ವೀರೇಂದ್ರ ಪಾಟೀಲ್

ವೀರೇಂದ್ರ ಪಾಟೀಲ್ (1924-1997) ಹಿರಿಯ ಭಾರತೀಯ ರಾಜಕಾರಣಿ ಮತ್ತು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು.ಅವರು (1968-1971) ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದರು.18 ವರ್ಷಗಳ ನಂತರ ಎರಡನೇ ಬಾರಿಗೆ (1989-1990) ರವರೆಗೆ ಮುಖ್ಯಮಂತ್ರಿಯಾಗಿದ್ದರು.

ವೀರೇಂದ್ರ ಪಾಟೀಲ್

ಕರ್ನಾಟಕದ ಏಳನೆಯ ಮುಖ್ಯಮಂತ್ರಿ
ಅಧಿಕಾರ ಅವಧಿ
29 May 1968  18 March 1971
ರಾಜ್ಯಪಾಲ ಧರ್ಮ ವೀರ
ಪೂರ್ವಾಧಿಕಾರಿ ಎಸ್.ನಿಜಲಿಂಗಪ್ಪ
ಉತ್ತರಾಧಿಕಾರಿ ಡಿ.ದೇವರಾಜ ಆರಸ್
ಅಧಿಕಾರ ಅವಧಿ
30 November 1989  10 October 1990
ರಾಜ್ಯಪಾಲ ಪಿ.ವೆಂಕಟಸುಬ್ಬಯ್ಯ
ಭಾನು ಪ್ರತಾಮ್ ಸಿಂಗ್
ಪೂರ್ವಾಧಿಕಾರಿ ಎಸ್.ಆರ್.ಬೊಮ್ಮಾಯಿ
ಉತ್ತರಾಧಿಕಾರಿ ಎಸ್.ಬಂಗಾರಪ್ಪ

Member of the ಭಾರತೀಯ Parliament
for ಗುಲ್ಪರ್ಗ
ಅಧಿಕಾರ ಅವಧಿ
1984  1989
ಪೂರ್ವಾಧಿಕಾರಿ ಎನ್.ಧರಮ್ ಸಿಂಗ್
ಉತ್ತರಾಧಿಕಾರಿ ಬಿ.ಜಿ.ಜವಳಿ
ವೈಯಕ್ತಿಕ ಮಾಹಿತಿ
ಜನನ 1924
ಚಿಂಚೋಳಿ, ಗುಲ್ಬರ್ಗ
ಮರಣ ಮಾರ್ಚ್ 14, 1997(1997-03-14)
ರಾಜಕೀಯ ಪಕ್ಷ INC
ಮಕ್ಕಳು ಕೈಲಾಶನಾಥ್ ಪಾಟೀಲ್[1]
ಧರ್ಮ ಹಿಂದು

ಬಾಲ್ಯ

ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲೂಕಿನ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಫೆಬ್ರವರಿ 28, 1924 ರಲ್ಲಿ ಜನಿಸಿದರು.ಗುಲ್ಬರ್ಗ ಸರ್ಕಾರಿ ಪ್ರೌಢಶಾಲೆ,ವಿವೇಕ್-ವರ್ಧಿನೀ ಸ್ಕೂಲ್ ಹೈದರಾಬಾದ್ ಮತ್ತು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಿಎ ಎಲ್ಎಲ್ ಬಿ ಶಿಕ್ಷಣ ಪಡೆದಿದ್ದಾರೆ.[2]

ರಾಜಕೀಯ

ಅವರು 1957 ರಲ್ಲಿ ಎಸ್ ನಿಜಲಿಂಗಪ್ಪ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದರು ಚಿಂಚೋಳಿ[3] ವಿಧಾನ ಸಭಾ ಕ್ಷೇತ್ರದಿಂದ ೩ ಸಲ ಆಯ್ಕೆಯಾಗಿದ್ದರು,ಒಂದೊಂದು ಬಾರಿ ಗುಲ್ಬರ್ಗಾ ಮತ್ತು ಬಾಗಲಕೋಟೆ ಸಂಸದರಾಗಿ ಆಯ್ಕೆಯಾಗಿದ್ದರು.[4]

