ಭಾರತ

ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು: ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (2018 ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ, ನೈಋತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು , ಪಶ್ಚಿಮದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ಚೀನಾ,ನೇಪಾಳ,ಭೂತಾನ , ಪೂರ್ವದಲ್ಲಿ ಬರ್ಮಾ, ಬಾಂಗ್ಲಾದೇಶ ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಕೊಳ್ಳುವ ಶಕ್ತಿಯ ಮೇರೆಗೆ, ಪ್ರಪಂಚದ ನಾಲ್ಕನೇ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ. ಭಾರತ ದೇಶವು ಪ್ರಾಚೀನ ಸಿಂಧೂತಟದ ನಾಗರೀಕತೆಯ ತವರು ಮನೆಯಾಗಿದೆ. ಅನೇಕ ಐತಿಹಾಸಿಕ ವಾಣಿಜ್ಯ ಮಾರ್ಗಗಳು ಹಾಗೂ ಪ್ರಾಚೀನ ಸಾಮ್ರಾಜ್ಯಗಳು ಭಾರತ ದೇಶದಲ್ಲಿ ಉಗಮಿಸಿವೆ. ಪ್ರಪಂಚದ ನಾಲ್ಕು ಪ್ರಮುಖ ಧರ್ಮಗಳಾದ ಹಿಂದೂಧರ್ಮ, ಬೌದ್ಧ, ಜೈನ್ ಧರ್ಮ ಮತ್ತು ಸಿಖ್ ಧರ್ಮಗಳು ಭಾರತದಲ್ಲಿ ಆರಂಭವಾಗಿವೆ. ಝೋ ರಾಷ್ಟ್ರಿಯನಿಸಂ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮ ಕ್ರಿ. ಶ 7 ನೇ ಸಹಸ್ರಮಾನದಲ್ಲಿ ಆಗಮಿಸಿ ಈ ಪ್ರದೇಶದ ಸಂಸ್ಕೃತಿಯನ್ನು ವೈವಿಧ್ಯಮಯವಾಗಿಸಿವೆ. 16ನೇ ಶತಮಾನದಲ್ಲಿ ಭಾರತ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯಿಂದ ಆಕ್ರಮಣಗೊಂಡು ಇಂಗ್ಲೇಂಡಿನ ಆಡಳಿತಕ್ಕೊಳಪಟ್ಟಿತು. ೧೯ನೇ ಶತಮಾನದ ಮಧ್ಯದಲ್ಲಿ ಭಾರತ ಅನೇಕ ಸ್ವಾತಂತ್ರ್ಯ ಹೋರಾಟದ ಫಲವಾಗಿ ಬ್ರಿಟೀಷರಿಂದ ಸ್ವತಂತ್ರವಾಯಿತು.

ಭಾರತ ಗಣರಾಜ್ಯ
ಧ್ವಜ ಭಾರತದ ರಾಷ್ಟ್ರೀಯ ಚಿಹ್ನೆ
ಧ್ಯೇಯ: "ಸತ್ಯಮೇವ ಜಯತೇ" (ಸಂಸ್ಕೃತ)
"ಸತ್ಯವೇ ಜಯಿಸುತ್ತದೆ"[1]
ರಾಷ್ಟ್ರಗೀತೆ: ಜನ ಗಣ ಮನ[2]

