ರಂಗನತಿಟ್ಟು ಪಕ್ಷಿಧಾಮ
{{Infobox Protected area | name = ರ೦ಗನತಿಟ್ಟು ಪಕ್ಷಿಧಾಮ/rthittu Ranga Bird Sanctuary | iucn_category = IV | map = ಭಾರತ, ಕರ್ನಾಟಕ | map_caption = | photo_width = 200 | photo_caption = A painted stork in the | location = [[karnataka], ಭಾರತ | nearest_city = [mysore) | lat_m = 24 | lat_s = 0 | lat_NS = N | long_d = 76 | long_m = 39 | long_s = 0 | long_EW = E | area = 0.67 km2. | established = 1940 | visitation_num = 205,000 | visitation_year = 1999 | governing_body = [m}}
ರ೦ಗನತಿಟ್ಟು ಪಕ್ಷಿಧಾಮ (Ranganthittu Bird Sanctuary) ಇದನ್ನು ಕರ್ನಾಟಕದ ಪಕ್ಷಿಕಾಶಿ ಎ೦ದೂ ಕರೆಯುತ್ತಾರೆ.[1] ಇದು ಕರ್ನಾಟಕ ರಾಜ್ಯದ, ಮಂಡ್ಯ ಜಿಲ್ಲೆಯಲ್ಲಿದ್ದು ರಾಜ್ಯದ ಅತಿದೊಡ್ಡ ಪಕ್ಷಿಧಾಮವಾಗಿದೆ.[2] ಕೇವಲ 0.67 ಚದುರ ಕಿಲೋಮೀಟರ್ ವಿಸ್ತೀರ್ಣದ ಅಂದರೆ ಸುಮಾರು 40 ಎಕರೆ ವಿಸ್ತೀರ್ಣದ [3] ಈ ಧಾಮ ಕಾವೇರಿ ನದಿಯ ಆರು ಚಿಕ್ಕ ದ್ವೀಪ ಸಮೂಹಗಳನ್ನೊಳ ಗೊ೦ಡಿದೆ. .[4] ರ೦ಗನತಿಟ್ಟು ಚರಿತ್ರಾಳ ಪಟ್ಟಣವಾದ ಶ್ರೀರ೦ಗಪಟ್ಟಣದಿ೦ದ ಮೂರು ಕಿ.ಮೀ ದೂರದಲ್ಲಿ ಮೈಸೂರಿನಿಂದ ೧೬ ಕಿ.ಮಿ ಉತ್ತರದಲ್ಲಿದೆ [5] 2011-12 ನೇ ಸಾಲಿನಲ್ಲಿ 2.90 ಲಕ್ಷ ಪ್ರವಾಸಿಗರನ್ನು ಆಕರ್ಷಿಸಿರುವುದನ್ನು ಗಮನಿಸಿದರೆ ಭಾರತದಲ್ಲಿ ಇದರ ಮಹತ್ವದ ಸ್ಥಾನವನ್ನು ತಿಳಿಯಬಹುದು.[6]
ಧಾಮದ ಇತಿಹಾಸ


1648 ರಲ್ಲಿ ಆಗಿನ mysore ಮೈಸೂರು ಸ೦ಸ್ಥಾನದ ಅರಸರಾದ ಕ೦ಠೀರವ ನರಸಿ೦ಹರಾಜ ಒಡೆಯರ್ ಅವರು ಕಾವೇರಿ ನದಿಗೆ ಅಡ್ಡಲಾಗಿ ಒಡ್ಡನ್ನು ಕಟ್ಟಿಸಿದಾಗ ಈ ದ್ವೀಪಗಳು ಅಸ್ಥಿತ್ವಕ್ಕೆ ಬ೦ದವು.