  • ಹೈದರಾಬಾದ್ ವಿಧಾನ ಸಭೆ 1952-56
  • ಮೈಸೂರು (ಈಗಿನ ಕರ್ನಾಟಕ) ವಿಧಾನ ಸಭೆಯಲ್ಲಿ 1957-71,
  • ರಾಜ್ಯ ಸಭೆ ಸದಸ್ಯರು, 1972-78;
  • ಏಳನೆ ಲೋಕಸಭಾ ಸದಸ್ಯರು 1980-84;
  • ಯುಎಸ್ಎಸ್ಆರ್ ಭಾರತೀಯ ನಿಯೋಗ ಸದಸ್ಯರು 1965
  • ಸಂಸದೀಯ ನಿಯೋಗ ಜರ್ಮನಿ ಸದಸ್ಯರು , 1973 .
  • ಗೃಹ ಮತ್ತು ಕೈಗಾರಿಕಾ ಉಪ ಮಂತ್ರಿ,-ಮೈಸೂರು ಸರ್ಕಾರ 1961-62
  • ಲೋಕೋಪಯೋಗಿ ಮತ್ತು ಸಾರಿಗೆ ಮಂತ್ರಿ; ಮೈಸೂರು ಸರ್ಕಾರ 1962-68 .
  • ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿ, 1968-ಮಾರ್ಚ್ ರಿಂದ 1971.
  • ಕೇಂದ್ರ ಪೆಟ್ರೊಲಿಯಂ ಮತ್ತು ರಾಸಾಯನಿಕ ಸಚಿವ , ಮಾರ್ಚ್ 1980-ಸೆಪ್ಟೆಂಬರ್, 1980 .
  • ಕೇಂದ್ರ ಶಿಪ್ಪಿಂಗ್ ಮತ್ತು ಸಾರಿಗೆ ಸಚಿವ ಸೆಪ್ಟೆಂಬರ್, 1980-ಸೆಪ್ಟೆಂಬರ್ 82;
  • ಕೇಂದ್ರ ಲೇಬರ್ ಮತ್ತು ಪುನರ್ವಸತಿ ಸಚಿವ 1982-1984.
  • ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ & ಇಂಡಸ್ಟ್ರಿ ಮತ್ತು ಕಂಪನಿ ವ್ಯವಹಾರಗಳ ಹೆಚ್ಚುವರಿ ಚಾರ್ಜ್ ಸಚಿವ 1984
  • ಕಾರ್ಯದರ್ಶಿ, ತಾಲೂಕು ಕಾಂಗ್ರೆಸ್ ಸಮಿತಿ ಚಿಂಚೋಳಿ 1950-52.
  • ಪ್ರಧಾನ ಕಾರ್ಯದರ್ಶಿ, ಹೈದರಾಬಾದ್ ಪ್ರದೇಶ ಕಾಂಗ್ರೆಸ್ 1955-56;
  • ಎಂಟನೆ ಲೋಕಸಭಾ ಸದಸ್ಯರು ಬಾಗಲಕೋಟೆ 1980-84;[5]

ವಿದೇಶ ಪ್ರವಾಸ

  • ಯು.ಎಸ್.ಎಸ್.ಆರ್,
  • ಆಸ್ಟ್ರೇಲಿಯಾ,
  • ಜಪಾನ್,
  • ಸಿಂಗಾಪುರ,
  • ಜರ್ಮನಿ,
  • ಇಟಲಿ,
  • ಆಸ್ಟ್ರೇಲಿಯಾ
  • ಸ್ವಿಜರ್ಲ್ಯಾಂಡ್
  • U.S.A.
  • ಕೆನಡಾ
  • ಐರ್ಲೆಂಡ್.

ಉಲ್ಲೇಖಗಳು



This article is issued from Wikipedia. The text is licensed under Creative Commons - Attribution - Sharealike. Additional terms may apply for the media files.