ಪುನೀತ್ ರಾಜ್‍ಕುಮಾರ್
ಪುನೀತ್ ರಾಜ್‍ಕುಮಾರ್ (ಇಂಗ್ಲಿಷ್: Puneeth Rajkumar) (ಜನನ 1975 17 ಮಾರ್ಚ್) ಭಾರತೀಯ ಚಿತ್ರನಟ,ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕ ಪ್ರಾಥಮಿಕವಾಗಿ ಕನ್ನಡ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಾರೆ . ಪುನೀತ್ 26 ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ .ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ್ಯ ನಟನಾಗಿ ವಸಂತ ಗೀತಾ (1980), ಭಾಗ್ಯದಾತ (1981), ಚಲಿಸುವ ಮೋಡಗಳು (1982), ಎರಡು ನಕ್ಷತ್ರಗಳು (1983) ಮತ್ತು ಬೆಟ್ಟದ ಹೂವು (1985) ಅವರು ನಟಿಸಿದ ಚಿತ್ರಗಳ ನಟನೆಗೆ ಮೆಚ್ಚುಗೆ ಪಡೆದರು. ಅವರ ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ಬಾಲನಟನೆಗೆ ರಾಷ್ಟ್ರ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾದರು. ಪುನೀತ್ ಮೊದಲ ಪ್ರಮುಖ ಪಾತ್ರದಲ್ಲಿ 2002' ಅಪ್ಪು ರಲ್ಲಿ ಅಭಿನಯಿಸಿದರು.ಅವರ ಅಭಿ (2003), ಆಕಾಶ್ (2005), ಅರಸು (2007), ಮಿಲನ (2007), ಜಾಕೀ (2010), ಹುಡುಗರು (2011), ಅಣ್ಣಾ ಬಾಂಡ್ (2012) ಮತ್ತು ಪವರ್ (2014) ಸೇರಿದಂತೆ ಇತರ ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು .2012 ರಲ್ಲಿ ಅವರು ಪ್ರಸಿದ್ಧ ಟಿವಿ ಪ್ರದರ್ಶನ ಕನ್ನಡದ ಕೋಟ್ಯಾಧಿಪತಿ, ಹೂ ವಾಂಟ್ಸ್ ಟು ಬಿ ಮಿಲಿಯನೇರ್ ಎಂಬ ಕನ್ನಡ ಆವೃತ್ತಿಯ ಟೆಲಿವಿಷನ್ ಶೋ ನಿರೂಪಣೆ ಮಾಡಿದ್ದಾರೆ.
ಪುನೀತ್ ರಾಜ್‍ಕುಮಾರ್ | |
---|---|
![]() ಅಂಜನಿ ಪುತ್ರ ಚಿತ್ರೀಕರಣದ ವೇಳೆಯಲ್ಲಿ ಪುನೀತ್, ೨೦೧೭ | |
ಜನನ | ಲೋಹಿತ್ ೧೯೭೫-೦೩-೧೭ ತಮಿಳು ನಾಡು, ಭಾರತ |
ವಾಸಿಸುವ ಸ್ಥಳ | ಬೆಂಗಳೂರು, ಕರ್ನಾಟಕ |
Other names | ಅಪ್ಪು |
ವೃತ್ತಿ | ನಟ, ಗಾಯಕ |
Years active | ೨೦೦೨–ಪ್ರಸ್ತುತ |
ಸಂಗಾತಿ(ಗಳು) | ಅಶ್ವಿನಿ ರೇವಂತ್ |
ಮಕ್ಕಳು | ೨ |
ತಂದೆ ತಾಯಿ | ಡಾ.ರಾಜ್ಕುಮಾರ್,ಪಾರ್ವತಮ್ಮ ರಾಜ್‌ಕುಮಾರ್ |
ವೈಯಕ್ತಿಕ ಜೀವನ
ಪುನೀತ್, ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಮಗನಾಗಿ ಜನಿಸಿದರು ಇವರು ಕಿರಿಯ ಮಗ. ನಟರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಸಹೋದರು. ಪುನೀತ್ ಆರು ವರ್ಷದವರಿದ್ದಾಗ, ಅವರ ಕುಟುಂಬ ಬೆಂಗಳೂರಿಗೆ ತೆರಳಿತು.ಅವರು ಹತ್ತು ವರ್ಷ ವಯಸ್ಸಿನ ತನಕ ಅವರ ತಂದೆ ಅವರನ್ನು ಮತ್ತು ಅವರ ಸಹೋದರಿ ಪೂರ್ಣಿಮಾರನ್ನು ಚಲನಚಿತ್ರದ ಸೆಟ್ಗೆ ಕರೆದುಕೊಂಡು ಹೋಗುತ್ತಿದ್ದರು.ಪುನೀತ್ ಡಿಸೆಂಬರ್ 1 ,1999 ರಂದು ಅಶ್ವಿನಿ ರೇವಂತ್ ರನ್ನು ವಿವಾಹವಾದರು.ಇವರಿಗೆ ಇಬ್ಬರು ಪುತ್ರಿಯರಿದ್ದಾರೆ ದ್ರಿತಿ ಮತ್ತು ವಂದಿತಾ.ಇವರ ಮೊದಲ ಹೆಸರು ಮಾ.ಲೋಹಿತ್.