Location of ಭಾರತ

ರಾಜಧಾನಿ ನವದೆಹಲಿ
ಭಾರತದ ರಾಜ್ಯಸ್ಥಳಗಳು

) 28°34′N 77°12′E
ಅತ್ಯಂತ ದೊಡ್ಡ ನಗರ ಮುಂಬಯಿ
ಅಧಿಕೃತ ಭಾಷೆ(ಗಳು) ಭಾರತ ಸಂವಿಧಾನದಲ್ಲಿ ಗುರುತಿಸಿದ ಅಧಿಕೃತ ಭಾರತೀಯ ಭಾಷೆಗಳು
ಸರಕಾರ ಸಂಯುಕ್ತ ಗಣತಂತ್ರ
ಸಂಸದೀಯ ಪ್ರಜಾತಂತ್ರ[3]
 - ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್
 - ಭಾರತದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು
 - ಪ್ರಧಾನಮಂತ್ರಿ ನರೇಂದ್ರ ಮೋದಿ
 - ಮುಖ್ಯ ನ್ಯಾಯಾಧೀಶ ರಂಜನ್ ಗೋಗೊಯ್
ಸ್ವಾತಂತ್ರ ಯುನೈಟೆಡ್ ಕಿಂಗ್‌ಡಂನಿಂದ 
 - ಘೋಷಿತ೧೫ ಆಗಸ್ಟ್ ೧೯೪೭ 
 - ಗಣರಾಜ್ಯ೨೬ ಜನವರಿ ೧೯೫೦ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ32,87,263 ಚದರ ಕಿಮಿ ;  (೭ನೆಯ)
 1,269,210 ಚದರ ಮೈಲಿ 
 - ನೀರು (%)9.56
ಜನಸಂಖ್ಯೆ  
 - ೨೦೧೬ರ ಅಂದಾಜು1,324,171,354 (೨ನೆಯ)
 - ೨೦೧೧ರ ಜನಗಣತಿ 1,210,854,977[4]
 - ಸಾಂದ್ರತೆ 398 /ಚದರ ಕಿಮಿ ;  (೩೧ನೆಯ)
1030.8 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೧೮ರ ಅಂದಾಜು
 - ಒಟ್ಟು$10.385 ಟ್ರಿಲಿಯನ್[5] ()
 - ತಲಾ$7,783 (೧೧೬)
ಮಾನವ ಅಭಿವೃದ್ಧಿ
ಸೂಚಿಕ
(2015)
0.624 (131)  ಮಧ್ಯಮ
ಕರೆನ್ಸಿ ಭಾರತದ ರೂಪಾಯಿ (Rp) (INR)
ಸಮಯ ವಲಯ IST (UTC+5:30)
 - ಬೇಸಿಗೆ (DST) ಆಚರಣೆಯಲ್ಲಿ ಇಲ್ಲ (UTC+5:30)
ಅಂತರ್ಜಾಲ TLD .in
ದೂರವಾಣಿ ಕೋಡ್ +91

ಹೆಸರಿನ ಉಗಮ

ಭಾರತ ಎಂಬ ಹೆಸರು "ಭರತವರ್ಷ" ಎಂಬ ಹೆಸರಿನಿಂದ ಉಗಮಗೊಂಡದ್ದು. ಪುರಾತನ ಪೌರಾಣಿಕ ಆಕರಗಳಿಂದಲೂ ಈ ಹೆಸರು ಭಾರತಕ್ಕೆ ಸೂಚಿತವಾಗಿದೆ. ಋಷಭದೇವನ ಮಗ ಭರತ ಚಕ್ರವರ್ತಿಯಿಂದ ಅಥವಾ ಮಹಾರಾಜ ದುಶ್ಯಂತನ ಪುತ್ರನಾದ ಭರತ ಮಹಾರಾಜನ ಹೆಸರಿನಿಂದ ಬಂದದ್ದು. "ಇಂಡಿಯಾ" ಎಂಬ ಹೆಸರು ಸಿಂಧೂ ನದಿಯ ಇದರ ಪರ್ಷಿಯನ್ ರೂಪಾಂತರ "ಇಂಡಸ್" ಎಂಬುದರಿಂದ ಬಂದದ್ದು. ಭಾರತವನ್ನು ನಿರ್ದೇಶಿಸಲು ಉಪಯೋಗಿಸಲಾಗಿರುವ ಇತರ ಹೆಸರುಗಳಲ್ಲಿ ಒಂದು ಹಿಂದುಸ್ತಾನ ಕೂಡ ಒಂದು.

