ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ
ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ದೇವರ ಹಿಪ್ಪರಗಿ ಮತಕ್ಷೇತ್ರ(2018)ದಲ್ಲಿ 1,07,407 ಪುರುಷರು, 99,754 ಮಹಿಳೆಯರು ಸೇರಿ ಒಟ್ಟು 2,07,225 ಮತದಾರರಿದ್ದಾರೆ.
ಕ್ಷೇತ್ರದ ಇತಿಹಾಸ
ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿ ಪಡೆದ ದೇವರ ಹಿಪ್ಪರಗಿ ಗ್ರಾಮ ವಿಜಯಪುರ - ಗುಲ್ಬರ್ಗಾ ಹೆದ್ದಾರಿಯಲ್ಲಿದೆ. ಮೂರು ತಾಲೂಕುಗಳನ್ನೊಳಗೊಂಡಿರೋ ಈ ವಿಧಾನಸಭಾ ಕ್ಷೇತ್ರವಾಗಿದೆ. 2008ರಲ್ಲಿ ಈ ಕ್ಷೇತ್ರದ ಹೆಸರು ದೇವರ ಹಿಪ್ಪರಗಿ ಎಂದು ಬದಲಾಯಿತು. ಮುಂಚೆ ಹೂವಿನಹಿಪ್ಪರಗಿ ಕ್ಷೇತ್ರವಾಗಿತ್ತು. ಬಸವನ ಬಾಗೇವಾಡಿ ತಾಲ್ಲೂಕಿನ ನಿಡಗುಂದಿ ಹೋಬಳಿ ಕೈಬಿಟ್ಟು, ಸಿಂದಗಿ ತಾಲ್ಲೂಕಿನ ದೇವರ ಹಿಪ್ಪರಗಿ ಹೋಬಳಿಯನ್ನು ಈ ಕ್ಷೇತ್ರದಲ್ಲಿ ಸೇರಿಸಲಾಯಿತು.
ತಾಳಿಕೋಟೆ ಕ್ಷೇತ್ರದ ಭಾಗವಾಗಿದ್ದ ಹಳ್ಳಿಗಳೆಲ್ಲ ಸೇರಿ 1967ರಲ್ಲಿ ರಚನೆಗೊಂಡ ಹೂವಿನಹಿಪ್ಪರಗಿ ಕ್ಷೇತ್ರ, 2008ರ ಕ್ಷೇತ್ರ ಮರುವಿಂಗಡಣೆ ಹಂತದಲ್ಲಿ ದೇವರಹಿಪ್ಪರಗಿ ಕ್ಷೇತ್ರವಾಗಿ ರೂಪುಗೊಂಡಿದೆ. 11 ಚುನಾವಣೆ ಕಂಡಿರುವ ಈ ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿ, ಸಚಿವರಾಗಿ ಅಧಿಕಾರ ನಡೆಸಿದ ಬಿ.ಎಸ್. ಪಾಟೀಲ ಸಾಸನೂರ ಅವರು ಕ್ಷೇತ್ರದ ಅರ್ಧ ಸಮಯವನ್ನು ತಾವೇ ವಿಧಾನಸಭೆಯಲ್ಲಿ ಕಳೆದಿದ್ದಾರೆ. ಜನತಾಪಕ್ಷ ಶಾಸಕರಾಗಿ ರಾಜಕೀಯ ಆರಂಭಿಸಿದ್ದ ಬಿ.ಎಸ್. ಪಾಟೀಲ ಸಾಸನೂರು ನಂತರ ನಾಲ್ಕು ಬಾರಿ ಕಾಂಗ್ರೆಸ್ ಪಕ್ಷ ಶಾಸಕರಾಗಿ ಒಟ್ಟು ಐದು ಬಾರಿ ವಿಧಾನಸಭೆಯಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪಾಟೀಲ(ನಡಹಳ್ಳಿ) ಸತತ 2013 ಮತ್ತು 2008ರಲ್ಲಿ ಎರಡು ಬಾರಿ ಗೆದ್ದಿದ್ದಾರೆ. ಬಿ.ಎಸ್.