ಈ
ಈ ಕನ್ನಡ ವರ್ಣಮಾಲೆಯ ನಾಲ್ಕನೇ ಅಕ್ಷರವಾಗಿದೆ. ಇದು ಒಂದು ದೀರ್ಘಸ್ವರಾಕ್ಷರ. ಈ ಅಕ್ಷರವು ಒಂದು ಸ್ವತಂತ್ರ ಧ್ವನಿಮಾ.
|

ಚಾರಿತ್ರಿಕ ಹಿನ್ನೆಲೆ
ಕನ್ನಡ ವರ್ಣಮಾಲೆಯ ನಾಲ್ಕನೆಯ ಅಕ್ಷರ. ಬಳಕೆ ಅಪೂರ್ವವಾದ್ದರಿಂದ ಇದರ ಬ್ರಾಹ್ಮೀರೂಪ ಉಪಲಬ್ಧವಿಲ್ಲ. ಶಾತವಾಹನರ ಕಾಲದಲ್ಲಿ ಎರಡು ಚುಕ್ಕೆಗಳನ್ನೊಳಗೊಂಡಿದ್ದ ಇದರ ರೂಪ ರಾಷ್ಟ್ರಕೂಟರ ಕಾಲದಲ್ಲಿ ಸಾಕಷ್ಟು ಮಾರ್ಪಟ್ಟಿತು. ನಡುವಿದ್ದ ನೀಳಗೆರೆ ವೃತ್ತವಾಗುತ್ತಿರುವುದನ್ನು ಇಲ್ಲಿ ಗಮನಿಸಬಹುದು. ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಪಾಶ್ರ್ವದ ಬಿಂದುಗಳು ವೃತ್ತಕ್ಕೆ ಸೇರಿದಂತೆ ಎರಡು ವಕ್ರರೇಖೆಗಳಾದುವು. ಇದೇ ರೂಪ ಸೇವಣ ಮತ್ತು ಕಳಚೂರಿಗಳ ಕಾಲದಲ್ಲಿ ಮುಂದುವರಿಯಿತು. ವೃತ್ತದ ತಲೆಕಟ್ಟು ಸಿದ್ಧವಾಯಿತು. ವಿಜಯನಗರದ ಕಾಲದಲ್ಲಿ ನಡುವಿನ ಅಡ್ಡಗರೆ ವೃತ್ತದ ನಟ್ಟ ನಡುವೆ ಹಾಯುವುದನ್ನು ಕಾಣಬಹುದು. ಹದಿನೆಂಟನೆಯ ಶತಮಾನದ ಮೈಸೂರು ಅರಸರ ಕಾಲದಲ್ಲಿ ಅಕ್ಷರಕ್ಕೆ ಈಗಿನ ರೂಪ ಬಂದಿತಾದರೂ ನಡುವಿನ ಅಡ್ಡಗೆರೆಯ ತುದಿಯಲ್ಲಿರುವ ಕೊಂಡಿ ಸ್ವಲ್ಪ ಭಿನ್ನವಾಗಿತ್ತು. ಕಾಲ ಕ್ರಮೇಣ ಅಕ್ಷರಕ್ಕೆ ಈಗಿನ ರೂಪಬಂತು.[1]
ಭಾಷಾವಿಜ್ಞಾನದ ವಿವರಣೆ
ಈ ಅಕ್ಷರ ಪೂರ್ವ-ಸಂವೃತ ಅಗೋಳ ದೀರ್ಘಸ್ವರವನ್ನು ಸೂಚಿಸುತ್ತದೆ.
ಸ್ವರಾಕ್ಷರಗಳು ಎಂದರೇನು ?
- ಸ್ವಯಂ ರಂಜತೇ ಇತಿಃ ಸ್ವರಃ - ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು.[2]
- ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್.
ಸಂಸ್ಕೃತದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ ೧೪ ಇವೆ. ಅವುಗಳೆಂದರೆ,
ಹೃಸ್ವಸ್ವರ
ಎರಡು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು ೫ - ಆ, ಈ, ಊ, ೠ, ೡ. ಈ ಅಕ್ಷರಗಳನ್ನು ಗುರು(ವ್ಯಾಕರಣ) ಎಂದು ಕರೆಯುತ್ತಾರೆ. ಇವುಗಳಲ್ಲಿ ಈ ಅಕ್ಷರವೂ ಒಂದಾಗಿದೆ.
ಈ ಕನ್ನಡ ಅಕ್ಷರವನ್ನು ಬರೆಯುವ ಮತ್ತು ಉಚ್ಛರಿಸುವ ವಿಧಾನ
ಕನ್ನಡ | ದೇವನಾಗರಿ | ISO 15919 ಸಂಕೇತ | ಬರೆಯುವ ವಿಧಾನ | ಉಚ್ಚಾರಣೆ ವಿಧಾನ |
---|---|---|---|---|
ಈ | ई | ī | ![]() |
ಈ ದಿಂದ ಆರಂಭವಾಗುವ ನಾಮಪದಗಳು
ಈ ಅಕ್ಷರದಿಂದ ಆರಂಭವಾಗುವ ಸಂಖ್ಯಾವಚಿ ಪದಗಳು
- ಈರೇಳು