ಕರ್ನಾಟಕ ರತ್ನ

ಕರ್ನಾಟಕ ರತ್ನ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೯೨ರಲ್ಲಿ ಪ್ರಾರಂಭಿಸಲಾಯಿತು.[1] . ಒಟ್ಟಾರೆ ಇದುವರೆಗೆ ಎಂಟು ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಕರ್ನಾಟಕ ರತ್ನ
ಪ್ರಶಸ್ತಿಯ ವಿವರ
ಮಾದರಿ ನಾಗರಿಕ
ವರ್ಗ ಸಾರ್ವಜನಿಕ
ಪ್ರಾರಂಭವಾದದ್ದು ೧೯೯೧
ಮೊದಲ ಪ್ರಶಸ್ತಿ ೧೯೯೨
ಕಡೆಯ ಪ್ರಶಸ್ತಿ ೨೦೦೯
ಒಟ್ಟು ಪ್ರಶಸ್ತಿಗಳು
ಪ್ರಶಸ್ತಿ ನೀಡುವವರು ಕರ್ನಾಟಕ ಸರ್ಕಾರ
ವಿವರ ಕರ್ನಾಟಕ ದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಮೊದಲ ಪ್ರಶಸ್ತಿ ಪುರಸ್ಕೃತರು ಕುವೆಂಪು
ಕೊನೆಯ ಪ್ರಶಸ್ತಿ ಪುರಸ್ಕೃತರು ಡಾ. ವೀರೇಂದ್ರ ಹೆಗ್ಗಡೆ
ಪ್ರಶಸ್ತಿಯ ಶ್ರೇಣಿ
none ← ಕರ್ನಾಟಕ ರತ್ನರಾಜ್ಯೋತ್ಸವ ಪ್ರಶಸ್ತಿ

ಪ್ರಶಸ್ತಿ

ಈ ಪ್ರಶಸ್ತಿಯು ೫೦ ಗ್ರಾಂ ತೂಕದ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಮತ್ತು ಒಂದು ಶಾಲನ್ನು ಒಳಗೊಂಡಿರುತ್ತದೆ.

ಪ್ರಶಸ್ತಿ ಪುರಸ್ಕೃತರು

ಕ್ರ.ಸಂ ಹೆಸರು ಜನನ / ಮರಣ ಗೌರವಿಸಿದ್ದು ಕ್ಷೇತ್ರ ಉಲ್ಲೇಖ
೧. ಕುವೆಂಪು ೧೯೦೪೧೯೯೪ ೧೯೯೨ ಸಾಹಿತ್ಯ
೨. ಡಾ. ರಾಜ್‌ಕುಮಾರ್ ೧೯೨೯೨೦೦೬ ೧೯೯೨ ಸಿನೆಮಾ
೩. ಎಸ್. ನಿಜಲಿಂಗಪ್ಪ ೧೯೦೨೨೦೦೦ ೧೯೯೯ ರಾಜಕೀಯ [2]
೪. ಸಿ ಎನ್ ಆರ್ ರಾವ್ b. ೧೯೩೪ ೨೦೦೦ ವಿಜ್ಞಾನ [3]
೫. ದೇವಿ ಪ್ರಸಾದ್ ಶೆಟ್ಟಿ ೨೦೦೧ ವೈದ್ಯಕೀಯ
೬. ಭೀಮಸೇನ ಜೋಷಿ ೧೯೨೨೨೦೧೧ ೨೦೦೫ ಸಂಗೀತ [4]
೭. ಶ್ರೀ ಶಿವಕುಮಾರ ಸ್ವಾಮಿಗಳು ೧೯೦೭೨೦೧೯ ೨೦೦೭ ಸಾಮಾಜಿಕ ಸೇವೆ [5]
೮. ಡಾ. ಡಿ. ಜವರೇಗೌಡ ೧೯೧೮೨೦೧೬ ೨೦೦೮ ಶಿಕ್ಷಣ ಮತ್ತು ಸಾಹಿತ್ಯ [1]
೯. ಡಾ. ವೀರೇಂದ್ರ ಹೆಗ್ಗಡೆ b. ೧೯೪೮ ೨೦೦೯ ಸಾಮಾಜಿಕ ಸೇವೆ [1]

ಉಲ್ಲೇಖಗಳು

  1. ಕರ್ನಾಟಕ ಸರ್ಕಾರ ದಿಂದ ಜವರೆ ಗೌಡ ಅವರಿಗೆ ಕರ್ನಾಟಕ ರತ್ನ, ವೀರೇಂದ್ರ ಹೆಗ್ಗಡೆ
  2. A home of mementoes
  3. ಸಿ.ಎನ್.‌ಆರ್ ರಾವ್ ರವರಿಗೆ ಕರ್ನಾಟಕ ರತ್ನ
  4. Karnataka declares day’s mourning to condole Joshi's death
  5. Siddaganga seer receives Karnataka ratna
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.