ಪಾಟೀಲ(ಸಾಸನೂರ)ರು ಒಟ್ಟು 6 ಸಲ ಸ್ಪರ್ಧಿಸಿ 4 ಬಾರಿ ಆಯ್ಕೆಯಾಗಿ ವೀರಪ್ಪ ಮೊಯಿಲಿ ಅವರ ಸಂಪುಟದಲ್ಲಿ ಆರೋಗ್ಯ ಖಾತೆ ಹಾಗೂ ಎಸ್.ಎಂ. ಕೃಷ್ಣ ಸಂಪುಟದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿದ್ದರು. ಶಿವಪುತ್ರಪ್ಪ ದೇಸಾಯಿ ಅವರು ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭೂಸೇನಾ ಮತ್ತು ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದರು. ಶಿವಪುತ್ರಪ್ಪ ದೇಸಾಯಿ 5 ಬಾರಿ ಸ್ಪರ್ಧಿಸಿ 3 ಬಿ.ಎಸ್.ಪಾಟೀಲ(ಸಾಸನೂರ)ನ್ನು ಸೋಲಿಸಿ ಆಯ್ಕೆಯಾಗಿದ್ದು ಹಾಗೂ ಇಬ್ಬರು ಸಂಬಂಧಿಕರಾಗಿದ್ದು ವಿಶೇಷವಾಗಿದೆ. ಶಿವಪುತ್ರಪ್ಪ ದೇಸಾಯಿಯವರು ಉಗ್ರಾಣ ನಿಗಮದ ಮಾಜಿ ಅಧ್ಯಕ್ಷರು. 1978ರಿಂದ 2004ವರೆಗೆ ಶಿವಪುತ್ರಪ್ಪ ದೇಸಾಯಿ ಹಾಗೂ ಬಿ.ಎಸ್.ಪಾಟೀಲ(ಸಾಸನೂರ) ನಡುವೆ ಸ್ಪರ್ಧೆ ಏರ್ಪಟ್ಟಿತ್ತು.
ಬಿ.ಎಸ್.ಪಾಟೀಲ(ಸಾಸನೂರ) 1978ರಲ್ಲಿ ಜನತಾ ಪಕ್ಷದಿಂದ ಹಾಗೂ 1983ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ನಂತರ 1986ರಲ್ಲಿ ಚುನಾವಣೆ ಎದುರಾಯಿತು. ಇದು ಮಾವ-ಅಳಿಯನ ಆಖಾಡಕ್ಕೆ ಸಾಕ್ಷಿಯಾಗಿತ್ತು. ಜನತಾ ಪಕ್ಷದಿಂದ ಸ್ಪರ್ಧಿಸಿದ ಅಳಿಯ ಶಿವಪುತ್ರಪ್ಪ ದೇಸಾಯಿ, ಮಾವ ಸಾಸನೂರ ಅವರ ಹ್ಯಾಟ್ರಿಕ್ ಸಾಧನೆಗೆ ಬ್ರೇಕ್ ನೀಡಿದ್ದರು. ಮತ್ತೆ 1989ರಲ್ಲಿ ಮಾವ ಬಿ.ಎಸ್.ಪಾಟೀಲ(ಸಾಸನೂರ) ಅಳಿಯ ಶಿವಪುತ್ರಪ್ಪ ದೇಸಾಯಿ ಅವರನ್ನು 15395 ಮತಗಳಿಂದ ಪರಾಭವಗೊಳಿಸಿದ್ದರು. ನಂತರ 1994ರಲ್ಲಿ ಅದೇ ಪಕ್ಷದಿಂದ ಶಿವಪುತ್ರಪ್ಪ ದೇಸಾಯಿ ತಮ್ಮ ಮಾವನನ್ನು 12427 ಮತಗಳಿಂದ ಸೋಲಿಸಿದರು. 1999ರಲ್ಲಿ ಎದುರಾದ ಚುನಾವಣೆಯಲ್ಲಿ ಪುನಃ ಬಿ.ಎಸ್.ಪಾಟೀಲ(ಸಾಸನೂರ) ಅಳಿಯನನ್ನು ಪರಾಭಗೊಳಿಸಿದರೆ, 2004ರಲ್ಲಿ ನಡೆದ ಚುನಾವಣೆಯಲ್ಲಿ ಮುಯ್ಯಿಗೆ ಮುಯ್ಯಿ ಎಂಬಂತೆ ಶಿವಪುತ್ರಪ್ಪ ದೇಸಾಯಿ ಅವರು ಮತ್ತೆ ಮಾವನನ್ನು ಸೋಲಿಸಿದ್ದರು.
