ನವೆಂಬರ್
ನವೆಂಬರ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಹನ್ನೊಂದನೆಯ ತಿಂಗಳು. ಈ ತಿಂಗಳಿನಲ್ಲಿ ಮೂವತ್ತು ದಿನಗಳು ಇರುತ್ತವೆ. ಹಿಂದೆ ಆಚರಣೆಯಲ್ಲಿ ಇತ್ತೆಂದು ಹೇಳಲಾದ ರೋಮನ್ ತಾರೀಕು ಪಟ್ಟಿಯಲ್ಲಿ ಇದನ್ನು ಒಂಬತ್ತನೆಯ ತಿಂಗಳೆಂದು ಕಾಣಿಸಲಾಗಿತ್ತು. ರೋಮನರ ವರ್ಷ ಮಾರ್ಚಿಯಲ್ಲಿ ಮೊದಲುಗೊಂಡು ಡಿಸೆಂಬರಿನಲ್ಲಿ ಅಂತ್ಯವಾಗುವ ಹತ್ತು ತಿಂಗಳ ಅವಧಿಯದಾಗಿದ್ದುದೇ ಇದರ ಕಾರಣ. ಕ್ರಿ.ಪೂ. 153ರಲ್ಲಿ ಇದನ್ನು ಹನ್ನೊಂದನೆಯ ತಿಂಗಳಾಗಿ ಪರಿಗಣಿಸಲಾಯಿತು. 1914ರಲ್ಲಿ ಆರಂಭವಾದ ಒಂದನೆಯ ಮಹಾಯುದ್ಧ 1918ರ ನವೆಂಬರ್ 11ರಂದು ಕೊನೆಗೊಂಡ ಕಾರಣ ಆ ತಾರೀಕಿನ ಜ್ಞಾಪಕಾರ್ಥವಾಗಿ ಪ್ರತಿವರ್ಷವೂ ಅದನ್ನು ಯುದ್ಧವಿರಾಮ ದಿವಸವಾಗಿ ಆಚರಿಸುವುದು ರೂಢಿ. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ನವೆಂಬರ್ ತಿಂಗಳ ನಾಲ್ಕನೆಯ ಗುರುವಾರವನ್ನು ರಾಷ್ಟ್ರೀಯ ರಜಾದಿವಸವಾಗಿ ಆಚರಿಸುವುದಿದೆ. ಇದೇ ಕೃತಜ್ಞತಾ ಸಮರ್ಪಣ ದಿನ
ಟೆಂಪ್ಲೇಟು:ನವೆಂಬರ್ ೨೦೧೯
ಆಚರಣೆಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.