ಊ
ಊ ಕನ್ನಡ ವರ್ಣಮಾಲೆಯ ಆರನೇ ಅಕ್ಷರವಾಗಿದೆ.ಇದು ಒಂದು ಸ್ವರಾಕ್ಷರ.
|

ಚಾರಿತ್ರಿಕ ಹಿನ್ನೆಲೆ
ಕನ್ನಡ ವರ್ಣಮಾಲೆಯಲ್ಲಿ ಆರನೆಯ ಅಕ್ಷರ. ಸ್ವರ. ಸ್ವತಂತ್ರವಾಗಿ ಪ್ರಾಚೀನ ಶಾಸನಗಳಲ್ಲಿ ದೊರಕುವುದು ಬಹು ವಿರಳ. ಆದುದರಿಂದ ವಿಕಾಸವನ್ನು ಗಮನಿಸುವುದು ಕಷ್ಟ. ವ್ಯಂಜನಗಳ ಜೊತೆಗೆ ಸೇರಿಕೊಂಡಾಗ ಎರಡು ಸಣ್ಣರೇಖೆಗಳನ್ನು ವ್ಯಂಜನದ ಕೆಳಗೆ ಇಲ್ಲವೇ ಪಕ್ಕದಲ್ಲಿ ಬರೆಯುವುದರಿಂದ ಇದು ಸೂಚಿತವಾಗುತ್ತಿತ್ತು. ಅಶೋಕನ ಕಾಲದ ಬ್ರಾಹ್ಮೀಲಿಪಿಯಲ್ಲಿ ಇದನ್ನು ಕಾಣಬಹುದು. ಕಾಲಕ್ರಮದಲ್ಲಿ ಎರಡು ಕೊಂಡಿಗಳನ್ನು ಅಕ್ಷರದ ಪಕ್ಕದಲ್ಲಿ ಬರೆಯುವ ಪ್ರವೃತ್ತಿ ರೂಢಿಸಿತು.[1]
ಶಾಸ್ತ್ರೀಯ ವಿವರ
ಈ ಅಕ್ಷರ ಪಶ್ಚಸಂವೃತ ಗೋಲ ದೀರ್ಘಸ್ವರಧ್ವನಿಯನ್ನು ಸೂಚಿಸುತ್ತದೆ.
ಸ್ವರಾಕ್ಷರಗಳು ಎಂದರೇನು ?
- ಸ್ವಯಂ ರಂಜತೇ ಇತಿಃ ಸ್ವರಃ - ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು.[2]
- ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್.
ಸಂಸ್ಕೃತದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ ೧೪ ಇವೆ. ಅವುಗಳೆಂದರೆ,
ದೀರ್ಘಸ್ವರ
ಎರಡು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು ೫ - ಆ, ಈ, ಊ, ೠ, ೡ. ಈ ಅಕ್ಷರಗಳನ್ನು ಗುರು(ವ್ಯಾಕರಣ) ಎಂದು ಕರೆಯುತ್ತಾರೆ. ಇವುಗಳಲ್ಲಿ ಈ ಅಕ್ಷರವೂ ಒಂದಾಗಿದೆ.
ಆ ಕನ್ನಡ ಅಕ್ಷರವನ್ನು ಬರೆಯುವ ಮತ್ತು ಉಚ್ಛರಿಸುವ ವಿಧಾನ
ಕನ್ನಡ | ದೇವನಾಗರಿ | ISO 15919 ಸಂಕೇತ | ಬರೆಯುವ ವಿಧಾನ | ಉಚ್ಚಾರಣೆ ವಿಧಾನ |
---|---|---|---|---|
ಊ | ऊ | ū | ![]() |
ಊ ದಿಂದ ಆರಂಭವಾಗುವ ನಾಮಪದಗಳು
- ಪ್ರಾಣಿ ಸಂಬಂಧಿ ಪದ : ಊದಾ ಕಾಡು ಕೋಳಿ
- ಮನುಷ್ಯ ಸಂಬಂಧಿ ಪದ : ಊರ್ಮಿಳಾ
- ಸಸ್ಯ ಸಂಬಂಧಿ ಪದ : ಊಸರವಳ್ಳಿ
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.