ತಿಂಗಳು
ತಿಂಗಳು ಚಂದ್ರನ ಚಲನೆಯನ್ನು ಆಧಾರಿಸಿ ಕಾಲವನ್ನು ಅಳೆಯುವ ಒಂದು ಪ್ರಮಾಣ. ಚಂದ್ರನು ಭೂಮಿಯ ಸುತ್ತ ತಿರುಗಲು ಸುಮಾರು ೨೯.೫೩ ದಿನಗಳನ್ನು ತಗೆದುಕೊಳ್ಳುತ್ತದೆ. ಈ ಆಧಾರದಲ್ಲಿ ಪ್ರಾಚೀನ ಕಾಲದಿಂದಲೂ ಹಲವು ಸಂಸ್ಕೃತಿಗಳಲ್ಲಿ ಈ ಆಧಾರದ ಮೇಲೆ ತಿಂಗಳನ್ನು ವರ್ಷದ ವಿಂಗಡನೆಯನ್ನಾಗಿ ಉಪಯೋಗಿಸಿದ್ದಾರೆ. ಒಂದು ವರ್ಷದಲ್ಲಿ ೧೨ ತಿಂಗಳುಗಳಿವೆ. ಅವು
- ಜನವರಿ
- ಫ಼ೆಬ್ರವರಿ
- ಮಾರ್ಚ್
- ಏಪ್ರಿಲ್
- ಮೇ
- ಜೂನ್
- ಜುಲೈ
- ಆಗಸ್ಟ್
- ಸೆಪ್ಟಂಬರ್
- ಅಕ್ಟೋಬರ್
- ನವೆಂಬರ್
- ಡಿಸೆಂಬರ್
ಪಂಚಾಂಗದಲ್ಲಿ ತಿಂಗಳು
ಚಂದ್ರನ ಚಲನೆಯಾಧಾರಿತ ಲೆಕ್ಕವು ಪೂರ್ಣ ದಿನಕ್ಕೆ ಸಮನಾಗದಿರುವುದರಿಂದ ಹಲವು ಚಂದ್ರಾಧಾರಿತ ತಿಂಗಳುಗಳಾದ ಮೇಲೆ ಅಧಿಕ ಮಾಸವನ್ನು ಅಳವಡಿಸಬೇಕಾಗುತ್ತದೆ. ಅದಲ್ಲದೆ ವರ್ಷದ ವಿಂಗಡನೆಯು ಚಂದ್ರಾಧರಿತ ತಿಂಗಳ ಉದ್ದಕ್ಕೆ ಸರಿಹೋಗುವುದಿಲ್ಲ. ಹೀಗಾಗಿ ಹಲವು ಸಂಸ್ಕೃತಿಗಳಲ್ಲಿ ಕ್ರಮೇಣ ಸೌರಮಾನ ಪಂಚಾಂಗಗಳು ಬಳಕೆಗೆ ಬಂದವು. ಈ ಪದ್ಧತಿಯಡಿಯಲ್ಲಿ ಸೂರ್ಯನ ಚಲನೆಯ ಆಧಾರದ ಮೇಲೆ ತಿಂಗಳುಗಳನ್ನು ವಿಭಾಗಿಸಲಾಗುತ್ತದೆ.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.