ಅನಿಲ್ ಕುಂಬ್ಳೆ
ಅನಿಲ್ ಕೃಷ್ಣಸ್ವಾಮಿ ಕುಂಬ್ಳೆ (ಜನನ: ಅಕ್ಟೋಬರ್ ೧೭, ೧೯೭೦ ಬೆಂಗಳೂರಿನಲ್ಲಿ) - ಭಾರತದ ಮಾಜಿ ಕ್ರಿಕೆಟ್ ಆಟಗಾರ ಮತ್ತು ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ. ಕುಂಬ್ಳೆ ಲೆಗ್ ಸ್ಪಿನ್ನರ್. ಇವರು ತಮ್ಮದೇ ಆದ ಬೌಲಿಂಗ್ ಶೈಲಿಗೆ ಹೆಸರುವಾಸಿ, ಇವರ ಗೂಗ್ಲಿ ಕ್ರಿಕೆಟ್ ಜಗತ್ತಿನಲ್ಲಿ ಬಹಳ ಪ್ರಸಿದ್ಧ. ಇವರು ಮೊದಲು ಮಧ್ಯ ವೇಗದ ಬೌಲರ್ ಆಗಿ ಕ್ರಿಕೆಟ್ ಪ್ರವೇಶಿಸಿದ್ದು; ಇದು ಅವರಿಗೆ ಕೊಡುಗೆ ಎಂಬಂತೆ ವೇಗವಾಗಿ ಬೌಲ್ ಮಾಡಲು ಸಹಾಯಕವಾಗಿದೆ. ಸಾಧಾರಣವಾಗಿ ಸ್ಪಿನ್ ಬೌಲರ್‌ಗಳು ಬಾಲ್ ಹಾಕುವ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಬೌಲ್ ಮಾಡುವ ಅನಿಲ್ ಕುಂಬ್ಳೆ, ೫೩೦ಕ್ಕೂ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ. ಇವರು ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು ಎಪ್ರಿಲ್ ೨೫, ೧೯೯೦ ರಂದು, ಶ್ರೀಲಂಕಾ ಮೇಲಿನ ಪಂದ್ಯದಲ್ಲಿ. ಅದೇ ವರ್ಷ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟರು.
![]() ಭಾರತ Flag ಭಾರತ (IND) | ||
![]() | ||
ಬ್ಯಾಟಿಂಗ್ ರೀತಿ | ಬಲಗೈ ಬ್ಯಾಟ್ಸ್‍ಮನ್ | |
ಬೌಲಿಂಗ್ ರೀತಿ | ಬಲಗೈ ಲೆಗ್-ಬ್ರೇಕ್ ಬೌಲರ್ | |
ಟೆಸ್ಟ್‍ಗಳು | ಒಂದುದಿನದ ಪಂದ್ಯಗಳು | |
ಪಂದ್ಯಗಳು | ೧೧೦ | ೨೬೪ |
ಒಟ್ಟು ರನ್ನುಗಳು | ೨೦೨೫ | ೯೩೦ |
ಬ್ಯಾಟಿಂಗ್ ಸರಾಸರಿ | ೧೭.೫೧ | ೧೦.೯೪ |
೧೦೦/೫೦ | - / ೪ | - / - |
ಅತಿಹೆಚ್ಚು ಸ್ಕೋರ್ | ೮೮ | ೨೬ |
ಚೆಂಡುಗಳುಓವರುಗಳು ಬೌಲ್ ಮಾಡಿದ ಚೆಂಡುಗಳು | ೩೪೮೯೦ | ೧೪೧೧೭ |
ವಿಕೆಟುಗಳು | ೬೧೯ | ೩೨೯ |
ಬೌಲಿಂಗ್ ಸರಾಸರಿ | ೨೮.೭೫ | ೩೦.೭೬ |
೫ ವಿಕೆಟುಗಳು ಇನ್ನಿಂಗ್ಸ್ ನಲ್ಲಿ | ೩೩ | ೨ |
೧೦ವಿಕೆಟುಗಳು ಇನ್ನಿಂಗ್ಸ್ ನಲ್ಲಿ | ೮ | - |
ಶ್ರೇಷ್ಠ ಬೌಲಿಂಗ್ | ೧೦/೭೪ | ೬/೧೨ |
ಕ್ಯಾಚುಗಳು/ಸ್ಟಂಪಿಂಗ್ಗಳು | ೫೦/- | ೮೪/- |
ದಿನಾಂಕ [[ಜುಲೈ ೧೪]], [[೨೦೦೬]] ವರೆಗೆ. |
ಕ್ರಿಕೆಟ್ ಜೀವನ