[7] 1940ರಲ್ಲಿ ಪಕ್ಷಿವಿಜ್ಞಾನ ತಜ್ಞರಾದ ಶ್ರೀ ಸಲೀ೦ ಅಲಿ ಅವರು ಈ ದ್ವೀಪ ಸಮೂಹಗಳು ಪಕ್ಷಿಗಳು ಗೂಡು ಕಟ್ಟಲು ಉತ್ತಮ ತಾಣವಾಗಿರುವದನ್ನು ಗಮನಿಸಿ ಮೈಸೂರು ಸ೦ಸ್ಥಾನದ ಆಗಿನ ರಾಜರಾದ ಒಡೆಯರ್ ಅವರನ್ನು ಈ ದ್ವೀಪ ಸಮೂಹಗಳನ್ನು ಅಭಯಧಾಮವೆ೦ದು ಘೋಷಿಸಲು ಮನಒಲಿಸಿದರು.[5] ಕರ್ನಾಟಕ ರಾಜ್ಯದ ಅರಣ್ಯ ಇಲಾಖೆಯು ಈ ಪಕ್ಷಿಧಾಮದ ನಿರ್ವಹಣೆಯ ಜವಾಬ್ಧಾರಿಯನ್ನು ವಹಿಸಿದೆ ಅಲ್ಲದೆ ಇದರ ಪ್ರಗತಿಯ ದಿಟ್ಟಿನಲ್ಲಿ ಸುತ್ತಲಿನ ಖಾಸಗಿ ಭೂಪ್ರದೇಶಗಳನ್ನು ಕೊಂಡು ಕೊಂಡು, ಈ ಪಕ್ಷಿಧಾಮವನ್ನು ವಿಸ್ತರಿಸಿ, ರಕ್ಷಿಸಿ ಇದರ ಅಭಿವೃದ್ಧಿಗೂ ಪ್ರಯತ್ನಿಸುತ್ತಿದೆ.[3]
ಪ್ರವಾಹ
ಮಳೆಗಾಲದಲ್ಲಿ, ಹತ್ತಿರದ ಕೃಷ್ಣರಾಜಸಾಗರ ಅಣೆಕಟ್ಟಿನಿ೦ದ ಅಧಿಕ ನೀರನ್ನು ಹೊರಬಿಟ್ಟಾಗ ಈ ದ್ವೀಪಸಮೂಹಗಳಿಗೆ ಅತಿಯಾದ ಪ್ರವಾಹದ ಭೀತಿಯಿರುತ್ತದೆ.[7] ಅತಿಯಾದ ಪ್ರವಾಹವಿದ್ದಾಗ ಪ್ರವಾಸಿಗರನ್ನು ದೋಣಿಗಳ ಮೂಲಕ ಕರೆದೊಯ್ಯುವುದನ್ನು ನಿಷೇಧಿಸ ಲಾಗುತ್ತದೆ.[7] ಕೇವಲ ದೂರದಿ೦ದಲೇ ಪಕ್ಷಿಗಳು ಗೂಡುಕಟ್ಟುವುದನ್ನು ವೀಕ್ಷಿಸಲು ಅನುಮತಿ ನೀಡಲಾಗುತ್ತದೆ. ಕಳೆದ ಕೆಲ ದಶಕಗಳಲ್ಲಿ ಆಗಾಗ ಉ೦ಟಾಗುವ ಪ್ರವಾಹಗಳಿ೦ದಾಗಿ ಮೂರು ದ್ವೀಪಗಳ ಕೆಲಭಾಗಗಳಿಗೆ ಧಕ್ಕೆಯಾಗಿದೆ.[8]
ಧಾಮದ ನೈಸರ್ಗಿಕ ಇತಿಹಾಸ
ಭೂಗೋಳ ಹಾಗು ಪರಿಸರ
ಈ ಧಾಮದ ಬಹುಪಾಲು ಇಂಡೋಮಲಯ ಪರಿಸರ ವಲಯ ದಡಿಯ ರಿಪಾರಿಯನ್ ( en:Riparian ) ಬಯೋಮ್ ನಡಿ ಬರುತ್ತದೆ.
ಸಸ್ಯ ಸಂಪತ್ತು
ದ್ವೀಪಗಳ ನದೀ ತೀರದಲ್ಲಿ ಜೊಂಡು ಸಸ್ಯಗಳು ಆವೃತವಾಗಿವೆ. ದ್ವೀಪದ ಒಳಗೆ ಅಗಲವಾದ ಎಲೆಗಳ ಜಾತಿಯ ಸಸ್ಯಗಳು, ಅರ್ಜುನ-ಮರಗಳು ( ಟೆರ್ಮಿನೇಲಿಯಾ Terminalia ಅರ್ಜುನ್), ಬಿದುರಿನ ಗುಂಪು ಸಸ್ಯಗಳು ಮತ್ತು ಪಂಡನು ಮರಗಳಿವೆ. ಮೂಲ ಜಾತಿಯ ಮರಗಳಲ್ಲದ ನೀಲಗಿರಿ ಮತ್ತು ಜಾಲಿ ಜಾತಿ ಗಿಡಗಳನ್ನೂ ನೆಡಲಾಗಿದ್ದು, ಇವು ಇದೇ ಪ್ರದೇಶದ ಮೂಲ ಜಾತಿಯ ಸಸ್ಯಗಳ ಅವನತಿಗೆ ದಾರಿಮಾಡಿಕೊಡಬಹುದಾಗಿದೆ. ಇಫಿಗ್ನಿಯ ಮೈಸೊರೆನಿಸಿಸ್ (en:Iphigenia mysoren sis) ಜಾತಿಯ ನೈದಿಲೆ ಗಳೂ ಈ ಅಭಯಧಾಮದಲ್ಲಿ ಬೆಳೆಯುತ್ತವೆ.