ಚರಿತ್ರೆ

ಭಾರತದಲ್ಲಿ ಜನವಸತಿಯ ಮೊದಲ ಕುರುಹುಗಳೆಂದರೆ ಈಗಿನ ಮಧ್ಯ ಪ್ರದೇಶ ರಾಜ್ಯದ ಬಿಂಭೇಟ್ಕಾದಲ್ಲಿ ದೊರೆತಿರುವ ಶಿಲಾಯುಗದ ಪಳೆಯುಳಿಕೆಗಳು. ಸುಮಾರು ೯೦೦೦ ವರ್ಷಗಳ ಹಿಂದೆ ನಾಗರೀಕತೆಯ ಕುರುಹುಗಳು ಕಂಡು ಬಂದು ಕ್ರಿ.ಪೂ ೨೬೦೦ ರಿಂದ ಕ್ರಿ.ಪೂ. ೧೯೦೦ ರ ವರೆಗೆ ಸಿಂಧೂ ಕಣಿವೆ ನಾಗರೀಕತೆ ಅಸ್ತಿತ್ವದಲ್ಲಿತ್ತು. ನಂತರ ವೇದಗಳನ್ನು ಆಧರಿಸಿ ಹಿಂದೂ ಧರ್ಮ ಬೆಳೆಯಿತು. ಆ ಸಂದರ್ಭದಲ್ಲಿ ಬೌದ್ಧ ಧರ್ಮ ಮತ್ತು ಜೈನ ಧರ್ಮಗಳು ಸಹ ಉಗಮಗೊಂಡವು. ಕ್ರಿ.ಪೂ ೫೦೦ ರ ನಂತರ ಅನೇಕ ಸ್ವತಂತ್ರ ರಾಜ್ಯಗಳು ತಲೆಯೆತ್ತಲಾರಂಭಿಸಿದವು. ಮೌರ್ಯ ಸಾಮ್ರಾಜ್ಯ ಭಾರತವನ್ನು ಸರಿ ಸುಮಾರಾಗಿ ಒಗ್ಗೂಡಿಸಿದ ಮೊದಲ ಸಾಮ್ರಾಜ್ಯ. ನಂತರ ಗುಪ್ತ ಸಾಮ್ರಾಜ್ಯ ಭಾರತದ "ಸುವರ್ಣ ಯುಗ"ದಲ್ಲಿ ಆಡಳಿತ ನಡೆಸಿತು. ಈ ಕಾಲದಲ್ಲಿ ಸಾಹಿತ್ಯ, ವಿಜ್ಞಾನ, ತತ್ವಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಭಾರತ ಸಾಧಿಸಿತು. ಎರಡನೆಯ ಸಹಸ್ರಮಾನದ ಆರಂಭದಲ್ಲಿ ಅನೇಕ ಮುಸ್ಲಿಮ್ ರಾಜರ ದಾಳಿ ಆರಂಭವಾಗಿ ೧೨ ನೆಯ ಶತಮಾನದಿಂದ ಮುಂದಕ್ಕೆ ಉತ್ತರ ಭಾರತದ ಅನೇಕ ಭಾಗಗಳು ಮತ್ತು ದಕ್ಷಿಣ ಭಾರತದ ಕೆಲ ಭಾಗಗಳು ಮುಸ್ಲಿಮ್ ಆಡಳಿತಕ್ಕೆ ಒಳಪಟ್ಟವು. (ಉದಾಹರಣೆಗೆ ದೆಹಲಿ ಸುಲ್ತಾನೇಟ್, ಬಹಮನಿ ಸುಲ್ತಾನರು, ಮೊಘಲ್ ಸಾಮ್ರಾಜ್ಯ). ೧೭ ನೆಯ ಶತಮಾನದಿಂದ ಮುಂದಕ್ಕೆ ಪೋರ್ಚುಗೀಸ್, ಫ್ರೆಂಚ್ ಮತ್ತು ಬ್ರಿಟಿಷ್ ವ್ಯಾಪಾರಿಗಳು ಭಾರತಕ್ಕೆ ಬರಲಾರಂಭಿಸಿದರು. ಹಂಚಿಹೋಗಿದ್ದ ಭಾರತದ ರಾಜಕೀಯ ಪರಿಸ್ಥಿತಿಯ ಲಾಭ ಪಡೆದು ಭಾರತದ ಅನೇಕ ಪ್ರದೇಶಗಳನ್ನು ಇವರು ವಶಪಡಿಸಿಕೊಳ್ಳಲಾರಂಭಿಸಿದರು. ಎಲ್ಲರಿಗಿಂತ ಪ್ರಬಲವಾಗಿ ಬೆಳೆದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಹೆಚ್ಚು ಕಡಿಮೆ ಸಂಪೂರ್ಣ ಭಾರತದ ಮೇಲೆ ಅಧಿಪತ್ಯ ಸ್ಥಾಪಿಸಿತು. ೧೮೫೭ ರಲ್ಲಿ ಭಾರತದ ಅನೇಕ ರಾಜ್ಯಗಳು ಬ್ರಿಟಿಷರ ವಿರುದ್ಧ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡವು. ಇದರ ನಂತರ ನೇರ ಬ್ರಿಟಿಷ್ ಆಡಳಿತಕ್ಕೆ ಭಾರತ ಸಾಗಿತು. ಸ್ವಲ್ಪ ಕಾಲದಲ್ಲಿಯೇ ಭಾರತ ಸ್ವಾತಂತ್ರ್ಯ ಚಳುವಳಿ ಆರಂಭವಾಗಿ ಆಗಸ್ಟ್ ೧೫, ೧೯೪೭ ರಲ್ಲಿ ಭಾರತ ಸ್ವಾತಂತ್ರ್ಯ ಪಡೆಯಿತು. ಸ್ವಾತಂತ್ರ್ಯಾ ನಂತರ ನೆರೆಯ ದೇಶಗಳೊಂದಿಗೆ ಒಟ್ಟು ನಾಲ್ಕು ಯುದ್ಧಗಳು ನಡೆದಿವೆ. ೧೯೭೪ ರಲ್ಲಿ ಭಾರತ ಅಣುಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಪಡೆಯಿತು. ೧೯೭೫ ರಿಂದ ೭೭ ರ ವರೆಗೆ ಇಂದಿರಾ ಗಾಂಧಿಯವರ ಸರ್ಕಾರದಲ್ಲಿ ತುರ್ತು ಪರಿಸ್ಥಿತಿ ಏರ್ಪಟ್ಟಿತ್ತು. ೯೦ ರ ದಶಕದಿಂದ ಆರ್ಥಿಕ ಉದಾರೀಕರಣ ನೀತಿಯನ್ನು ಭಾರತ ಪಾಲಿಸುತ್ತಾ ಬಂದಿದೆ.

