ಕರ್ನಾಟಕದಲ್ಲಿ ವನ್ಯಜೀವಿಧಾಮಗಳು

ಸಲಗ - ನಾಗರಹೊಳೆ ವನ್ಯಜೀವಿ ರಕ್ಷಿತಾರಣ್ಯ

ಕರ್ನಾಟಕದಲ್ಲಿ ವನ್ಯಜೀವಿ ರಕ್ಷಿತಾರಣ್ಯಗಳು

  • 1972ರಲ್ಲಿ ಭಾರತದೇಶದಲ್ಲಿ ತಂದ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಪರಿಣಾಮಕಾರಿ ಅನುಷ್ಠಾನದಿಂದಾಗಿ ಹಲವು ವನ್ಯಜೀವಿ ಪ್ರಭೇದಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ. ಇದೇ ದಶಕದಲ್ಲಿ ಪ್ರಾರಂಭವಾದ ಹಲವು ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳು ಕರ್ನಾಟಕದಲ್ಲೂ ಹಲವಾರು ಸಕಾರಾತ್ಮಕ ಪರಿಣಾಮಗಳನ್ನು ತಂದವು. ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನಗಳು ಸ್ಥಾಪಿತಗೊಂಡವು.
ಹೆಣ್ಣು ಪಟ್ಟೆಹುಲಿ - ಹೆಬ್ಹುಲಿ (Panthera tigris)
  • ಇದರ ಪರಿಣಾಮವಾಗಿ ಮಾನವ- ವನ್ಯಜೀವಿ ಸಂಘರ್ಷ ಕೂಡ ಹೆಚ್ಚಾಗಿದೆ. ಕಳೆದ ಏಳು ವರ್ಷಗಳಲ್ಲಿ ಆನೆ, ಹುಲಿ, ಚಿರತೆಗಳ ದಾಳಿಯಿಂದ ರಾಜ್ಯದಲ್ಲಿ 286 ಜನ ಜೀವ ಕಳೆದುಕೊಂಡಿದ್ದಾರೆ. ಈಗ ಸಹಿಷ್ಣುತೆಯಿಂದಿದ್ದ ಅರಣ್ಯದಂಚಿನ ಸಹನೆ ಕಳೆದುಕೊಂಡ ಜನ ವನ್ಯಜೀವಿ ಮತ್ತು ಮಾನವ ಸಂಘರ್ಷಕ್ಕೆ ಸಮಂಜಸವಾದ ಉತ್ತರವಿಲ್ಲದಿದ್ದರೆ ಇವುಗಳ ಸಂರಕ್ಷಣೆಗೆ ಬೆಂಬಲ ಸಿಗುವುದು ಇನ್ನೂ ಕಠಿಣವಾಗುತ್ತದೆ

ವನ್ಯಜೀವಿ ರಕ್ಷಣಾ ತಾಣಗಳು

  • ವನ್ಯಜೀವಿ ಸಂರಕ್ಷಣೆಗಾಗಿ ಕೈಗೊಳ್ಳುವ ಪ್ರಮುಖವಾದ ಕಾರ್ಯನೀತಿಯೆಂದರೆ ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನಗಳ ಸ್ಥಾಪನೆ. ಮೈಸೂರು ರಾಜ್ಯ ಸ್ಥಾಪನೆಯಾಗುವ ಮುನ್ನವೇ ಘೋಷಣೆಯಾಗಿದ್ದು ರಂಗನತಿಟ್ಟು ವನ್ಯಜೀವಿಧಾಮ. ಇದನ್ನು ಬಿಟ್ಟರೆ ಇನ್ನೆಲ್ಲ ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನಗಳು ರಾಜ್ಯದಲ್ಲಿ ಸ್ಥಾಪಿತವಾಗಿರುವುದು 70ರ ದಶಕದ ನಂತರ.
  • ಭಾಷಾವಾರು ರಾಜ್ಯಗಳ ವಿಂಗಡಣೆಯಾದಾಗ ಕರ್ನಾಟಕಕ್ಕೆ ಮದ್ರಾಸ್ ಮತ್ತು ಮುಂಬಯಿ ಪ್ರಾಂತ್ಯಗಳಿಂದ, ಕೊಡಗು ರಾಜ್ಯ ಹಾಗೂ ಇನ್ನಿತರ ಪ್ರದೇಶಗಳ ಅರಣ್ಯಗಳು ರಾಜ್ಯಕ್ಕೆ ಸೇರಿಕೊಂಡವು.
  • ದೇಶದಲ್ಲಿ 1970ರ ನಂತರ ಆದ ವನ್ಯಜೀವಿಧಾಮ ಮತ್ತು ರಾಷ್ಟ್ರೀಯ ಉದ್ಯಾನಗಳ ಅತೀ ದೊಡ್ಡ ವಿಸ್ತರಣಾ ಕಾರ್ಯ ನಡೆದ್ದದ್ದು ಸ್ವಾತಂತ್ಯ್ರ ಪೂರ್ವದಲ್ಲಿ ಕೇವಲ ಒಂದೇ ಒಂದು ವನ್ಯಜೀವಿಧಾಮವಿದ್ದ ರಾಜ್ಯದಲ್ಲಿ xx ಇಂದು 29 ವನ್ಯಜೀವಿಧಾಮಗಳು, 5 ರಾಷ್ಟ್ರೀಯ ಉದ್ಯಾನಗಳು, 8 ಸಂರಕ್ಷಣಾ ಮೀಸಲು ಪ್ರದೇಶಗಳು ಮತ್ತು ಒಂದು ಸಮುದಾಯ ಮೀಸಲು ಪ್ರದೇಶಗಳಿವೆ.[1]