ಕ್ಷೇತ್ರದ ವಿಶೇಷತೆ
- ಬಸವನ ಬಾಗೇವಾಡಿ, ಸಿಂದಗಿ ಮತ್ತು ಮುದ್ದೇಬಿಹಾಳ ಮೂರು ತಾಲೂಕುಗಳನ್ನೊಳಗೊಂಡಿರೋ ವಿಧಾನಸಭಾ ಕ್ಷೇತ್ರವಾಗಿದೆ.
- ಬಿ.ಎಸ್.ಪಾಟೀಲ(ಸಾಸನೂರ)ರು ವೀರಪ್ಪ ಮೊಯಿಲಿ ಅವರ ಸಂಪುಟದಲ್ಲಿ ಆರೋಗ್ಯ ಖಾತೆ ಹಾಗೂ ಎಸ್.ಎಂ. ಕೃಷ್ಣ ಸಂಪುಟದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿದ್ದರು.
- ಶಿವಪುತ್ರಪ್ಪ ದೇಸಾಯಿ ಅವರು ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭೂಸೇನಾ ನಿಗಮ ಮತ್ತು ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದರು.
- ಶಿವಪುತ್ರಪ್ಪ ದೇಸಾಯಿ ಮತ್ತು ಬಿ.ಎಸ್.ಪಾಟೀಲ(ಸಾಸನೂರ)ರು ಮಾವ-ಅಳಿಯನ ಆಖಾಡಕ್ಕೆ ಸಾಕ್ಷಿಯಾಗಿತ್ತು.
- ಬಿ.ಎಸ್.ಪಾಟೀಲ(ಸಾಸನೂರ)ರು ಒಟ್ಟು 6 ಸಲ ಸ್ಪರ್ಧಿಸಿ 4 ಬಾರಿ ಆಯ್ಕೆಯಾಗಿದ್ದಾರೆ.
- ಶಿವಪುತ್ರಪ್ಪ ದೇಸಾಯಿಯವರು ಒಟ್ಟು 5 ಸಲ ಸ್ಪರ್ಧಿಸಿ 3 ಬಾರಿ ಆಯ್ಕೆಯಾಗಿದ್ದಾರೆ. ಒಟ್ಟಾರೆಯಾಗಿ 1978 - 2008ರವರೆಗೆ ಸುಮಾರು 3 ದಶಕಗಳ ಕಾಲ ಮಾವ-ಅಳಿಯನ ಆಖಾಡಕ್ಕೆ ಸಾಕ್ಷಿಯಾಗಿತ್ತು.
- ಎ.ಎಸ್.ಪಾಟೀಲ(ನಡಹಳ್ಳಿ) ಸತತ 2008 ಮತ್ತು 2013ರಲ್ಲಿ ಎರಡು ಬಾರಿ ಗೆದ್ದಿದ್ದಾರೆ.
ಜನಪ್ರತಿನಿಧಿಗಳ ವಿವರ
ವರ್ಷ | ವಿಧಾನ ಸಭಾ ಕ್ಷೆತ್ರ | ವಿಜೇತ | ಪಕ್ಷ | ಮತಗಳು | ಉಪಾಂತ ವಿಜೇತ | ಪಕ್ಷ | ಮತಗಳು |
ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಕರ್ನಾಟಕ ರಾಜ್ಯ | ||||||
2018 | ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಸೋಮನಗೌಡ ಪಾಟೀಲ | ಬಿ.ಜೆ.ಪಿ | 48245 | ಭೀಮನಗೌಡ ಪಾಟೀಲ | ಜೆ.ಡಿ.ಎಸ್. | 44892 |
2013 | ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಎ.ಎಸ್.ಪಾಟೀಲ(ನಡಹಳ್ಳಿ) | ಕಾಂಗ್ರೇಸ್ | 36231 | ಸೋಮನಗೌಡ ಪಾಟೀಲ | ಬಿ.ಜೆ.ಪಿ | 28135 |
2008 | ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಎ.ಎಸ್.ಪಾಟೀಲ(ನಡಹಳ್ಳಿ) | ಕಾಂಗ್ರೇಸ್ | 54879 | ಬಸನಗೌಡ ಪಾಟೀಲ(ಯತ್ನಾಳ) | ಬಿ.ಜೆ.ಪಿ | 23986 |
2004 | ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಶಿವಪುತ್ರಪ್ಪ ದೇಸಾಯಿ | ಬಿ.ಜೆ.ಪಿ | 39224 | ಬಿ.ಎಸ್.ಪಾಟೀಲ(ಸಾಸನೂರ) | ಕಾಂಗ್ರೇಸ್ | 32927 |
1999 | ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಬಿ.ಎಸ್.ಪಾಟೀಲ(ಸಾಸನೂರ) | ಕಾಂಗ್ರೇಸ್ | 46088 | ಶಿವಪುತ್ರಪ್ಪ ದೇಸಾಯಿ | ಜೆ.ಡಿ.ಯು | 28492 |
1994 | ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಶಿವಪುತ್ರಪ್ಪ ದೇಸಾಯಿ | ಜೆ.ಡಿ. | 35849 | ಬಿ.ಎಸ್.ಪಾಟೀಲ(ಸಾಸನೂರ) | ಕಾಂಗ್ರೇಸ್ | 23422 |
1989 | ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಬಿ.ಎಸ್.ಪಾಟೀಲ(ಸಾಸನೂರ) | ಕಾಂಗ್ರೇಸ್ | 36588 | ಶಿವಪುತ್ರಪ್ಪ ದೇಸಾಯಿ | ಜೆ.ಡಿ. | 21193 |
1985 | ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಶಿವಪುತ್ರಪ್ಪ ದೇಸಾಯಿ | ಜೆ.ಎನ್.ಪಿ | 31748 | ಬಿ.ಎಸ್.ಪಾಟೀಲ(ಸಾಸನೂರ) | ಕಾಂಗ್ರೇಸ್ | 27949 |
1983 | ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಬಿ.ಎಸ್.ಪಾಟೀಲ(ಸಾಸನೂರ) | ಕಾಂಗ್ರೇಸ್ | 30320 | ಬಸನಗೌಡ ಲಿಂಗನಗೌಡ ಪಾಟೀಲ | ಜೆ.ಎನ್.ಪಿ | 17872 |
1978 | ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಬಿ.ಎಸ್.ಪಾಟೀಲ(ಸಾಸನೂರ) | ಜೆ.ಎನ್.ಪಿ | 26814 | ಕುಮಾರಗೌಡ ಪಾಟೀಲ | ಕಾಂಗ್ರೇಸ್(ಐ) | 22531 |
ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಮೈಸೂರು ರಾಜ್ಯ | ||||||
1972 | ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಕೆ.ಡಿ.ಪಾಟೀಲ(ಉಕ್ಕಲಿ) | ಎನ್.ಸಿ.ಓ. | 18331 | ಎಲ್.ಆರ್.ನಾಯಕ | ಕಾಂಗ್ರೇಸ್ | 12855 |
1967 | ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಜಿ.ಎನ್.ಪಾಟೀಲ | ಕಾಂಗ್ರೇಸ್ | 15189 | ಹೆಚ್.ಕೆ.ಮಾರ್ತಂಡಪ್ಪ | ಎಸ್.ಡಬ್ಲೂ.ಎ | 7050 |
1962 | ತಾಳಿಕೋಟ ವಿಧಾನಸಭಾ ಕ್ಷೇತ್ರ | ಜಿ.ಎನ್.ಪಾಟೀಲ | ಕಾಂಗ್ರೇಸ್ | ಅವಿರೋದ ಆಯ್ಕೆ | |||
1957 | ತಾಳಿಕೋಟ ವಿಧಾನಸಭಾ ಕ್ಷೇತ್ರ | ಕುಮಾರಗೌಡ ಪಾಟೀಲ | ಪಕ್ಷೇತರ | 15200 | ಶರಣಯ್ಯ ವಸ್ತದ | ಕಾಂಗ್ರೇಸ್ | 12804 |
ಬಾಗೇವಾಡಿ-ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಬಾಂಬೆ ರಾಜ್ಯ | ||||||
1951 | ಬಾಗೇವಾಡಿ-ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಶಂಕರಗೌಡ ಪಾಟೀಲ | ಕಾಂಗ್ರೇಸ್ | 17752 | ಸಾವಳಗೆಪ್ಪ ನಂದಿ | ಕೆ.ಎಂ.ಪಿ.ಪಿ | 5507 |