== ಭಾರತ ಸರ್ಕಾರದ ಮತ್ತು ರಾಜಕೀಯ ಭಾಗ 2 ==

ಭೂಗೋಳ

ಭಾರತದ ಭೌಗೋಳಿಕ ಭಾಗಗಳಲ್ಲಿ ಮುಖ್ಯವಾದವು:

ಭಾರತದಲ್ಲಿ ಹರಿಯುವ ಮುಖ್ಯವಾದ ನದಿಗಳಲ್ಲಿ ಕೆಲವೆಂದರೆ ಸಿಂಧೂ, ಗಂಗಾ, ಬ್ರಹ್ಮಪುತ್ರ, ಯಮುನಾ, ನರ್ಮದಾ, ಗೋದಾವರಿ, ಕೃಷ್ಣಾ, ಕಾವೇರಿ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು

ಭಾರತ ಗಣರಾಜ್ಯದ ರಾಷ್ಟ್ರೀಯ ಚಿಹ್ನೆಗಳು (ಅಧಿಕೃತ)
ರಾಷ್ಟ್ರೀಯ ಪ್ರಾಣಿ ಹುಲಿ
ರಾಷ್ಟ್ರೀಯ ಹಕ್ಕಿ ನವಿಲು
ರಾಷ್ಟ್ರೀಯ ಪರಂಪರೆ ಪ್ರಾಣಿ ಆನೆ
ರಾಷ್ಟ್ರೀಯ ಮರ ಆಲದ ಮರ
ರಾಷ್ಟ್ರೀಯ ಪುಷ್ಪ ಕಮಲ
ರಾಷ್ಟ್ರೀಯ ಈಜು ಕಡಲ ಸಸ್ತನಿ ಡಾಲ್ಫಿನ್
ರಾಷ್ಟ್ರೀಯ ಸರೀಸೃಪ ಕಾಳಿಂಗ ಸರ್ಪ
ರಾಷ್ಟ್ರೀಯ ಪರಂಪರೆ ಸಸ್ತನಿ ಹನುಮಾನ್ ಲಂಗೂರ್
ರಾಷ್ಟ್ರೀಯ ಹಣ್ಣು ಮಾವು
ರಾಷ್ಟ್ರೀಯ ನದಿ ಗಂಗಾ
ಭಾರತದ ನಕ್ಷೆ
ಭಾರತದ ರಾಜ್ಯಗಳು

ಭಾರತವನ್ನು ಕೆಳಗಿನ ಮುಖ್ಯ ಭಾಗಗಳಾಗಿ ವಿಂಗಡಿಸಲಾಗಿದೆ:

  • 28 ರಾಜ್ಯಗಳು
  • 9 ಕೇಂದ್ರಾಡಳಿತ ಪ್ರದೇಶಗಳು
  • ರಾಷ್ಟ್ರೀಯ ರಾಜಧಾನಿ: ನವದೆಹಲಿ

ರಾಜ್ಯಗಳು

  1. ಆಂಧ್ರ ಪ್ರದೇಶ
  2. ಅರುಣಾಚಲ ಪ್ರದೇಶ
  3. ಅಸ್ಸಾಂ
  4. ಬಿಹಾರ
  5. ಛತ್ತೀಸ್‌ಘಡ್
  6. ಗೋವ
  7. ಗುಜರಾತ್
  8. ಹರಿಯಾಣ
  9. ಹಿಮಾಚಲ ಪ್ರದೇಶ
  10. ಜಾರ್ಖಂಡ್
  11. ಕರ್ನಾಟಕ
  12. ಕೇರಳ
  13. ಮಧ್ಯ ಪ್ರದೇಶ
  14. ಮಹಾರಾಷ್ಟ್ರ
  1. ಮಣಿಪುರ
  2. ಮೇಘಾಲಯ
  3. ಮಿಝೋರಂ
  4. ನಾಗಲ್ಯಂಡ್
  5. ಒಡಿಶಾ
  6. ಪಂಜಾಬ್
  7. ರಾಜಸ್ಥಾನ
  8. ಸಿಕ್ಕಿಂ
  9. ತಮಿಳುನಾಡು
  10. ತೆಲಂಗಾಣ
  11. ತ್ರಿಪುರ
  12. ಉತ್ತರಾಖಂಡ
  13. ಉತ್ತರ ಪ್ರದೇಶ
  14. ಪಶ್ಚಿಮ ಬಂಗಾಳ

