ಕನ್ನಡ ವರ್ಣಮಾಲೆಯ ಹತ್ತನೇ ಅಕ್ಷರವಾಗಿದೆ. ಇದು ಒಂದು ಸ್ವರಾಕ್ಷರ. ಐ ಕನ್ನಡದ ಸ್ವರಾಕ್ಷ್ರವೆಂದು ಗುರುತಿಸಿಕೊಂಡರೂ ಇದು ಕನ್ನಡ ಸಂಧ್ಯಕ್ಷರಗಳಲ್ಲಿ ಒಂದಾಗಿದೆ. ಅ+ಏ=ಐ, ಅ+ಐ=ಐ ಹೀಗೆ ಎರಡು ಸ್ವರಗಳು ಸಂಧಿಸುವುದರಿಂದ ಸಂಧ್ಯಕ್ಷರವೆಂದು ಗುರುತಿಸಬಹುದು.[1]

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ಅಂಅಃ
ವ್ಯಂಜನಗಳು
ಅವರ್ಗೀಯ ವ್ಯಂಜನಗಳು
ಹೊಸ ಅಕ್ಷರಗಳು
ಜ಼ಫ಼

ಚಾರಿತ್ರಿಕ ಹಿನ್ನೆಲೆ

ಕನ್ನಡ ವರ್ಣಮಾಲೆಯ ಹನ್ನೊಂದನೆಯ ಅಕ್ಷರ. ದೀರ್ಘ ಸ್ವರ. ಸಾಮಾನ್ಯವಾಗಿ ಸ್ವತಂತ್ರವಾಗಿ ದೊರಕುವುದು ಕಷ್ಟ. ವ್ಯಂಜನಗಳ ಜೊತೆಯಲ್ಲಿ ಮಾತ್ರ ದೊರೆಯುತ್ತದೆ. ಅಶೋಕನ ಕಾಲದ ಬ್ರಾಹ್ಮೀ ಲಿಪಿಯಲ್ಲಿ ವ್ಯಂಜನದ ಬಲಗಡೆ ಎರಡು ಸಣ್ಣ ಗೆರೆಗಳ ಮೂಲಕ ಬರೆಯುತ್ತಿದ್ದುದು ಕಾಣಬರುತ್ತದೆ.

ಕಾಲಕ್ರಮೇಣ ಈ ಎರಡೂ ರೇಖೆಗಳು ಕೊಂಡಿಯ ರೂಪವನ್ನು ತಾಳಿ, ಅಕ್ಷರದ ಕೆಳಭಾಗದಲ್ಲಿ ಬರೆಯುವ ಕ್ರಮ ರೂಢಿಗೆ ಬಂತು. ಶಾಸನಗಳಲ್ಲಿ ಐದು ಎಂಬುದನ್ನು ಅಯಿದು ಎಂದೂ ಐವತ್ತು ಎಂಬುದನ್ನು ಅಯವತ್ತು ಎಂದೂ ಬರೆದಿರುವುದನ್ನು ಗಮನಿಸಿದಲ್ಲಿ ಈ ಅಕ್ಷರದ ಉಚ್ಚಾರಣಾ ವೈವಿಧ್ಯ ಗೊತ್ತಾಗುತ್ತದೆ.[2]

ಶಾಸ್ತ್ರೀಯ ಹಿನ್ನೆಲೆ

ಇದು ಸಂಯುಕ್ತ ಸ್ವರ.

ಐ ಅಕ್ಷರ ಬೆಳೆದುಬಂದ ಇತಿಹಾಸ

ಬ್ರಾಹ್ಮಿ ಲಿಪಿಯಿಂದ ಅಕ್ಷರ ಕೆಳಗೆ ತೋರಿಸಿದಂತೆ ಬೆಳೆದು ಬಂದಿದೆ. [3]

ಸಂಧಿಕಾರ್ಯದಲ್ಲಿ ಕಾರ

ಅ’ಕಾರಗಳಿಗೆ ‘ಏ ಐ’ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ಐ’ಕಾರವೂ, ‘ಓ ಔ’ಕಾರಗಳು ಪರವಾದರೆ ಅವೆಡರ ಸ್ಥಾನದಲ್ಲಿ ‘ಔ’ಕಾರವೂ ಆದೇಶಗಳಾಗಿ ಬಂದರೆ ‘ವೃದ್ಧಿಸಂಧಿ’ ಯೆಂದು ಕರೆಯುವರು. ಪೂರ್ವಪದ+ಉತ್ತರಪದ = ವೃದ್ಧಿಸಂಧಿ ಪದ. (ಅ+ಏ=ಐ, ಅ+ಐ=ಐ; ಅ+ಓ=ಔ; ಆ+ಔ=ಔ)

  1. ಏಕೈಕ=ಏಕ+ಏಕ=ಏಕ್+ಐಕ – ಅ+ಏ=ಐ – ‘ಅ’ಕಾರಕ್ಕೆ ‘ಏ’ಕಾರ ಪರವಾಗಿ ‘ಐ’ಕಾರಾದೇಶ.
  2. ಅಷ್ಟೈಶ್ವರ್ಯ=ಅಷ್ಟ+ಐಶ್ವರ್ಯ=ಅಷ್ಟ್+ಐಶ್ವರ್ಯ – ಅ+ಐ=ಐ – ‘ಅ’ಕಾರಕ್ಕೆ ‘ಐ’ಕಾರ ಪರವಾಗಿ ‘ಐ’ಕಾರಾದೇಶ.
  3. ಲೋಕೈಕವೀರ=ಲೋಕ+ಏಕವೀರ, ಜನೈಕ್ಯ=ಜನ+ಐಕ್ಯ, ವಿದ್ಯೈಶ್ವರ್ಯ=ವಿದ್ಯಾ+ಐಶ್ವರ್ಯ, ಪೂರ್ವಪದದ ಕೊನೆಯಲ್ಲಿ ಎಲ್ಲ ಪದಗಳಲ್ಲೂ ‘ಅ’ ಅಥವಾ ‘ಆ’ ಸ್ವರಗಳಿವೆ. ಉತ್ತರಪದದ ಆರಂಭದಲ್ಲಿ ‘ಏ’, ‘ಐ’, ‘ಔ’ಕಾರಗಳು ಪರವಾಗಿವೆ. ‘ಏ’ ಅಥವಾ ‘ಐ’ ಪರವಾದಾಗ ಒಂದು ‘ಐ’ಕಾರವೂ ಆದೇಶಗಳಾಗಿ ಬರುತ್ತವೆ.

ಐ ಕನ್ನಡ ಅಕ್ಷರದ ಬರವಣಿಗೆ ಮತ್ತು ಉಚ್ಚಾರಣೆ ವಿಧಾನ

ಕನ್ನಡ ದೇವನಾಗರಿ ISO 15919 ಸಂಕೇತ ಬರೆಯುವ ವಿಧಾನ ಉಚ್ಚಾರಣೆ
ai

ಉಲ್ಲೇಖ

  1. ಕೇಶಿರಾಜನ ಶಬ್ದಮಣಿದರ್ಪಣಂ
  2. https://kn.wikisource.org/wiki/ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಐ
  3. ಕನ್ನಡ ಲಿಪಿ ಉಗಮ ಮತ್ತು ವಿಕಾಸ - ಡಾ. ಎ.ಎನ್ ನರಸಿಂಹಮೂರ್ತಿ. ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು.
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.