ಠ
ಠ, ಕನ್ನಡ ವರ್ಣಮಾಲೆಯ ಟ-ವರ್ಗದ ಎರಡನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ, ಮಹಾಪ್ರಾಣಾಕ್ಷರ.
|
ಚಾರಿತ್ರಿಕ ಹಿನ್ನೆಲೆ
ಅಶೋಕನ ಕಾಲದಿಂದ ಬಾದಾಮಿಯ ಚಾಳುಕ್ಯರವರೆಗಿನ ಕಾಲದಲ್ಲಿ ಕೇವಲ ಒಂದು ದೊಡ್ಡ ಸೊನ್ನೆಯಂತಿದ್ದ ಈ ಅಕ್ಷರಕ್ಕೆ ತಲೆಗಟ್ಟು ಬಂದುದು ಕಲ್ಯಾಣದ ಚಾಳುಕ್ಯರ ಕಾಲದಲ್ಲಿ. ಆಗಲೇ ಹೊಟ್ಟೆಯ ನಡುವಣ ಚುಕ್ಕೆಯೂ ಕಾಣಿಸಿಕೊಂಡಿತು. ಅಲ್ಲಿಂದ ಮುಂದೆ ಅದೇ ರೂಪ ಉಳಿದುಬಂದಿದೆ. ಈ ಅಕ್ಷರ ಅಘೋಷ ಸ್ಪರ್ಶ ಮೂಧ್ರ್ವನ್ಯ ಮಹಾಪ್ರಾಣ ಧ್ವನಿಯನ್ನು ಸೂಚಿಸುತ್ತದೆ.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.