ಕೇಂದ್ರಾಡಳಿತ ಪ್ರದೇಶಗಳು:

  1. ಅಂಡಮಾನ್ ಮತ್ತು ನಿಕೋಬಾರ್
  2. ಚಂಡೀಗಢ
  3. ಡಾಮನ್ ಮತ್ತು ಡಿಯು
  4. ದಾದ್ರಾ ಮತ್ತು ನಗರ್ ಹವೇಲಿ
  5. ಪುದುಚೇರಿ
  6. ಲಕ್ಷದ್ವೀಪ
  7. ನವದೆಹಲಿ
  8. ಲಡಾಖ್
  9. ಜಮ್ಮು ಮತ್ತು ಕಾಶ್ಮೀರ

ಆರ್ಥಿಕ ವ್ಯವಸ್ಥೆ

ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯನ್ನು ಭಾರತ ಹೊಂದಿದ್ದು,[7] ಒಟ್ಟು ರಾಷ್ಟ್ರೀಯ ಉತ್ಪಾದನೆಯ ದೃಷ್ಟಿಯಿಂದ ಪ್ರಪಂಚದಲ್ಲಿ ಹನ್ನೆರಡನೆಯ ಸ್ಥಾನವನ್ನು ಹೊಂದಿದೆ. ಕೊಳ್ಳುವ ಶಕ್ತಿಯ ಮೇರೆಗೆ ಮೂರನೆ ಸ್ಥಾನವನ್ನು ಹೊಂದಿದೆ. ಆದರೆ ಭಾರತದ ಜನಸಂಖ್ಯೆಯನ್ನು ಗಮನಿಸಿ ಸರಾಸರಿ ಒಬ್ಬ ವ್ಯಕ್ತಿಯ ಆದಾಯ ಸುಮಾರು ವರ್ಷಕ್ಕೆ ೧೧,೦೦೦ ರೂಪಾಯಿಗಳಷ್ಟು. ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಬೆಳೆದ ನಂತರ ಭಾರತೀಯ ಮಧ್ಯಮ ವರ್ಗ ಹೆಚ್ಚುತ್ತಾ ಬಂದಿದೆ. ಭಾರತದ ಮುಖ್ಯ ವೃತ್ತಿಗಳಲ್ಲಿ ಕೆಲವೆಂದರೆ ಕೃಷಿ, ಬಟ್ಟೆಗಳ ತಯಾರಿಕೆ, ಪೆಟ್ರೋಲಿಯಮ್ ಉತ್ಪನ್ನಗಳು, ಮಾಹಿತಿ ತಂತ್ರಜ್ಞಾನ, ಚಲನ ಚಿತ್ರಗಳು ಹಾಗೂ ಕುಶಲ ಕೈಗಾರಿಕೆ. ವಾರ್ಷಿಕವಾಗಿ ಸುಮಾರು ೨೦ ಲಕ್ಷ ಅಂತರರಾಷ್ಟ್ರೀಯ ಪ್ರವಾಸಿಗಳು ಭಾರತಕ್ಕೆ ಬರುತ್ತಾರೆ. ಭಾರತದೊಂದಿಗೆ ಹೆಚ್ಚಾಗಿ ಅಂತಾರಾಷ್ಟ್ರೀಯ ವ್ಯಾಪಾರ ನಡೆಸುವ ದೇಶ-ಸಂಸ್ಥೆಗಳೆಂದರೆ ಅಮೆರಿಕದ ಸಂಯುಕ್ತ ಸಂಸ್ಥಾನ, ರಷ್ಯಾ, ಯುರೋಪಿಯನ್ ಒಕ್ಕೂಟ, ಚೀನಾ ಮತ್ತು ಜಪಾನ್.