ಭಾರತ ೧೯೯೨ರಲ್ಲಿ ದಕ್ಷಿಣ ಆಫ್ರಿಕ ಪ್ರವಾಸ ಮಾಡಿದಾಗ ಇವರು ತಮ್ಮ ಗುಣಮಟ್ಟವನ್ನು ಸ್ಥಾಪಿಸಿದರು, ೨ನೇ ಟೆಸ್ಟ್‌ನಲ್ಲಿ ೮ ವಿಕೆಟ್‌ಗಳನ್ನು ಉರುಳಿಸಿದರು. ಅದೇ ವರ್ಷ ಇಂಗ್ಲೆಂಡ್ ಭಾರತಕ್ಕೆ ಪ್ರವಾಸ ಬಂದಾಗ, ಕೇವಲ ೩ ಪಂದ್ಯಗಳಲ್ಲಿ ೨೧ ವಿಕೆಟ್‌ಗಳನ್ನು ಸರಾಸರಿ ೧೯.೮ ರಲ್ಲಿ ತೆಗೆದುಕೊಂಡರು. ಇವರು ಮೊದಲ ೫೦ ವಿಕೆಟ್‌ಗಳನ್ನು ಕೇವಲ ೧೦ ಟೆಸ್ಟ್ ಪಂದ್ಯಗಳಲ್ಲಿ ತೆಗೆದುಕೊಂಡರು. ಇದನ್ನು ಸಾಧಿಸಿದ ಭಾರತದ ಏಕೈಕ ಬೌಲರ್ ಆಗಿ ಉಳಿದಿದ್ದಾರೆ. ಎರಪಳ್ಳಿ ಪ್ರಸನ್ನರವರಾದ ಮೇಲೆ ೧೦೦ ಟೆಸ್ಟ್ ವಿಕೆಟ್‌ಗಳನ್ನು ಬಹು ಬೇಗ ಪಡೆದ ಎರಡನೆಯ ಭಾರತದ ಬೌಲರ್ ಇವರಾದರು. ಇವರು ಇದನ್ನು ಸಾಧಿಸಿದ್ದು ೨೧ ಪಂದ್ಯಗಳಲ್ಲಿ. ಒಂದುದಿನದ ಪಂದ್ಯಗಳಲ್ಲಿ, ಇವರ ಜೀವನದ ಅತುತ್ತಮ ಸಾಧನೆ ಬಂದದ್ದು ನವೆಂಬರ್ ೨೭, ೧೯೯೩ ರಲ್ಲಿ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಹೀರೋ ಕಪ್ ಫೈನಲ್ ಪಂದ್ಯದಲ್ಲಿ, ಇವರು ಕೇವಲ ೧೨ ರನ್‌ಗಳಿಗೆ ೬ ವಿಕೆಟ್‌ಗಳನ್ನು ಉರುಳಿಸಿದರು. ಈ ದಾಖಲೆ ಭಾರತದ ಯಾವುದೇ ಬೌಲರ್‌ನ ಅತ್ಯುತ್ತಮ ಸಾಧನೆಗಿಂತ ಹಿರಿದಾದುದಲ್ಲದೆ, ೧೦ ವರ್ಷಗಳಿಂದಲೂ ಇದು ಖಾಯಂ ಆಗಿ ಯಾರಿಂದಲೂ ಮುರಿಯದೆಯೇ ಉಳಿದಿದೆ. ವರ್ಷವಾರು ನೋಡಿದಲ್ಲಿ, ಇವರು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ್ದು ೧೯೯೬ರಲ್ಲಿ. ಈ ವರ್ಷದಲ್ಲಿ ಇವರು ೬೧ ವಿಕೆಟ್‌ಗಳನ್ನು ಉರುಳಿಸಿದರು, ಒಟ್ಟು ೨೦.೨೪ ಸರಾಸರಿಯಲ್ಲಿ. ಇವರ ಎಕಾನಮಿ ರೇಟ್ ೪.೦೬ ಆಗಿತ್ತು. ಇದೇ ವರ್ಷ ಏಶಿಯಾದಲ್ಲಿ ವಿಶ್ವ ಕಪ್ ನಡೆದದ್ದು.
ಲೋಕದಾಖಲೆ
ಒಂದು ಟೆಸ್ಟ್ ಇನ್ನಿಂಗ್ಸಿನಲ್ಲಿನ ಎಲ್ಲಾ ಹತ್ತು ವಿಕೆಟುಗಳನ್ನು ಪಡೆದ ವಿಶ್ವದ ಎರಡೇ ಬೌಲರುಗಳಲ್ಲಿ, ಅನಿಲ್ ಕುಂಬ್ಳೆ ಒಬ್ಬರಾಗಿದ್ದಾರೆ. ಇನ್ನೊಬ್ಬರು ಇಂಗ್ಲೆಂಡಿನ ಜಿಂ ಲೇಕರ್. ಈ ಸಾಧನೆಯನ್ನು ಕುಂಬ್ಳೆ ಫೆಬ್ರವರಿ ೪-ಫೆಬ್ರವರಿ ೮ ೧೯೯೯ನಲ್ಲಿ ನವದೆಹಲಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮಾಡಿದರು. ಈ ವಿಶ್ವದಾಖಲೆಯ ಸಾಧನೆಯ ಸ್ಮರಣಾರ್ಥಕವಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲಿರುವ ಎಂ.ಜಿ.ರಸ್ತೆಯಲ್ಲಿನ ವೃತ್ತಕ್ಕೆ, ಅನಿಲ್ ಕುಂಬ್ಳೆ ವೃತ್ತ(Anil Kumble Circle) ಎಂದು ನಾಮಕರಣ ಮಾಡಲಾಗಿದೆ.
