, ಕನ್ನಡ ವರ್ಣಮಾಲೆಯ ಪ-ವರ್ಗದ ಐದನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ. ಓಷ್ಠ್ಯ ಅನುಸಾನಿಕ ಧ್ವನಿ

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ಅಂಅಃ
ವ್ಯಂಜನಗಳು
ಅವರ್ಗೀಯ ವ್ಯಂಜನಗಳು
ಹೊಸ ಅಕ್ಷರಗಳು
ಜ಼ಫ಼

ಚಾರಿತ್ರಿಕ ಹಿನ್ನೆಲೆ

ಅಶೋಕನ ಕಾಲದಲ್ಲಿ ಈ ಅಕ್ಷರ ಕನ್ನಡದ ನಾಲ್ಕು ಎಂಬ ಸಂಖ್ಯೆಯನ್ನು ಹೋಲುತ್ತಿತ್ತು. ಸಾತವಾಹನ ಕಾಲದಲ್ಲಿ ವೃತ್ತಾಕಾರ ತ್ರಿಕೋನಾಕಾರವಾಗಿ ಬದಲಾವಣೆ ಹೊಂದಿತು. ಕದಂಬರ ಕಾಲದಲ್ಲಿ ಆಯಾಕಾರವಾಗಿ ಪರಿವರ್ತಿತವಾಯಿತು. ಗಂಗರ ಕಾಲದಲ್ಲಿ ಆಯಾಕಾರ ಹೆಚ್ಚು ಅಗಲವಾಯಿತು. ರಾಷ್ಟ್ರಕೂಟರ ಕಾಲದಲ್ಲಿ ಈ ಆಕಾರ ಕೆಳಗೆ ವಿಭಾಗವಾಗಿ ಒಂದು ಡೊಂಕಾದ ರೇಖೆ ಬಳಕೆಗೆ ಬಂತು. ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಹೆಚ್ಚು ಅಭಿವೃದ್ಧಿಗೊಂಡು ಕೆಳಗಿನ ಆಯಾಕಾರ ಸ್ವಲ್ಪ ದುಂಡಾಗಿ ಪಾರ್ಶ್ವದ ರೇಖೆಯಿಂದ ಬೇರೆಯಾಯಿತು. ಇದು ಈಗಿನ ಬರವಣಿಗೆಯ ಸ್ವರೂಪವನ್ನು ಹೆಚ್ಚು ಹೋಲುತ್ತದೆ. ಇದೇ ರೂಪ ಹೊಯ್ಸಳ, ಸೇವುಣ ಮತ್ತು ಕಳಚೂರಿ ಕಾಲಗಳಲ್ಲಿ ಮುಂದುವರಿಯಿತು. ವಿಜಯನಗರ ಕಾಲದಲ್ಲಿ ಆಯಾಕಾರದ ಒಂದು ಭಾಗ ಮೊಟಕಾಯಿತು. ಇದಕ್ಕೆ ಮೈಸೂರು ಅರಸರ ಕಾಲದಲ್ಲಿ (18ನೆಯ ಶತಮಾನದಲ್ಲಿ) ಒಂದು ಸಣ್ಣಕೊಂಡಿ ಸೇರಿ ಇದೇ ರೂಪ ಮುಂದುವರಿಯಿತು.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.