ಅಭಿನಯಿಸಿದ ಚಲನಚಿತ್ರಗಳು
ಬಾಲ ನಟನಾಗಿ
- ಭಾಗ್ಯವಂತ
- ಎರಡು ನಕ್ಷತ್ರಗಳು
- ಬೆಟ್ಟದ ಹೂವು
- ಚಲಿಸುವ ಮೋಡಗಳು
- ಶಿವ ಮೆಚ್ಚಿದ ಕಣ್ಣಪ್ಪ
- ಪರಶುರಾಮ್
- ಯಾರಿವನು
- ಭಕ್ತ ಪ್ರಹ್ಲಾದ
- vasanta geeta
ನಾಯಕ ನಟನಾಗಿ
ಸಂಖ್ಯೆ | ವರ್ಷ | ಚಿತ್ರದ ಹೆಸರು | ಪಾತ್ರವರ್ಗ | ನಿರ್ದೇಶನ | ಸಂಗೀತ | ನಿರ್ಮಾಪಕರು |
---|---|---|---|---|---|---|
೧ | ೨೦೦೨ | ಅಪ್ಪು | ರಕ್ಷಿತಾ | ಪುರಿ ಜಗನಾಥ್ | ಗುರುಕಿರಣ್ | |
೨ | ೨೦೦೩ | ಅಭಿ | ರಮ್ಯಾ | ದಿನೇಶ್ ಬಾಬು | ಗುರುಕಿರಣ್ | |
೩ | ೨೦೦೪ | ವೀರ ಕನ್ನಡಿಗ | ಅನಿತಾ | ಮೆಹರ್ ರಮೇಶ್ | ಚಕ್ರಿ | |
೪ | ೨೦೦೪ | ಮೌರ್ಯ | ಮೀರಾ ಜಾಸ್ಮಿನ್ | ಎಸ್. ನಾರಾಯಣ್ | ಗುರುಕಿರಣ್ | |
೫ | ೨೦೦೫ | ಆಕಾಶ್ | ರಮ್ಯಾ | ಮಹೇಶ್ ಬಾಬು | ಆರ್.ಪಿ.ಪಟ್ನಾಯಕ್ | |
೬ | ೨೦೦೫ | ನಮ್ಮ ಬಸವ | ಗೌರಿ ಮುಂಜಾಲ್ | ವೀರಾ ಶಂಕರ್ | ಗುರುಕಿರಣ್ | |
೭ | ೨೦೦೬ | ಅಜಯ್ | ಅನುರಾಧ ಮೆಹ್ತಾ | ಮೆಹರ್ ರಮೇಶ್ | ಮಣಿಶರ್ಮ | |
೮ | ೨೦೦೭ | ಅರಸು | ರಮ್ಯಾ | ಮಹೇಶ್ ಬಾಬು | ಜೋಶ್ವ ಶ್ರೀಧರ್ | |
೯ | ೨೦೦೭ | ಮಿಲನ | ಪಾರ್ವತಿ ಮೆನನ್ | ಪ್ರಕಾಶ್ | ಮನೋಮೂರ್ತಿ | |
೧೦ | ೨೦೦೮ | ಬಿಂದಾಸ್ | ಹನ್ಸಿಕಾ ಮೋಟ್ವಾನಿ | ಡಿ .ರಾಜೇಂದ್ರ ಬಾಬು | ಗುರುಕಿರಣ್ | |
೧೧ | ೨೦೦೮ | ವಂಶಿ | ನಿಕಿತಾ ತುಕ್ರಾಲ್ | ಪ್ರಕಾಶ್ | ಆರ್.ಪಿ.ಪಟ್ನಾಯಕ್ | |
೧೨ | ೨೦೦೯ | ರಾಜ್ ದ ಶೋಮ್ಯಾನ್ | ನಿಶಾ ಕೊಠಾರಿ | ಪ್ರೇಮ್ | ವಿ.ಹರಿಕೃಷ್ಣ | |
೧೩ | ೨೦೦೯ | ಪೃಥ್ವಿ | ಪಾರ್ವತಿ ಮೆನನ್ | ಜೇಕಬ್ ವರ್ಗೀಸ್ | ಮಣಿಕಾಂತ್ ಕದ್ರಿ | |
೧೪ | ೨೦೧೦ | ರಾಮ್ | ಪ್ರಿಯಾಮಣಿ | ಕೆ.ಮಾದೇಶ್ | ವಿ.ಹರಿಕೃಷ್ಣ | |