ಜನಸಂಖ್ಯಾ ಅಂಕಿ ಅಂಶಗಳು

ಭಾರತ ಪ್ರಪಂಚದಲ್ಲಿ ಎರಡನೆ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಭಾರತೀಯ ಸಮಾಜದಲ್ಲಿ ಭಾಷೆ, ಧರ್ಮ, ಜಾತಿ ಮೊದಲಾದ ಅನೇಕ ಅಂಶಗಳು ವಿವಿಧ ಪಾತ್ರಗಳನ್ನು ವಹಿಸುತ್ತವೆ. ಭಾರತದ ಅತಿ ದೊಡ್ಡ ನಗರಗಳೆಂದರೆ ಮುಂಬಯಿ, ದೆಹಲಿ, ಬೆಂಗಳೂರು, ಕೋಲ್ಕತ್ತ ಮತ್ತು ಚೆನೈ ಭಾರತದ ಸಾಕ್ಷರತಾ ಪ್ರಮಾಣ ಶೇ. ೬೪.೮. ಧರ್ಮದ ದೃಷ್ಟಿಯಿಂದ, ಜನಸಂಖ್ಯೆಯ ವಿಂಗಡಣೆ ಹೀಗಿದೆ: ಹಿಂದೂ (೮೦.೫ %), ಮುಸ್ಲಿಮ್ (೧೩.೪ %), ಕ್ರೈಸ್ತ (೨.೩೩ %), ಸಿಖ್ (೧.೮೪ %), ಬೌದ್ಧ (೦.೭೬ %), ಜೈನ (೦.೪ %). ಭಾರತದಲ್ಲಿರುವ ಇತರ ಧಾರ್ಮಿಕ ವರ್ಗಗಳಲ್ಲಿ ಕೆಲವೆಂದರೆ ಯಹೂದಿ, ಪಾರ್ಸಿ, ಅಹ್ಮದಿ ಮತ್ತು ಬಹಾ-ಈ. ಭಾರತದಲ್ಲಿರುವ ಎರಡು ಮುಖ್ಯ ಭಾಷಾ ಬಳಗಗಳೆಂದರೆ ಉತ್ತರ ಭಾರತದ ಇಂಡೋ-ಆರ್ಯನ್ ಭಾಷಾ ಬಳಗ ಮತ್ತು ದಕ್ಷಿಣ ಭಾರತದ ದ್ರಾವಿಡ ಭಾಷಾ ಬಳಗ. ಭಾರತ ೨೨ ಅಧಿಕೃತ ಭಾಷೆಗಳನ್ನು ಹೊಂದಿದೆ.

೧೯೦೧ ಮತ್ತು ನಂತರದ ಗಣತಿ


1901 ಮತ್ತು ನಂತರದ ಜನಗಣತಿ

ಇಸವಿಒಟ್ಟು ಜನಸಂಖ್ಯೆಗ್ರಾಮೀಣನಗರ :ಶೇಕಡವಾರು ಜನಸಂಖ್ಯೆಯ ದರ ಏರಿಕೆ
1901238,396,327212,544,45425,851,573
1911252,093,390226,151,75725,941,633
1921251,351,213-223,235,043-28,086,170
1931278,977,238245,521,24933,455,686
1941318,660,580275,507,28344,153,297
1951362,088,090-298,644,381-62,443,709
1961439,234,771360,298,168-78,936,60321.6%
1971548,159,652439,045,675109,113,67724.8%
1981683,329,097623,866,550-159,462,54724.7%
1991846,302,688628,691,676217,611,01223.9%
20011,028737,436742,490,639386,119,68921.5%
20111,21,01,93,42283,30,87,66237,71,05,76017.6%//68.84 ಗ್ರಾಮ //31.16ನಗರ
20111,21,01,93,42262,37,24,248; ಪುರುಷರು58,64,69,174 ಮಹಿಳೆಯರು1000 ಪುರುಷರಿಗೆ