ಕನಾಟಕದಲ್ಲಿರುವ ವನ್ಯಜೀವಿ ರಕ್ಷಿತಾರಣ್ಯಗಳು

ಕ್ರ.ಸಂ.ಹೆಸರು : ರಕ್ಷಿತ ಅರಣ್ಯಪ್ರವರ್ಗವಿಸ್ತೀರ್ಣ (ಚ.ಕಿ.ಮೀ.)
ರಾಷ್ಟ್ರೀಯ ಉದ್ಯಾನಗಳು
1ಅಣಶಿ ರಾಷ್ಟ್ರೀಯ ಉದ್ಯಾನಹುಲಿ ಯೋಜನೆ417.34
2ಬಂಡೀಪುರ ರಾಷ್ಟ್ರೀಯ ಉದ್ಯಾನಹುಲಿ ಯೋಜನೆ872.24
3ಬನ್ನೇರು ಘಟ್ಟ ರಾಷ್ಟ್ರೀಯ ಉದ್ಯಾನರಾಷ್ಟ್ರೀಯ ಉದ್ಯಾನ260.51
4ಕುದುರೆಮುಖ ರಾಷ್ಟ್ರೀಯ ಉದ್ಯಾನಹುಲಿ ಯೋಜನೆ600.57
5ನಾಗರಹೊಳೆ ರಾಷ್ಟ್ರೀಯ ಉದ್ಯಾನಹುಲಿ ಯೋಜನೆ643.39
ವನ್ಯಜೀವಿ ಧಾಮಗಳು
6ಆದಿಚುಂಚನಗಿರಿ ನವಿಲುಧಾಮನವಿಲುಧಾಮ0.84
7ಅರಬಿತಿಟ್ಟು ವನ್ಯಜೀವಿಧಾಮವನ್ಯಜೀವಿಧಾಮ13.5
8ಅತೀವೇರಿ ಪಕ್ಷಿಧಾಮಪಕ್ಷಿಧಾಮ2.23
9ಭದ್ರ ವನ್ಯಜೀವಿಧಾಮಹುಲಿ ಯೋಜನೆ500.16
10ಬ್ರಹ್ಮಗಿರಿ ವನ್ಯಜೀವಿಧಾಮವನ್ಯಜೀವಿಧಾಮ181.21
11ಬಿಳಿಗಿರಿ ರಂಗಸ್ವಾಮಿ ಟೆಂಪಲ್ವನ್ಯಜೀವಿಧಾಮ ಮತ್ತು ಹುಲಿ ಯೋಜನೆ539.52
12ಕಾವೇರಿ ವನ್ಯಜೀವಿಧಾಮವನ್ಯಜೀವಿಧಾಮ1027.53
13ದಾಂಡೇಲಿ ವನ್ಯಜೀವಿಧಾಮವನ್ಯಜೀವಿಧಾಮ ಮತ್ತು ಹುಲಿ ಯೋಜನೆ886.41
14ದರೋಜಿ ವನ್ಯಜೀವಿಧಾಮವನ್ಯಜೀವಿಧಾಮ82.72
15ಘಟಪ್ರಭಾ ಪಕ್ಷಿಧಾಮಪಕ್ಷಿಧಾಮ29.78
16ಗುಡವಿ ಪಕ್ಷಿಧಾಮಪಕ್ಷಿಧಾಮ0.73
17ಮೇಲುಕೋಟೆ ವನ್ಯಜೀವಿಧಾಮವನ್ಯಜೀವಿಧಾಮ49.72
18ಮೂಕಾಂಬಿಕಾ ವನ್ಯಜೀವಿಧಾಮವನ್ಯಜೀವಿಧಾಮ370.37
19ನುಗು ವನ್ಯಜೀವಿಧಾಮವನ್ಯಜೀವಿಧಾಮ30.32
20ಪುಷ್ಪಗಿರಿ ವನ್ಯಜೀವಿಧಾಮವನ್ಯಜೀವಿಧಾಮ102.59
21ರಾಣಿಬೆನ್ನೂರು ವನ್ಯಜೀವಿಧಾಮವನ್ಯಜೀವಿಧಾಮ119
22ರಂಗನತಿಟ್ಟು ಪಕ್ಷಿಧಾಮಪಕ್ಷಿಧಾಮ0.67
23ಶರಾವತಿ ವನ್ಯಜೀವಿಧಾಮವನ್ಯಜೀವಿಧಾಮ431.23
24ಶೆಟ್ಟಿಹಳ್ಳಿ ವನ್ಯಜೀವಿಧಾಮವನ್ಯಜೀವಿಧಾಮ395.6
25ಸೋಮೇಶ್ವರ ವನ್ಯಜೀವಿಧಾಮವನ್ಯಜೀವಿಧಾಮ314.25
26ತಲಕಾವೇರಿ ವನ್ಯಜೀವಿಧಾಮವನ್ಯಜೀವಿಧಾಮ105.59
27ಭೀಮಗಡ ವನ್ಯಜೀವಿಧಾಮವನ್ಯಜೀವಿಧಾಮ190.42
28ರಂಗಯ್ಯನದುರ್ಗ ಕೊಂಡುಕುಳಿವನ್ಯಜೀವಿಧಾಮ77.23
29ಚಿಂಚೋಳಿ ವನ್ಯಜೀವಿಧಾಮವನ್ಯಜೀವಿಧಾಮ134.88
30ರಾಮದೇವರಬೆಟ್ಟರಣಹದ್ದುಧಾಮ3.46
31ಮಲೈ ಮಹದೇಶ್ವರ ಬೆಟ್ಟವನ್ಯಜೀವಿಧಾಮ906.187
32ಮಧುಗಿರಿ ವನ್ಯಜೀವಿಧಾಮವನ್ಯಜೀವಿಧಾಮ100
33ಗುಡೇಕೋಟೆ ವನ್ಯಜೀವಿಧಾಮವನ್ಯಜೀವಿಧಾಮ38.48
34ಬಾಗಿಲಕೋಟೆ ಸಣ್ಣಹುಲ್ಲೆವನ್ಯಜೀವಿಧಾಮ100

