ಭಾರತದ ರಾಷ್ಟ್ರಗೀತೆ
ಭಾರತದ ರಾಷ್ಟ್ರಗೀತೆ - ನೊಬೆಲ್ ಪ್ರಶಸ್ತಿ ವಿಜೇತ ಕವಿ ರವೀಂದ್ರನಾಥ ಠಾಗೋರ್ ಬರೆದ ಗೀತೆ. ಅವರು ಸಂಸ್ಕೃತ ಮಿಶ್ರಿತ ಬಂಗಾಳಿಯಲ್ಲಿ ಬರೆದ ಬ್ರಹ್ಮೋ ಮಂತ್ರದ ಮೊದಲ ೫ ಪ್ಯಾರಾಗಳನ್ನೇ ನಾವೀಗ ಹಾಡುತ್ತಿರುವುದು.ಈ ಗೀತೆಯನ್ನು ಜನವರಿ ೨೪, ೧೯೫೦ರಲ್ಲಿ ಭಾರತ ಸರಕಾರವು ರಾಷ್ಟ್ರಗೀತೆ ಎಂದು ಘೋಷಿಸಿತು. ಇದಕ್ಕೆ ಸಂಗೀತ ಅಳವಡಿಸಿದ್ದು ರಾಮ್ ಸಿಂಗ್ ರಾಕೂರ್. ರಾಷ್ಟ್ರಗೀತೆಯನ್ನು ರಾಷ್ಟ್ರ ದ್ವಜ ವನ್ನು ಹಾರಿಸಿದ ನಂತರ ೫೨ ಸೆಕೆಂಡುಗಳಿಗೆ ಮೀರದಂತೆ ಹಾಡಿ ಮುಗಿಸಬೇಕು. ರಾಷ್ಟ್ರಗೀತೆ ಹಾಡುವಾಗ ಎಲ್ಲರೂ ಎದ್ದು ನಿಂತು ಭಾರತ ಮಾತೆಗೆ ವಂದಿಸಬೇಕು. ರಾಷ್ಟ್ರಗೀತೆ ಹಾಡುವುದನ್ನು ಅಡ್ಡಿಪಡಿಸಿದರೆ ನಮ್ಮ ಕಾನೂನಿನಲ್ಲಿ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲ್ಪಡುತ್ತದೆ. ಭಾರತದ ರಾಷ್ಟ್ರೀಯ ಗಾನ, ವಂದೇ ಮಾತರಮ್.
ಭಾರತದ ರಾಷ್ಟ್ರಗೀತೆ "ಜನ ಗಣ ಮನ" ಕನ್ನಡದಲ್ಲಿ ಈ ಮುಂದಿನಂತಿದೆ:
ಕನ್ನಡದಲ್ಲಿ "ಜನ ಗಣ ಮನ" | ಕನ್ನಡದಲ್ಲಿ ಭಾವಾನುವಾದ | ||
---|---|---|---|
ಜನಗಣಮನ-ಅಧಿನಾಯಕ ಜಯ ಹೇ
ಭಾರತ ಭಾಗ್ಯ ವಿಧಾತಾ! ಪಂಜಾಬ ಸಿಂಧು ಗುಜರಾತ ಮರಾಠಾ ದ್ರಾವಿಡ ಉತ್ಕಲ ಬಂಗ ವಿಂಧ್ಯ ಹಿಮಾಚಲ ಯಮುನಾ ಗಂಗಾ ಉಚ್ಛಲ ಜಲಧಿತರಂಗ ತವ ಶುಭ ನಾಮೇ ಜಾಗೇ, ತವ ಶುಭ ಆಶಿಷ ಮಾಗೇ, ಗಾಹೇ ತವ ಜಯಗಾಥಾ. ಜನಗಣಮಂಗಳದಾಯಕ ಜಯ ಹೇ ಭಾರತ ಭಾಗ್ಯ ವಿಧಾತಾ! ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ ಜಯ ಹೇ. |
ಜನ ಸಮೂಹದ ಮನಸ್ಸಿಗೆ ಒಡೆಯನಾದ ಸರ್ವೋಚ್ಚನಾಯಕನೇ
ಭಾರತದ ಅದೃಷ್ಟವನ್ನು ದಯಪಾಲಿಸುವವನೇ ನಿನಗೆ ಜಯವಾಗಲಿ! ಪಂಜಾಬ, ಸಿಂಧು, ಗುಜರಾತ, ಮಹಾರಾಷ್ಟ್ರ ದ್ರಾವಿಡ (ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ) ಒಡಿಶಾ, ಬಂಗಾಳ ವಿಂದ್ಯ, ಹಿಮಾಚಲ ಪರ್ವತಗಳು ಹಾಗೇ ಗಂಗಾ-ಯಮುನೆಯಂತಹ ಜೀವನದಿಗಳು ಶ್ರೇಷ್ಠವಾದ ಸಮುದ್ರದ ನೀರಿನ ಅಲೆಗಳು ನಿನ್ನ ಮಂಗಳಕರವಾದ ಹೆಸರನ್ನು ಕೇಳಿ ಜಾಗೃತಗೊಳ್ಳುತ್ತವೆ ನಿನ್ನ ಮಂಗಳಕರವಾದ ಆಶೀರ್ವಚನವನ್ನು ಕೇಳಿಕೊಳ್ಳುತ್ತಾ, ನಿನ್ನ ಗೆಲುವಿನ ಗೀತೆಯನ್ನು ಹಾಡುತ್ತಿವೆ ಜನ ಸಮೂಹಕ್ಕೆ ಒಳ್ಳೆಯದನ್ನು ಅನುಗ್ರಹಿಸವವನೇ ನಿನಗೆ ಜಯವಾಗಲಿ ಭಾರತದ ಭಾಗ್ಯವನ್ನು ಕರುಣಿಸುವವನೇ ನಿನಗೆ ಜಯವಾಗಲಿ! ಜಯವಾಗಲಿ. |
||