943-ಮಹಿಳೆಯರು

2011 ಜನಗಣತಿಯ ಅಂಕಿಅಂಶಗಳು

ಇಸವಿಒಟ್ಟು ಜನಸಂಖ್ಯೆಏರಿಕೆ
20111,210,193,42217.6%

ಜನಸಂಖ್ಯೆಯ ಬೆಳವಣಿಗೆ ಮತ್ತು ಹೋಲಿಕೆ


  • ಇದು ಜನಸಂಖ್ಯಾ ವಿವರ ಮತ್ತು ಹೋಲಿಕೆ :
  • 1947 ರಲ್ಲಿ ಭಾರತ ವಿಭಜನೆ ಗೊಂಡಾಗ ವಿಭಜಿತ ಭಾರತದ ಜನಸಂಖ್ಯೆ ಕೇವಲ 350 ಮಿಲಿಯನ್. (35 ಕೋಟಿ) 1947 ಪೂರ್ವ ಪಾಕಿಸ್ತಾನ 4.26 ಮಿಲಿಯನ್ +3.40ಮಿ ಪಶ್ಚಿಮ ಪಾಕಿಸ್ತಾನ =(7ಕೋಟಿ 66 ಲಕ್ಷ)
  • 1947 ರಲ್ಲಿ ಜನಸಂಖ್ಯೆ ಪಶ್ಚಿಮ + ಪೂರ್ವ ಪಾಕಿಸ್ತಾನ :76 ಮಿಲಿಯನ್ ಪಶ್ಚಿಮ ಪಾಕಿಸ್ತಾನ 3400000 ಪೂರ್ವ ಪಾಕಿಸ್ತಾನ 42600000
  • 1967 ರಲ್ಲಿ ಜನಸಂಖ್ಯೆ ಪಶ್ಚಿಮ + ಪೂರ್ವ ಪಾಕಿಸ್ತಾನ :94 ಮಿಲಿಯನ್ ಪಶ್ಚಿಮ ಪಾಕಿಸ್ತಾನ 43000000 ಪೂರ್ವ ಪಾಕಿಸ್ತಾನ 51000000
  • 2011 / 2012 ರಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಒಟ್ಟು ಜನಸಂಖ್ಯೆ 331 ಮಿಲಿಯನ್ :(33 ಕೋಟಿ 10ಲಕ್ಷ )
  • ಪಶ್ಚಿಮ ಪಾಕಿಸ್ತಾನ (170,000000) 180440005; ಬಾಂಗ್ಲಾದೇಶ (ಹಿಂದಿನ ಪೂರ್ವ ಪಾಕಿಸ್ತಾನ) 161,083,804/ 161083804
  • 1947ವಿಭಜಿತ ಭಾರತದ ಜನಸಂಖ್ಯೆ 350,000,000 (35ಕೋಟಿ)
  • 2011 (ವಿಭಜಿತ) ಈಗಿನ ಭಾರತದ ಜನಸಂಖ್ಯೆ 121,01,93,422 (121 ಕೋಟಿ).

ದೇಶದ ಮೂರನೇ ಸಿರಿವಂತ ನಗರ

  • 27 Feb, 2017
  • ಭಾರತದ ಅತ್ಯಂತ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೂರನೇ ಸ್ಥಾನ ಪಡೆದಿದೆ. ದೇಶದ ಅತ್ಯಂತ ಶ್ರೀಮಂತ ನಗರ ಎಂಬ ಹೆಗ್ಗಳಿಕೆಗೆ ವಾಣಿಜ್ಯ ನಗರಿ ಮುಂಬೈ ಪಾತ್ರವಾಗಿದ್ದರೆ, ದೆಹಲಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
  • ಮುಂಬೈನ ಸಂಪತ್ತಿನ ಮೊತ್ತ ರೂ.54.6 ಲಕ್ಷ ಕೋಟಿ. ಇನ್ನು ದೆಹಲಿ ಮತ್ತು ಬೆಂಗಳೂರಿನ ಸಂಪತ್ತು ಕ್ರಮವಾಗಿ ರೂ.29.9 ಲಕ್ಷ ಕೋಟಿ ಮತ್ತು ರೂ.21.3 ಲಕ್ಷ ಕೋಟಿಯಷ್ಟಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ, ನ್ಯೂ ವರ್ಲ್ಡ್‌ ವೆಲ್ತ್‌ ಬಿಡುಗಡೆ ಮಾಡಿರುವ 2016ನೇ ಸಾಲಿನ ವರದಿಯಲ್ಲಿ ಈ ಮಾಹಿತಿ ಇದೆ.

ವಲಸೆ

  • ಸ್ವದೇಶದಿಂದ ವಲಸೆ ಹೋಗುತ್ತಿರುವ ಸಿರಿವಂತರ ಸಂಖ್ಯೆಯಲ್ಲಿ ಭಾರಿ ಏರಿಕೆ ಆಗಿದೆ. 2016ರಲ್ಲಿ ವಿಶ್ವದಾದ್ಯಂತ 82 ಸಾವಿರ, ಅತಿ ಸಿರಿವಂತರು ವಲಸೆ ಹೋಗಿದ್ದಾರೆ. ಈ ರೀತಿ ಅತಿ ಹೆಚ್ಚು ವಲಸೆ ಹೋದ ಮೊದಲ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಇದೆ.
  • ಈ ಸಾಲಿನಲ್ಲಿ ಒಟ್ಟು 6 ಸಾವಿರ ಸಿರಿವಂತರು ತಮ್ಮ ವಾಸ್ತವ್ಯವನ್ನು ಭಾರತದಿಂದ ಬೇರೆ ದೇಶಗಳಿಗೆ ಬದಲಿಸಿದ್ದಾರೆ. 2015ನೇ ಸಾಲಿನಲ್ಲಿ ಹೀಗೆ ವಲಸೆ ಹೋದವರ ಸಂಖ್ಯೆ 4 ಸಾವಿರ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2016ರಲ್ಲಿ ವಲಸೆ ಹೋದ ಸಿರಿವಂತರ ಸಂಖ್ಯೆಯಲ್ಲಿ ಶೇ 50 ರಷ್ಟು ಹೆಚ್ಚಳವಾಗಿದೆ.

