ಭಾರತದ ಉಪ ರಾಷ್ಟ್ರಪತಿ
ಭಾರತದ ಉಪ ರಾಷ್ಟ್ರಪತಿಗಳು ಭಾರತ ಸರ್ಕಾರದ ಕಾರ್ಯಾಂಗದಲ್ಲಿ ರಾಷ್ಟ್ರಪತಿಯ ನಂತರ ಎರಡನೇ ಉನ್ನತ ಪದವಿಯ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಉಪ ರಾಷ್ಟ್ರಪತಿಗಳು ರಾಜ್ಯಸಭೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಶಾಸಕಾಂಗದ ಕರ್ತವ್ಯವನ್ನು ಕೂಡ ಹೊಂದಿದ್ದಾರೆ.
Vice-President of India | |
---|---|
![]() ಭಾರತದ ಲಾಂಛನ | |
Residence | ಉಪಾಧ್ಯಕ್ಷ ಹೌಸ್ |
Appointer | ಭಾರತದ ಚುನಾವಣಾ ಕಾಲೇಜ್ |
Term length | ಐದು ವರ್ಷಗಳು, ನವೀಕರಿಸಬಹುದಾದ |
Salary | ₹೧,೨೫,೦೦೦ (US$೨,೭೭೫) per month (February 2015) |
Website | vicepresidentofindia |
ಉಪ ರಾಷ್ಟ್ರಪತಿ ಚುನಾವಣೆ ೨೦೧೭
- ಹಾಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು.
- ೨೦೧೭ ಆಗಸ್ಟ್ 5 ರಂದು ಮತ ಎಣಿಕೆ ನಡೆದು ಉಪರಾಷ್ಟ್ರಪತಿಯಾಗಿ ವೆಂಕಯ್ಯನಾಯ್ಡುರವರು ಆಯ್ಕೆಯಾದರು. (ಚುನಾವಣಾ ಆಯುಕ್ತ ನಸೀಮ್ ಜೈದಿ)[1]
ಆಯ್ಕೆ ವಿಧಿ ವಿಧಾನ
- ಭಾರತೀಯ ಸಂವಿಧಾನದ 66 ನೇ ವಿಧಿಯು ಉಪಾಧ್ಯಕ್ಷರ ಚುನಾವಣೆಯ ವಿಧಾನವನ್ನು ಹೇಳುತ್ತದೆ. ಸಂಸತ್ತಿನ ಎರಡೂ ಸದನಗಳ ಸದಸ್ಯರನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನ ಸದಸ್ಯರು ಪರೋಕ್ಷವಾಗಿ ಚುನಾಯಿತರಾಗುತ್ತಾರೆ, ಏಕೈಕ ವರ್ಗಾವಣೆ ಮಾಡಬಹುದಾದ ಮತಗಳ ಮೂಲಕ ಪ್ರಮಾಣಾನುಗುಣ ಪ್ರತಿನಿಧಿಗಳ ವ್ಯವಸ್ಥೆಯ ಪ್ರಕಾರ ಮತ್ತು ಮತದಾನವು ಚುನಾವಣಾ ಆಯೋಗದಿಂದ ನಡೆಸಲ್ಪಟ್ಟ ರಹಸ್ಯ ಮತದಾನದ ಮೂಲಕ ನಡೆಯುವುದು.[2]
- ಚುನಾವಣೆ ವೇಳೆ ವಿಶೇಷ ಪೆನ್ ನಲ್ಲೇ ತಮ್ಮ ಆಯ್ಕೆ ಅಭ್ಯರ್ಥಿಯ ಹೆಸರಿನ ಮುಂದೆ ಗುರುತು ಮಾಡಬೇಕು. ಬೇರೆ ಪೆನ್ ಗಳನ್ನು ಬಳಕೆ ಮಾಡಿದ್ದೇ ಆದರೆ ಆ ಮತ ಅಸಿಂಧುವಾಗುತ್ತದೆ. ೨೦೧೭ರ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ರಹಸ್ಯ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಯಾವುದೇ ಪಕ್ಷಗಳು ತಮ್ಮ ಸಂಸದರಿಗೆ ಇಂಥಹದ್ದೇ ಅಭ್ಯರ್ಥಿಗಳಿಗೆ ಮತ ಹಾಕಬೇಕೆಂದು ವಿಪ್ ಜಾರಿ ಮಾಡುವಂತಿಲ್ಲ.[3]
ಈವರೆಗಿನ ಉಪರಾಷ್ಟ್ರಪತಿಗಳು
- ವಿವರ
ಅಧಿಕಾರದಲ್ಲಿದ್ದಾಗ ನಿಧನ
ಕ್ರಮ ಸಂಖ್ಯೆ | ಹೆಸರು (ಜನನ–ಮರಣ)[4] |
ಚಿತ್ರ | ಅಧಿಕಾರ ಸ್ವೀಕರಿಸಿದ ದಿನಾಂಕ | ಅಧಿಕಾರದಿಂದ ಇಳಿದ ದಿನಾಂಕ | ರಾಷ್ಟ್ರಪತಿ(ಗಳು) | ಪಕ್ಷ |
---|---|---|---|---|---|---|
1 | ಸರ್ವೇಪಲ್ಲಿ ರಾಧಾಕೃಷ್ಣನ್ (1888–1975) |
![]() |
13 ಮೇ 1952 | 12 ಮೇ 1957 | ರಾಜೇಂದ್ರ ಪ್ರಸಾದ್ | ಸ್ವತಂತ್ರ |
13 ಮೇ 1957 | 12 ಮೇ 1962 | |||||
2 | ಜಾಕಿರ್ ಹುಸೇನ್ (1897–1969) |
![]() |
13 ಮೇ 1962 | 12 ಮೇ 1967 | ಸರ್ವೇಪಲ್ಲಿ ರಾಧಾಕೃಷ್ಣನ್ | ಸ್ವತಂತ್ರ |
3 | ವಿ.ವಿ.ಗಿರಿ (1894–1980) |
![]() |
13 ಮೇ 1967 | 3 ಮೇ 1969 | ಜಾಕಿರ್ ಹುಸೇನ್ | ಸ್ವತಂತ್ರ |
