ಬಸನಗೌಡ ಪಾಟೀಲ(ಯತ್ನಾಳ)
ಬಸನಗೌಡ ಪಾಟೀಲ(ಯತ್ನಾಳ)ರು ವಿಜಯಪುರ ಲೋಕಸಭಾ ಕ್ಷೇತ್ರದ ಮಾಜಿ ಸಂಸದರು ಮತ್ತು ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಶಾಸಕರು.
ಬಸನಗೌಡ ಪಾಟೀಲ(ಯತ್ನಾಳ) | |
---|---|
![]() | |
ವೈಯಕ್ತಿಕ ಮಾಹಿತಿ | |
ಜನನ | ಯತ್ನಾಳ, ವಿಜಯಪುರ, ಕರ್ನಾಟಕ | 13 December 1963
ಸಂಗಾತಿ(ಗಳು) | ಶೈಲಜಾ |
ಮಕ್ಕಳು | 2 |
ಜನನ
ಪಾಟೀಲರು 1963ರ ಡಿಸೆಂಬರ್ 13ರಂದು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಯತ್ನಾಳ ಗ್ರಾಮದಲ್ಲಿ ಜನಿಸಿದ್ದಾರೆ. ಶ್ರೀಯುತರಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ.
ಶಿಕ್ಷಣ
ಶ್ರೀಯುತರು ವಾಣಿಜ್ಯ ವಿಭಾಗದಲ್ಲಿ ಬಿ.ಕಾಂ. ಪದವಿ ಹೊಂದಿದ್ದಾರೆ.
ರಾಜಕೀಯ
13 ಮತ್ತು 14ನೇ ಲೋಕಸಭೆಯಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 10 ಮತ್ತು 15ನೇಯ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
2013ರಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‍ದಿಂದ ಸ್ಪರ್ಧಿಸಿ ಪರಾಜಿತರಾದರು.[1]
2018ರಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.
ನಿರ್ವಹಿಸಿದ ಖಾತೆಗಳು
- 1994 [2]ರಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ.
- 1999 ಮತ್ತು 2004ರಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸಂಸದರಾಗಿ ಆಯ್ಕೆ.
- ಸಂಸತ್ತಿನ ಕೈಗಾರಿಕಾ ಸಮಿತಿಯ ಸದಸ್ಯರು.
- ಖಾಸಗಿ ಸದಸ್ಯರ ಬಿಲ್ಲುಗಳು ಮತ್ತು ನಿರ್ಣಯಗಳ ಮೇಲೆ ಸಂಸತ್ತಿನ ಸಮಿತಿ ಸದಸ್ಯರು.
- ಸಂಸತ್ತಿನ ಸಲಹಾ ಸಮಿತಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸದಸ್ಯರು.
- 2002-2003 - ಕೇಂದ್ರ ಸರ್ಕಾರದ ರಾಜ್ಯ ಜವಳಿ ಸಚಿವರು.
- 2003-2004 - ಕೇಂದ್ರ ಸರ್ಕಾರದ ರಾಜ್ಯ ರೈಲ್ವೆ ಸಚಿವರು.
- ಕಾರ್ಮಿಕರ ಸಂಸತ್ತು ಸಮಿತಿಯ ಸದಸ್ಯರು.
- ಪಾರ್ಲಿಮೆಂಟ್ ಹೌಸ್ ಸಮಿತಿಯ ಸದಸ್ಯರು.
- ಸಂಸತ್ತಿನ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ ಸದಸ್ಯರ ಸಂಸತ್ತು ಸಮಿತಿಯ ಸದಸ್ಯರು.
- 2008ರಲ್ಲಿ ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತರಾದರು.
- 2013ರಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‍ದಿಂದ ಸ್ಪರ್ಧಿಸಿ ಪರಾಜಿತರಾದರು.
- 2015ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.
- 2018ರಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಶಾಸಕರಾಗಿ ಆಯ್ಕೆ.[3]
ಉಲ್ಲೇಖಗಳು
- "Basanagouda Patil Yatnal joins JD(S) in Vijayapura". The Hindu. Retrieved 6 February 2012.
- https://vijaykarnataka.indiatimes.com/district/vijayapura/vijayapur-city/articleshow/64177837.cms
- http://kannadamma.net/2015/12/%E0%B2%B5%E0%B2%BF%E0%B2%9C%E0%B2%AF%E0%B2%AA%E0%B3%81%E0%B2%B0-%E0%B2%95%E0%B3%8D%E0%B2%B7%E0%B3%87%E0%B2%A4%E0%B3%8D%E0%B2%B0%E0%B2%A6%E0%B2%BF%E0%B2%82%E0%B2%A6-%E0%B2%B5%E0%B2%BF%E0%B2%A7%E0%B2%BE/
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.