ಸಂರಕ್ಷಣಾ ಮೀಸಲು ಪ್ರದೇಶಗಳು

ಕ್ರ.ಸಂ.ಹೆಸರು ರಕ್ಷಿತ ಅರಣ್ಯದ ಪ್ರವರ್ಗವಿಸ್ತೀರ್ಣ (ಚ.ಕಿ.ಮೀ.)
1ಬಂಕಾಪುರ ನವಿಲು ಸಂರಕ್ಷಣಾ ಮೀಸಲು ಪ್ರದೇಶ0.56
2ಮೈದೇನಹಳ್ಳಿ ಸಂರಕ್ಣಾ ಮೀಸಲು ಪ್ರದೇಶ3.23
3ಬಾಸೂರು ಅಮೃತಮಹಲ್ ಕಾವಲು ಸಂರಕ್ಣಾ ಮೀಸಲು ಪ್ರದೇಶ7.36
4ಹಾರ್ನ್ ಬಿಲ್ ಸಂರಕ್ಣಾ ಮೀಸಲು ಪ್ರದೇಶ52.5
5ಅಘನಾಶಿನಿ ಸಂರಕ್ಣಾ ಮೀಸಲು ಪ್ರದೇಶ256.52
6ಬೇಡ್ತಿ ಸಂರಕ್ಣಾ ಮೀಸಲು ಪ್ರದೇಶ57.3
7ಶಾಲ್ಮಲಿ ಸಂರಕ್ಣಾ ಮೀಸಲು ಪ್ರದೇಶ4.89
8ಮಾಗಡಿಕೆರೆ ಸಂರಕ್ಣಾ ಮೀಸಲು ಪ್ರದೇಶ0.54
9ಕೊಕ್ಕರೆ ಬೆಳ್ಳೂರು ಸಮುದಾಯ ಮೀಸಲು ಪ್ರದೇಶ3.12


ನೋಡಿ

ಉಲ್ಲೇಖ

. gddhhhfvv

  1. ಪರಿಸರ ಮೌಲ್ಯಮಾಪನ ಬಹು ಅಗತ್ಯ;ಸಂಜಯ್ ಗುಬ್ಬಿ ; 25 Nov, 2016
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.