4 | ಜಿ.ಎಸ್.ಪಾಠಕ್ (1896–1982) |
– | 31 ಆಗಸ್ಟ್ 1969 | 30 ಆಗಸ್ಟ್ 1974 | • ವಿ.ವಿ.ಗಿರಿ • ಫಕ್ರುದ್ದೀನ್ ಅಲಿ ಅಹ್ಮದ್ |
ಸ್ವತಂತ್ರ |
5 | ಬಿ. ಡಿ. ಜತ್ತಿ (1912–2002) |
![]() |
31 ಆಗಸ್ಟ್ 1974 | 30 ಆಗಸ್ಟ್ 1979 | • ಫಕ್ರುದ್ದೀನ್ ಅಲಿ ಅಹ್ಮದ್ • ನೀಲಂ ಸಂಜೀವ ರೆಡ್ಡಿ |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
6 | ಮಹಮ್ಮದ್ ಹಿದಾಯತುಲ್ಲಾ (1905–1992) |
![]() |
31 ಆಗಸ್ಟ್ 1979 | 30 ಆಗಸ್ಟ್ 1984 | • ನೀಲಂ ಸಂಜೀವ ರೆಡ್ಡಿ • ಜೈಲ್ ಸಿಂಗ್ |
ಸ್ವತಂತ್ರ |
7 | ಆರ್.ವೆಂಕಟರಾಮನ್ (1910–2009) |
![]() |
31 ಆಗಸ್ಟ್ 1984 | 24 ಜುಲೈ 1987 | ಜೈಲ್ ಸಿಂಗ್ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
8 | ಶಂಕರ್ ದಯಾಳ್ ಶರ್ಮ (1918–1999) |
![]() |
3 ಸೆಪ್ಟೆಂಬರ್ 1987 | 24 ಜುಲೈ 1992 | ಆರ್.ವೆಂಕಟರಾಮನ್ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
9 | ಕೆ.ಆರ್. ನಾರಾಯಣನ್ (1921–2005) |
![]() |
21 ಆಗಸ್ಟ್ 1992 | 24 ಜುಲೈ 1997 | ಶಂಕರ್ ದಯಾಳ್ ಶರ್ಮ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
10 | ಕೃಷ್ಣ ಕಾಂತ್![]() (1927–2002) |
![]() |
21 ಆಗಸ್ಟ್ 1997 | 27 ಜುಲೈ 2002 | • ಕೆ.ಆರ್. ನಾರಾಯಣನ್ • ಎ.ಪಿ.ಜೆ.ಅಬ್ದುಲ್ ಕಲಾಂ | ಜನತಾ ದಳ |
11 | ಭೈರೋನ್ ಸಿಂಗ್ ಶೇಖಾವತ್ (1924–2010) |
![]() |
19 ಆಗಸ್ಟ್ 2002 | 21 ಜುಲೈ 2007 | ಎ.ಪಿ.ಜೆ.ಅಬ್ದುಲ್ ಕಲಾಂ | ಭಾರತೀಯ ಜನತಾ ಪಕ್ಷ |
12 | ಹಮೀದ್ ಅನ್ಸಾರಿ (1937–) |
11 ಆಗಸ್ಟ್ 2007 | 11 ಆಗಸ್ಟ್ 2012 | • ಪ್ರತಿಭಾ ಪಾಟೀಲ್ • ಪ್ರಣಬ್ ಮುಖರ್ಜಿ • ರಾಮನಾಥ್ ಕೋವಿಂದ್ |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | |
11 ಆಗಸ್ಟ್ 2012 | 11 ಆಗಸ್ಟ್ 2017 | |||||
13 | ವೆಂಕಯ್ಯ ನಾಯ್ಡು (1947–) |
![]() |
11 ಆಗಸ್ಟ್ 2017 | ಪ್ರಸ್ತುತ | ರಾಮನಾಥ್ ಕೋವಿಂದ್ | ಭಾರತೀಯ ಜನತಾ ಪಕ್ಷ |
ಉಲ್ಲೇಖಗಳು
- ಆಗಸ್ಟ್ 5ರಂದು ಉಪರಾಷ್ಟ್ರಪತಿ ಚುನಾವಣೆ;ಏಜೆನ್ಸಿಸ್29 Jun, 2017
- Constitution of India
- http://www.kannadaprabha.com/nation/vice-president-poll-today-results-to-be-out-by-7-p-m-naidu-has-clear-edge-over-gopal-gandhi/299754.html
-
"Former Vice Presidents". Vice President of India. Archived from the original on 4 March 2019. Retrieved 2 March 2019. Cite uses deprecated parameter
|dead-url=
(help)
ಬಾಹ್ಯ ಸಂಪರ್ಕಗಳು
- Official website of the Vice President of India. Website accessed on 10 October 2008.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.