ಆಗಸ್ಟ್
ಆಗಸ್ಟ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಎಂಟನೆಯ ತಿಂಗಳು. ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಟೆಂಪ್ಲೇಟು:ಆಗಸ್ಟ್ ೨೦೧೯
ರಜೆಗಳು / ಆಚರಣೆಗಳು
- ಐರ್ಲ್ಯಾಂಡ್ ದೇಶದ ಹಲವು ಪ್ರಸಿದ್ಧ ಕದನಗಳು ಈ ತಿಂಗಳದಲ್ಲಿ ಸಂಭವಿಸಿವೆ.
- ಆಗಸ್ಟ್ ೧ - ಸ್ವಿಟ್ಜರ್ಲ್ಯಾಂಡ್ ದೇಶದ ರಾಷ್ಟ್ರೀಯ ದಿನ, ರಾಷ್ಟ್ರೀಯ ರಜೆ.
- ಆಗಸ್ಟ್ ೬ - ೧೮೦೬ರಲ್ಲಿ ರೋಮನ್ ಸಾಮ್ರಾಜ್ಯದ ದೊರೆಯಾಗಿದ್ದ ದೊರೆ ಫ್ರಾನ್ಸಿಸ್-೨ ನಿಂದ ರಾಜ ಪದವಿ ತ್ಯಾಗ.
- ಆಗಸ್ಟ್ ೬ - ೧೯೪೫ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದಿಂದ ಜಪಾನ್ ದೇಶದ ಹಿರೋಶಿಮಾ ನಗರದ ಮೇಲೆ ಆಣುಬಾಂಬ್ ದಾಳಿ.
- ಆಗಸ್ಟ್ ೯ - ೧೯೪೫ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದಿಂದ ಜಪಾನ್ ದೇಶದ ನಾಗಾಸಾಕಿ ನಗರದ ಮೇಲೆ ಆಣುಬಾಂಬ್ ದಾಳಿ.
- ಆಗಸ್ಟ್ ೯ - ೧೯೬೫ ಮಲೇಷಿಯಾದಿಂದ ಬೇರ್ಪಡೆ ಹೊಂದಿ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿದ ಸಿಂಗಾಪುರ.
- ಆಗಸ್ಟ್ ೧೪ - ೧೯೪೭ ಸ್ವತಂತ್ರ ರಾಷ್ಟ್ರವಾಗಿ ಪಾಕಿಸ್ತಾನ.
- ಆಗಸ್ಟ್ ೧೫ - ೧೭೬೯ರಲ್ಲಿ ಕೊರ್ಸಿಕಾದಲ್ಲಿ ನೆಪೋಲಿಯನ್ ಬೋನಾಪಾರ್ಟೆಯ ಜನನ.
- ಆಗಸ್ಟ್ ೧೫ - ೧೯೪೭ ಭಾರತಕ್ಕೆ ಸ್ವಾತಂತ್ರ್ಯ. ಸ್ವಾತಂತ್ರ್ಯ ದಿನಾಚರಣೆ, ರಾಷ್ಟ್ರೀಯ ರಜೆ.
- ಆಗಸ್ಟ್ ೧೫ - ೧೯೪೫ ಅಮೇರಿಕಾ ಸಂಯುಕ್ತ ಸಂಸ್ಥಾನದ ಅಣುಬಾಂಬ್ ದಾಳಿಯ ನಂತರ ಜಪಾನಿನ ದೊರೆ ಹಿರೋಹಿಟೊನಿಂದ ಜಪಾನಿನ ಶರಣಾಗತಿಯ ಘೋಷಣೆ.
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.