ಹಕ್ಕಿಗಳು

ಹಲವು ವರ್ಷಗಳ ದಾಖಲೆಯ ಪ್ರಕಾರ ಸುಮಾರು 170ಕ್ಕೂ [9] ಹೆಚ್ಚಿನ ಬಗೆಯ ಪಕ್ಷಿಗಳು ಇಲ್ಲಿ ಕಂಡುಬಂದಿವೆ. ಬಣ್ಣದ ಕೊಕ್ಕರೆ (en:Painted Stork), ಚಮಚದ ಕೊಕ್ಕುಗಳು ( en:Common Spoonbill), ಕರಿ ಕೆಂಬರಲು ( en:Black-headed Ibis), ಶಿಳ್ಳೆ ಬಾತುಕೋಳು ( en:Lesser Whistling Duck), ಉದ್ದ ಕೊಕ್ಕಿನ ನೀರುಕಾಗೆ ( en:Indian Shag), ಹೆಮ್ಮಿಂಚುಳ್ಳಿ (en:Stork-billed Kingfisher) ನಂತಹ ವಿಶೇಷ ಪಕ್ಷಿಗಳು ಮತ್ತು ಬೆಳ್ಳಕ್ಕಿ (en:egret) ನೀರುಕಾಗೆ (en:cormorant), ಹಾವಕ್ಕಿ (en:Oriental Darter), ಬಕ ಪಕ್ಷಿಗಳು (en:herons) ಈ ಪ್ರದೇಶದಲ್ಲಿ ಗೂಡು ಕಟ್ಟಿ ಮರಿಮಾಡಿ ಪೊಷಿಸುತ್ತವೆ. The park is home to a large flock of ಕಿರುಗತ್ತಿನ ಕವಲು ತೋಕೆ (en:Streak-throated Swallows)ಗಳೇ ಅಲ್ಲದೆ ಇನ್ನೂ ಹಲವು ಬಗೆಯ ಹಿಂದು ಪಕ್ಷಿಗಳಿಗೆ ಈ ಉದ್ಯಾನವನ ಮನೆಯಾಗಿದೆ. .[5] ಜನವರಿ ಮತ್ತು ಫಿಬ್ರವರಿ ತಿಂಗಳುಗಳಲ್ಲಿ ಸುಮಾರು 30 ಜಾತಿ ಪಕ್ಷಿಗಳು ಕಾಣಸಿಗುತ್ತವೆ. ಈ ಅಭಯಧಾಮದ ಋತು ನವೆಂಬರ್ ನಿಂದ ಜೂನ್ ವರೆಗಾಗಿದೆ.[10] ಈ ಸಮಯದಲ್ಲಿ ಸುಮಾರು 50 ಬಗೆಯ ಹೆಜ್ಜಾರ್ಲೆಗಳು (pelicans) ರಂಗನತಿಟ್ಟು ಪಕ್ಷಿಧಾಮವನ್ನು ತಮ್ಮ ಶಾಶ್ವತ ಮನೆಯ ನ್ನಾಗಿಸಿಕೊಂಡಿವೆ.[8]
ಗಣನೆ
ಚಳಿಗಾಲದ ತಿಂಗಳ ದಿನಗಳಲ್ಲಿ ಮಧ್ಯ ಡಿಸೆಂಬರ್ ನಿಂದ ಪ್ರಾರಂಭಿಸಿ ಕೆಲ ಋತುಗಳಲ್ಲಿ 40,000 ರಷ್ಟು ಪಕ್ಷಿಗಳು ಗುಂಪುಗಳಾಗಿ ಬರುತ್ತವೆ. ಕೆಲ ಪಕ್ಷಿಗಳು ಸೈಬೀರಿಯಾದಿಂದ, ಲ್ಯಾಟಿನ್ ಅಮೆರಿಕಾದಿಂದ ಮತ್ತು ಉತ್ತರ ಭಾರತದ ಕೆಲ ಭಾಗಗಳಿಂದ ಈ ಪಕ್ಷಿಧಾಮಕ್ಕೆ ಗುಂಪು ಗುಂಪುಗಳಾಗಿ ಬರುತ್ತವೆ.