ಮುಸ್ಲಿಮ್

ಇಸ್ಲಾಮ್ ಎಂಬ ಅರಬಿ ಪದದ ಅರ್ಥ ಶಾಂತಿ, ಸಮರ್ಪಣೆ ಎಂದಾಗಿದೆ. ಒಬ್ಬ ವ್ಯಕ್ತಿ ತನ್ನನ್ನು ತಾನೇ ಸೃಷ್ಟಿಕರ್ತನಿಗೆ ಸಮರ್ಪಿಸುವ ಮೂಲಕ ಪಡೆಯುವ ಮನಃಶಾಂತಿಯಾಗಿದೆ ಇಸ್ಲಾಮ್. ಹೆಸರೇ ಹೇಳುವಂತೆ ಇಸ್ಲಾಮ್ ಶಾಂತಿಯ ಧರ್ಮವಾಗಿದೆ. ಸೃಷ್ಟಿಸಿ ಪರಿಪಾಲಿಸುತ್ತಿರುವ ನೈಜ ದೇವನ ಆರಾಧನೆಗೆ ಪರಮ ವಿಧೇಯತೆ ಹಾಗೂ ಸಮರ್ಪಣೆಯ ಧರ್ಮವಾಗಿದೆ ಇಸ್ಲಾಮ್. ಮುಸ್ಲಿಮ್ ಅಥವಾ ಮುಸಲ್ಮಾನ್ ಅಂದರೆ ಅಲ್ಲಾಹನ ಕಲ್ಪನೆಗೆ ಶರಣಾಗುವವನು ಎಂದು ಅರ್ಥ.

ಮುಸ್ಲಿಮ್

ಪ್ರವಾದಿ [ಸ] ಹೀಗೂ ಹೇಳಿದರು, "ಒಬ್ಬ ಮುಸ್ಲಿಮನು ತನ್ನ ಮುಸ್ಲಿಮ್ ಸಹೋದರನಿಗೆ ಬಟ್ಟೆ ತೊಡಿಸಿದರೆ ಅಲ್ಲಾಹನು ಅವನನ್ನು ತನ್ನ ರಕ್ಷಣೆಯಲ್ಲಿರುಸುವನು. ಆ ಬಟ್ಟೆಯನ್ನು ಅವನು ಧರಿಸಿರುವ ತನಕ" [ತಿರ್ಮಿದಿ]

ಹುಸೈನ್ ಬಿನ್ ವಹ್'ವಹ್ [ರ] ಅವರಿಂದ ವರದಿಯಾಗಿದೆ. ತಲ್ಹಾ ಬಿನ್ ಬರಾಹ್ ಕಾಯಿಲೆ ಬಿದ್ದಾಗ ಪ್ರವಾದಿ [ಸ] ಅವರ ಸಂದರ್ಶನಕ್ಕೆ ಬಂದರು. ಪ್ರವಾದಿ [ಸ] ಹೇಳಿದರು - ತಲ್ಹಾ ಅವರು ನಿಧನ ಹೊಂದಿದ್ದಾರೆಂದು ನಾನು ಭಾವಿಸುತ್ತೇನೆ. ಆದ್ದರಿಂದ ಜನರಿಗೆ ಅದರ ಸುದ್ದಿ ಮುಟ್ಟಿಸಿರಿ. ತ್ವರೆ ಮಾಡಿರಿ. ಮುಸ್ಲಿಮ್ ಮ್ರತದೇಹವನ್ನು ಹೆಚ್ಚು ಹೊತ್ತು ಆತನ ಮನೆಯವರ ಮಧ್ಯೆ ತಡೆದಿರಿಸುವುದು ಸರಿಯಲ್ಲ. [ಅಬೂ ದಾವೂದ್]

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.