ಶತ ಕೋಟ್ಯಧಿಪತಿಗಳು

  • 10 ಲಕ್ಷ ಅಮೆರಿಕನ್ ಡಾಲರ್‌ನಿಂದ 100 ಕೋಟಿ ಅಮೆರಿಕನ್ ಡಾಲರ್‌ವರೆಗೆ (ಸುಮಾರು ₹ 6.6 ಕೋಟಿಯಿಂದ ₹ 6.6 ಸಾವಿರ ಕೋಟಿ) ಸಂಪತ್ತು ಹೊಂದಿರುವವರನ್ನು ಮಿಲಿಯನೇರ್ ಅಥವಾ ಶತ ಕೋಟ್ಯಧಿಪತಿ ಎಂದು ನ್ಯೂ ವರ್ಲ್ಡ್‌ ವೆಲ್ತ್‌ ವರದಿಯಲ್ಲಿ ಪರಿಗಣಿಸಲಾಗಿದೆ. 100 ಕೋಟಿ ಅಮರಿಕನ್‌ ಡಾಲರ್‌ಗಿಂತ (ಸು. ₹ 6.6 ಸಾವಿರ ಕೋಟಿ) ಹೆಚ್ಚು ಸಂಪತ್ತು ಇದ್ದವರನ್ನು ಬಿಲಿಯನೇರ್‌ ಅಥವಾ ಸಹಸ್ರ ಕೋಟ್ಯಾಧಿಪತಿಗಳು ಎಂದು ಕರೆಯಲಾಗಿದೆ.[8]

ರಾಜಕೀಯ

=== ೧೯೯೮ ರಿಂದ ೨೦೧೪/2014 ರ ವರೆಗಿನ ಲೋಕಸಭೆ ಚುನಾವಣೆ ಸಾರಾಂಶ===ದಪ್ಪಗಿನ ಅಕ್ಷರ

ವರ್ಷಕಾಂಗ್ರೆಸ್.ಸ್ಥಾನ->.ಶೇಕಡ ಓಟು->ಹೆಚ್ಚು/ಕಡಿಮೆಯು.ಪಿ.ಎ.ಬಿ ಜೆ ಪಿ.ಸ್ಥಾನ->ಶೇಕಡ ಓಟು->ಹೆಚ್ಚು/ಕಡಿಮೆ.+/-%ಎನ್.ಡಿ.ಎ
199814125.82%- ೧26.14% (26.42)182 :25.59%+25---37.21%(46.61)
1999(0114---27Utd. Ft 28.30%182------269+29 TDP;37.06%
200414526.53%31:+7.1%218+117 /35.4%13822.16%-44-3.76%ಎನ್.ಡಿ.ಎ(-89: 33.3%)
2009206 +228.55%+80:2.೦2%262 +63 ಇತರೆ (37.22%)11618.80%-22-3.36%ಎನ್.ಡಿ.ಎ:159:24.63% (:-4.88%)
2009->ಕಾಂ:ಪಡೆ ದ ಓಟು153482356--ಬಿಜೆಪಿ ಪಡೆದ ಓಟು102689312--------
2014 14419.4-9.25828331.2116+167+12.4ಎನ್.ಡಿಎ.283+54=337 ಚ

ನೋಡಿ

ಹೊರ ಸಂಪರ್ಕ

ಉಲ್ಲೇಖಗಳು

  1. http://www.india.gov.in/knowindia/state_emblem.php
  2. http://india.gov.in/knowindia/national_anthem.php
  3. http://india.gov.in/knowindia/india_at_a_glance.php
  4. http://censusindia.gov.in/Census_Data_2001/India_at_glance/popu1.aspx
  5. http://www.imf.org/external/pubs/ft/weo/2009/01/weodata/weorept.aspx?pr.x=49&pr.y=11&sy=2006&ey=2009&scsm=1&ssd=1&sort=country&ds=.&br=1&c=534&s=NGDPD,NGDPDPC,PPPGDP,PPPPC,LP&grp=0&a=
  6. http://lcweb2.loc.gov/frd/cs/profiles/India.pdf
  7. India's economy is growing faster: 26 June 2015 (English)
  8. ದೇಶದ ಮೂರನೇ ಸಿರಿವಂತ ನಗರ ಬೆಂಗಳೂರು;ಪ್ರಜಾವಾಣಿ ವಾರ್ತೆ;27 Feb, 2017

ಬಾಹ್ಯ ಸಂಪರ್ಕಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.