[11] ರಂಗನತಿಟ್ಟು ಪಕ್ಷಿಗಳಿಗೆ ಒಂದು ಪ್ರಸಿದ್ಧ ಗೂಡು ಕಟ್ಟುವ ತಾಣವಾಗಿದೆ, ಮತ್ತು 2011 ವರ್ಷದಲ್ಲಿ ಸುಮಾರು 8,000 ಮರಿಹಕ್ಕಿಗಳನ್ನು ಜೂನ್ ತಿಂಗಳಿನಲ್ಲಿ ಕಾಣಲಾಗಿದೆ.[12]
ಪ್ರಾಣಿಗಳು
ಈ ದ್ವೀಪವು ಹಲವಾರು ಚಿಕ್ಕ ಚಿಕ್ಕ ಸಸ್ತನಿಗಳಿಗೂ ಆವಾಸ ಸ್ಥಾನವಾಗಿದೆ.ಇದರಲ್ಲಿ ಕೋತಿಗಳು ಬಾನೆಟ್ ಮಕಾಕ್ (en:Bonnet Macaque) ಗುಂಪುಗಳು, ಪುನುಗು ಬೆಕ್ಕುಗಳು ಮತ್ತು ಹಿರಿ ಪಲ್ಲಿಗಳು ಸೇರಿವೆ. ಜೌಗು ಪ್ರದೇಶದ ಜೊಂಡಿನ ಮೊಸಳೆಗಳು ಈ ಪ್ರದೇಶದ ಸಾಮಾನ್ಯ ನಿವಾಸಿಗಳಾಗಿವೆ. ಕರ್ನಾಟಕ ರಾಜ್ಯದಲ್ಲಿಯೇ ರಂಗನತಿಟ್ಟು ಪ್ರದೇಶವು ಅತಿಹೆಚ್ಚು ಸಿಹಿನೀರಿನ ಮೊಸಳೆಗಳ ಸಂಖ್ಯೆಯನ್ನು ಹೊಂದಿದೆ.[13]
ಚಟುವಟಿಕೆಗಳು
- ದಿನಪೂರ್ತಿ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಈ ದ್ವೀಪಗಳಲ್ಲಿ ದೋಣಿ ಪ್ರವಾಸಗಳು ನಡೆಯುತ್ತವೆ. ಈ ಪ್ರವಾಸದಲ್ಲಿ ಪಕ್ಷಿಗಳನ್ನು, ಮೊಸಳೆಗಳನ್ನು, ನೀರು ನಾಯಿಗಳನ್ನು ಮತ್ತು ಬಾವಲಿಗಳನ್ನು ವೀಕ್ಷಿಸಬಹುದಾಗಿದೆ. ಈ ಚಿಕ್ಕ ಪಕ್ಷಿಧಾಮದಲ್ಲಿ ಪ್ರವಾಸಿಗರಿಗೆ ವಸತಿ ಸೌಲಭ್ಯವಿರುವುದಿಲ್ಲ. ಪ್ರವಾಸಿಗರು ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಉಳಿದುಕೊಳ್ಳಬೇಕಾಗುತ್ತದೆ.
- ಜೂನ್ ನಿಂದ ನವೆಂಬರ ಇಲ್ಲಿ ಹಲವು ಪಕ್ಷಿಗಳು ಸಂತಾನ ಅಭಿವೃರಿದ್ಧಿ ಪ್ರಕ್ರಿಯೆಯಲ್ಲಿ ತೊಡಗುವ ಕಾರಣ ಈ ಉದ್ಯಾನವನ್ನು ಸಂದರ್ಶಿಸಲು ಸೂಕ್ತ ಕಾಲ ವಾಗಿದೆ. ವಲಸೆ ಬರುವ ಪಕ್ಷಿಗಳನ್ನು ವೀಕ್ಷಿಸಲು ಸಾಮಾನ್ಯವಾಗಿ ಡಿಸೆಂಬರ್ ತಿಂಗಳು ಸೂಕ್ತವಾಗಿದೆ. ಆದರೂ ಈ ಅವಧಿ ವರ್ಷದಿಂದ ವರ್ಷಕ್ಕೆ ಬದಲಾಗಬಹುದಾಗಿದೆ.
- ಸಂದರ್ಶನದ ಅವಧಿ ಬೆಳಗ್ಗೆ 8:30 ರಿಂದ ಸಂಜೆ 6:00 ರವರೆಗೆ. ಭಾರತೀಯರಿಗೆ ಪ್ರವೇಶ ಶುಲ್ಕ ರೂ 50.00 ಮತ್ತು ವಿದೇಶಿಯರಿಗೆ ರೂ 300.00 ಆಗಿದೆ. ವಿಶೇಷ ಆಸಕ್ತ ತಂಡಗಳಿಗೆ ಅರಣ್ಯ ಇಲಾಖೆಯ ವತಿಯಿಂದ ನಿರ್ವಹಿಸಲ್ಪಡುತ್ತಿರುವ ಸಲೀಂ ಆಲಿ ಅನುವಾದಕ ಕೇಂದ್ರದಲ್ಲಿ 45 ನಿಮಿಷಗಳ ಕಾಲದ ಮಾಹಿತಿ ಚಿತ್ರ ಪ್ರದರ್ಶನದ ವೀಕ್ಷಣಾ ಸೌಲಭ್ಯವಿದೆ.[8]
ಮೂಲಗಳು
- Pied Kingfishers, Ranganathittu
- Crocodile, Ranganathittu
- Open billed storks, Ranganathittu
- Painted stork colony, Ranganathittu
- Meal partners, painted storks aiding each other, Ranganathittu
- Snowy egret pair, Ranganathittu
- Pair of greater thick-knees, Ranganathittu
- Colony of white ibis, Ranganathittu
- White ibis pair, Ranganathittu
- [http:/ /www.deccanherald. com/ content /114903/from-here-amp-there.html "From Here and There"] Check
|url=
value (help). Deccan Herald. Retrieved 23 November 2010. - "Karnataka News : Rs. 1 crore sanctioned for developing Bonal Bird Sanctuary near Surpur". The Hindu. 2011-01-08. Retrieved 2012-12-05.
- Shiva Kumar, M T (9 June 2012). "Creating more space for the birds". The Hindu. Retrieved 19 February 2013.
- "Ranganathittu Bird Sanctuary".
- com/mp/2006/09/25/stories /2006092500330300.htm "Ranganathittu Bird Sanctuary" Check
|url=
value (help). The Hindu. Chennai, India. 25 September 2006. Retrieved 23 November 2010. - "Birds seem to favour Ranganathittu". The Hindu. 10 April 2012. Retrieved 19 February 2013.
- "Heavy rainfall causes flooding in Ranganathittu bird sanctuary". The Hindu. 25 October 2005. Unknown parameter
|access date=
ignored (|access-date=
suggested) (help) - R, Krishna Kumar (4 May 2009). hindu.com/2009 /05/04/stories/ 2009050451410300.htm "Ranganathittu gets a new look" Check
|url=
value (help). The Hindu. Retrieved 19 February 2013. - http://www.mysorenature.org/mandya-sector/ranganathittu-bird-sanctuary/bird-checklist
- ranganathittu-reports-record-revenue/article2786551.ece?css=print "Ranganathittu reports record revenue" Check
|url=
value (help). The Hindu. 9 January 2012. Retrieved 19 February 2013. - M.T., Shiva Kumar (28 January 2013). "Ranganathittu comes alive with winged beauties". The Hindu. Retrieved 19 February 2013.
- DHNS (10 June 2011). "8,000 nestlings sighted at Ranganathittu". Deccan Herald. Retrieved 19 February 2013.
- TNN. §id=edid=&edlabel =TOIBG&mydateHid=10-08-2012&pubname=Times+of+India+-+Bangalore&edname=&articleid=Ar00701&publabel=TOI "Sanctuary crocs fear extinction" Check
|url=
value (help). The Times of India mobile edition. Retrieved 19 February 2013.
ಬಾಹ್ಯ ಕೊಂಡಿಗಳು
![]() |
ವಿಕಿಮೀಡಿಯ ಕಣಜದಲ್ಲಿ ರಂಗನತಿಟ್ಟು ಪಕ್ಷಿಧಾಮ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |
ಟೆಂಪ್ಲೇಟು:Bird Sanctuaries