ಮೈಲಿಗಲ್ಲುಗಳು
- ಡಿಸೆಂಬರ್ ೧೦, ೨೦೦೪ - ಕಪಿಲ್ ದೇವ್ ಅವರ ೪೩೪ ವಿಕೆಟುಗಳನ್ನು ದಾಟಿದ ಅನಿಲ್ ಕುಂಬ್ಳೆ. ಅತ್ಯಂತ ಹೆಚ್ಚು ಟೆಸ್ಟ್ ವಿಕೆಟ್‍ಗಳನ್ನು ಪಡೆದ ಭಾರತದ ಬೌಲರ್ ಎಂಬ ಕೀರ್ತಿ.
- ಮಾರ್ಚ್ ೧೧, ೨೦೦೬ - ೫೦೦ ಟೆಸ್ಟ್ ವಿಕೆಟುಗಳ ಸಾಧನೆ
- ಜೂನ್ ೧೧, ೨೦೦೬ - ವೆಸ್ಟ್ ಇಂಡೀಸಿನ ಕರ್ಟ್ನಿ ವಾಲ್ಷ್ ಅವರ ೫೨೦ ವಿಕೆಟುಗಳ ಗುರಿ ದಾಟಿದ ಕುಂಬ್ಳೆ. ಅತಿಹೆಚ್ಚು ವಿಕೆಟ್ ಪಡೆದ ವಿಶ್ವದ ಬೌಲರ್‍ಗಳ ಪಟ್ಟಿಯಲ್ಲಿ ನಾಲ್ಕನೆ ಸ್ಥಾನಕ್ಕೆ ಮುನ್ನಡೆ.
- ೩೦೦ ಟೆಸ್ಟ್ ವಿಕೆಟ್ ಪಡೆದ ಭಾರತದ ಮೊದಲ ಸ್ಪಿನ್ನರ್.
- ವಿಶ್ವದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪೈಕಿ ಮೂರನೆಯವರು. ( ೫೬೬ ವಿಕೆಟ್).
- ಫೆಬ್ರುವರೀ ೧೯೯೯ರಲ್ಲಿ ಪಾಕಿಸ್ತಾನದ ವಿರುದ್ದ ದೆಹಲಿಯಲ್ಲಿ ಒಂದು ಇನ್ನಿಂಗ್ಸ್ ನಲ್ಲಿ ೧೦ ವಿಕೆಟ್.
ಜುಂಬೋ (Jumbo)
ಅನಿಲ್ ಕುಂಬ್ಳೆ ಜುಂಬೋ("Jumbo") ಎಂಬ ಅಡ್ಡಹೆಸರನ್ನು ಪಡೆದಿದ್ದಾರೆ. ಸ್ಪಿನ್ ಬೌಲಿಂಗ್ ಮಾಡಿಯೂ, ಸಾಮಾನ್ಯ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಬೌಲ್ ಮಾಡುವುದನ್ನು ಕರಗತ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅದನ್ನು ಜುಂಬೋ ಜೆಟ್ ಗೆ ಹೋಲಿಸಿ, ಇವರನ್ನು ಜುಂಬೋ ಎಂದು ಕರೆಯಲಾಗುತ್ತದೆ. ಇದಲ್ಲದೇ, ಇವರ ಪಾದದ ಗಾತ್ರ ತುಂಬಾ ದೊಡ್ಡದಿರುವುದರಿಂದ ಅವರ ಟೀಂ ಮೇಟ್ ಗಳು ಈ ಹೆಸರನ್ನು ಇಟ್ಟಿದ್ದಾರೆ ಎಂದೂ ಹೇಳಲಾಗುತ್ತದೆ.!!
ಪ್ರಶಸ್ತಿ ಪುರಸ್ಕಾರಗಳು
- ೧೯೯೬ - ವಿಸ್ಡನ್ ವರ್ಷದ ಕ್ರಿಕೆಟಿಗ ಪ್ರಶಸ್ತಿ
- ೨೦೦೫ - ಭಾರತ ಸರಕಾರದಿಂದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ.
- ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ
![]() |
ವಿಕಿಮೀಡಿಯ ಕಣಜದಲ್ಲಿ Anil Kumble ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |