂರ್ವಾಧಿಕಾರಿ ಎಸ್_ಆರ್_ಕಂಠಿ
ಉತ್ತರಾಧಿಕಾರಿ ವೀರೇಂದ್ರ_ಪಾಟೀಲ್
ವೈಯಕ್ತಿಕ ಮಾಹಿತಿ
ಜನನ 10 ಡಿಸೆಂಬರ್ 1902
ಸಿದ್ದವಾದಹಳ್ಳಿ, ಚಿತ್ರದುರ್ಗ
ಮರಣ 8 ಆಗಸ್ಟ್ 2000(2000-08-08) (ವಯಸ್ಸು 97)
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಧರ್ಮ ಹಿಂದೂ

ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ರಾಜಕಾರಣಿಗಳಲ್ಲಿ ಪ್ರಮುಖರು

ಇವರು ಏಕೀಕೃತ ಕರ್ನಾಟಕದ ಪ್ರಥಮ ಮುಖ್ಯಮಂತ್ರಿಯೂ ಅಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ನಿಜಲಿಂಗಪ್ಪ ನವರು ಎರಡು ಅವಧಿಗಳಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಎಸ್. ನಿಜಲಿಂಗಪ್ಪ ನವರನ್ನು ನವಕರ್ನಾಟಕದ ನಿರ್ಮಾತೃ ಎಂದು ಕರ್ನಾಟಕದ ಜನತೆ ನೆನೆಪಿಸಿಕೊಳ್ಳುತ್ತಾರೆ. ಶರಾವತಿ ಜಲವಿದ್ಯುತ್ ಯೋಜನೆ ಮತ್ತುಕಾಳಿ ವಿದ್ಯುತ್ ಯೋಜನೆಯ ಪ್ರಮುಖ ರೂವಾರಿ ಇವರಾಗಿದ್ದಾರೆ. ಕನಾ

ರಾಜಕಾರಣದಲ್ಲಿ ಎತ್ತಿದ ಕೈ

ಚಿಕ್ಕಂದಿನಲ್ಲಿ ತಮ್ಮ ಹಳ್ಳಿಯ "ವೀರಪ್ಪ ಮಾಸ್ತರ" ರಿಂದ ಸಾಂಪ್ರದಾಯಿಕ ವಾಗಿ ಅಕ್ಷರಾಭ್ಯಾಸ ಮಾಡಿದ ನಿಜಲಿಂಗಪ್ಪನವರು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ೧೯೨೪ರಲ್ಲಿ ಪದವೀಧರರಾಗಿ ಉತ್ತೀರ್ಣರಾದರು.೧೯೨೧-೧೯೨೪ ರ ಅವಧಿಯಲ್ಲಿ ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ವಿಧ್ಯಾರ್ಥಿ ನಿಲಯದ ವಿಧ್ಯಾರ್ಥಿಗಳಾಗಿದ್ದರು. ಶ್ರೀ ಬಸವೇಶ್ವರ ಮತ್ತು ಶಿವಶರಣರ ನೀತಿ-ಸಾಧನೆಗಳನ್ನು ಅಭ್ಯಾಸಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ನಿಜಲಿಂಗಪ್ಪನವರು, ಗಾಂಧೀಜಿಯವರ ವಿಚಾರಧಾರೆಯಿಂದಲೂ ಪ್ರಭಾವಿತರಾದರು. ಚಿತ್ರದುರ್ಗವನ್ನು ತಮ್ಮ ಕರ್ಮಭೂಮಿಯಾಗಿ ಸ್ವೀಕರಿಸಿದ ನಿಜಲಿಂಗಪ್ಪನವರು; ಅಂದಿನ ಚಿತ್ರದುರ್ಗ ಜಿಲ್ಲೆಯ ಏಳಿಗೆಗಾಗಿ ಶ್ರಮವಹಿಸಿದ್ದಾರೆ.

'ಕಾಂಗ್ರೆಸ್-ಓ,' ಪಕ್ಷದ ರೂವಾರಿ

೧೯೩೬ರಲ್ಲಿ ತಮ್ಮ ರಾಜಕೀಯ ಜೀವನವನ್ನು ತಡವಾಗಿಯೇ ಪ್ರಾರಂಭಿಸಿದ ನಿಜಲಿಂಗಪ್ಪನವರು, ಎನ್.ಎಸ್. ಹರ್ಡೀಕರರ ಸಹಾಯದಿಂದ ಕಾಂಗ್ರೆಸ್ ಸೇರಿದರು.

ಇಂಡಿಯನ್ ಆಯಿಲ್ ಸಂಸ್ಥೆಯ ಅಧ್ಯಕ್ಷರಾಗಿ ೧೯೫೯ರಿಂದ ೧೯೬೨ರ ವರೆಗೆ ದುಡಿದರು.[1]

ಪ್ರಾರಂಭದಲ್ಲಿ ಸಾಮಾನ್ಯ ಸದಸ್ಯನಾಗಿ ಸೇರಿ ನಂತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಕೊನೆಗೆ ೧೯೬೮ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಾರ್ಟಿಯ ಅಧ್ಯಕ್ಷರಾದರು. ಇಂದಿರಾ ಗಾಂಧಿಯವರ ಜೊತೆ ರಾಜಕೀಯ ಭಿನ್ನಾಭಿಪ್ರಾಯ ಹೊಂದಿದ ಕೆಲವು ಹಿರಿಯ ಕಾಂಗ್ರೆಸ್ ನಾಯಕರೊಡನೆ ಸೇರಿ ಕಾಂಗ್ರೆಸ (ಓ) ಪಕ್ಷದ ಸ್ಥಾಪನೆಗೆ ಕಾರಣವಾದರು.

ಪ್ರಶಸ್ತಿ ಗೌರವಗಳು

ನಿಜಲಿಂಗಪ್ಪನವರಿಗೆ ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿಯ ಗೌರವ ದೊರಕಿದೆ.

References

  1. url=https://www.iocl.com/AboutUs/PastLeaders.aspx



    This article is issued from Wikipedia. The text is licensed under Creative Commons - Attribution - Sharealike. Additional terms may apply for the media files.