೧೫ | ೨೦೧೦ | ಜಾಕಿ | ಭಾವನಾ | ಸೂರಿ | ವಿ.ಹರಿಕೃಷ್ಣ | |
೧೬ | ೨೦೧೧ | ಹುಡುಗರು | ರಾಧಿಕಾ ಪಂಡಿತ್ | ಕೆ.ಮಾದೇಶ್ | ವಿ.ಹರಿಕೃಷ್ಣ | |
೧೭ | ೨೦೧೧ | ಪರಮಾತ್ಮ | ದೀಪಾ ಸನ್ನಿಧಿ,ಐಂದ್ರಿತಾ ರೈ | ಯೋಗರಾಜ್ ಭಟ್ | ವಿ.ಹರಿಕೃಷ್ಣ | |
೧೮ | ೨೦೧೨ | ಅಣ್ಣ ಬಾಂಡ್ | ಪ್ರಿಯಾಮಣಿ, ನಿದಿ ಸುಬ್ಬಯ್ಯ | ಸೂರಿ | ವಿ.ಹರಿಕೃಷ್ಣ | |
೧೯ | ೨೦೧೨ | ಯಾರೇ ಕೂಗಾಡಲಿ | ಭಾವನಾ | ಸಮುದ್ರಖಣಿ | ವಿ.ಹರಿಕೃಷ್ಣ | |
೨೦ | ೨೦೧೪ | ನಿನ್ನಿಂದಲೇ | ಎರಿಕಾ ಫೆರ್ನಾಂಡಿಸ್ | ಜಯಂತ್ ಸಿ ಪರಾಂಜಿ | ಮಣಿಶರ್ಮ | |
೨೧ | ೨೦೧೫ | ಮೈತ್ರಿ | ಭಾವನಾ, ಮೋಹನಲಾಲ್ , ಅರ್ಚನಾ | ಗಿರಿರಾಜ್.ಬಿ.ಎಂ | ಇಳೆಯರಾಜ | |
೨೨ | ೨೦೧೫ | ಪವರ್ ಸ್ಟಾರ್ | ತ್ರಿಷಾ ಕೃಷ್ಙನ್ | ಕೆ.ಮಾದೇಶ್ | ತಮನ್ ಎಸ್. ಎಸ್ | |
೨೩ | ೨೦೧೫ | ಧೀರ ರಣ ವಿಕ್ರಮ | ಅಂಜಲಿ,ಅದಾ ಶರ್ಮ | ಪವನ್ ಒಡೆಯರ್ | ವಿ.ಹರಿಕೃಷ್ಣ | |
೨೪ | ೨೦೧೬ | ಚಕ್ರವ್ಯೂಹ | ರಚಿತಾ ರಾಮ್ | ಶರವಣನ್.ಎಂ | ತಮನ್ ಎಸ್. ಎಸ್ | |
೨೫ | ೨೦೧೬ | ದೊಡ್ಮನೆ ಹುಡುಗ | ರಾಧಿಕಾ ಪಂಡಿತ್,ಅಂಬರೀಶ್,ಸುಮಲತಾ,ಭಾರತಿ ವಿಷ್ಣುವರ್ಧನ್ | ದುನಿಯಾ ಸೂರಿ | ವಿ.ಹರಿಕೃಷ್ಣ | |
೨೬ | ೨೦೧೭ | ರಾಜಕುಮಾರ | ಅನಂತ್ ನಾಗ್,ಪ್ರಿಯಾ ಆನಂದ್,ಶರತ್ ಕುಮಾರ್,ಪ್ರಕಾಶ್ ರಾಜ್,ಚಿಕ್ಕಣ್ಣ, | ಸಂತೋಷ್ ಆನಂದ್ ರಾಮ್ | ವಿ.ಹರಿಕೃಷ್ಣ | |
೨೭ | ೨೦೧೭ | ಅಂಜನಿ ಪುತ್ರ | ರಶ್ಮಿಕ ಮಂದಣ್ಣ,ರಮ್ಯ ಕೃಷ್ಣನ್ | ಹರ್ಷ | ರವಿ ಬಸ್ರುರೂ | |
೨೮ | ೨೦೧೯ | ನಟಸಾರ್ವಭೌಮ | ರಚಿತಾ ರಾಮ್, ಅನುಪಮಾ ಪರಮೇಶ್ವರನ್, ಬಿ.ಸರೋಜಾದೇವಿ | |||
ಕಿರುತೆರೆಯಲ್ಲಿ
- ಕನ್ನಡದ ಕೊಟ್ಯಾಧಿಪತಿ
- ಕನ್ನಡದ ಕೊಟ್ಯಾಧಿಪತಿ ಸೀಸನ್ 2
- ಫ್ಯಾಮಿಲಿ ಪವರ್