ಶಿವಮೊಗ್ಗ (ಲೋಕ ಸಭೆ ಚುನಾವಣಾ ಕ್ಷೇತ್ರ)

ಶಿವಮೊಗ್ಗ ಕರ್ನಾಟಕಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ೨೦೦೫ರಲ್ಲಿ ಈ ಕ್ಷೇತ್ರದಲ್ಲಿ ೧,೨೮೬,೧೮೧ ಮತದಾರರಿದ್ದರು.

ಸಂಸತ್ತಿನ ಸದಸ್ಯರು

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾಗೋಡಿನ ಕೆ.ಜಿ.ಒಡೆಯರ್ ಶಿವಮೊಗ್ಗದ ಮೊದಲ ಸಂಸತ್ ಸದಸ್ಯರಾಗಿದ್ದರು. ಅವರು ಒಮ್ಮೆ ಗಾಂಧೀಜಿಯವರನ್ನು ಭೇಟಯಾದ ಮೇಲೆ ತಮ್ಮ ಸೂಟ್ ಬೂಟ್ ಬಿಟ್ಟು ಖಾದಿಧಾರಿಯಅಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಐದು ಬಾರಿ ಸೆರೆವಾಸ ಅನುಭವಿಸಿದ್ದರು. ಒಟ್ಟು ೫ ವರ್ಷ ಸೆರೆವಾಸ ಅನುಭವಿಸಿದ್ದರರು; ೫ ತಿಂಗಳ ಕಠಿಣ ಶಿಕ್ಷೆಯನ್ನೂ ಅನುಭವಿಸಿದ್ದರು. ಸಾಗರದಲ್ಲಿ ಮುಖ್ಯ ಬಸ್ ನಿಲ್ದಾಣದ ಹತ್ತಿರ ಅವರ ಮನೆ ಇತ್ತು/ಇದೆ . ಅವರು ನೆಹರೂ ಅವರ ನಿಕಟವರ್ತಿಗಳಾಗಿದ್ದು , ನೆಹರೂ ಅವರನ್ನು ಜೋಗಕ್ಕೂ ಕರೆತಂದಿದ್ದರು.ಕಾಗೋಡು ಸತ್ಯಾಗ್ರಹದ ನಂತರ 'ಗೇಣೀದಾರರಿಗೇ ಜಮೀನು' ಕಾನೂನು ಬರುವುದಕ್ಕೆ ಮೊದಲೇ,ರೈತರ ಸತ್ಯಾಗ್ರಹಕ್ಕೆ ಓಗೊಟ್ಟು. ತಮ್ಮ ೮೦೦ ಎಕರೆ ಜಮೀನನ್ನು ರೈತರ ಹೆಸರಿಗೆ ಮಾಡಿಕೊಟ್ಟರು.

೨೦೧೪ರ ಚುನಾವಣೆ

  • ೨೦೧೪ ರ ಲೋಕಸಭೆ ಕರ್ಣಾಟಕದಲ್ಲಿ ಮತದಾನ ದಿನಾಂಕ:17- 4-2014 ಒಂದೇ ದಿನ.
  • ಎಣಿಕೆ ೧೬-೫-೨೦೧೪.
  • ಶಿವಮೊಗ್ಗ ಜಿಲ್ಲಾ ಕ್ಷೇತ್ರ್ರ ಮತದಾರರ ವಿವರ (೨-೪-೨೦೧೪):-
ಶಿವಮೊಗ್ಗ ಜಿಲ್ಲಾ ಕ್ಷೇತ್ರಪುರುಷಮಹಿಳೆಇತರೆಮತದಾರರು
ಶಿವಮೊಗ್ಗ- ಗ್ರಾಮ993129741709196758
ಭದ್ರಾವತಿ10402310674907210779
ಶಿವಮೊಗ್ಗ- ನಗರ11636811648617232871
ತೀರ್ಥಹಳ್ಳಿ875028762004175216
ಶಿಕಾರಿಪುರ899408709914177053
ಸೊರಬ905068701310177529
ಸಾಗರ926079315006185763
ಬೈಂದೂರು9766910763515205319
ಒಟ್ಟು778037783169821561288
  • ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ ಅವರು ಶಿವಮೊಗ್ಗ ಕ್ಷೇತ್ರದಲ್ಲಿ 3,63,305 ಮತಗಳ ಅಂತರದಿಂದ ಜಯಗಳಿಸಿದ್ದಾರೆ.[1]

ಉಲ್ಲೇಖಗಳು

ಇದನ್ನೂ ನೋಡಿ


  1. []
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.