ದೇಶ
ಒಂದೇ ರಾಜಕೀಯ ಆಡಳಿತದಲ್ಲಿರುವ ಸ್ವತಂತ್ರ ಭೌಗೋಳಿಕ ಪ್ರದೇಶವು ಅಂತರರಾಷ್ಟ್ರೀಯ ರಾಜಕೀಯದಲ್ಲಿ ಒಂದು ದೇಶ ಅಥವಾ ಸಾರ್ವಭೌಮ ರಾಷ್ಟ್ರವೆಂದು ಪರಿಗಣಿತವಾಗುತ್ತದೆ. ಕೆಲವೊಮ್ಮೆ ರಾಜ್ಯ ಪದವನ್ನು ಇದಕ್ಕೆ ತತ್ಸಮವಾಗಿ ಬಳಸಲಾಗುತ್ತದೆ (ಉದಾ. ವಿಶ್ವಸಂಸ್ಥೆಯಲ್ಲಿ). ದೇಶಗಳ ಸಂವಿಧಾನ ಹಾಗೂ ಕಾನೂನಿನ ಭಾಷಾಪ್ರಯೋಗಗಳಲ್ಲಿ ಸಾಮಾನ್ಯವಾಗಿ ದೇಶವನ್ನು ರಾಜ್ಯವೆಂದೂ ಕರೆಯಲಾಗುತ್ತದೆ. ಇದಲ್ಲದೆ ಯುನೈಟೆಡ್ ಕಿಂಗ್‍ಡಮ್‌ನಂತಹ ಒಕ್ಕೂಟಗಳು ದೇಶವೆಂದು ಪರಿಗಣಿತವಾದರೂ, ಅದರ ವಿಭಾಗೀಯ ಪ್ರಾಂತ್ಯಗಳಾದ ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್ ಮತ್ತು ಉತ್ತರ ಐರ್‍ಲೆಂಡ್‌ಗಳು ಕೂಡ ದೇಶಗಳೆಂದು ಕರೆಯಲ್ಪಡುತ್ತವೆ.
ವಿಶ್ವಸಂಸ್ಥೆಯಿಂದ ಮಾನ್ಯತೆಗೊಂಡಿರುವ ದೇಶಗಳು ೧೯೩. ಇದಲ್ಲದೆ ಪ್ರಪಂಚದ ಹಲವು ಪ್ರಾಂತ್ಯಗಳು, ಪಂಗಡಗಳು, ಸಂಸ್ಕೃತಿಗಳು ತಮ್ಮನ್ನು ಪ್ರತ್ಯೇಕ ರಾಷ್ಟ್ರಗಳೆಂದು ಪರಿಗಣಿಸಿಕೊಳ್ಳುತ್ತವೆ. ಇದರಲ್ಲಿ ಕೆಲವು ಅನೇಕ ರಾಷ್ಟ್ರಗಳ ಮನ್ನಣೆಯನ್ನೂ ಪಡೆದಿವೆ.
ಇದನ್ನೂ ನೋಡಿ
- ದೇಶಗಳ ಪಟ್ಟಿ - ಎಲ್ಲಾ ವಿಶ್ವಸಂಸ್ಥೆ ಮನ್ನಿತ ದೇಶಗಳನ್ನು, ವಿಶ್ವಸಂಸ್ಥೆಯ ಮನ್ನಣೆಯಿರದ ಸ್ವತಂತ್ರ ರಾಜ್ಯಗಳನ್ನು, ಬೇರೆ ರಾಷ್ಟ್ರಗಳ ಅಧೀನತೆಯಲ್ಲಿರುವ ಜನನಿಬಿಡ ಪ್ರದೇಶಗಳನ್ನು ಮತ್ತು ವಿಶೇಷ ಆಡಳಿತ ಪ್ರದೇಶಗಳನ್ನು ಒಳಗೊಂಡ ಪಟ್ಟಿ.
- ಸಾರ್ವಭೌಮ ದೇಶಗಳ ಪಟ್ಟಿ - ಎಲ್ಲಾ ವಿಶ್ವಸಂಸ್ಥೆ ಮನ್ನಿತ ದೇಶಗಳನ್ನು ಒಳಗೊಂಡ ಪಟ್ಟಿ.
- ಸಂಯುಕ್ತ ರಾಷ್ಟ್ರ ಸಂಸ್ಥೆಯ ಸದಸ್ಯ ರಾಷ್ಟ್ರಗಳು
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.